ವೃಷಭ ರಾಶಿಯಲ್ಲಿ ಬುಧ ಸಂಚಾರ ( 1st May 2021 )
ವೈದಿಕ ಜ್ಯೋತಿಷ್ಯದಲ್ಲಿ ಬುಧ ಗ್ರಹವು ಬುದ್ಧಿವಂತಿಕೆ, ವಿಶ್ಲೇಷಣೆ, ಸಂವಹನ, ವ್ಯಾಪಾರೋದ್ಯಮ, ಲೆಕ್ಕಾಚಾರ ಸಾಮರ್ಥ್ಯ, ಕಿರಿಯ ಸಹೋದರ ಸಹೋದರಿ, ಹವ್ಯಾಸ, ಕೈಗಳ ಕೌಶಲ್ಯ, ತ್ವರಿತ ನಿರ್ಧಾರ ತೆಗೆದುಕೊಳ್ಳುವಿಕೆ ಇತ್ಯಾದಿಗಳನ್ನು ಪ್ರತಿನಿಧಿಸುತ್ತದೆ.
ಬುಧ ಗ್ರಹವು ವೃಷಭ ರಾಶಿಯಲ್ಲಿ ಗೋಚರಿಸಿದರೆ, ಮಾನಸಿಕ ಸಂವೇದನೆಗಳಲ್ಲಿ ಸ್ವಲ್ಪ ಇಳಿಕೆ ಕಂಡುಬರುತ್ತದೆ. ಜಾತಕದಲ್ಲಿ ಭೂಮಿಯ ಅಂಶದ ರಾಶಿಯಂತಹ ವೃಷಭ ರಾಶಿಯಲ್ಲಿ ಬುಧ ಗ್ರಹವು ನೆಲೆಗೊಂಡಿದ್ದರೆ, ಅಂತಹ ಸ್ಥಳೀಯರು ನಿಧಾನವಾಗಿ ಮಾತನಾಡುತ್ತಾರೆ, ಆಗಾಗ್ಗೆ ಅವರು ಪ್ರತಿ ಪದವನ್ನು ಬಹಳ ಎಚ್ಚರಿಕೆಯಿಂದ ಆರಿಸಿ ಬಾಯಿಯಿಂದ ಹೊರತೆಗೆಯುತ್ತಾರೆ. ವೃಷಭ ರಾಶಿಯಲ್ಲಿ ಬುಧನ ಚಂಚಲತೆ ಕಡಿಮೆಯಾಗುತ್ತದೆ. ಅಂತಹ ಜನರು ಭೌತಿಕ ಮತ್ತು ಲೌಕಿಕ ಜ್ಞಾನವಿರುತ್ತದೆ.
ಅಂತಹ ಜನರು ಏನಾಗಬಹುದು ಎಂದು ಊಹಿಸಲು ಸಾಧ್ಯವಿಲ್ಲ, ಏಕೆಂದರೆ ವಾಸ್ತವ ಏನು ಎಂದು ಅವರಿಗೆ ತಿಳಿದಿದೆ. ಬುಧ ಶಾಶ್ವತ, ಸ್ಪಷ್ಟವಾದ ಮತ್ತು ಸ್ಥಿರವಾದ ವಸ್ತುಗಳನ್ನು ರಚಿಸಲು ಬಯಸುತ್ತಾನೆ. ಅಂತಹ ಸ್ಥಳೀಯರು ಹಣಕಾಸು ಮತ್ತು ಸಂಪತ್ತನ್ನು ಹೆಚ್ಚಿಸಲು ಅಗತ್ಯವಾದ ಕೆಲಸಗಳನ್ನು ಮಾಡಬೇಕು.
ಆಸ್ಟ್ರೋಸೇಜ್ ವಾರ್ತಾ ಮೂಲಕ ವಿಶ್ವದ ಪರಿಣಿತ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ.
ಬುಧ ಗ್ರಹವು 1 ಮೇ 2021 ರಂದು ಬೆಳಿಗ್ಗೆ 5 ಗಂಟೆ 32 ನಿಮಿಷಕ್ಕೆ ವೃಷಭ ರಾಶಿಯಲ್ಲಿ ಗೋಚರಿಸುತ್ತದೆ ಮತ್ತು ಬುಧ ಗ್ರಹವು ಇದೆ ರಾಶಿಯಲ್ಲಿ 26 ಮೇ 2021, ಬೆಳಿಗ್ಗೆ 7 ಗಂಟೆ 50 ನಿಮಿಷದ ವರೆಗೆ ಇರುತ್ತದೆ ಮತ್ತು ಅದರ ನಂತರ ಮಿಥುನ ರಾಶಿಯಲ್ಲಿ ಪ್ರವೇಶಿಸುತ್ತದೆ.
ವೃತ್ತಿ ಜೀವನದ ಸರಿಯಾದ ಆಯ್ಕೆಗಾಗಿ ಆದೇಶಿಸಿ ಕಾಗ್ನಿ ಆಸ್ಟ್ರೋ ರಿಪೋರ್ಟ್
ಮೇಷ
ಮೇಷ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಮೂರನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಅವರ ಮೂರನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಕಾರಣದಿಂದಾಗಿ ನಿಮ್ಮ ವಾಣಿಯಲ್ಲಿ ಮಾಧುರ್ಯ ಉಂಟಾಗುತ್ತದೆ ಮತ್ತು ನೀವು ಬಹಳ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗುತ್ತದೆ. ನಿಮ್ಮ ಸ್ಪಷ್ಟತೆ ನಿಮ್ಮ ಸುತ್ತಮುತ್ತಲಿನ ಜನರನ್ನು ಆಕರ್ಷಿಸುತ್ತದೆ. ನಿಷ್ಪ್ರಯೋಜಕ ಮಾತುಗಳಲ್ಲಿ ವ್ಯರ್ಥ ಮಾಡುವ ಸಮಯವಲ್ಲ ಇದು. ಏಕೆಂದರೆ ನಿಮ್ಮ ಮಾತುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಜನರ ನಿಮ್ಮ ತಾರ್ಕಿಕ ಶಕ್ತಿಯನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ
ಈ ಸಂಚಾರದ ಸಮಯಲ್ಲಿ ಗಾಯನ ಅಥವಾ ಲೇಖನದಲ್ಲಿ ಆಸಕ್ತಿ ಹೊಂದಿರುವ ಈ ರಾಶಿಚಕ್ರದ ಸ್ಥಳೀಯರಿಗೆ ಪ್ರಯೋಜನವಾಗಬಹುದು. ಸಂಬಂಧಗಳನ್ನು ಸ್ಥಿರಗೊಳಿಸಲು ನಿಮ್ಮ ಹತ್ತಿರವಿರುವ ಜನರೊಂದಿಗೆ ಸಮಯವನ್ನು ಕಳೆಯಬೇಕಾಗುತ್ತದೆ. ಉದ್ಯೋಗಪರರು ಈ ಸಮಯದಲ್ಲಿ ಲಾಭವನ್ನು ಪಡೆಯುತ್ತಾರೆ. ಆದಾಗ್ಯೂ ಈ ರಾಶಿಚಕ್ರದ ವ್ಯಾಪಾರಸ್ಥರು ಒಪ್ಪಂದಗಳಲ್ಲಿ ಕೆಲವು ಅಡೆತಡೆಗಳನ್ನು ಅಥವಾ ಅಡಚಣೆಗಳನ್ನು ಎದುರಿಸಬೇಕಾಗಬಹುದು. ಈ ರಾಶಿಚಕ್ರದ ಜನರ ಆರೋಗ್ಯದ ಬಗ್ಗೆ ಮಾತನಾಡಿದರೆ, ನೀವು ಶಕ್ತಿಯುತವಾಗಿರುತ್ತೀರಿ ಮತ್ತು ಇದ್ದಕ್ಕಿದ್ದಂತೆ ನಿಮ್ಮಲ್ಲಿ ಬಲವನ್ನು ಕಂಡುಕೊಳ್ಳುತ್ತೀರಿ. ನೀವು ಜಿಮ್ ಮಾಡುತ್ತಿರುವವರು ತಮ್ಮ ಶಕ್ತಿಯನ್ನು ಹೆಚ್ಚಿಸಲು ಜಿಮ್ ನಲ್ಲಿ ಹೆಚ್ಚಿನ ವ್ಯಾಯಾಮವನ್ನು ಮಾಡಬಹುದು. ಸಂಚಾರದ ಈ ಸಮಯದಲ್ಲಿ ನೀವು ಹಲ್ಲು ಮತ್ತು ಬಾಯಿಯನ್ನು ನೋಡಿಕೊಳ್ಳಲು ಮತ್ತು ಸ್ವಚ್ಛತೆಯನ್ನು ಉಳಿಸಿಕೊಳ್ಳಲು ಸೂಚಿಸಲಾಗಿದೆ.
ಪರಿಹಾರ - ಹಣ್ಣುಗಳನ್ನು ದಾನ ಮಾಡಿ.
ವೃಷಭ
ವೃಷಭ ರಾಶಿಚಕ್ರದ ಸ್ಥಳೀಯರಿಗೆ ಬುಧ ಮೂರನೇ ಮತ್ತು ಐದನೇ ಮನೆಯ ಅಧಿಪತಿ. ಸಂಚಾರದ ಈ ಸಮಯದಲ್ಲಿ ವೃಷಭ ರಾಶಿಚಕ್ರದ ಸ್ಥಳೀಯರ ವಾಣಿ, ಹಣ ಮತ್ತು ಕುಟುಂಬದ ಎರಡನೇ ಮನೆಗೆ ಪ್ರವೇಶಿಸುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ವೈಯಕ್ತಿಕ ಮತ್ತು ವೃತ್ತಿಪರ ಎರಡೂ ಕ್ಷೇತ್ರಗಳಲ್ಲಿನ ಪರಿಸ್ಥಿತಿಗಳನ್ನು ನಿಭಾಯಿಸಲು ಸಕಾರಾತ್ಮಕತೆ ಮತ್ತು ಸೌಮ್ಯತೆಯನ್ನು ತೋರಿಸುತ್ತೀರಿ. ಈ ರಾಶಿಚಕ್ರದ ವ್ಯಾಪಾರಸ್ಥರಿಗೆ ಈ ಸಮಯವು ಉತ್ತಮವಾಗಿರುತ್ತದೆ ಮತ್ತು ಅವರು ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಈ ಸಂಚಾರದ ಸಮಹದಲ್ಲಿ ಬುಧ ಗ್ರಹವು ನಿಮ್ಮ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರಬಹುದು. ಈ ರಾಶಿಚಕ್ರದ ಜನರು ತಮ್ಮ ಸಂವಹನದ ಕೌಶಲ್ಯವು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಭಾವಿಸಲು ಸಾಧ್ಯವಾಗುತ್ತದೆ ಮತ್ತು ಅವರ ವ್ಯಕ್ತಿತ್ವದಲ್ಲಿ ಆಕರ್ಷಣೆಯನ್ನು ಹೊಂದಿರುತ್ತಾರೆ. ಬುಧನ ಈ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ದಯೆ, ಮೃದುವಾಗಿ ಮಾತನಾಡುವ ಮತ್ತು ಸಭ್ಯರಾಗಿರುತ್ತಾರೆ. ಸಂಬಂಧಗಳಲ್ಲೂ ಸಕಾರಾತ್ಮಕತೆ ಉಂಟಾಗುತ್ತದೆ, ಪ್ರೀತಿ ಮತ್ತು ಸಂತೋಷ ಹೆಚ್ಚಾಗಿರುತ್ತದೆ. ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ಸಮಯವಾಗಿರುತ್ತದೆ, ಏಕೆಂದರೆ ಅವರು ತಮ್ಮ ಅಧ್ಯಯನದತ್ತ ಹೆಚ್ಚು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ಉತ್ತಮ ಪ್ರದರ್ಶನ ಮಾಡಲು ಇದು ಸಹಾಯ ಮಾಡುತ್ತದೆ. ಆರೋಗ್ಯದ ಬಗ್ಗೆ ಮಾತನಾಡಿದರೆ ಈ ಸಮಯದಲ್ಲಿ ನೀವು ಬಲವಾಗಿ ಮತ್ತು ಆರೋಗ್ಯಕರವಾಗಿ ಅನುಭವಿಸುತ್ತೀರಿ.
ಪರಿಹಾರ - ಪ್ರತಿದಿನದ ಸೂರ್ಯೋದಯದ ಸಮಯದಲ್ಲಿ ನಿಯಮಿತವಾಗಿ “ರಾಮ ರಕ್ಷಾ ಸ್ತೋತ್ರ” ವನ್ನು ಪಠಿಸಿ.
ಮಿಥುನ
ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಮೊದಲನೇ ಮತ್ತು ನಾಲ್ಕನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ಬುಧ ನಿಮ್ಮ ವೆಚ್ಚ, ಅನಗತ್ಯ ಸಂದರ್ಭಗಳು, ನಷ್ಟ, ವಿದೇಶದಿಂದ ಲಾಭ ಮತ್ತು ಆಧ್ಯಾತ್ಮಿಕತೆಯ ಹನ್ನೆರಡನೇ ಮನೆಗೆ ಗೋಚರಿಸುತ್ತಿದೆ. ವಾಣಿಜ್ಯಿಕವಾಗಿ, ಈ ಸಮಯವು ನಿಮ್ಮ ಆತ್ಮವಿಶ್ವಾಸದಲ್ಲಿ ಇಳಿಕೆಯನ್ನು ತರಬಹುದು. ಈ ಸಮಯದಲ್ಲಿ ನೀವು ಒತ್ತಡಕ್ಕೆ ಮತ್ತು ಚಿಂತೆಗೆ ಒಳಗಾಗಬಹುದು. ಈ ಸಮಯದಲ್ಲಿ ನೀವು ಸ್ವಲ್ಪ ಸಮಯದವರೆಗೆ ತುರ್ತು ಕಾರ್ಯಗಳನ್ನು ಮಾಡುವುದನ್ನು ತಪ್ಪಿಸಬೇಕು ಮತ್ತು ಯಾವುದೇ ರೀತಿಯ ಹೊಸ ಕೆಲಸವನ್ನು ಆರಂಭಿಸುವುದನ್ನು ಸಹ ತಪ್ಪಿಸುವ ಅವಶ್ಯಕತೆಯಿದೆ, ಇದಲ್ಲದೆ ಈ ಸಮಯದಲ್ಲಿ ಯಾವುದೇ ಹೂಡಿಕೆಯನ್ನು ಸಹ ತಪ್ಪಿಸಬೇಕು. ನಿಮ್ಮನ್ನು ನವೀಕೃತವಾಗಿರಿಸಲು ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸುವತ್ತ ಹೆಚ್ಚು ಗಮನ ಹರಿಸಿ. ಈ ಸಮಯದಲ್ಲಿ ಧ್ಯಾನ ಮತ್ತು ಯೋಗವನ್ನು ಆಶ್ರಯಿಸಿ. ಏಕೆಂದರೆ ಇದು ವಿಶ್ರಾಂತಿ ಪಡೆಯುವಲ್ಲಿ ಮತ್ತು ವಿಷಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ಆಪ್ತರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಈ ರಾಶಿಚಕ್ರದ ಕೆಲವು ಜನರು ವಿದೇಶ ಪ್ರವಾಸಕ್ಕೂ ಹೋಗಬಹುದು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ನಿಮಗೆ ಸಲಹೆ ನೀಡಲಾಗಿದೆ, ಏಕೆಂದರೆ ಈ ಸಂಚಾರದ ಸಮಯದಲ್ಲಿ ನಿಮಗೆ ಕಣ್ಣು ಮತ್ತು ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಾಗಬಹುದು.
ಪರಿಹಾರ - ನಿಮ್ಮ ಬಲಗೈಯ ಸಣ್ಣ ಬೆರಳಿನಲ್ಲಿ 5-6 ಕ್ಯಾರಟ್ ಪಚ್ಚೆ ರತ್ನವನ್ನು ಧರಿಸಿ.
ಕರ್ಕ ರಾಶಿ
ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಹನ್ನೊಂದನೇ ಮತ್ತು ಮೂರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಹನ್ನೊಂದನೇ ಮನೆಗೆ ಪ್ರವೇಶಿಸುತ್ತದೆ. ಬುಧ ಸಂಚಾರದ ಈ ಅವಧಿಯು ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಅನುಕೂಲಕರ ಮತ್ತು ಶುಭ ಫಲಿತಾಂಶಗಳನ್ನು ತರುತ್ತದೆ. ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವವರು ಮತ್ತು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರು ಈ ತಿಂಗಳು ಲಾಭವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನಿಮ್ಮ ಬಯಕೆಗಳು ಮತ್ತು ಆಸೆಗಳು ಈಡೇರುತ್ತವೆ. ವಾಣಿಜ್ಯಿಕವಾಗಿ, ಈ ಸಮಯದಲ್ಲಿ ನೀವು ಹಿಂದೆ ಮಾಡಿದ ಪ್ರಯತ್ನಗಳ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಆದಾಗ್ಯೂ, ಈ ಸಮಯದಲ್ಲಿ ನಿಮ್ಮ ಸಂವಹನದಲ್ಲಿ ನೀವು ಸಕಾರಾತ್ಮಕ ಬದಲಾವಣೆಗಳನ್ನು ಮಾಡಬೇಕಾಗುತ್ತದೆ ಮತ್ತು ನಿಮ್ಮ ವಿಷಯಗಳನ್ನು ಸ್ಪಷ್ಟವಾಗಿಡುವ ಅಗತ್ಯವಿದೆ. ಯಾರೊಂದಿಗಾದರೂ ಪ್ರೀತಿಯ ಸಂಬಂಧವನ್ನು ಹೊಂದಿದ್ದರೆ, ಸಂಬಂಧವು ಸುಧಾರಿಸುತ್ತದೆ. ಆದರೆ ವೈವಾಹಿಕ ಜನರ ಜೀವನದಲ್ಲಿ ಸಾಮಾನ್ಯ ವಿವಾದಗಳಿರಬಹುದು. ಇದಲ್ಲದೆ ಉದ್ಯೋಗ ಮತ್ತು ವ್ಯಾಪಾರದ ಕ್ಷೇತ್ರದಲ್ಲಿ ಅನೇಕ ಉತ್ತಮ ಅವಕಾಶಗಳನ್ನು ಪಡೆಯುವಿರಿ. ಈ ಸಂಚಾರದ ಸಮಯದಲ್ಲಿ ನಿಮ್ಮ ಅರೋಗ್ಯ ಉತ್ತಮವಾಗಿರುತ್ತದೆ.
ಪರಿಹಾರ - ಮನೆಯಲ್ಲಿ ಹಸಿರು ಸಸ್ಯ ಅಥವಾ ಮನಿ ಪ್ಲಾಂಟ್ ನೆಡುವುದರಿಂದ ನೀವು ಲಾಭ ಪಡೆಯುತ್ತೀರಿ.
ಸಿಂಹ ರಾಶಿ
ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಹನ್ನೊಂದನೇ ಮತ್ತು ಎರಡನೇ ಮನೆಯನ್ನು ನಿಯಂತ್ರಿಸುತ್ತದೆ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಹತ್ತನೇ ಮನೆಗೆ ಗೋಚರಿಸುತ್ತದೆ. ವೃತ್ತಿಪರವಾಗಿ, ಈ ಸಮಯವೂ ನಿಮಗೆ ಅನುಕೂಲಕರವಾಗಿದೆ, ಈ ಸಮಯದಲ್ಲಿ ನಿಮ್ಮ ಸೃಜನಶೀಲತೆ ಮತ್ತು ಸಾಂಸ್ಥಿಕ ಕೌಶಲ್ಯಗಳು ಹೆಚ್ಚಾಗುತ್ತವೆ ಮತ್ತು ನೀವು ಎಲ್ಲಾ ಕಾರ್ಯಗಳನ್ನು ದಕ್ಷತೆ ಮತ್ತು ಉತ್ಪಾದಕತೆಯೊಂದಿಗೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳು ಪ್ರತಿಯೊಂದು ಕೆಲಸದಲ್ಲಿ ನಿಮ್ಮನ್ನು ಬೆಂಬಲಿಸಬಹುದು. ಕುಟುಂಬ ಜೀವನವು ಉತ್ತಮವಾಗಿರುತ್ತದೆ. ಜೀವನ ಸಂಗಾತಿಯೊಂದಿಗೆ ಪ್ರಣಯ ಸಮಯವನ್ನು ಕಳೆಯಬಹುದು. ಜೀವನದಲ್ಲಿ ಶಾಂತಿ ಉಳಿದಿರುತ್ತದೆ.ಆರೋಗ್ಯದ ಬಗ್ಗೆ ಮಾತನಾಡಿದರೆ, ನಿಯಮಿತವಾಗಿ ವ್ಯಾಯಾಮ ಮಾಡಲು ನಿಮಗೆ ಸೂಚಿಸಲಾಗಿದೆ. ನೀವು ಜಿಮ್ ಗೆ ಹೋದರೆ ಹೊರಾಂಗಣ ಕ್ರೀಡೆಗಳನ್ನು ಆಡುವುದು ನಿಮಗೆ ಪ್ರಯೋಜನಕಾರಿಯಾಗಿದೆ. ಆರ್ಥಿಕ ಜೀವನವು ಸ್ಥಿರವಾಗಿ ಮತ್ತು ಸುಗಮವಾಗಿ ನಡೆಯುತ್ತದೆ ಮತ್ತು ಈ ಸಮಯದಲ್ಲಿ ನೀವು ಸಂಪತ್ತನ್ನು ಖರೀದಿಸಬಹುದು ಅಥವಾ ಸಂಪತ್ತಿನಲ್ಲಿ ಹೂಡಿಕೆ ಮಾಡಬಹುದು. ಈ ಸಮಯದಲ್ಲಿ ನಿಮ್ಮ ಧ್ವನಿಯನ್ನು ನೀವು ನಿಯಂತ್ರಣದಲ್ಲಿಟ್ಟುಕೊಳ್ಳಬೆಕು. ಏಕೆಂದರೆ ವಿಶೇಷವಾಗಿ ಸಾಮಾಜಿಕ ಜೀವನದಲ್ಲಿ ಇದು ನಿಮಗೆ ತೊಡಕುಗಳನ್ನು ಉಂಟುಮಾಡಬಹುದು. ಈ ಸಮಯದಲ್ಲಿ ನೀವು ನಿಮ್ಮನ್ನು ಅನೈತಿಕ ಕ್ರಿಯೆಗಳತ್ತ ಸಾಗುವುದನ್ನು ತಡೆಯಬೇಕು.
ಪರಿಹಾರ - ಬುಧವಾರ ಬುಧ ಬೀಜ ಮಂತ್ರವನ್ನು ಜಪಿಸುವುದು ನಿಮಗೆ ಉತ್ತಮ.
ಕನ್ಯಾ
ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಮೊದಲನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಅದೃಷ್ಟ ಮತ್ತು ಉನ್ನತ ಶಿಕ್ಷಣದ ಒಂಬತ್ತನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ಎಲ್ಲಾ ಕಾರ್ಯಗಳು ಮತ್ತು ಪ್ರಯತ್ನಗಳಲ್ಲಿ ಅದೃಷ್ಟವು ಅವರ ಪರವಾಗಿದೆ ಎಂದು ಕನ್ಯಾ ರಾಶಿಚಕ್ರದ ಜನರು ನೋಡುತ್ತಾರೆ. ಆದರೆ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಪಡೆಯಲು ಕಠಿಣ ಪರಿಶ್ರಮ ಮಾಡಿ ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ನಿಮ್ಮ ಏಕಾಗ್ರತೆಯನ್ನು ಮುಂದುವರಿಸಿ. ವ್ಯಾಪಾರಿಕ ಜೀವನದಲ್ಲಿ ನಿಮಗೆ ಲಾಭವಾಗುತದೆ ಮತ್ತು ಕೆಲವು ಸ್ಥಳೀಯರು ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಇದಲ್ಲದೆ ಸಾಮಾಜಿಕ ಜೀವನದಲ್ಲೂ ನಿಮ್ಮ ಸ್ಥಾನಮಾನ ಸುಧಾರಿಸುತ್ತದೆ.ಈ ರಾಶಿಚಕ್ರದ ಜನರು ಆರ್ಥಿಕ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ನೀವು ಬುದ್ಧಿವಂತ ವ್ಯಕ್ತಿಯೊಂದಿಗೆ ಸ್ನೇಹ ಮಾಡಬಹುದು ಮತ್ತು ಅವರೊಂದಿಗೆ ಮಾತನಾಡಿ ಆನಂದವನ್ನು ಅನುಭವಿಸಬಹುದು. ಇದಲ್ಲದೆ ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಸಹೋದರ ಸಹೋದರಿಯರ ಆರ್ಥಿಕ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ಈ ಸಮಯದಲ್ಲಿ ಈ ರಾಶಿಚಕ್ರದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಆಸೆ ಹೆಚ್ಚಾಗುತ್ತದೆ. ಮಾಧ್ಯಮ, ಮನರಂಜನೆ ಮತ್ತು ಗ್ಲಾಮರ್ ವೃತ್ತಿಗೆ ಸಂಬಂಧಿಸಿದ ಜನರು ಈ ಅವಧಿಯಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಈ ಸಂಚಾರದ ಸಮಯದಲ್ಲಿ ಕಲೆ, ಲೇಖನೆ ಮತ್ತು ನಟನೆಯತ್ತ ನಿಮ್ಮ ಒಲವು ಹೆಚ್ಚಾಗಿರಬಹುದು. ಆರೋಗ್ಯದ ಬಗ್ಗೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ನಿಮ್ಮ ಬಲಗೈಯ ಸಣ್ಣ ಬೆರಳಿನಲ್ಲಿ 5-6 ಕ್ಯಾರಟ್ ಪಚ್ಚೆ ರತ್ನವನ್ನು ಧರಿಸಿ.
ತುಲಾ
ತುಲಾ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಹನ್ನೆರಡನೇ ಮತ್ತು ಒಂಭತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ವಿಜ್ಞಾನ, ಅನಿಶ್ಚಿತತೆ, ಇದ್ದಕ್ಕಿದ್ದಂತೆ ಲಾಭ ಇತ್ಯಾದಿಯ ಎಂಟನೇ ಮನೆಗೆ ಸಂಚರಿಸಲಿದೆ. ಈ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ಜನರು ಹೊಸ ವಿಸಹಾಯ್ಗಳನ್ನು ಕಲಿಯುವ ಮತ್ತು ಅನ್ವೇಷಿಸುವ ಬಯಕೆಯನ್ನು ಹೊಂದಿರುತ್ತಾರೆ. ಆದ್ದರಿಂದ ಈ ರಾಶಿಚಕ್ರದ ಜನರು ಆಧ್ಯಾತ್ಮಿಕತೆಯ ಜೊತೆಗೆ ಭೌತಿಕತೆಯತ್ತ ಆಕರ್ಷಿಸಬಹುದು. ಈ ಸಂಚಾರದ ಸಮಯದಲ್ಲಿ ತುಲಾ ರಾಶಿಚಕ್ರದ ಕೆಲವು ಜನರು ತಮ್ಮ ಪೂರ್ವಜರ ಆಸ್ತಿಯ ಮೂಲಕ ಲಾಭವನ್ನು ಪಡೆಯಬಹುದು. ನಿಮ್ಮ ಸಂಬಂಧಗಳನ್ನು ಉತ್ತಮಗೊಳಿಸಲು ಹೆಚ್ಚು ತಿಳುವಳಿಕೆ ಮತ್ತು ಸಮಂಧಗಳತ್ತ ಗಮನ ಹರಿಸುವ ಅಗತ್ಯವಿದೆ, ಇದರಿಂದ ಯಾವುದೇ ತಪ್ಪು ತಿಳುವಳಿಕೆ ಇರುವುದಿಲ್ಲ.
ಈ ಸಂಚಾರದ ಸಮಯದಲ್ಲಿ ಹಣಕಾಸಿನ ನಷ್ಟವಾಗುವ ಸಾಧ್ಯತೆ ಇದೆ. ಆದರೆ ಅದೇ ಸಮಯದಲ್ಲಿ ಕೆಲವು ರಹಸ್ಯ ಹಣವನ್ನು ಸಹ ನೀವು ಪಡೆಯಬಹುದು. ಹಣಕಾಸಿನ ಹರಿವು ಮುಂದುವರಿಯುತ್ತದೆ. ಆದರೆ ಒಳ್ಳೆಯ ವಿಷೆಯವೇನೆಂದರೆ ಈ ಸಮಯದಲ್ಲಿ ನಿಮ್ಮ ಆರ್ಥಿಕ ಭಾಗವು ಬಲವಾಗುತ್ತದೆ. ವೃತ್ತಿಪರ ಜೀವನಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲಧಿಕಾರಿಗಳೊಂದಿಗೆ ನೀವು ವಾದಿಸಬಾರದು ಎಂದು ಸಲಹೆ ನೀಡಲಾಗುತ್ತದೆ. ಏಕೆಂದರೆ ಇದು ನಿಮ್ಮನ್ನು ಬಹಳಷ್ಟು ತೊಂದರೆಗೆ ಸಿಲುಕಿಸಬಹುದು. ಈ ಸಂಚಾರದ ಸಮಯದಲ್ಲಿ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸ್ಪಷ್ಟ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಿ. ಆರೋಗ್ಯದ ಬಗ್ಗೆ ಸ್ವಲ್ಪ ಒತ್ತಡಕ್ಕೊಳಗಾಗಬಹುದು. ಆದ್ದರಿಂದ ನಿಮ್ಮ ಜೀವನದಲ್ಲಿ ಯೋಗ ಮತ್ತು ವ್ಯಾಯಾಮವನ್ನು ಸೇರಿಸಲು ಪ್ರಯತ್ನಿಸಿ ಮತ್ತು ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಂಬಿರಿ.
ಪರಿಹಾರ - ವಾರದಲ್ಲಿ ಎರಡು ದಿನ ಮನೆಯಲ್ಲಿ ಕರ್ಪುರವನ್ನು ಬೆಳಗಿಸಿ, ಇದರಿಂದ ನೀವು ಬುಧ ದೇವರ ಅನುಗ್ರಹವನ್ನು ಪಡೆಯುತ್ತೀರಿ.
ವೃಶ್ಚಿಕ
ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಏಳನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ವೃಶ್ಚಿಕ ರಾಶಿಯ ಜೀವನ ಸಂಗಾತಿ, ಸಂಬಂಧ ಮತ್ತು ಪಾಲುದಾರಿಕೆಯ ಏಳನೇ ಮನೆಗೆ ಪ್ರವೇಶಿಸುತ್ತದೆ. ವೈಯಕ್ತಿಕವಾಗಿ ಸಂಚಾರದ ಸಮಯವು ಸ್ವಲ್ಪ ಕಷ್ಟಕರವಾಗಿರುತ್ತದೆ. ಏಕೆಂದರೆ ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ನಡುವೆ ಅಹಂ ಮುಖಾಮುಖಿಯಾಗಬಹುದು. ಆದ್ದರಿಂದ ನಿಮ್ಮ ಎಲ್ಲಾ ವಿಷಯಗಳನ್ನು ಶಾಂತಿಯುತವಾಗಿ ಪರಿಹರಿಸಲು ನಿಮಗೆ ಸಲಹೆ ನೀಡಲಾಗಿದೆ. ಇನ್ನೂ ಒಂಟಿಯಾಗಿರುವ ಈ ರಾಶಿಚಕ್ರದ ಸ್ಥಳೀಯರು ವಿಶೇಷ ವಕ್ತಿಯನ್ನು ಭೇಟಿಸಬಹುದು. ವ್ಯಾಪಾರ ಮತ್ತು ಪಾಲುದಾರಿಕೆಯ ವಯಪರದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರಿಗೆ ಈ ಸಮಯ ಉತ್ತಮವಾಗಿದೆ ಮತ್ತು ನೀವು ಲಾಭವನ್ನು ಪಡೆಯಬಹುದು. ಆದಾಗ್ಯೂ, ಹೊಸ ಸ್ನೇಹಿತರು ಅಥವಾ ಹೊಸ ಪಾಲುದಾರರನ್ನು ಮಾಡಲು ಸಂವಾದಾತ್ಮಕ ಸಾಮರ್ಥ್ಯಗಳನ್ನು ಬಳಸಲು ಸಲಹೆ ನೀಡಲಾಗಿದೆ.
ಈ ರಾಶಿಚಕ್ರದ ಸ್ಥಳೀಯರು ಈ ಸಂಚಾರದ ಸಮಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಾಗಬಹುದು. ಈ ಸಮಯದಲ್ಲಿ ಅಗತ್ಯವಿದ್ದರೆ, ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ. ಹೊಸ ವ್ಯಾಪಾರ ಅಥವಾ ಸಹಭಾಗಿತ್ವದ ವ್ಯಾಪಾರವನ್ನು ಆರಂಭಿಸಲು ಈ ಸಮಯ ಅತ್ಯಂತ ಉತ್ತಮವಾಗಬಹುದು. ಈ ಸಮಯದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಕೆಲವು ವ್ಯಾಪಾರಸ್ಥರ ಸಾಮಾಜಿಕ ಸ್ಥಾನಮಾನ ಸುಧಾರಿಸಬಹುದು. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಗೂ ನಿಮ್ಮ ಮೂಲಕ ಲಾಭ ಸಿಗುತ್ತದೆ.
ಪರಿಹಾರ - ಪ್ರತಿದಿನ ತಾಯಿ ಸರಸ್ವತಿಯನ್ನು ಪೂಜಿಸುವುದರಿಂದ ನೀವು ಬುಧ ಗ್ರಹದ ಅನುಗ್ರಹವನ್ನು ಪಡೆಯುತ್ತೀರಿ.
ಧನು
ಧನು ರಾಶಿಚಕ್ರದ ಸ್ಥಳೀಯರಿಗೆ ಬುಧವು ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ದೈನಂದಿನ ರೋಜು, ಸ್ಪರ್ಧೆ, ಶತ್ರು ಮತ್ತು ರೋಗದ ಆರನೇ ಮನೆಗೆ ಪ್ರವೇಶಿಸುತ್ತದೆ.ಈ ಸಂಚಾರದ ಸಮಯದಲ್ಲಿ ವ್ಯಾಪಾರಸ್ಥರು ಮತ್ತುವೃತ್ತಿಪರ ಜನರು ಕೆಲಸಕ್ಕೆ ವಿಸ್ತರಣೆ ನೀಡುವ ತಮ್ಮ ಯೋಜನೆಗಳತ್ತ ಗಮನ ಹರಿಸಬೇಕು. ಈ ಸಮಯದಲ್ಲಿ ನೀವು ನಿಮ್ಮ ಮೂಲ ಕೆಲಸವನ್ನು ಮಾಡುತ್ತಿದ್ದರೆ ಲಾಭವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ತೊಡಗಿರುವವರು ಕೆಲಸದ ಸ್ಥಳದಲ್ಲಿ ಉತ್ತಮ ಪ್ರದರ್ಶನ ಮಾಡುತ್ತಾರೆ ಮತ್ತು ಲಾಭವನ್ನು ಪಡೆಯುವಲ್ಲೂ ಯಶಸ್ವಿಯಾಗುತ್ತಾರೆ. ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಸರಿಯಾದ ಸಂವಹನವನ್ನು ಸ್ಥಾಪಿಸಿದರೆ, ಕೌಟುಂಬಿಕ ಮತ್ತು ವೈಯಕ್ತಿಕ ಜೀವನದಲ್ಲಿ ಎಲ್ಲವೂ ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಯುತ್ತಿರುತ್ತವೆ ಮತ್ತು ಯಾವುದೇ ರೀತಿಯ ತಪ್ಪು ತಿಳುವಳಿಕೆಗಳು ಉಂಟಾಗುವುದಿಲ್ಲ. ಆರೋಗ್ಯದ ದೃಷಿಕೋನದಿಂದ ಈ ಸಂಚಾರದ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯ ಆರೋಗ್ಯವು ಗೊಂದಲಕ್ಕೀಡಾಗಬಹುದು. ಆದ್ದರಿಂದ ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅವರಿಗೆ ಏನಾದರೂ ಸಮಸ್ಯೆಯಿದ್ದರೆ ಅವರನ್ನು ವೈದ್ಯರ ಬಳಿ ಕರೆದೊಯ್ಯಿರಿ.
ಪರಿಹಾರ - ಪ್ರತಿದಿನ ನಿಯಮಿತವಾಗಿ ಹಸುವಿಗೆ ಹಸಿರು ಮೇವು ತಿನ್ನಿಸಿ.
ಮಕರ
ಮಕರ ರಾಶಿಚಕ್ರದ ಸ್ಥಳೀಯರಿಗೆ ಬುಧವು ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಪ್ರೀತಿ, ಪ್ರಣಯ ಮತ್ತು ಮಕ್ಕಳ ಐದನೇ ಮನೆಗೆ ಗೋಚರಿಸಲಿದೆ. ಪ್ರೀತಿಯಲ್ಲಿರುವ ಈ ರಾಶಿಚಕ್ರದ ಕೆಲವು ಜೋಡಿಗಳು ಈ ಸಮಯದಲ್ಲಿ ಮದುವೆಯಾಗುವ ಅವಕಾಶವನ್ನು ಪಡೆಯಬಹುದು. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಲಿದೆ. ಅಧ್ಯಯನದತ್ತ ಕೇಂದ್ರೀಕರಿಸಿ ಈ ಸಮಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಈ ರಾಶಿಚಕ್ರದ ಸ್ಥಳೀಯರು ಅನಗತ್ಯ ವಿವಾದಗಳಲ್ಲಿ ಬೀಳದಿರಲು ಸಲಹೆ ನೀಡಲಾಗಿದೆ. ಏಕೆಂದರೆ ಇದನ್ನು ಮಾಡುವುದರಿಂದ ನೀವು ನಿಮ್ಮ ಹತ್ತಿರವಿರುವವರಿಂದ ದೂರವಾಗಬಹುದು. ಬ್ಯಾಟಿಂಗ್ ಅಥವಾ ಲಾಟರಿ ಮೂಲಕ ಈ ರಾಶಿಚಕ್ರದ ಸ್ಥಳೀಯರಿಗೆ ಉತ್ತಮ ಲಾಭವಾಗುತ್ತದೆ, ಆದಾಗ್ಯೂ ನೀವು ಇದನ್ನು ಮಾಡುವುದನ್ನು ತಪ್ಪಿಸಬೇಕು.
ವೃತ್ತಿಪರ ವರ್ಗಾವಣೆಯ ಸಾಧ್ಯತೆ ಇದೆ. ಇದಲ್ಲದೆ ಕೆಲವರು ಬಡ್ತಿ ಪಡೆಯುಬಹುದು. ನಿಮ್ಮ ಪ್ರಯತ್ನಗಳು ಮತ್ತು ನಿಮ್ಮ ಕಠಿಣ ಪರಿಶ್ರಮಕ್ಕೆ ಉನ್ನತ ನಿರ್ವಹಣೆಯಿಂದ ಮೆಚ್ಚುಗೆ ಮತ್ತು ಗುರುತು ಸಿಗುತ್ತದೆ ಮತ್ತು ನೀವು ನಿಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಸಹ ನಿಮಗೆ ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ವ್ಯಾಪಾರಸ್ಥರು ಲಾಭವನ್ನು ಪಡೆಯುತ್ತಾರೆ. ಆರೋಗ್ಯದ ದೃಷ್ಟಿಯಿಂದ ನೀವು ಆರೋಗ್ಯವಾಗಿರುತ್ತೀರಿ. ಆದರೂ ನೀವು ಯೋಗ ಅಥವಾ ಕ್ರೀಡೆಗಳಂತಹ ಯಾವುದೇ ರೀತಿಯ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಲಾಗಿದೆ. ಏಕೆಂದರೆ ಇದು ನಿಮಗೆ ಪ್ರಯೋಜನಕಾರಿಯಾಗಿದೆ.
ಪರಿಹಾರ - ಗಣೇಶ ದೇವರಿಗೆ ದೂರ್ವಾ ಹುಲ್ಲು ಅರ್ಪಿಸಿ.
ಕುಂಭ
ಕುಂಭ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಐದನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ಇದು ಸಂತೋಷ, ಐಷಾರಾಮಿ, ಮನೆ ಮತ್ತು ತಾಯಿಯೊಂದಿಗಿನ ಸಂಬಂಧದ ನಾಲ್ಕನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿಮಕ್ಕಳಿಗೆ ಸಂಬಂಧಿಸಿದ ಆತಂಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಏಕೆಂದರೆ ಬುಧ ಐದನೇ ಮನೆಯ ಅಧಿಪತಿ. ವಿದ್ಯಾರ್ಥಿಗಳು ಅಧ್ಯಯನದತ್ತ ಗಮನ ಹರಿಸುವಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಾಣಿಜ್ಯಿಕವಾಗಿ, ಕೆಲಸದ ಸ್ಥಳದಲ್ಲಿ ನೀವು ಕೆಲವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ಅಂದರೆ ಕೆಲಸದ ಸ್ಥಳದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ನೀವು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.
ಪ್ರೀತಿಯಲ್ಲಿರುವ ಈ ರಾಶಿಚಕ್ರದ ಜನರು ಮತ್ತು ವಿವಾಹಿತ ಜನರಿಗೆ ಈ ಸಂಚಾರವು ಪ್ರಯೋಜನವಾಗಲಿದೆ. ಏಕೆಂದರೆ ಪ್ರೀತಿ ಮತ್ತು ಪ್ರಣಯದ ಉತ್ತಮ ಅವಕಾಶಗಳನ್ನು ನೀವು ಆಗಾಗ್ಗೆ ಪಡೆಯುತ್ತೀರಿ. ಇದರಿಂದಾಗಿ ಪ್ರೇಮಿಯೊಂದಿಗಿನ ನಿಮ್ಮ ಸಂಬಂಧವು ಇನ್ನಷ್ಟು ಬಲಗೊಳ್ಳುತ್ತದೆ. ಆರೋಗ್ಯದ ದೃಷ್ಟಿಯಿಂದ, ಸಂಚಾರದ ಸಮಯದಲ್ಲಿ ವಾಹನ ಚಲಾಯಿಸುವಾಗ ಜಾಗರೂಕರಾಗಿರಿ, ಏಕೆಂದರೆ ಬುಧ ಸಂಚಾರದ ಸಮಯದಲ್ಲಿ ಸಣ್ಣಪುಟ್ಟ ಗಾಯದ ಅಪಾಯವಿರಬಹುದು. ಇದಲ್ಲದೆ ಈ ಸಮಯದಲ್ಲಿ ನಿಮಗೆ ಕೆಮ್ಮು ಮತ್ತು ಶೀತಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು.
ಪರಿಹಾರ - ಬುಧವಾರ ವಿಷ್ಣು ಸಹಸ್ತ್ರನಾಮ ಸ್ತೋತ್ರವನ್ನು ಜಪಿಸಿ.
ಮೀನಾ
ಮೇಷ ರಾಶಿಯ ಸ್ಥಳೀಯರಿಗೆ ಬುಧ ದೇವ ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಧೈರ್ಯ, ಯಾತ್ರೆ, ಮಹತ್ವಾಕಾಂಕ್ಷೆ ಮತ್ತು ಸಹೋದರ ಸಹೋದರಿಯ ಮೂರನೇ ಮನೆಗೆ ಪ್ರವೇಶಿಸುತ್ತದೆ. ಸಂಚಾರದ ಸಮಯದಲ್ಲಿ ನಿಮ್ಮ ಸಂವಹನ ಕೌಶಲ್ಯ ಸುಧಾರಿಸುತ್ತದೆ. ಆರ್ಥಿಕವಾಗಿ ಈ ಅವಧಿ ಸುಧಾರಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ವೃತ್ತಿಗೆ ಸಂಬಂಧಿಸಿದ ಪ್ರವಾಸಗಳು ನಿಮಗೆ ಕ್ರೀಡೆ ಮತ್ತು ಲಾಭವನ್ನು ಒದಗಿಸುತ್ತವೆ. ಸಂಬಂಧಗಳಿಗೆ ತಿಳುವಳಿಕೆ ಮತ್ತು ಕಾಳಜಿಯ ಅಗತ್ಯವಿದೆ ಮತ್ತು ನೀವು ಕೆಲವು ಗುಣಮಟ್ಟದ ಸಮಯವನ್ನು ಒಟ್ಟಿಗೆ ಕಳೆಯಲು ನಿಮಗೆ ಸಲಹೆ ನೀಡಲಾಗಿದೆ. ಕೆಲಸದ ಸ್ಥಳದಲ್ಲಿ ಉತ್ತಮ ಪ್ರಭಾವ ಬೀರಲು ಗಡುವಿನ ಮೊದಲು ಕೆಳಸಗಳನ್ನು ಪೂರ್ಣಗೊಳಿಸಲು ಸಲಹೆ ನೀಡಲಾಗಿದೆ. ಆರೋಗ್ಯದ ದೃಷ್ಟಿಕೋನದಿಂದ ಈ ಸಂಚಾರವು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಆದರೂ ಜಾರಾಗರೂಕರಾಗಿರಲು ಸೂಚಿಸಲಾಗಿದೆ ಮತ್ತು ಅಗತ್ಯವಿದ್ದರೆ ಇಡೀ ದೇಹವನ್ನು ಪರೀಕ್ಷಿಸಿ.
ಪರಿಹಾರ - ಅಗತ್ಯವಿದ್ದವರಿಗೆ ಬುಧವಾರ ಆಹಾರವನ್ನು ನೀಡಿ.