ಸಿಂಹ ರಾಶಿಯಲ್ಲಿ ಬುಧ ಸಂಚಾರ ( 9th August 2021 )
ಬುಧ ಗ್ರಹವು ವ್ಯಾಪಾರ, ಧ್ವನಿ, ಶಿಕ್ಷಣ, ಬುದ್ಧಿ ಇತ್ಯಾದಿಯ ಅಂಶ ಗ್ರಹವೆಂದು ಪರಿಗಣಿಸಲಾಗಿದೆ. ಬುಧವು ಗ್ರಹಗಳ ರಾಜಕುಮಾರನ ಸ್ಥಾನಮಾನವನ್ನು ಹೊಂದಿದೆ. ಯಾವುದೇ ಜಾತಕದಲ್ಲಿ ಬಲವಾದ ಸ್ಥಾನವನ್ನು ಹೊಂದಿದ್ದರೆ, ವ್ಯಕ್ತಿಯನ್ನು ತಾರ್ಕಿಕ ಬುದ್ಧಿವಂತಿಕೆ, ಗಣಿತ ವಿಷಯಗಳ ಬಗ್ಗೆ ಉತ್ತಮ ತಿಳುವಳಿಕೆ ಮತ್ತು ಉತ್ತಮ ಉದ್ಯಮಿಯನ್ನಾಗಿ ಮಾಡುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಯಾವುದೇ ಜಾತಕದಲ್ಲಿ ಬುಧ ಗ್ರಹವು ದುರುದ್ವೇಷಪೂರಿತ ಸ್ಥಿತಿಯಲ್ಲಿದ್ದರೆ, ಆ ವ್ಯಕ್ತಿಯು ಚರ್ಮದ ಕಾಯಿಲೆಗಳಿಗೆ ಗುರಿಯಾಗಬಹುದು ಮತ್ತು ಇದರೊಂದಿಗೆ ಅಂತಹ ವ್ಯಕ್ತಿ ವೈಯಕ್ತಿಕ ಜೀವನದಲ್ಲಿ, ಜನರೊಂದಿಗೆ ಸ್ಪಷ್ಟವಾಗಿ ಮಾತನಾಡುವಲ್ಲಿ ಅಸಮರ್ಥರಾಗುತ್ತಾರೆ.
ಆಸ್ಟ್ರೋಸೇಜ್ ವಾರ್ತಾ ಮೂಲಕ ವಿಶ್ವದ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ
ಸಂಚಾರದ ಸಮಯ
ಈಗ ಬುದ್ಧಿವಂತಿಕೆಯ ದೇವರಾದ ಬುಧವು ಚಂದ್ರನ ರಾಶಿಯಿಂದ ಹಾದುಹೋಗುವ ಮೂಲಕ ಸೂರ್ಯನ ರಾಶಿಗೆ ಸಾಗಲಿದೆ. ಇದರ ಪರಿಣಾಮವಾಗಿ, ಬುಧ ಸಂಚಾರವು 09 ಆಗಸ್ಟ್ 2021 ರಂದು ರಾತ್ರಿ 01 ಗಂಟೆ 23 ನಿಮಿಷಕ್ಕೆ ಕರ್ಕ ರಾಶಿಯಿಂದ ಸಿಂಹ ರಾಶಿಯಲ್ಲಿರುತ್ತಾರೆ ಮತ್ತು ಬುಧ ಗ್ರಹವು ಈ ರಾಶಿಯಲ್ಲಿ 26 ಆಗಸ್ಟ್ 2021 ರಂದು , ಬೆಳಿಗ್ಗೆ 11 ಗಂಟೆ 08 ನಿಮಿಷದ ವರೆಗೆ ಇರುತ್ತದೆ ಮತ್ತು ನಂತರ ಸಂಚಾರದ ಮೂಲಕ ಕನ್ಯಾ ರಾಶಿಗೆ ಸಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬುಧನ ಈ ಸಂಚಾರದ ಪರಿಣಾಮವು ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಂಚಾರದಿಂದ ನಿಮ್ಮ ರಾಶಿ ಯಾವ ರೀತಿ ಪ್ರಭಾವಿತವಾಗುತ್ತದೆ ನಡೆಯಿರಿ ತಿಳಿಯೋಣ.
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ
मेष / ಮೇಷ ರಾಶಿ
ಮೇಷ ರಾಶಿಚಕ್ರದ ಸ್ಥಳೀಯರ ಮೂರನೇ ಮತ್ತು ಐದನೇ ಮನೆಯ ಅಧಿಪತಿ ಬುಧ ದೇವ ಸಂಚಾರದ ಸಮಯದಲ್ಲಿ ನಿಮ್ಮ ಐದನೇ ಮನೆಗೆ ಸಾಗುತ್ತಾರೆ. ಐದನೇ ಮನೆಯನ್ನು ಬುದ್ಧಿ, ಮಕ್ಕಳು, ಜ್ಞಾನ ಇತ್ಯಾದಿಯ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಪ್ರಯತ್ನಗಳ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿ ಕಾಣುವಿರಿ. ಇದರೊಂದಿಗೆ ಇತರರನ್ನು ನಿಮ್ಮತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿರುತ್ತದೆ, ಏಕೆಂದರೆ ಈ ಸಮಯವು ಅವರ ಯೋಚನೆ ಮತ್ತು ತಿಳುವಳಿಕೆಯ ಶಕ್ತಿಯನ್ನು ಸುಧಾರಿಸುತ್ತದೆ. ಈ ಕಾರಣದಿಂದಾಗಿ ಅಧ್ಯಯನದತ್ತ ಕೇಂದ್ರೀಕರಿಸಲು ನಿಮಗೆ ಸಾಧ್ಯವಾಗುತ್ತದೆ ಮತ್ತು ಮುಂಬರುವ ಪರೀಕ್ಷೆಗಳಲ್ಲಿ ನೀವು ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ.
ಕೆಲಸದಲ್ಲಿ ತೊಡಗಿರುವವರು ಈ ಸಮಯದಲ್ಲಿ ಬಡ್ತಿ ಪಡೆಯಲು ಅವಕಾಶವನ್ನು ಪಡೆಯುತ್ತಾರೆ. ನೀವು ಯಾವುದೇ ಸೇವಾ ವಿಭಾಗಲ್ಲಿ ಕೆಲಸ ಮಾಡುತ್ತಿದ್ದರೂ ಸಹ, ಈ ಸಮಯವು ನಿಮ್ಮ ಜೇವನದಲ್ಲಿ ಲಾಭಗಳನ್ನು ತರುತ್ತಿದೆ. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಕಾರಣದಿಂದಾಗಿ, ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಸಂಪೂರ್ಣವಾಗಿ ಸಾಧ್ಯವಾಗುತ್ತದೆ.
ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ಪ್ರೀತಿಯಲ್ಲಿರುವ ಜನರು ಈ ಸಂಚಾರದ ಸಮಯದಲ್ಲಿ ತಮ್ಮ ಸಂಬಂಧದಲ್ಲಿ ಯಾವುದೇ ತಪ್ಪುಗ್ರಹಿಕೆಗಳು ಅಥವಾ ವಿವಾದವನ್ನು ಎದುರಿಸಬೇಕಾಗಬಹುದು. ಅಂತಹ ಸಂದರ್ಭದಲ್ಲಿನ ನಿಮ್ಮ ಸಂಬಂಧವನ್ನು ಬಲಪಡಿಸಲು, ಸಾಧ್ಯವಾದಷ್ಟು ಪ್ರೀತಿಪಾತ್ರರೊಂದಿಗೆ ಸಮಯವನ್ನು ಕಳೆಯಿರಿ ಮತ್ತು ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಈ ಸಂಚಾರದ ಸಮಯವು ನಿಮ್ಮ ಸಂವಹನ ಶೈಲಿಯಲ್ಲಿ ಹೆಚ್ಚಳವನ್ನು ತರುತ್ತದೆ, ಇದರಿಂದಾಗಿ ನೀವು ಇತರರ ಮುಂದೆ ನಿಮ್ಮ ಮಾತುಗಳನ್ನು ಸ್ಪಷ್ಟವಾಗಿಡುವ ಮೂಲಕ ಅವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.
ಪರಿಹಾರ - ಬುಧವಾರ ಉಪವಾಸ ಮಾಡುವುದು ನಿಮಗೆ ಪ್ರಯೋಜನಕಾರಿ.
वृषभ / ವೃಷಭ ರಾಶಿ
ಬುಧ ದೇವ ವೃಷಭ ರಾಶಿಚಕ್ರದ ಜನರ ಎರಡನೇ ಮತ್ತು ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಗೆ ಸಾಗುತ್ತದೆ. ಈ ಮನೆಯ ಮೂಲಕ ತಾಯಿ, ನಿವಾಸ, ಸಂತೋಷ ಸಂಪನ್ಮೂಲಗಳ ಬಗ್ಗೆ ಪರಿಗಣಿಸಲಾಗುತ್ತದೆ.
ಈ ಸಮಯದಲ್ಲಿ ನಿಮ್ಮ ಪದಗಳು ಮತ್ತು ಮಾತುಗಳ ಬಗ್ಗೆ ನೀವು ಸ್ಪಷ್ಟರಾಗಿರುತ್ತೀರಿ. ನಿಮ್ಮ ಧ್ವನಿಯಲ್ಲಿ ಸಕಾರಾತ್ಮಕತೆಯನ್ನು ಕಾಣಲಾಗುತ್ತದೆ. ಇದರ ಪರಿಣಾಮವಾಗಿ ನೀವು ಇತರರನ್ನು ನಿಮ್ಮತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತೀರಿ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರುತ್ತದೆ. ಏಕೆಂದರೆ ಅವರ ಬೌದ್ಧಿಕ ಮಟ್ಟವು ಅಭಿವೃದ್ಧಿಗೊಳ್ಳುತ್ತದೆ. ಇದರಿಂದಾಗಿ ಅವರು ಪ್ರತಿಯೊಂದು ವಿಷಯವನ್ನು ಕಲಿಯಲು ಮತ್ತು ಅದನ್ನು ನೆನಪಿಡಲು ಸಾಧ್ಯವಾಗುತ್ತದೆ.
ಈ ಸಮಯದಲ್ಲಿ ಕುಟುಂಬದ ವಾತಾವರಣವು ಉತ್ತಮವಾಗಿರುತ್ತದೆ. ಏಕೆಂದರೆ ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸಲು ನಿಮಗೆ ಸಾಧ್ಯವಾಗುತ್ತದೆ. ಈ ಸಮವು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯಲು ನಿಮಗೆ ಸಹಾಯ ಮಾಡುತ್ತದೆ. ಪ್ರೀತಿಯ ಸಂಬಂಧದಲ್ಲಿರುವ ಜನರು ಸಹ ಈ ಸಂಚಾರದ ಸಮಯದಲ್ಲಿ ತಮ್ಮ ಪ್ರೇಮಿಯೊಂದಿಗೆ ಸಂತೋಷವನ್ನು ಪಡೆಯುತ್ತಾರೆ ಮತ್ತು ತಮ್ಮ ಪ್ರೀಮಿಯನ್ನು ಕುಟುಂಬದೊಂದಿಗೆ ಪರಿಚಯಿಸಲು ಸಹ ನಿರ್ಧರಿಸಬಹುದು.
ಶಿಕ್ಷಣ, ಉದ್ಯೋಗ, ಸೇಲ್ಸ್ ಮತ್ತು ಮಾರ್ಕೆಟಿಂಗ್ ಅಥವಾ ಸಲಹೆಗಾರರಾಗಿ ಕೆಲಸದಲ್ಲಿ ತೊಡಗಿರುವವರಿಗೆ ಈ ಸಮಯ ಉತ್ತಮವಾಗಿರುತ್ತದೆ. ತಮ್ಮ ಭಾಷಣೆ ಮತ್ತು ಧ್ವನಿಯ ಮೇಲೆ ನಿಮ್ಮ ಅದ್ಭುತ ನಿಯಂತ್ರಣವಿರುತ್ತದೆ. ಈ ಕಾರಣದಿಂದಾಗಿ ನೀವು ಜನರನ್ನು ಅರ್ಥಮಾಡಿಕೊಳ್ಳಲು ಮತ್ತು ಅವರಿಗೆ ನಿಮ್ಮ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗುತ್ತೀರಿ. ಈ ಸಂಚಾರವು ನಿಮ್ಮ ತಾಯಿಯೊಂದಿಗೆ ಸೇರಲು ಸಹ ಸಹಾಯ ಮಾಡುತ್ತದೆ, ಇದರಿಂದಾಗಿ ನಿಮ್ಮಿಬ್ಬರ ಸಂಬಂಧವು ಇನ್ನಷ್ಟು ಬಲಗೊಳ್ಳಲು ಸಾಧ್ಯವಾಗುತ್ತದೆ.
ಪರಿಹಾರ - ಮನೆಯಲ್ಲಿ ತುಳಸಿ ಸಸ್ಯವನ್ನು ನೆಟ್ಟು ಅದಕ್ಕೆ ಪ್ರತಿದಿನ ನಿಯಮಿತವಾಗಿ ನೀರು ಅರ್ಪಿಸಿ.
मिथुन / ಮಿಥುನ ರಾಶಿ
ಬುಧ ದೇವ ಮಿಥುನ ರಾಶಿಚಕ್ರದ ಸ್ಥಳೀಯರ ಲಗ್ನದ ಮತ್ತು ನಾಲ್ಕನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಮೂರನೇ ಮನೆಗೆ ಪ್ರವೇಶಿಸುತ್ತದೆ. ಈ ಮನೆಯ ಮೂಲಕ ನಿಮ್ಮ ಧೈರ್ಯ, ಪರಾಕ್ರಮ, ಕಿರಿಯ ಸಹೋದರ - ಸಹೋದರಿಯರೊಂದಿಗಿನ ನಿಮ್ಮ ಸಂಬಂಧ ಮತ್ತು ಸಣ್ಣ ಪ್ರವಾಸಗಳ ಬಗ್ಗೆ ಪರಿಗಣಿಸಲಾಗುತ್ತದೆ.
ಈ ಸಮಯದಲ್ಲಿ ನೀವು ನಿಮ್ಮನ್ನು ದೈಹಿಕವಾಗಿ ಆರೋಗ್ಯವಾಗಿಡಲು ವಿಶೇಷ ಆಸಕ್ತಿ ವಹಿಸುವಿರಿ. ಇದಕ್ಕಾಗಿ ನೀವು ಕ್ರೀಡೆ ಮತ್ತು ವ್ಯಾಯಾಮದಂತಹ ಚಟುವಟಿಕೆಗಳಲ್ಲಿ ಮುಂದುವರಿದು ಭಾಗವಹಿಸಬಹುದು. ಈ ಸಮಯವು ಸಾಮಾನ್ಯವಾಗಿ ನಿಮ್ಮನ್ನು ಸಕ್ರಿಯಗೊಳಿಸುತ್ತದೆ.
ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಯಾವುದೇ ಅಲ್ಪ ದೂರದ ಪ್ರಯಾಣಕ್ಕೆ ಹೋಗಲು ಯೋಜಿಸಬಹುದು. ನಿಮ್ಮ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ, ಇದರ ಪರಿಣಾಮದಿಂದಾಗಿ ನಿಮ್ಮ ಅನೇಕ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಅವರ ಬೆಂಬಲವನ್ನು ನೀವು ಪಡೆಯಬಹುದು ಮತ್ತು ಅವರೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯಲು ಇಷ್ಟಪಡುವಿರಿ.
ಬರಹಗಾರರು, ಸಾಕ್ಷಕರು ಮತ್ತು ಸಂಪಾದಕರಿಗೆ ಈ ಸಮಯವು ಅದೃಷ್ಟವನ್ನು ತರುತ್ತದೆ. ಏಕೆಂದರೆ ಅವರು ತಮ್ಮ ಲೇಖನ ಕೌಶಲ್ಯದ ಮೂಲಕ ಹೆಚ್ಚಿನ ಜನರನ್ನು ತಮ್ಮ ಕಡೆಗೆ ಆಕರ್ಷಿಸುವಲ್ಲಿ ಯಶಸ್ಸು ಪಡೆಯುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ ಕ್ರೀಡೆಗಳಿಗೆ ಸಂಬಂಧಿಸಿದ ಜನರಿಗೂ ಈ ಸಮಯ ವಿಶೇಷ ಅನುಕೊಲಕರವಾಗಿರುತ್ತದೆ.
ಕೆಲಸದ ಸ್ಥಳದ ಬಗ್ಗೆ ಮಾತನಾಡಿದರೆ, ಉದ್ಯೋಗಪರರು ಈ ಸಮಯದಲ್ಲಿ ಅಪೇಕ್ಷಿತ ವರ್ಗಾವಣೆಯನ್ನು ಪಡೆಯಬಹುದು ಅಥವಾ ಅವರು ಕೆಲಸದ ವಿಷಯದಲ್ಲಿ ಮನೆಯಿಂದ ದೂರ ಹೋಗಬೇಕಾಗಬಹುದು. ಇದರೊಂದಿಗೆ ವ್ಯಾಪಾರಸ್ಥರು ತಮ್ಮ ಉತ್ತಮ ಮತ್ತು ಸಾರ್ವಜನಿಕ ಸಂಬಂಧವನ್ನು ಸುಧಾರಿಸುವ ಮೂಲಕ, ತಮ್ಮ ವ್ಯಾಪಾರದಲ್ಲಿ ಹೊಸ ಗ್ರಾಹಕರನ್ನು ಸೇರಿಸಲು ನಿರಂತರವಾಗಿ ಪ್ರಯಾಣ ಮಾಡಬೇಕಾಗಬಹುದು.
ಪರಿಹಾರ - ಬುಧ ಗ್ರಹದ ಶುಭ ಫಲಿತಾಂಶಗಳನ್ನು ಪಡೆಯಲು, ನಿಮ್ಮ ಬಲಗೈಯ ಚಿಕ್ಕ ಬೆರಳಿನಲ್ಲಿ ಉತ್ತಮ ಗುಣಮಟ್ಟದ ಪಚ್ಛೆಯನ್ನು ಚಿನ್ನ ಅಥವಾ ಬೆಳ್ಳಿಯಲ್ಲಿ ತಯಾರಿಸಿ ಧರಿಸಿ.
कर्क / ಕರ್ಕ ರಾಶಿ
ಬುಧ ದೇವ ಕರ್ಕ ರಾಶಿಚಕ್ರದ ಜನರ ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಎರಡನೇ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ, ಈ ಮನೆಯನ್ನು ನಿಮ್ಮ ಸಂಪತ್ತು, ಕುಟುಂಬ, ಧ್ವನಿ, ಉದ್ದೇಶ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ಸಂಚಾರವು ನಿಮ್ಮ ವೆಚ್ಚಗಳಲ್ಲಿ ಹಠಾತ್ ಹೆಚ್ಚಳವನ್ನು ತರುತ್ತದೆ, ಈ ಕಾರಣದಿಂದಾಗಿ ನೀವು ಗೃಹೋಪಯೋಗಿ ವಸ್ತುಗಳು ಮತ್ತು ವಿದ್ಯುತ್ ಉಪಕರಣಗಳಿಗೆ ಸಾಕಷ್ಟು ಖರ್ಚು ಮಾಡುವುದನ್ನು ಕಾಣಬಹುದು.
ನಿಮ್ಮ ಸಂವಹನ ಕೌಶಲ್ಯವು ಹೆಚ್ಚಾಗುತ್ತದೆ ಮತ್ತು ನಿಮ್ಮ ಕುಟುಂಬದೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಆದಾಗ್ಯೂ, ಈ ಸಮಯದಲ್ಲಿ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ವಿಶೇಷವಾಗಿನಿಮ್ಮ ಗಂಟಲಿಗೆ ಸಂಬಂಧಿಸಿದ ರೋಗಗಳ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಲು ನಿಮಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರುತ್ತದೆ. ಅವರ ಏಕಾಗ್ರತೆಯ ಮಟ್ಟ ಉತ್ತಮವಾಗುತ್ತದೆ, ಇದರಿಂದಾಗಿ ಅವರು ಉತ್ತಮ ರೀತಿಯಲ್ಲಿ ಪ್ರತಿಯೊಂದು ವಿಷಯವನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ಕಂಠಪಾಠ ಮಾಡಲು ಸಾಧ್ಯವಾಗುತ್ತದೆ.
ಈ ಸಾಗಣೆಯು ನಿಮ್ಮ ಸ್ವಭಾವವನ್ನು ಹಾಸ್ಯಮಯವಾಗಿಸುತ್ತದೆ ಮತ್ತು ಜೋಕ್ ಗಳನ್ನು ಹೇಳುವ ಮೂಲಕ ನಿಮ್ಮ ಸ್ನೇಹಿತರು ಮತ್ತು ಪರಿಚಯಸ್ಥರಲ್ಲಿ ನೀವು ಪ್ರಸಿದ್ಧರಾಗುತ್ತೀರಿ. ನಿಮ್ಮ ಕೆಲಸದ ಸ್ಥಳದ ಬಗ್ಗೆ ಮಾತನಾಡಿದರೆ, ಯಾವುದೇ ರೀತಿಯ ಕುಟುಂಬ ವ್ಯಾಪಾರದೊಂದಿಗೆ ಸೇರಿರುವ ಜನರಿಗೂ ಈ ಸಮಯ ಅನುಕೂಲಕರವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಕುಟುಂಬದ ಬೆಂಬಲವನ್ನು ಪಡೆಯುವುದಲ್ಲದೆ, ಅವರೊಂದಿಗೆ ನಿಮ್ಮ ಸಾಮರಸ್ಯವನ್ನು ಸುಧಾರಿಸಲು ನೀವು ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹ ಸಾಧ್ಯವಾಗುತ್ತದೆ ಮತ್ತು ಈ ನಿರ್ಧಾರವು ನಿಮ್ಮ ವ್ಯಾಪರವನ್ನು ಅಭಿವೃದ್ಧಿಪಡಿಸಲು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
ನೀವು ಹೂಡಿಕೆಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ಈ ಸಮಯ ಸ್ವಲ್ಪ ಪ್ರತಿಕೂಲವಾಗಿರಲಿದೆ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಹೂಡಿಕೆಯನ್ನು ತಪ್ಪಿಸಿ, ಇಲ್ಲದಿದ್ದರೆ ನಿಮಗೆ ಹಣಕಾಸಿನ ನಷ್ಟ ಸಾಧ್ಯ. ಇದರೊಂದಿಗೆ ವೃತ್ತಿಪರ ಜೀವನದಲ್ಲಿ ಯಶಸ್ಸು ಪಡೆಯಲು ನೀವು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ.
ಪರಿಹಾರ - ಬುಧವಾರ ಮಹಿಳಾ ಸೇವಕರಿಗೆ ಹಸಿರು ಎಳೆಗಳ ತರಕಾರಿಗಳನ್ನು ದಾನ ಮಾಡಿ.
सिंह / ಸಿಂಹ ರಾಶಿ
ಬುಧ ದೇವ ಸಿಂಹ ರಾಶಿಚಕ್ರದ ಸ್ಥಳೀಯರ ಎರಡನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಚಕ್ರದ ಲಗ್ನದ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಇದರ ಸಕಾರಾತ್ಮಕ ಪರಿಣಾಮವು ನೇರವಾಗಿ ನಿಮ್ಮ ಆರ್ಥಿಕ ಜೀವನದ ಮೇಲೆ ಬೀರುತ್ತದೆ ಮತ್ತು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಹಣಕಾಸು ಗಳಿಸುವಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಮೂಲಕ ಮಾಡಲಾಗುವ ಪ್ರಯತ್ನಗಳಲ್ಲೂ ನೀವು ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ.
ಈ ಸಮಯವೂ ನಿಮ್ಮ ಧೈರ್ಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನಿಮ್ಮ ಪ್ರತಿಯೊಂದು ನಿರ್ಧಾರವನ್ನು ವೇಗವಾಗಿ ತೆಗೆದುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ಈ ಸಮಯದಲ್ಲಿ ನೀವು ಅನೇಕ ದೊಡ್ಡ ಅಪಾಯಗಳನ್ನು ತೆಗೆದುಕೊಳ್ಳಲು ಮತ್ತು ಜೀವನದಲ್ಲಿ ಬರುವ ಅವಕಾಶಗಳನ್ನು ಸಾಧನೆಯನ್ನಾಗಿ ಪರಿವರ್ತಿಸುವ ಅವಕಾಶವನ್ನು ಬಿಡುವುದಿಲ್ಲ. ಈ ಸಮಯದಲ್ಲಿ ಮೇಲಧಿಕಾರಿಗಳಿಂದಿಗಿನ ನಿಮ ಸಂಬಂಧವನ್ನು ಸುಧಾರಿಸಲು ನಿಮಗೆ ಸಾಧ್ಯವಾಗುತ್ತದೆ. ಇದರಿಂದಾಗಿ ವೃತ್ತಿಪರ ಜೀವನದಲ್ಲಿ ನಿಮಗೆ ಉತ್ತಮ ಲಾಭವಾಗುತ್ತದೆ ಮತ್ತು ಅಪಾರ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ.
ಆದಾಗ್ಯೂ ಈ ಸಮಯದಲ್ಲಿ ನಿಮ್ಮ ಆರೋಗ್ಯದತ್ತ ವಿಶೇಷ ಕಾಳಜಿ ವಹಿಸಲು ನಿಮಗೆ ಸೂಚಿಸಲಾಗಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ನೀವು ನಿರ್ಲಕ್ಷವಹಿಸುವ ಸಾಧ್ಯತೆ ಇದೆ. ಇದಲ್ಲದೆ ಅತಿಯಾಗಿ ಯೋಚಿಸುವುದನ್ನು ಸಹ ನೀವು ತಪ್ಪಿಸಬೇಕು ಇಲ್ಲದಿದ್ದರೆ ನಿಮ್ಮ ಆಲೋಚನೆಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು. ಇದರಿಂದಾಗಿ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು ಮತ್ತು ಕೆಲವು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ನಿಮ್ಮ ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮ ಹಣವನ್ನು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಅದಕ್ಕಾಗಿ ಸಮಯ ಅತ್ಯಂತ ಉತ್ತಮವಾಗಿರಲಿದೆ, ಏಕೆಂದರೆ ಈ ಸಮಯದಲ್ಲಿ ಮಾಡಲಾಗುವ ಯಾವುದೇ ಹೂಡಿಕೆಯಿಂದ ಭವಿಷ್ಯದಲ್ಲಿ ಲಾಭವನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ.
ಪರಿಹಾರ - ಬುಧವಾರ ಗಣೇಶ ದೇವರನ್ನು ಪೂಜಿಸಿ ಮತ್ತು ಅವರಿಗೆ ದೂರ್ವಾವನ್ನು ಅರ್ಪಿಸಿ.
कन्या / ಕನ್ಯಾ ರಾಶಿ
ಬುಧ ಗ್ರಹವು ಕನ್ಯಾ ರಾಶಿಚಕ್ರದ ಜನರ ಲಗ್ನ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಹನ್ನೆರಡನೇ ಮನೆಗೆ ಸಾಗುತ್ತಾರೆ. ಈ ಸಂಚಾರವು ಕನ್ಯಾ ರಾಶಿಚಕ್ರದ ಜನರಿಗೆ ವಿಶೇಷವಾಗಿ ಶುಭವಾಗಿರುತ್ತದೆ. ವಿಶೇಷವಾಗಿ ಆಮದು - ರಫ್ತುವಿನ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಉತ್ತಮವಾಗಿರಲಿದೆ, ಏಕೆಂದರೆ ಈ ಸಮಯದಲ್ಲಿ ಅವರು ಉತ್ತಮಾ ವ್ಯಾಪಾರ ಮತ್ತು ಗ್ರಾಹಕರಿಂದ ತೃಪ್ತಿಯನ್ನು ಪಡೆಯುತ್ತಾರೆ. ಇದರೊಂದಿಗೆ ಈ ಸಮಯವು ಹೊಸ ಗ್ರಾಹಕರನ್ನು ಸಂಪರ್ಕಿಸಲು ಮತ್ತು ವ್ಯವಹಾರವನ್ನು ವಿಸ್ತರಿಸಲು ಉತ್ತಮವಾಗಿದೆ.
ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ನಿಷ್ಪ್ರಯೋಜಕ ವಸ್ತುಗಳ ಮೇಲೆ ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ವಿಶೇಷವಾಗಿ ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸರಿಯಾದ ಸಮಯತಲನನ್ನು ಕಾಪಾಡಿಕೊಳ್ಳಬೇಕು.
ಯಾವುದೇ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಈ ಸಮಯವು ಯಾವುದೇ ಶುಭ ಅವಕಾಶವನ್ನು ತರುತ್ತದೆ. ಏಕೆಂದರೆ ಈ ಸಮಯದಲ್ಲಿ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಉತ್ತಮ ಕೆಲಸಕ್ಕೆ ಸರಿಯಾದ ಪ್ರೋತ್ಸಾಹವನ್ನು ಪಡೆಯುತ್ತಾರೆ. ಇದಲ್ಲದೆ ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆಯೂ ಇದೆ. ಅನೇಕ ಜನರು ಕೆಲ ಕ್ಕೆ ಸಂಬಂಧಿಸಿದ ಪ್ರಯಾಣದ ಅವಕಾಶವನ್ನು ಪಡೆಯುತ್ತಾರೆ. ಅದರಿಂದ ಪಡೆಯಲಾಗುವ ಲಾಭವು ಅವರ ಹುದ್ದೆಯಲ್ಲಿ ಹೆಚ್ಚಳವನ್ನು ತರುತ್ತದೆ. ಈ ಸಮಯದಲ್ಲಿ ನಿಮ್ಮ ವೈಯಕ್ತಿಕ ಜೀವನ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ವಿದೇಶ ಪ್ರಯಾಣಗಳಿಂದ ನೀವು ಲಾಭವನ್ನು ಪಡೆಯುತ್ತೀರಿ.
ಆರೋಗ್ಯದ ದೃಷ್ಟಿಕೋನವನ್ನು ನೋಡಿದರೆ, ಕನ್ಯಾ ರಾಶಿಚಕ್ರದ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವ ಅಗತ್ಯವಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ರೋಗ ನಿರೋಧಕ ಶಕ್ತಿಯು ದುರ್ಬಲಗೊಳ್ಳುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ನೀವು ಕೆಲವು ಕಾಲೋಚಿತ ಕಾಯಿಲೆಗಳಿಗೆ ಗುರಿಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ ಮತ್ತು ನಿಮ್ಮನ್ನು ಆರೋಗ್ಯವಾಗಿಡಲು ನಿಯಮಿತವಾಗಿ ಉತ್ತಮ ಆಹಾರವನ್ನು ತೆಗೆದುಕೊಳ್ಳುವ ಮೂಲಕ ವ್ಯಾಯಾಮವನ್ನು ಮಾಡಿ.
ಪರಿಹಾರ - ನಿಮ್ಮ ಕೋಣೆಯ ಪೂರ್ವ ದಿಕ್ಕಿನಲ್ಲಿ ಹಸಿರು ಕರ್ನೇಲಿಯನ್ ಇರಿಸಿ.
तुला / ತುಲಾ ರಾಶಿ
ಬುಧ ದೇವ ತುಲಾ ರಾಶಿಚಕ್ರದ ಸ್ಥಳೀಯರ ಒಂಬತ್ತನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಚಕ್ರದ ಹನ್ನೊಂದನೇ ಮನೆಗೆ ಪ್ರವೇಶಿಸುತ್ತಾರೆ. ಈ ಮನೆಯನ್ನು ಲಾಭದ ಮನೆಯೆಂದು ಕರೆಯಲಾಗುತ್ತದೆ. ಇದರ ಮೂಲಕ ನಿಮ್ಮ ಆಸೆಗಳು, ಸ್ನೇಹಿತರು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಬುಧದ ಈ ಸಂಚಾರವು ತುಲಾ ರಾಶಿಚಕ್ರದ ಸ್ಥಳೀಯರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಲಿದೆ.
ಕೆಲಸದ ಸ್ಥಳದಲ್ಲೂ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಈ ಸಮಯದಲ್ಲಿ ವ್ಯಾಪಾರಸ್ಥರು ಸಹ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಪ್ರವಾಸಕ್ಕೆ ಸಂಬಂಧಿಸಿದ ಸೇವೆಗಳು, ಮಾರಾಟ, ಮಾರ್ಕೆಟಿಂಗ್ ಇತ್ಯಾದಿ ಕೆಲಸಗಳಿಗೆ ಸಂಬಂಧಿಸಿದ ಜನರು ತಮ್ಮ ಕೆಲಸದ ಸ್ಥಳದಲ್ಲಿ ಪ್ರಗತಿ ಪಡೆಯುತ್ತಾರೆ. ಏಕೆಂದರೆ ಈ ಸಮಯದಲ್ಲಿ ಅವರು ಕಡಿಮೆ ಪ್ರಯತ್ನಗಳ ನಂತರವೂ ತಮ್ಮ ಆದಾಯವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ನೀವು ನಿಮ್ಮ ಉತ್ತಮ ಸ್ನೇಹಿತರನ್ನು ಮಾಡಲು ಸಹ ಸಾಧ್ಯವಾಗುತ್ತದೆ. ವಿಶೇಷವಾಗಿ ವಿವಿಧ ಸಂಸ್ಕೃತಿಗಳ ಈ ಸಮಯದಲ್ಲಿ ನಿಮ್ಮ ಸ್ನೇಹಿತರಾಗಲು ಬಯಸುತ್ತಾರೆ. ಇದು ದೀರ್ಘಾವಧಿಯ ವರೆಗೆ ನಿಮಗೆ ಪ್ರಯೋಜನವನ್ನು ನೀಡುತ್ತದೆ.
ಇದಲ್ಲದೆ ಕಲೆ, ಸಾಂಸ್ಕೃತಿಕ ವಿಷಯಗಳು ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿರುವ ಜನರಿಗೂ ಸಮಯ ಶುಭವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಸೃಜನಶೀಲ ಆಲೋಚನೆಗಳು ಹೆಚ್ಚಾಗುತ್ತವೆ ಮತ್ತು ನಿಮ್ಮ ಕಲೆಯ ಉತ್ತಮ ಪ್ರದರ್ಶನ ಮಾಡಲು ನಿಮಗೆ ಸಾಧ್ಯವಾಗುತ್ತದೆ.
ಈ ಸಮಯವು ನಿಮ್ಮ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆಯನ್ನು ತರುತ್ತದೆ. ಇದರಿಂದಾಗಿ ಸ್ವಲ್ಪ ಮಟ್ಟಿಗೆ ನೀವು ಸ್ವಾರ್ಥಿಗಳಾಗಿ, ನಿಮ್ಮ ಆಸೆಗಳು ಮತ್ತು ಆಸಕ್ತಿಗಳನ್ನು ಮೊದಲ ಸ್ಥಾನದಲ್ಲಿಡಲು ಪ್ರಯತ್ನಿಸುತ್ತೀರಿ. ಈ ಸಮಯದಲ್ಲಿ ತ್ವರಿತ ಹಣವನ್ನು ಗಳಿಸುವ ಅನ್ವೇಷಣೆಯಲ್ಲಿ ಕೆಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಬಹುದು. ಆದಾಗ್ಯೂ, ಮಾಡದಿರಲು ನಿಮಗೆ ಸೂಚಿಸಲಾಗಿದೆ. ಇಲ್ಲದಿದ್ದರೆ, ಈ ಕಾರಣದಿಂದಾಗಿ ನೀವು ಭಾರಿ ಆರ್ಥಿಕ ನಷ್ಟವನ್ನು ಎದುರಿಸಬೇಕಾಗಬಹುದು. ಕುಟುಂಬ ಜೀವನಕ್ಕೆ ಸಮಯ ಉತ್ತಮವಾಗಿರುತ್ತದೆ. ಏಕೆಂದರೆ ನಿಮ್ಮ ಹಿರಿಯ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಉತ್ತಮ ಸಂಬಂಧವನ್ನು ನೀವು ಆನಂದಿಸುವಿರಿ. ಇದರಿಂದಾಗಿ ನಿಮ್ಮ ಗುರಿಗಳನ್ನು ಸಾಧಿಸಲು ಅವರ ಬೆಂಬಲವನ್ನು ಸಹ ನೀವು ಪಡೆಯುತ್ತೀರಿ.
ಪರಿಹಾರ - ಶುಭ ಫಲಿತಾಂಶಗಳನ್ನು ಪಡೆಯಲು ವಿಷ್ಣು ದೇವರ ಕಥೆಗಳನ್ನು ಕೇಳಿ ಮತ್ತು ಓದಿರಿ.
वृश्चिक / /ವೃಶ್ಚಿಕ ರಾಶಿ
ಬುಧ ದೇವ ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಹನ್ನೊಂದನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಹತ್ತನೇ ಮನೆಗೆ ಸಾಗುತ್ತದೆ. ಇದರ ನೇರವಾದ ಪರಿಣಾಮವು ನಿಮ್ಮ ಕೆಲಸದ ಸ್ಥಳದ ಮೇಲೆ ಬೀರುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಗತಿ ಸ್ವಲ್ಪ ನಿಧಾನವಾಗಬಹದು. ಇದರೊಂದಿಗೆ ಜೀವನದಲ್ಲಿ ಹಠಾತ್ ಬರಲಾಗುವ ಪರಿಸ್ಥಿತಿಗಳ ಕಾರಣದಿಂದಾಗಿ ನಿಮ್ಮ ಜಾಬ್ ಪ್ರೊಫೈಲ್ ನಲ್ಲೂ ಕೆಲವು ಬದಲಾವಣೆಗಳ ಸಾಧ್ಯತೆ ಇದೆ.
ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿದ್ದವರಿಗೆ ಈ ಸಮಯ ಉತ್ತಮವಾಗಿರುತ್ತದೆ. ಏಕೆಂದರೆ ನಿಮ್ಮ ಸ್ನೇಹಿತರ ಸಹಾಯದಿಂದ ಯಾವುದೇ ಉತ್ತಮ ಕಂಪನಿಯಲ್ಲಿ ಉದ್ಯೋಗದ ಆಫರ್ ಅನ್ನು . ನೀವು ಪಡೆಯಬಹುದು. ಇದರೊಂದಿಗೆ ವ್ಯಾಪಾರಸ್ಥರು ತಮ್ಮ ವ್ಯವಹಾರದಲ್ಲಿ ಬದಲಾವಣೆಯ ಯೋಚಿಸುತ್ತಿದ್ದರೆ, ಈ ಸಮಯದಲ್ಲಿ ಯೋಜನೆಯ ಪ್ರಕಾರ ಬದಲಾವಣೆ ಮಾಡುವುದು ಶುಭವಾಗಿರುತ್ತದೆ. ಏಕೆಂದರೆ ಈ ಬದಲಾವಣೆಯ ಮೂಲಕ ನೀವು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆ
ಆದಾಗ್ಯೂ, ಹಣಕಾಸಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಏಕೆಂದರೆ ನಿಮಗೆ ಯಾವುದೇ ದೊಡ್ಡ ಆರ್ಥಿಕ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಸಮಯದಲ್ಲಿ ಬೆಟ್ಟಿಂಗ್ ಅಥವಾ ಇತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ ಮತ್ತು ಈ ಅವಧಿಯಲ್ಲಿ ನಿಮ್ಮ ಹಣವನ್ನು ಯಾರಿಗಾದರೂ ಸಾಲವಾಗಿ ನೀಡುವುದನ್ನು ತಪ್ಪಿಸಬೇಕು. ನಿಮ್ಮ ರಾಶಿಚಕ್ರದ ಸ್ಥಳೀಯರು ಹಿರಿಯ ಸದಸ್ಯರಿಂದ ಉಡುಗೊರೆ ಅತಃವ ಯಾವುದೇ ಪೂರ್ವಜರ ಆಸ್ತಿಯನ್ನು ಪಡೆಯಬಹುದು.
ಅದೇ ಸಮಯದಲ್ಲಿ ಮತ್ತೊಂದೆಡೆ, ನಿಗೂಢ ಅಥವಾ ಅತೀಂದ್ರೀಯ ಸೇವೆಗಳೊಂದಿಗೆ ಸಂಬಂಧ ಹೊಂದಿರುವವರು ಈ ಸಮಯದಲ್ಲಿ ಇತರರನ್ನು ಆಕರ್ಷಿಸುವ ಮೂಲಕ ಉತ್ತಮ ಹಣವನ್ನು ಗಳಿಸುವಲ್ಲಿ ಯಶಸ್ಸನ್ನು ಪಡೆಯುತ್ತಾರೆ. ನೀವು ವಿಮೆ ಅಥವಾ ಪಾಲಿಸಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ಈ ಸಮಯವು ಉತ್ತಮ ಗ್ರಾಹಕರನ್ನು ಗಳಿಸಲು ,ಮತ್ತು ಕೆಲಸದ ಸ್ಥಳದಲ್ಲಿ ಉತ್ತಮ ಲಾಭವನ್ನು ಪಡೆಯಲು ನಿಮ್ಮನ್ನು ಅರ್ಹರನ್ನಾಗಿಸುತ್ತದೆ.
ಪರಿಹಾರ - ಬುಧವಾರ ನಪುಂಸಕರಿಗೆ ಹಸಿರು ಬಟ್ಟೆಗಳು ಅಥವಾ ಹಸಿರು ಬಳೆಗಳನ್ನು ನೀಡಿ
धनु / ಧನು ರಾಶಿ
ಬುಧ ದೇವ ಧನು ರಾಶಿಚಕ್ರದ ಸ್ಥಳೀಯರ ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಒಂಬತ್ತನೇ ಮನೆಗೆ ಸಾಗುತ್ತದೆ. ಈ ಮನೆಯನ್ನು ಧರ್ಮ ಮತ್ತು ಅದೃಷ್ಟದ ಮನೆಯೆಂದು ಕರೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ವಿದೇಶ ನಾಗರಿಕತೆಯತ್ತ ಹೆಚ್ಚು ಒಲವು ಹೊಂದಿರುತ್ತೀರಿ ಮತ್ತು ವಿವಿಧ ದೇಶಗಳ ಬಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಯತ್ನಿಸುತ್ತೀರಿ. ಇದರೊಂದಿಗೆ ಹೊಸ ಹೊಸ ಸ್ಥಳಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳಲು ನಿರಂತರ ಪ್ರಯಾಣ ಮಾಡುವುದನ್ನು ಕಾಣಲಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಧಾರ್ಮಿಕ ಜ್ಞಾನಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಕೆಲವು ತೀರ್ಥ ಸ್ಥಳಗಳಿಗೆ ಭೇಟಿ ನೀಡುವ ಬಯಕೆಯನ್ನು ನೀವು ವ್ಯಕ್ತಪಡಿಸಬಹುದು.
ಕೆಲಸದ ಸ್ಥಳದ ಬಗ್ಗೆ ಮಾತನಾಡಿದರೆ, ನಿಮ್ಮ ಗುರಿಗಳ ಬಗ್ಗೆ ನೀವು ನಿರ್ಬಂಧಿತರಾಗಿರುತ್ತೀರಿ. ಇದರಿಂದಾಗಿ ನಿಮ್ಮ ಮೇಲಧಿಕಾರಿಗಳು ಮತ್ತು ಬಾಸ್ ನ ಉತ್ತಮ ಬೆಂಬಲವನ್ನು ನೀವು ಪಡೆಯುತ್ತೀರಿ. ಇದರೊಂದಿಗೆ ನಿಮ್ಮ ಕಠಿಣ ಪರಿಶ್ರಮ ಮತ್ತು ಕೆಲಸದ ಬಗೆಗಿನ ನಿಮ್ಮ ಪ್ರಾಮಾಣಿಕತೆಯನ್ನು ನೋಡಿ ಅವರು ನಿಮ್ಮನ್ನು ನಿಮ್ಮನ್ನು ಬಹಿರಂಗವಾಗಿ ಮೆಚ್ಚುತ್ತಾರೆ.
ಆರ್ಥಿಕ ಜೀವನದಲ್ಲಿ ನೀವು ಯಾವುದೇ ಸಂಪತ್ತು ಅಥವಾ ಭೂಮಿಗೆ ಸಂಬಂಧಿಸಿದ ಯಾವುದೇ ಹೂಡಿಕೆ ಮಾಡಲು ಸಹ ನಿರ್ಧರಿಸಬಹುದು. ಇದರೊಂದಿಗೆ ವಿವಾಹಿತ ಜನರು ಈ ಸಮಯದಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ. ಈ ಕಾರಣದಿಂದಾಗಿ, ನಿಮ್ಮ ಜೀವನ ಸಂಗಾತಿಯೊಂದಿಗೆ ಎಲ್ಲಾದರೂ ಸುತ್ತಾಡಲು ಸಹ ನೀವು ಯೋಜಿಸಬಹುದು. ಕುಟುಂಬ ಜೀವನವೂ ಅನುಕೂಲಕರವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಮನೆ ಕುಟುಂಬದಲ್ಲಿ ಯಾವುದೇ ಮಂಗಲಿಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ಕಾರಣದಿಂದಾಗಿ ಸಂಪೂರ್ಣ ಕುಟುಂಬದಲ್ಲಿ ಸಂತೋಷ ಮತ್ತು ಉತ್ಸಾಹದ ವಾತಾವರಣವನ್ನು ಕಾಣಲಾಗುತ್ತದೆ.
ಪರಿಹಾರ - ಬುಧವಾರ ದುರ್ಗಾ ಚಾಲೀಸವನ್ನು ಪಠಿಸಿ.
मकर / ಮಕರ ರಾಶಿ
ಬುಧ ದೇವ ಮಕರ ರಾಶಿಚಕ್ರದ ಸ್ಥಳೀಯರ ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ರಾಶಿಚಕ್ರದ ಎಂಟನೇ ಮನೆಗೆ ಪ್ರವೇಶಿಸುತ್ತಾರೆ. ಈ ಮನೆಯ ಮೂಲಕ ಜೀವನದಲ್ಲಿ ಬರುವ ಅಡೆತಡೆಗಳು, ಸಂಶೋಧನೆ, ಅಪಘಾತ ಇತ್ಯಾದಿಯ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಾಗಣೆಯ ನೇರವಾದ ಪರಿಣಾಮವು ನಿಮ್ಮ ಅರೋಗ್ಯ ಜೀವನದ ಮೇಲೆ ಬೀಳುತ್ತದೆ. ಏಕೆಂದರೆ ಬುಧ ದೇವ ನಿಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಾರೆ. ಇದರ ಪರಿಣಾಮವಾಗಿ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಅಲರ್ಜಿ, ನರ ಅಸ್ವಸ್ಥತೆಗಳು, ಶೀತ, ನೆಗಡಿ ಅಥವಾ ಫ್ಲೂ ಇತ್ಯಾದಿಗಳಿಗೆ ಗುರಿಯಾಗುತ್ತೀರಿ. ಮೆಹಿಳೆಯರು ಸಹ ಮುಟ್ಟಾಗುವಿಕೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಆರೋಗ್ಯವನ್ನು ಸುಧಾರಿಸಲು ಯಾವುದೇ ಉತ್ತಮ ವೈದ್ಯರನ್ನು ಸಂಪರ್ಕಿಸಲು ನಿಮಗೆ ಸಲಹೆ ನೀಡಲಾಗಿದೆ.
ವಾಹನ ಚಲಾಯಿಸುವಾಗ ಅಥವಾ ರಸ್ತೆಯಲ್ಲಿ ನಡೆಯುವಾಗ ನೀವು ವಿಶೇಷವಾಗಿ ಜಾಗರೂಕರಾಗಿರಬೇಕು. ಏಕೆಂದರೆ ನೀವು ಯಾವೊಡೆ ಅಪಘಾತಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಮತ್ತೊಂದೆಡೆ ನಿಮ್ಮ ಕೆಲಸದ ಸ್ಥಳದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ವ್ಯಾಪಾರಸ್ಥರು ಉತ್ತಮ ಅವಕಾಶಗಳನ್ನು ಪಡೆಯಲು ಸಾಮಾನ್ಯಕ್ಕಿಂತ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಆದರ ನಂತರ ಮಾತ್ರ ಅವರು ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ನೀವು ಅದೃಷ್ಟದ ಬೆಂಬಲವನ್ನು ಕಡಿಮೆ ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಮೂಲಕ ಪ್ರಯತ್ನಗಳು, ಭವಿಷ್ಯದಲ್ಲಿ ಪ್ರಯೋಜನಕಾರಿ ಫಲಿತಾಂಶಗಳನ್ನು ನೀಡುವ ಕೆಲಸ ಮಾಡುತ್ತವೆ. ಉನ್ನತ ಶಿಕ್ಷಣವನ್ನು ಗಳಿಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿರುತ್ತದೆ.
ಪರಿಹಾರ - ಬುಧವಾರ ಯಾವುದೇ ದೇವಸ್ಥಾನದಲ್ಲಿ 800 ಗ್ರಾಂ ಹಸಿರು ಬೀಳೆ ಮಾಡುವುದು ನಿಮಗೆ ಉತ್ತಮ.
कुंभ / ಕುಂಭ ರಾಶಿ
ಬುಧ ದೇವ ಕುಂಭ ರಾಶಿಚಕ್ರದ ಸ್ಥಳೀಯರ ಎಂಟನೇ ಮತ್ತು ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಏಳನೇ ಮನೆಗೆ ಸಾಗುತ್ತಾರೆ. ದಿಕ್ ಮದುವೆ ಮತ್ತು ಜೀವನದಲ್ಲಿ ಸಂಭವಿಸಲಾಗುವ ಪಾಲುದಾರಿಕೆಗಳ ಮನೆ. ಅಂತಹ ಪರಿಸ್ಥಿತಿಯಲ್ಲಿ ಪ್ರೀತಿಯಲ್ಲಿರುವ ಸ್ಥಳೀಯರಿಗೆ ಈ ಸಮಯ ತುಂಬಾ ಅನುಕೂಲಕರವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಪ್ರೀತಿಯ ಸಂಬಂಧದಲ್ಲಿ ಹೆಚ್ಚಳವಾಗುತ್ತದೆ. ಆದಾಗ್ಯೂ, ಪ್ರೇಮಿಯೊಂದಿಗೆ ಮದುವೆಯಾಗಲು ಯೋಚಿಸುತ್ತಿದ್ದರೆ, ಇದಕ್ಕಾಗಿ ಇನ್ನೂ ಸ್ವಲ್ಪ ಸಮಯ ನೀವು ಕಾಯಬೇಕು. ವ್ಯವಸ್ಥಿತ ವಿವಾಹದ ಸಂದರ್ಭದಲ್ಲಿ ಸಹ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಉನ್ನತ ಶಿಕ್ಷಣವನ್ನು ಗಳಿಸುತ್ತಿರುವ ವಿದ್ಯಾರ್ಥಿಗಳಿಗೂ ಈ ಸಮಯ ಅನುಕೂಲಕರವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನೀವು ಕೇವಲ ಶಿಕ್ಷಣದತ್ತ ಮಾತ್ರ ಗಮನ ಹರಿಸಲು ನಿಮಗೆ ಸಾಧ್ಯವಾಗುತ್ತದೆ. ಇದರಿಂದಾಗಿ ಮುಂಬರುವ ಪ್ರತಿಯೊಂದು ಪರೀಕ್ಷೆಯಲ್ಲಿ ನೀವು ಅಪಾರ ಯಶಸ್ಸು ಪಡೆಯುವ ಸಾಧ್ಯತೆ ಇದೆ. ಅನೇಕ ವಿವಾಹಿತ ಜನರಿಗೆ ದೊರೆಯುತ್ತದೆ.
ಈ ಸಂಚಾರವು ಬೆಟ್ಟಿಂಗ್ ಇತ್ಯಾದಿಗಳಲ್ಲಿ ನಿಮಗೆ ಅನಿಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಆದರೆ ಇದರ ಹೊರತಾಗಿಯೂ, ಅಂತಹ ಯಾವುದೇ ಕಾನೂನು ಬಾಹಿರ ಕಾರ್ಯಗಳಿಂದ ದೂರವಿರಲು ನಿಮಗೆ ಸಲಹೆ ನೀಡಲಾಗಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಇದರಿಂದಾಗಿ ನಿಮ್ಮ ಮೇಲಧಿಕಾರಿಗಳು ನಿಮ್ಮನ್ನು ಪ್ರಶಂಸಿಸುತ್ತಾರೆ. ವಿಶೇಷವಾಗಿ ವ್ಯಾಪಾರಿಗಳಿಗೆ ಈ ಸಮಯವೂ ಪ್ರಯೋಜನಕಾರಿಯಾಗಲಿದೆ. ಏಕೆಂದರೆ ಈ ಸಮಯದಲ್ಲಿ ಅವರು ಉತ್ತಮ ಲಾಭವನ್ನು ಗಳಿಸುವಲ್ಲಿ ಯಶಸ್ಸು ಪಡೆಯುತ್ತಾರೆ. ಇದರೊಂದಿಗೆ ತಮ್ಮ ಸಂಪರ್ಕಗಳನ್ನು ಸೂಕ್ತವಾಗಿ ಬಳಸಲು ಅವರಿಗೆ ಸಲಹೆ ನೀಡಲಾಗಿದೆ. ಏಕೆಂದರೆ ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ಹೊಸ ಸಾಧನೆಗಳನ್ನು ಪಡೆಯುಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಸ್ವಭಾವವೂ ಸಕಾರಾತ್ಮಕವಾಗಿರುತ್ತದೆ.
ಪರಿಹಾರ - ಬುಧವಾರ ಹೊಸದಾಗಿ ಮದುವೆಯಾದ ಬಡ ಹುಡುಗಿಗೆ ಹಸಿರು ಸೀರೆಯನ್ನು ಉಡುಗೊರೆಯಾಗಿ ನೀಡಿ.
मीन / ಮೀನಾ ರಾಶಿ
ಬುಧ ಗ್ರಹವು ಮೀನಾ ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಚಕ್ರದ ಆರನೇ ಮನೆಗೆ ಪ್ರವೇಶಿಸುತ್ತದೆ. ಆರನೇ ಮನೆಯ ಮೂಲಕ ಸಾಲ, ವಿವಾದ, ಕೊರತೆ, ಗಾಯ, ಮಾನಹಾನಿ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ವಿಶೇಷವಾಗಿ ವಿವಾಹಿತ ಜನರು ಕೆಲವು ತಪ್ಪುಗ್ರಹಿಕೆಯಿಂದಾಗಿ ತಮ್ಮ ಜೀವನ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಅಥವಾ ವಿವಾದಗಳನ್ನು ಹೊಂದುವ ಸಾಧ್ಯತೆ ಇದೆ.ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಸಂಬಂಧವನ್ನು ಸುಧಾರಿಸಲು ನಿಮ್ಮನ್ನು ಶಾಂತವಾಗಿರಲು ಸೂಚಿಸಲಾಗಿದೆ.
ಕೆಲಸದ ಸ್ಥಳದಲ್ಲೂ ನಿಮ್ಮ ವಿರೋಧಿಗಳು ಸಕ್ರಿಯ ಮತ್ತು ಬಲವಾಗಿರುತ್ತಾರೆ. ಇದರಿಂದಾಗಿ ನೀವು ಜಾಗರೂಕರಾಗಿರಬೇಕು. ಅಂತಹ ಪರಿಸ್ಥಿತಿಯಲ್ಲಿ ನೀವು ಕೆಲಸದ ಸ್ಥಳದಲ್ಲಿ ಎಲ್ಲಾ ರೀತಿಯ ಗಾಸಿಪ್ ಅಥವಾ ರಾಜಕೀಯದಿಂದ ದೂರವಿರಲು ನಿಮಗೆ ಸಲಹೆ ನೀಡಲಾಗಿದೆ.
ಆರ್ಥಿಕ ಜೀವನದಲ್ಲೂ ಸಮಯ ಸಾಮಾನ್ಯಕ್ಕಿಂತ ಕಡಿಮೆ ಉತ್ತಮವಾಗಿರಲಿದೆ. ಆದ್ದರಿಂದ ಸಂಪತ್ತು ಅಥವಾ ಭೂಮಿಗೆ ಸಂಬಂಧಿಸಿದ ಹೂಡಿಕೆ ಮಾಡುವುದನ್ನು ತಪ್ಪಸಿ. ಇದರೊಂದಿಗೆ ಮಾರ್ಕೆಟ್ ಗೆ ಸಂಬಂಧಿಸಿದ ಯಾವುದೇ ರೀತಿಯ ಸಾಲ ಅಥವಾ ಲೋನ್ ತೆಗೆದುಕೊಳ್ಳಲು ಸಹ ಸಮಯ ಅಶುಭವಾಗಿದೆ. ಏಕೆಂದರೆ ನೀವು ಅದನ್ನು ಮರುಪಾವತಿಸಲು ವಿಫಲರಾಗಬಹುದು, ಇದು ನಿಮ್ಮ ಚಿತ್ರವನ್ನು ಸಹ ಹದಗೆಡಿಸಬಹುದು. ಈ ಸಮಯದಲ್ಲಿ ಭೌತಿಕ ವಸ್ತುಗಳನ್ನು ಖರೀದಿಸಲು ನೀವು ಇಷ್ಟಪಡಬಹುದು, ಇದರಿಂದಾಗಿ ನೀವು ಅನೇಕ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು.
ಆರೋಗ್ಯ ಜೀವನದಲ್ಲಿ ಬುಧ ಸಂಚಾರವು ನಿಮಗೆ ಮಾನಸಿಕ ಒತ್ತಡವನ್ನು ನೀಡುತ್ತದೆ. ಆದ್ದರಿಂದ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಯೋಗ ಮತ್ತು ಧ್ಯಾನವನ್ನು ಮಾಡಲು ನಿಮಗೆ ಸಲಹೆ ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಯೊಂದು ಪರೀಕ್ಷೆಯಲ್ಲಿ ಯಶಸ್ಸು ಪಡೆಯುತ್ತಾರೆ. ವೈದ್ಯಕೀಯ ಸೇವೆಯಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಈ ಅವಧಿಯು ಅನುಕೂಲಕರವಾಗಿರಲಿದೆ. ಏಕೆಂದರೆ ಈ ಸಂಚಾರದ ಸಮಯದಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲೂ ನಿಮ್ಮ ಹಣದ ಬಹುಪಾಲು ಭಾಗವನ್ನು ನೀವು ಖರ್ಚು ಮಾಡಬಹುದು.
ಪರಿಹಾರ - ಬುಧ ಗ್ರಹದ ಶುಭ ಫಲಿತಾಂಶಗಳನ್ನು ಪಡೆಯಲು ನಿಯಮಿತವಾಗಿ ಶ್ರೀಮದ್ಭಗವತಗೀತೆಯನ್ನು ಓದಿರಿ.
ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್‌ನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ತುಂಬಾ ಧನ್ಯವಾದಗಳು.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025