ಮಿಥುನ ರಾಶಿಯಲ್ಲಿ ಬುಧ ಸಂಚಾರ ( 7th July 2021 )
ಬುಧವನ್ನು ಧ್ವನಿ ಮತ್ತು ಸಂವಹನದ ಅಂಶ ಗ್ರಾಣವೆಂದು ಪರಿಗಣಿಸಲಾಗಿದೆ. ಇದು ವ್ಯಕ್ತಿಯ ಬುದ್ಧಿಯ ಅಂಶವೆಂದು ಸಹ ಪರಿಗಣಿಸಲಾಗಿದೆ ಮತ್ತು ಭೂಮಿಯ ಅಂಶದ ವೃಷಭ ರಾಶಿಯಿಂದ ಇದು ವಾಯು ಅಂಶದ ಸ್ವತಃ ರಾಶಿ ಮಿಥುನ ರಾಶಿಯಲ್ಲಿ ಗೋಚರಿಸಲಿದೆ. ಗ್ರಹಗಳ ನಡುವೆ ರಾಜಕುಮಾರನ ಸ್ಥಾನಮಾನವನ್ನು ಹೊಂದಿರುವ ಬುಧ ಗ್ರಹವನ್ನು ಶಕ್ತಿ ಮತ್ತು ಪ್ರಚಿದನೆಯಿಂದ ತುಂಬಿದೆ ಎಂದು ಪರಿಗಣಿಸಲಾಗಿದೆ.
ಆಸ್ಟ್ರೋಸೇಜ್ ವಾರ್ತಾ ಮೂಲಕ ಪ್ರಪಂಚದಾದ್ಯಂತದ ಕಲಿತ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ
ತನ್ನದೇ ಎಡಿಎ ರಾಶಿಯಲ್ಲಿ ಬುಧನ ಈ ಸಂಚಾರವು ಸ್ಥಳೀಯರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಜನರ ಜೀವನದಲ್ಲಿ ಸೃಜನಶೀಲ ಮತ್ತು ಹೊಸತನವನ್ನು ತರುತ್ತದೆ. ಇದಲ್ಲದೆ ಇದು ನಿಧಾನವಾಗಿ ಚಲಿಸುವ ಯೋಜನೆಗಳನ್ನು ವೇಗಗೊಳಿಸುತ್ತದೆ. ಇದು ಸಂಪೂರ್ಣ ಶಕ್ತಿಯೊಂದಿಗೆ ಕಾರ್ಯಗಳನ್ನು ಪೂರ್ಣಗೊಳಿಸುವ ಸಮಯ. ಇದಲ್ಲದೆ ಈ ಸಮಯದಲ್ಲಿ ನಿಮ್ಮ ಸಂವಹನ ಸಾಮರ್ಥ್ಯವು ಅಧೂತವಾಗಿರುತ್ತದೆ. ನಿಮ್ಮ ಮಾತುಗಳನ್ನು ವಿವರಿಸುವಲ್ಲಿ ನೀವು ಯಶಸ್ವಿಯಾಗುವಿರಿ. ಈ ಸಂಚಾರವು 7 ಜೂಲೈ 2021 ರಂದು ಬೆಳಿಗ್ಗೆ 10.59 ಗಂಟೆಗೆ ಸಂಭವಿಸಲಿದೆ. ಇದರ ನಂತರ 25 ಜೂಲೈ 2021 ರಂದು ಬೆಳಿಗ್ಗೆ 11.31 ಗಂಟೆಗೆ ಕರ್ಕ ರಾಶಿಯಲ್ಲಿ ಗೋಚರಿಸಲಿದೆ.
ನಡೆಯಿರಿ ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಈ ಸಂಚಾರದ ಪರಿಣಾಮದ ಬಗ್ಗೆ ತಿಳಿಯೋಣ:-
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ.
ಮೇಷ ರಾಶಿ
ಬುಧವು ಮೇಷ ರಾಶಿಚಕ್ರದ ಮೂರನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಈ ಸಮಯದಲ್ಲಿ ಇದು ತನ್ನ ಸ್ವರಾಶಿ ಮಿಥುನದಲ್ಲಿ ಗೋಚರಿಸುತ್ತದೆ, ಇದನ್ನು ಅಸೆ ಮತ್ತು ಸಹೋದರ ಸಹೋದರಿಯರ ಅಂಶದ ಮನೆಯೆಂದು ಕರೆಯಲಾಗುತ್ತದೆ. ಈ ಸಂಚಾರವು ಮೇಷ ರಾಶಿಚಕ್ರದ ಸ್ಥಳೀಯರಿಗೆ ಫಲಪ್ರದವಾಗಲಿದೆ. ಕೆಲಸ ಮಾಡುತ್ತಿರುವ ವೃತ್ತಿಪರರಿಗೆ ಇದು ಶುಭ ಅವಧಿಯಾಗಿದೆ, ಏಕೆಂದರೆ ಅವರ ತಮ್ಮ ಅಸಾಧಾರಣ ಸಂವಹನ ಕೌಶಲ್ಯ ಮತ್ತು ಬಹುಮುಖತೆಯಿಂದಾಗಿ ಈ ಸಮಯದಲ್ಲಿ ತಮ್ಮ ಕೆಲಸಕ್ಕೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಮೇಷ ರಾಶಿಚಕ್ರದ ಸ್ಥಳೀಯರ ಮೂರನೇ ಮನೆಯಲ್ಲಿ ಬುಧನ ಸ್ಥಾನದಿಂದಾಗಿ ಅವರ ಸೃಜನಶೀಲ ಸಾಮರ್ಥ್ಯದಲ್ಲಿ ಬೆಳವಣಿಗೆಯನ್ನು ಕಾಣಲಾಗುತ್ತದೆ. ನೀವು ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಉತ್ತಮ ಪ್ರದರ್ಶನ ಮಾಡಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಸ್ಪರ್ಧಿಗಳ ಮೇಲೆ ನೀವು ಜಯವನ್ನು ಸಾಧಿಸಬಹುದು.
ಮೇಷ ರಾಶಿಚಕ್ರದ ಸ್ಥಳೀಯರು ಯಾವಾಗಲೂ ಹೊಸ ಜನರನ್ನು ಭೇಟಿ ಮಾಡಲು ಇಷ್ಟಪಡುತ್ತಾರೆ ಮತ್ತು ಹೊಸ ವಿಷಯಗಳನ್ನು ಕಂಡುಹಿಡಿಯಲು ಇಷ್ಟಪಡುತ್ತಾರೆ. ಬುಧದ ಈ ಸಂಚಾರವು ನಿಮ್ಮ ಸಾಮಾಜಿಕ ವಲಯವನ್ನು ಹೆಚ್ಚಿಸುತ್ತದೆ. ನಿಮ್ಮ ಸಹೋದರ ಸಹೋದರಿಯರು ಯಶಸ್ಸು ಪಡೆಯುವಲ್ಲಿ ಬಿಕ್ಕಟ್ಟುಗಳನ್ನು ಎದುರಿಸಬಹುದು ಮತ್ತು ಸರಿಯಾದ ಮಾರ್ಗದರ್ಶನಕ್ಕಾಗಿ ಅವರು ನಿಮ್ಮನ್ನು ನೋಡುತ್ತಾರೆ. ಈ ಸಂಚಾರದ ಸಮಯದಲ್ಲಿ ನೀವು ಶಕ್ತಿಯಿಂದ ತುಂಬಿರುತ್ತೀರಿ ಮತ್ತು ನಿಮ್ಮ ಬಿಡುವಿನ ವೇಳೆಯಲ್ಲಿ ನೀವು ಕವನ ಬರೆಯುವುದು, ಡ್ಯಾನ್ಸ್, ಹಾಡುವುದು ಇತ್ಯಾದಿ ಸೃಜನಶೀಲ ಕೆಲಸಗಳನ್ನು ಮಾಡಬಹುದು.
ಪರಿಹಾರ - ವಿಶೇಷವಾಗಿ ಬುಧವಾರದಂದು “ವಿಷ್ಣು ಸಹಸ್ರನಾಮ” ವನ್ನು ಪಠಿಸಿ.
ವೃಷಭ ರಾಶಿ
ವೃಷಭ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಎರಡನೇ ಮತ್ತು ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಧ್ವನಿ, ಕುಟುಂಬ, ಸಂಗ್ರಹವಾದ ಸಂಪತ್ತು ಇತ್ಯಾದಿಯ ಎರಡನೇ ಮನೆಗೆ ಸಾಗುತ್ತದೆ. ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ ಮತ್ತು ಕುಟುಂಬವನ್ನು ನೋಡಿ ನೀವು ಸಂತೋಷಪಡುವಿರಿ. ಈ ಸಮಯದಲ್ಲಿ ನಿಮ್ಮ ಧ್ವನಿಯನ್ನು ತೀಕ್ಷ್ಣವಾಗಿ ಕಾಣಲಾಗುತ್ತದೆ. ಈ ಕಾರಣದಿಂದಾಗಿ ನೀವು ಜನರ ಮೇಲೆ ಪರಿಣಾಮ ಬೀರುವಿರಿ ಮತ್ತು ಸಮಾಜದಲ್ಲಿ ನೀವು ಉತ್ತಮ ಸ್ಥಾನವನ್ನು ಗಳಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗುತ್ತದೆ ಮತ್ತು ಅದು ನಿಮಗಾಗಿ ಅದೃಷ್ಟಶಾಲಿ ಎಂದು ಸಾಬೀತಾಗುತ್ತದೆ. ಪ್ರೀತಿಯ ಸಂಬಂಧದಲ್ಲಿರುವ ಈ ರಾಶಿಚಕ್ರದ ಜನರು ತಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧವನ್ನು ಸುಧಾರಿಸುತ್ತಾರೆ. ಈ ಸಮಯದಲ್ಲಿ ಪ್ರೀತಿಯ ಜೀವನದಲ್ಲಿ ಪ್ರಣಯದ ಹೆಚ್ಚಳವನ್ನು ಕಾಣಲಾಗುತ್ತದೆ.
ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿರುತ್ತದೆ. ನಿಮ್ಮ ಪಠ್ಯಕ್ರಮದ ವಿಷಯಗಳ ಮೇಲೆ ನೀವು ಉತ್ತಮ ಹಿಡಿತವನ್ನು ಹೊಂದಿರುವಿರಿ. ಆರ್ಥಿಕವಾಗಿ ನೀವು ಹಣ ಗಳಿಸಲು ನೀವು ಅನೇಕ ಅವಕಾಶಗಳನ್ನು ಪಡೆಯುವಿರಿ ಮತ್ತು ನೀವು ಸಂಪತ್ತನ್ನು ಸಂಗ್ರಹಿಸಲು ಸಹ ಸಾಧ್ಯವಾಗುತ್ತದೆ. ಈ ರಾಶಿಚಕ್ರದ ವ್ಯಾಪಾರಸ್ಥರಿಗೆ ಬುಧದ ಈ ಸಂಚಾರವು ಉತ್ತಮವಾಗಿರುತ್ತದೆ. ವಿಶೇಷವಾಗಿ ಕುಟುಂಬಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ನೀವು ಸಕಾರಾತ್ಮಕತೆ ಮತ್ತು ಆಶಾವಾದದಿಂದ ತುಂಬಿರುತ್ತೀರಿ.
ಪರಿಹಾರ - ಬುಧವಾರ ಭಗವಂತ ಗಣೇಶನನ್ನು ಪೂಜಿಸಿ ಮತ್ತು ಅವರಿಗೆ ದೂರ್ವಾ ಅರ್ಪಿಸಿ.
ಮಿಥುನ ರಾಶಿ
ಮಿಥುನ ರಾಶಿಚಕ್ರದ ಸ್ಥಳೀಯರ ಅಧಿಪತಿ ಬುಧ ಗ್ರಹ, ಆದ್ದರಿಂದ ಈ ಸಂಚಾರವು ಮಿಥುನ ರಾಶಿಚಕ್ರದ ಸ್ಥಳೀಯರಿಗೆ ವಿಶೇಷವಾಗಲಿದೆ. ಬುಧ ಸಂಚಾರದ ಸಮಯದಲ್ಲಿ ನಿಮ್ಮ ಮೊದಲನೇ ಮನೆಯಲ್ಲಿರುತ್ತದೆ. ಆದ್ದರಿಂದ ಇದು ನಿಮಗೆ ಪ್ರಯೋಜನಕಾರಿ ಮತ್ತು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ. ಆದ್ದರಿಂದ ಬುಧ ನಿಮ್ಮ ನಾಲ್ಕನೇ ಮನೆಯ ಅಧಿಪತಿಯೂ ಆಗಿದ್ದಾರೆ. ಕುಟುಂಬ ಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ನೀಡುವ ಸಾಧ್ಯತೆ ಇದೆ. ಮನೆಯ ಸದಸ್ಯರೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಬಹುದು. ಈ ಸಮಯದಲ್ಲಿ ಕುಟುಂಬದಲ್ಲಿ ಹೊಸ ಸದಸ್ಯರ ಆಗಮನವು ಸಾಧ್ಯತೆಯೂ ಇದೆ.
ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಈ ಸಮಯ ಸಕಾರಾತ್ಮಕವಾಗಿರುತ್ತದೆ. ನಿಮ್ಮ ಆಲೋಚನೆ ಮತ್ತು ವ್ಯಾಪಾರದ ಬಗೆಗಿನ ನಿಮ್ಮ ಕಾರ್ಯತಂತ್ರವು ಈ ಸಮಯದಲ್ಲಿ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಇದರಲ್ಲಿ ನೀವು ಸುಧಾರಣೆಯನ್ನು ತರುವಿರಿ, ಇದರಿಂದಾಗಿ ನಿಮ್ಮ ಉತ್ಪಾದಕತೆ ಹೆಚ್ಚಾಗುತ್ತದೆ. ಮನೆಯಿಂದ ಕೆಲಸ ಮಾಡುತ್ತಿರುವ ಜನರು ಈ ಸಮಯದಲ್ಲಿ ಹೊಸ ಉತ್ತಮ ಉದ್ಯೋಗವನ್ನು ಪಡೆಯಬಹುದು. ತಮ್ಮ ಹವ್ಯಾಸವನ್ನು ತಮ್ಮ ವೃತ್ತಿಯಾಗಿ ಪರಿವರ್ತಿಸಲು ಬಯಸುವವರಿಗೆ ಸಮಯವೂ ಒಳ್ಳೆಯದು. ನಿಮ್ಮ ಮಾರ್ಕೆಟಿಂಗ್ ತಂತ್ರಗಳು ನಿಮ್ಮ ನಿಮ್ಮ ಸಾಮರ್ಥ್ಯದ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಮರ್ಥ್ಯವನ್ನು ನೀಡುತ್ತದೆ. ಈ ರಾಶಿಚಕ್ರದ ವಿವಾಹಿತ ಜನರಿಗೆ ಸಮಯ ಉತ್ತಮವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಜೀವನ ಸಂಗಾತಿಯೊಂದಿಗೆ ನಿಮ್ಮ ತಿಳುವಳಿಕೆ ಮತ್ತು ಸಾಮರ್ಥ್ಯ ಅದ್ಭುತವಾಗಿರುತ್ತದೆ. ನೀವು ನಿಮ್ಮ ಜೀವನ ಸಂಗಾತಿಯ ಹತ್ತಿರವಾಗುವಿರಿ. ತಮ್ಮ ಜೀವನ ಸಂಗಾತಿಯೊಂದಿಗೆ ಯಾವುದೇ ಕೆಲಸ ಅಥವಾ ವ್ಯಾಪಾರದಲ್ಲಿ ತೊಡಗಿರುವ ಜನರು ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.
ಪರಿಹಾರ - ಬುಧವಾರ ಗಣೇಶ ದೇವರಿಗೆ ಲಾಡುವನ್ನು ಅರ್ಪಿಸಿ.
ಕರ್ಕ
ರಾಶಿ ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಹನ್ನೆರಡನೇ ಮನೆಗೆ ಗೋಚರಿಸಲಿದೆ. ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಪ್ರಗತಿ ಪಡೆಯುತ್ತಾರೆ. ಏಕೆಂದರೆ ನಿಮ್ಮ ಕೆಲಸದ ಬಗ್ಗೆ ನೀವು ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುವಿರಿ ಮತ್ತು ಎಲ್ಲವನ್ನೂ ದಕ್ಷತೆಯೊಂದಿಗೆ ಮಾಡುವಿರಿ. ನೀವು ವ್ಯಾಪಾರಕ್ಕೆ ಸಂಬಂಧಿಸಿದ ಪ್ರಯಾಣವನ್ನು ಮಾಡಬಹುದು ಮತ್ತು ಈ ಪ್ರಯಾಣದ ಮೂಲಕ ನಿಮಗೆ ಲಾಭವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರೊಂದಿಗೆ ನೀವು ಎಲ್ಲಾದರೂ ಸುತ್ತಾಡಲು ಹೋಗಬಹುದು. ಈ ಕಾರಣದಿಂದಾಗಿ ವೃತ್ತಿಪರ ಮತ್ತು ವೈಯಕಿತ್ಕ ಜೀವನದಲ್ಲಿ ನೀವು ಉತ್ತಮ ಪ್ರದರ್ಶನ ಮಾಡಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಐಷಾರಾಮಿ ಮತ್ತು ಸೌಕರ್ಯಗಳಿಗಾಗಿ ನೀವು ಖರ್ಚು ಮಾಡಬಹುದು. ಉದ್ಯೋಗಕ್ಕೆ ಸಂಬಂಧಿಸಿದ ಜನರು ತಮ್ಮ ಪ್ರಸ್ತುತ ಉದ್ಯೋಗದಿಂದ ವರ್ಗಾವಣೆ ಅಥವಾ ಬದಲಾಯಿಸಲು ಅವಕಾಶವನ್ನು ಪಡೆಯಬಹುದು. ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಜನರು ಈ ಸಮಯದಲ್ಲಿ ಕೆಲವು ಉತ್ತಮ ಸುದ್ದಿಗಳನ್ನು ಪಡೆಯುವ ಸಾಧ್ಯತೆ ಇದೆ. ಏಕೆಂದರೆ ಬುಧ ಸಂಚಾರವು ನಿಮ್ಮ ಆಸೆಗಳನ್ನು ಈಡೇರಿಸುತ್ತದೆ. ಈ ಸಮಯದಲ್ಲಿ ನಿಮ್ಮ ಮನೆಯ ಕಿರಿಯ ಸದಸ್ಯರು ಸಹ ಪ್ರಗತಿ ಮತ್ತು ಪ್ರೋತ್ಸಾಹವನ್ನು ಪಡೆಯಬಹುದು.
ಪರಿಹಾರ - ದೇವಸ್ಥಾನದಲ್ಲಿ ಹಸಿರು ಕಡಲೆ ಬೆಳೆಯ ದಾನ ಮಾಡಿ.
ಸಿಂಹ ರಾಶಿ
ಬೆಂಕಿಯ ಅಂಶದ ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಎರಡನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಹನ್ನೊಂದನೇ ಮನೆಗೆ ಸಾಗುತ್ತದೆ. ಈ ಸಂಚಾರದ ಕಾರಣದಿಂದಾಗಿ ಈ ರಾಶಿಚಕ್ರದ ಸ್ಥಳೀಯರು ಆರ್ಥಿಕ ವಿಷಯದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ಅನೇಕ ಮೂಲಗಳಿಂದ ಹಣಕಾಸು ಪಡೆಯಬಹುದು. ಈ ರಾಶಿಚಕ್ರದ ವ್ಯಾಪಾರಸ್ಥರು ಸಹ ಈ ಸಮಯದಲ್ಲಿ ಪ್ರಯೋಜನವನ್ನು ಗಳಿಸಬಹುದು. ನೀವು ಒನ್ನೊಬ್ಬರಿಂದ ಸಾಲವನ್ನು ಮರಳಿ ಪಡೆಯಬೇಕಾಗಿದ್ದರೆ, ಅದನ್ನು ಸಹ ನೀವು ಮರಳಿ ಪಡೆಯಬಹುದು. ಈ ಸಮಯದಲ್ಲಿ ವೃತ್ತಿಪರರಿಗೆ ಉತ್ತಮ ಪ್ರೋತ್ಸಾಹ ಸಿಗುತ್ತದೆ. ಇದರೊಂದಿಗೆ ನೀವು ಯಾವುದೇ ಹವ್ಯಾಸ ಅಥವಾ ಅರೆಕಾಲಿಕ ಕೆಲಸದ ಮೂಲಕ ನೀವು ಹೆಚ್ಚುವರಿ ಆದಾಯವನ್ನು ಪಡೆಯುವ ಸಾಧ್ಯತೆ ಇದೆ.
ನಿಮ್ಮ ನಡವಳಿಕೆ ಸ್ನೇಹಪರವಾಗಿರುತ್ತದೆ ಮತ್ತು ನೀವು ನಿಮ್ಮ ಸಿಹಿ ಧ್ವನಿಯ ಮೇಲೆ ಕೆಲವು ಹೊಸ ಸ್ನೇಹಿತರನ್ನು ಹೊಂದುವಿರಿ. ಈ ಸಂಪರ್ಕವು ನಿಮ್ಮ ವೃತ್ತಿ ಜೀವನದಲ್ಲಿ ನಿಮಗೆ ಸಹಾಯ ಮಾಡುತ್ತದೆ ಮತ್ತು ಹೆಚ್ಚು ಹಣವನ್ನು ಗಳಿಸುವ ಹೊಸ ಮಾರ್ಗಗಳಿಗೆ ನಿಮಗೆ ಸಹಾಯ ಮಾಡಬಹುದು. ಕುಟುಂಬ ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರು ಇತರ ಸದಸ್ಯರೊಂದಿಗೆ ಐಕ್ಯತೆ ಮತ್ತು ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳುತ್ತಾರೆ. ಇದು ವ್ಯವಹಾರಕ್ಕೆ ಬಲವನ್ನು ನೀಡುತ್ತದೆ ಮತ್ತು ಈ ಕಾರಣದಿಂದಾಗಿ ನಿಮ್ಮ ವ್ಯಾಪಾರವು ಸುಗಮವಾಗಿ ನಡೆಯುತ್ತದೆ. ನಿಮ್ಮ ಹಿರಿಯ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಸುಗಮವಾಗಿರುತ್ತದೆ ಮತ್ತು ನೀವು ಪರಸ್ಪರರ ಹಿತಾಸಕ್ತಿಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಪರಿಹಾರ - ಬುಧ ಗ್ರಹದ ಶುಭ ಫಲಿತಾಂಶಗಳನ್ನು ಪಡೆಯಲು ಬುಧವಾರ ಹಸಿರು ಎಳೆಗಳ ತರಕಾರಿಗಳನ್ನು ದಾನ ಮಾಡಿ
ಕನ್ಯಾ ರಾಶಿ
ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಮೊದಲನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಹತ್ತನೇ ಮನೆಗೆ ಗೋಚರಿಸುತ್ತದೆ. ಇದನ್ನು ನಿಮ್ಮ ಕರ್ಮ ಮತ್ತು ವೃತ್ತಿ ಜೀವನದ ಅಂಶವೆಂದು ಪರಿಗಣಿಸಲಾಗಿದೆ. ಈ ಸಂಚಾರದ ಸಮಯದಲ್ಲಿ ನೀವು ಶಕ್ತಿಯಿಂದ ತುಂಬಿರುತ್ತೀರಿ ಮತ್ತು ಹೊಸ ವಿಷಯಗಳನ್ನು ಕಲಿಯಲು ಸಿದ್ಧರಾಗಿರುತ್ತೀರಿ. ನೀವು ನಿಮ್ಮ ವೃತ್ತಿಪರ ಜೀವನದಲ್ಲಿ ಆಕ್ರಮಣಕಾರಿಯಾಗಿ ಕೆಲಸ ಮಾಡಲು ನೀವು ಉತ್ಸಾಹದಿಂದ ತುಂಬಿರುತ್ತೀರಿ. ಕೆಲಸದ ಸ್ಥಳದಲ್ಲಿ ಪ್ರಗತಿ ಪಡೆಯಲು ಹೊಸ ಯೋಜನೆ ಮತ್ತು ತಂತ್ರಗಳನ್ನು ರಚಿಸಬಹುದು. ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರು ಸುಧಾರಣೆಯತ್ತ ಮುಂದುವರಿಯುತ್ತಾರೆ.
ಮಾರ್ಕೆಟಿಂಗ್, ಜಾಹೀರಾತು, ಪ್ರತಿಕೋದ್ಯಮ, ಹಣಕಾಸು, ಬ್ಯಾಂಕಿಂಗ್, ಪ್ರಯಾಣ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಈ ಸಮಯ ಶುಭವಾಗಿರುತ್ತದೆ. ನಿಮ್ಮ ದೈನಂದಿಕ ಕಾರ್ಯಗಳಲ್ಲಿ ನೀವು ನಿರತರಾಗಿರುತ್ತೀರಿ ಮತ್ತು ಅದರಿಂದ ಉತ್ತಮ ಹೆಸರು ಗಳಿಸುವಿರಿ. ಹೊಸ ಕೆಲಸವನ್ನು ಆರಂಭಿಸಲು ಬಯಸುತ್ತಿರುವ ಜನರು ಈ ಸಮಯದ ಲಾಭವನ್ನು ಪಡೆದುಕೊಳ್ಳಬೇಕು. ಏಕೆಂದರೆ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುವಂತೆ ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ನಿಮ್ಮ ಕಾರ್ಯನಿರತ ಕೆಲಸದ ವೇಳಾಪಟ್ಟಿಯಿಂದಾಗಿ ನಿಮ್ಮ ಕುಟುಂಬ ಸದಸ್ಯರಿಗೆ ಸಮಯವನ್ನು ನೀಡಲು ನಿಮಗೆ ಸಾಧ್ಯವಾಗುವುದಿಲ್ಲ. ಇದಲ್ಲದೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಏಕೆಂದರೆ ನೀವು ತಲೆ ನೋವು ಮತ್ತು ನಿದ್ರಾಹೀನತೆಯನ್ನು ಎದುರಿಸಬೇಕಾಗಬಹುದು.
ಪರಿಹಾರ - ನಿಮ್ಮ ತಾಯಿ ಮನೆ ಮತ್ತು ತಾಯಿಮನೆ ಜನರಿಗೆ ಉಡುಗೊರೆ ನೀಡಿ ಮತ್ತು ಅವರ ಆಶೀರ್ವಾದವನ್ನು ಪಡೆಯಿರಿ.
ತುಲಾ ರಾಶಿ
ತುಲಾ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಒಂಬತ್ತನೇ ಮನೆಗೆ ಗೋಚರಿಸಲಿದೆ. ಈ ಸಮಯ ನಿಮಗೆ ತುಂಬಾ ಶುಭವಾಗಲಿದೆ. ಇದು ಜೀವನದಲ್ಲಿ ಹೊಂದಾಣಿಕೆಯನ್ನು ತರುತ್ತದೆ ಮತ್ತು ನೀವು ಶ್ರೀಮಂತರಾಗಿರುವಿರಿ. ಧಾರ್ಮಿಕ ಸ್ಟಳಗಳೊಂದಿಗೆ ವಿದೇಶ ಪ್ರವಾಸಕ್ಕೂ ಈ ಸಮಯ ಸಾಕಷ್ಟು ಉತ್ತಮವಾಗಿರುತ್ತದೆ. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ನೀವು ಸಾಕಷ್ಟು ಸಮಯವನ್ನು ಹೊಂದಿರುತ್ತೀರಿ. ನೀವು ಆರಾಮದಾಯಕ ಜೀವನಶೈಲಿಯನ್ನು ಆನಂದಿಸುವಿರಿ ಮತ್ತು ನಿಮ್ಮ ವೈಯಕ್ತಿಕ ಬಳಕೆ ಮತ್ತು ನಿಮ್ಮ ಮನೆಗಾಗಿ ಅಗತ್ಯ ವಸ್ತುಗಳನ್ನು ಖರ್ಚು ಮಾಡುತ್ತೀರಿ.
ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವು ಸೌಹಾರ್ದಯುತವಾಗಿರುತ್ತದೆ ಮತ್ತು ನೀವಿಬ್ಬರೂ ಕೆಲವು ಸಂತೋಷದ ಕ್ಷಣಗಳನ್ನು ಕಳೆಯಲು ಸಾಧ್ಯವಾಗುತ್ತದೆ. ವೃತ್ತಿಪರ ಜೀವನಕ್ಕೂ ಸಮಯ ಉತ್ತಮವಾಗಿರುತ್ತದೆ. ನಿಮ್ಮ ಜ್ಞಾನ ಮತ್ತು ಪ್ರಭಾವದ ಆಧಾರದ ಮೇಲೆ ಈ ಅವಧಿಯಲ್ಲಿ ಮಾಡಲಾಗುವ ವ್ಯವಹಾರಗಳಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವ ಜನರು ತಮ್ಮ ಗ್ರಾಹಕರನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ಅಂಶಗಳನ್ನು ಅವರಿಗೆ ವಿವರಿಸಲು ಪೂರ್ಣ ಸಮಯವನ್ನು ಹೊಂದಿರುತ್ತಾರೆ. ನಿಮ್ಮ ಬುದ್ಧಿವಂತಿಕೆಯೊಂದಿಗೆ ನೀವು ಉತ್ತಮ ವ್ಯವಹಾರವನ್ನು ಮಾಡಬಹುದು ಮತ್ತು ಉತ್ತಮ ಆದೇಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ವೃತ್ತಿಪರ ಜೀವನದಲ್ಲಿ ಯಾವುದೇ ವಿಸ್ತರಣೆಯನ್ನು ನಿರೀಕ್ಷಿಸುತ್ತಿದ್ದರೆ, ಈ ಸಮಯ ನಿಮಗೆ ಉತ್ತಮವಾಗಿರುತ್ತದೆ. ಈ ಸಾಗಣೆಯು ನಿಮಗೆ ಸಾಧನೆಗಳು ಮತ್ತು ಸಂತೋಷವನ್ನು ತರುತ್ತದೆ.
ಪರಿಹಾರ - ಬುಧ ಬೀಜ ಮಂತ್ರವನ್ನು ದಿನಕ್ಕೆ 108 ಬಾರಿ ಜಪಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಬುಧವು ಹನ್ನೊಂದನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಬುಧ ಗ್ರಹವು ನಿಮ್ಮ ಎಂಟನೇ ಮನೆಗೆ ಗೋಚರಿಸಲಿದೆ. ಪರಿಣಾಮವಾಗಿ ವ್ಯಾಪಾರದಲ್ಲಿ ಹಠಾತ್ ಲಾಭವನ್ನು ತೋರಿಸುತ್ತದೆ. ಇದಲ್ಲದೆ ನಿಮ್ಮ ಪೂರ್ವಜರ ಆಸ್ತಿಯಿಂದಲೂ ಪ್ರಯೋಜನವನ್ನು ಪಡೆಯಬಹುದು. ಬೆಟ್ಟಿಂಗ್ ವ್ಯವಹಾರ ಮತ್ತು ಜೂಟಾಟದಿಂದಲೂ ಉತ್ತಮ ಆದಾಯದ ನಿರೀಕ್ಷೆಗಳಿವೆ. ಉದ್ಯೋಗದಲ್ಲಿರುವ ಈ ರಾಶಿಚಕ್ರದ ಸ್ಥಳೀಯರು ಕೆಲಸದ ಸ್ಥಳದಲ್ಲಿ ತಮ್ಮನ್ನು ತಾವು ಅಸುರಕ್ಷಿತರೆಂದು ಭಾವಿಸುತ್ತಾರೆ, ಅವರನ್ನು ಕೆಲಸದಿಂದ ವಜಾ ಮಾಡುವ ಅಪಾಯವಿದೆ ಎಂದು ಭಾವಿಸುತ್ತಾರೆ.
ನಿಮ್ಮ ಕೆಲಸದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ನಿಮಗೆ ಸೂಚಿಸಲಾಗಿದೆ ಮತ್ತು ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಹೆಚ್ಚು ಜಾಗರೂಕರಾಗಿರಿ. ಇದಲ್ಲದೆ ನಿಮ್ಮ ಮೇಲಧಿಕಾರಿಗಳು ಮತ್ತು ಉನ್ನತ ನಿರ್ವಹಣೆಯೊಂದಿಗೆ ಸಂವಾದದ ಸ್ಥಿತಿಯಲ್ಲಿರಿ. ಏಕೆಂದರೆ ನಿಮ್ಮ ಪ್ರಸ್ತುತ ಪ್ರೊಫೈಲ್ನಲ್ಲಿ ಉತ್ತಮ ಹಿಡಿತ ಸಾಧಿಸಲು ಅವು ನಿಮಗೆ ಸಹಾಯ ಮಾಡುತ್ತವೆ. ಈ ಸಮಯದಲ್ಲಿ ನೀವು ಹೆದರಿಕೆ ಮತ್ತು ನಿದ್ರೆಯ ಕೊರತೆಗೆ ಸಂಬಂಧಿಸಿದ ಕೆಲವು ಅರೋಗ್ಯ ಸಮಸ್ಯೆಗಳನ್ನು ಹೊಂದಿರಬಹುದು. ಆದ್ದರಿಂದ ಯೋಗ ಮತ್ತು ಧ್ಯಾನವನ್ನು ಆಶ್ರಯಿಸಲು ನಿಮಗೆ ಸೂಚಿಸಲಾಗಿದೆ.
ಪರಿಹಾರ - ಪ್ರತಿದಿನ ನಿಯಮಿತವಾಗಿ ಹನುಮಾನ್ ಚಾಲೀಸವನ್ನು ಪಠಿಸಿ.
ಧನು ರಾಶಿ
ಧನು ರಾಶಿಚಕ್ರದ ಶತಾಳೀಯರಿಗೆ ಬುಧ ಗ್ರಹವು ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಏಳನೇ ಮನೆಗೆ ಗೋಚರಿಸಲಿದೆ. ಈ ಸಮಯ ಉದ್ಯಮಿಗಳಿಗೆ ಅನುಕೂಲಕರವಾಗಿರುತ್ತದೆ, ಅವರು ತಮ್ಮ ಮಾರ್ಕೆಟಿಂಗ್ ಕೌಶಲ್ಯ ಮತ್ತು ಹೊಸ ತಂತ್ರಗಳೊಂದಿಗೆ ತಮ್ಮ ಕ್ಷೇತ್ರದಲ್ಲಿ ಉತ್ತಮ ಹಿಡಿತವನ್ನು ಉಳಿಸಿಕೊಳ್ಳುತ್ತಾರೆ. ಇದಲ್ಲದೆ, ಹೊಸ ವ್ಯವಹಾರವನ್ನು ಆರಂಭಿಸಲು ಯೋಜಿಸುತ್ತಿರುವವರು ತಮ್ಮ ಸಾಮರ್ಥ್ಯವನ್ನು ತೋರಿಸಲು ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸ್ಥಾನವನ್ನು ಪಡೆಯಲು ಅವಕಾಶವನ್ನು ಪಡೆಯುತ್ತಾರೆ. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರು ತಮ್ಮ ಪಾಲುದಾರರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿರುತ್ತಾರೆ ಮತ್ತು ನಿಮ್ಮ ಜಂಟಿ ಪ್ರಯತ್ನಗಳು ಫಲಪ್ರದ ಫಲಿತಾಂಶಗಳನ್ನು ತರುತ್ತವೆ.
ಕೆಲಸಕ್ಕಾಗಿ ಪ್ರಯಾಣಿಸುವುದು ಪ್ರಯೋಜನಕಾರಿಯಾಗಿದೆ. ಏಕೆಂದರೆ ನೀವು ಉತ್ತಮ ಸಂಪರ್ಕಗಳನ್ನು ಮಾಡುತ್ತೀರಿ ಮತ್ತು ಇದು ನಿಮ್ಮ ವ್ಯಾಪಾರವನ್ನು ವಿಸ್ತರಿಸುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ಹೊಸದಾಗಿ ಮದುವೆಯಾಗಿರುವ ಜೋಡಿಗಳಿಗೆ ಈ ಅವಧಿ ಅನುಕೂಲಕರವಾಗಿರುತ್ತದೆ. ಏಕೆಂದರೆ ನಿಮ್ಮಿಬ್ಬರ ನಡುವಿನ ತಿಳುವಳಿಕೆ ಹೆಚ್ಚಾಗುತ್ತದೆ, ಇದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ವಿವಾಹಿತ ಜನರು ತಮ್ಮ ಕೆಲಸದಲ್ಲಿ ಜೀವನ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಇನ್ನೂ ಒಂಟಿಯಾಗಿರುವ ಈ ರಾಶಿಚಕ್ರದ ಜನರು ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಸಬಹುದು. ಈ ಸಂಚಾರದ ಸಮಯ್ದಲ್ಲಿ ಧನು ರಾಶಿಚಕ್ರದ ಕೆಳವರು ನಿಶ್ಚಿತಾರ್ಥ ಮಾಡಿಕೊಳ್ಳಬಹುದು. ಜಾಹೀರಾತು ಮತ್ತು ಮಾಧ್ಯಮ ಉದ್ಯಮದಲ್ಲಿ ಕೆಲಸ ಮಾಡುತ್ತಿರುವವರು ಪ್ರಗತಿ ಪಡೆಯುತ್ತಾರೆ. ಏಕೆಂದರೆ ಅವರು ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರುತ್ತಾರೆ, ಇದು ನಿಮಗೆ ಸಾಕಾರತ್ಮಕತೆಯನ್ನು ಹೊಂದಿರುತ್ತಾರೆ.
ಪರಿಹಾರ - ನಪುಂಸಕರಿಗೆ ಹಸಿರು ಬಣ್ಣದ ಬಳೆಗಳ ದಾನ ಮಾಡಿ ಮತ್ತು ಅವರ ಆಶೀರ್ವಾದವನ್ನು ಪಡೆಯುವುದರಿಂದ ಉತ್ತಮ ಫಲಿತಾಂಶಗಳು ಉಂಟಾಗುತ್ತವೆ.
ಮಕರ ರಾಶಿ
ಮಕರ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಆರನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಸೂಚಿಸಲಾಗಿದೆ. ನೀವು ಚರ್ಮದದದ್ದುಗಳು, ಅಲರ್ಜಿಗಳು, ಹಾರ್ಮೋನುಗಳ ಬದಲಾವಣೆ ಮತ್ತು ತಲೆನೋವಿನ ಸಮಸ್ಯೆಯಿಂದ ಬಳಲುತ್ತಬಹುದು. ಆದ್ದರಿಂದ ಪ್ರವಾಸಗಳಿಗೆ ಹೋಗುವಾಗ ನೀವು ಹೆಚ್ಚು ಜಾಗರೂಕರಾಗಬೇಕು. ಅತಿಯಾದ ಸೂರ್ಯನ ಬಿಸಿಲು ಅಥವಾ ಧೂಳು ಮತ್ತು ಮಾಲಿನ್ಯವು ನಿಮ್ಮ ಆರೋಗ್ಯವನ್ನು ಹಾಲು ಮಾಡಬಹುದು. ಇದಲ್ಲದೆ ನಿಮ್ಮ ಆಹಾರ ಪದ್ಧತಿಯ ಬಗ್ಗೆ ಜಾಗರೂಕರಾಗಿರಿ ಮತ್ತು ಹಸಿರು ತರಕಾರಿಗಳು ಮತ್ತು ಸಾಕಷ್ಟು ಪ್ರಮಾಣದಲ್ಲಿ ದ್ರವಗಳನ್ನುಕುಡಿಯಿರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ನಿಮ್ಮ ಆಂತರಿಕ ಶಕ್ತಿ ಬೆಳೆಯುತ್ತದೆ.
ಹೊಸ ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಉತ್ತಮ ಸಮಯ ಸಿಗುತ್ತದೆ. ಏಕೆಂದರೆ ನೀವು ಉದ್ಯೋಗದ ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ಆತ್ಮವಿಶ್ವಾಸದಿಂದ ಯಾವುದೇ ಸಂದರ್ಶನವನ್ನು ತೆರವುಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಉದ್ಯೋಗ ವೃತ್ತಿಗೆ ಸಂಬಂಧಿಸದ ಜನರು ತಮ್ಮ ಸಹೋದ್ಯೋಗಿಗಳೊಂದಿಗೆ ಕೆಲವು ಸಂಘರ್ಷಗಳನ್ನು ಎದುರಿಸಬೇಕಾಗಬಹುದು. ಯಾವುದೇ ರೀತಿಯ ವಾದವನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ. ಏಕೆಂದರೆ ಇದು ನಿಮ್ಮ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರಬಹುದು. ಈ ಸಮಯದಲ್ಲಿ ನಿಮ್ಮ ಶತ್ರುಗಳು ದುರ್ಬಲರಾಗುತ್ತಾರೆ, ಈ ಸಮಯದಲ್ಲಿ ನೀವು ಅವರ ಮೇಲೆ ಪ್ರಾಬಲ್ಯ ಸಾಧಿಸಲು ಅವಕಾಶ ಪಡೆಯುತ್ತೀರಿ.
ಪರಿಹಾರ - ಬುಧವಾರದಂದು ಯುವತಿಗೆ ಹಸಿರು ಬಣ್ಣದ ಬಟ್ಟೆಗಳ ದಾನ ಮಾಡಿ.
ಕುಂಭ ರಾಶಿ
ಕುಂಭ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಐದನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಐದನೇ ಮನೆಗೆ ಸಾಗುತ್ತದೆ. ಸಂಶೋಧನೆ ಮಾಡುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಉತ್ತಮ ಏಕಾಗ್ರತೆಯನ್ನು ಹೊಂದಿರುತ್ತಾರೆ. ಅವರು ತಮ್ಮ ಅಧ್ಯಯನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಆದಾಗ್ಯೂ, ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳು ಶಿಕ್ಷಣದ ಕ್ಷೇತ್ರದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ನೀವು ಕೇಂದ್ರೀಕರಿಸುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರಿಂದಾಗಿ ನಿಮ್ಮ ಪ್ರದರ್ಶನವು ಹದಗೆಡಬಹುದು. ಮಕ್ಕಳ ದುರ್ಬಲ ಅರೋಗ್ಯ ಅಥವಾ ಅಧ್ಯಯನದ ಕ್ಷೇತ್ರದಲ್ಲಿ ಬರುತ್ತಿರುವ ಸಮಸ್ಯೆಗಳ ಕಾರಣದಿಂದಾಗಿ ಈ ರಾಶಿಚಕ್ರದ ಪೋಷಕರು ಸಹ ತೊಂದರೆಕ್ಕೊಳಗಾಗಬಹುದು.
ತಮ್ಮ ಒಲವು ಅಥವಾ ಹವ್ಯಾಸವನ್ನು ವೃತ್ತಿಯಾಗಿ ಬದಲಾಯಿಸಲು ಪ್ರಯತ್ನಿಸುತ್ತಿರುವ ಜನರು ಸಹ ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲು ನಿಮ್ಮ ಸಂಪರ್ಕಗಳು ಸಹಾಯ ಮಾಡುತ್ತವೆ. ಪ್ರೀತಿಯ ಸಂಬಂಧದಲ್ಲಿರುವ ಈ ರಾಶಿಚಕ್ರದ ಸ್ಥಳೀಯರು ತಮ್ಮ ಸಂಗಾಗಿಯೊಂದಿಗೆ ಆಳವಾದ ತಿಳುವಳಿಕೆಯನ್ನು ಹೊಂದಲು ಸಾಧ್ಯವಾಗುತ್ತದೆ. ಅದು ಅವರ ಬಂಧವನ್ನು ಬಲಪಡಿಸುತ್ತದೆ. ಅವರು ಪರಸ್ಪರರ ನಿರೀಕ್ಷೆಗಳಿಗೆ ತಕ್ಕಂತೆ ಬದಕುತ್ತಾರೆ. ಈ ಸಮಯದಲ್ಲಿ ನಿಮ್ಮ ಸಿಲುಕಿಕೊಂಡಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ಹೊಸ ಒಪ್ಪಂದಗಳನ್ನು ಪಡೆಯಲು ಸಹ ಅನೇಕ ಅವಕಾಶಗಳನ್ನು ಪಡೆಯುತ್ತೀರಿ.
ಪರಿಹಾರ - ಪ್ರತಿದಿನ ಭಗವದ್ ಗೀತಾ ಓದಿರಿ.
ಮೀನಾ ರಾಶಿ
ಮೀನಾ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಏಳನೇ ಮನೆಗೆ ಗೋಚರಿಸಲಿದೆ. ಪರಿಣಾಮವಾಗಿ ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯಲು ನೀವು ಅವಕಾಶವನ್ನು ಪಡೆಯುತ್ತೀರಿ. ಯಾವುದೇ ಸದಸ್ಯರ ಮದುವೆ ಅಥವಾ ನಿಶ್ಚಿತಾರ್ಥದ ಮೂಲಕ ನೀವು ಕುಟುಂಬದ ಸದಸ್ಯರೊಂದಿಗೆ ನಿಕಟ ಬರಬಹುದು. ಕುಟುಂಬ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಇದು ಶುಹ ಸಮವವಾಗಿರುತ್ತದೆ. ಏಕೆಂದರೆ ನಿಮ್ಮ ಉತ್ತಮ ಸಂವಹನ ಮತ್ತು ಮನೆಯ ಇತರ ಸದಸ್ಯರೊಂದಿಗಿನ ಸಾಮರಸ್ಯದ ಕಾರಣದಿಂದಾಗಿ ವ್ಯಾಪಾರಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳಲ್ಲಿ ನೀವು ಯಶಸ್ಸು ಪಡೆಯಬಹುದು.
ಈ ರಾಶಿಚಕ್ರದ ವಿವಾಹಿತ ಜನರು ತಮ್ಮ ಜೀವನ ಸಂಗಾತಿಯೊಂದಿಗೆ ಕೆಲವು ಸಂವಹನ ಅಂತರವನ್ನು ಎದುರಿಸಬೇಕಾಗಬಹುದು. ಏಕೆಂದರೆ ಅವರು ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ತುಂಬಾ ಕಾರ್ಯನಿರತರಾಗಿರಬಹುದು ಅಥವಾ ಮನೆ ಕುಟುಂಬದಲ್ಲಿ ನಡೆಯಲಾಗುವ ಕೆಲಸವು ಅವರನ್ನು ಕಾರ್ಯನಿರತವಾಗಿಸುತ್ತದೆ. ನಿಮ್ಮ ಪ್ರೀತಿಪಾತ್ರರೊಡನೆ ಗುಣಮಟ್ಟದ ಸಮಯವನ್ನು ಕಳೆಯಲು ಸಮಯವನ್ನು ಸರಿಯಾಗಿ ನಿರ್ವಹಿಸಲು ನಿಮಗೆ ಸೂಚಿಸಲಾಗಿದೆ. ಆಸ್ತಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವವರಿಗೆ ಸಮಯ ಅನುಕೊಲಕರವಾಗಿದೆ. ಈ ಸಮಯದಲ್ಲಿ ಬರಹಗಾರರು, ಮಾರ್ಕೆಟಿಂಗ್ ವೃತ್ತಿಪರರು, ಪತ್ರಕರ್ತರು ತಮ್ಮ ವೃತ್ತಿಪರ ಜೀವನದಲ್ಲಿ ಕೆಲವು ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ.
ಪರಿಹಾರ - ವಿಷ್ಣುವಿನ ಕೃಷ್ಣ ಅವತಾರಕ್ಕೆ ಸಂಬಂಧಿಸಿದ ಕಥೆಗಳನ್ನು ಕೇಳುವುದರಿಂದ ಉತ್ತಮ ಫಲಿತಾಂಶಗಳು ಉಂಟಾಗುತ್ತವೆ.