ಕರ್ಕ ರಾಶಿಯಲ್ಲಿ ಶುಕ್ರ ಸಂಚಾರ ( 22nd June 2021 )
ಶುಕ್ರ ಗ್ರಹವನ್ನು ಪ್ರೀತಿ, ಸಂಬಂಧ, ಸೌಂದರ್ಯ ಮತ್ತು ಸಂತೋಷದ ಅಂಶವೆಂದು ಪರಿಗಣಿಸಲಾಗಿದೆ. ಶುಕ್ರ ಗ್ರಹ ಪ್ರೀತಿ ಮತ್ತು ಪ್ರಣಯದ ಗ್ರಹವಾಗಿದೆ, ಆದ್ದರಿಂದ ಈ ಇದು ಮನೆಯಲ್ಲಿ ಮಾಧುರ್ಯ ಮತ್ತು ಸಾಮರಸ್ಯವನ್ನು ತರುತ್ತದೆ. ಶುಕ್ರ ನಮ್ಮ ಜಾತಕದಲ್ಲಿ ನಮ್ಮ ಸೃಜನಶೀಲ ಬದಿಗಳನ್ನು ಪ್ರತಿನಿಧಿಸುತ್ತದೆ. ಇತರರೊಂದಿಗೆ ನಾವು ಯಾವ ರೀತಿಯ ಸಂಬಂಧವನ್ನು ಹೊಂದುತ್ತೇವೆ, ಸ್ನೇಹದಲ್ಲಿ ನಾವು ಹೇಗಿರುತ್ತೇವೆ ಮತ್ತು ಸೌಂದರ್ಯದ ಬಗ್ಗೆ ನಮ್ಮ ಭಾವನೆಗಳು ಹೇಗಿರುತ್ತವೆ ಎಂಬುದು ಶುಕ್ರ ಗ್ರಹದಿಂದ ಬಹಿರಂಗಗೊಳ್ಳುತ್ತವೆ. ಶುಕ್ರ ಗ್ರಹವು ತುಲಾ ಮತ್ತು ವೃಷಭ ರಾಶಿಯ ಅಧಿಪತಿಯಾಗಿದೆ.
ಜೀವನದ ಪ್ರತಿಯೊಂದು ಸಮಸ್ಯೆಯ ಪರಿಹಾರಕ್ಕಾಗಿ ಪರಿಣಿತ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ
ಜಾತಕದಲ್ಲಿ ಶುಕ್ರ ಅನುಕೂಲಕರವಾಗಿರುವ ಸ್ಥಳೀಯರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ಗ್ರಹದ ವೈವಾಹಿಕ ಜೀವನದಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ. ಶುಕ್ರವನ್ನು ಸಂವಹನದ ಅಂಶವೆಂದುಸ್ಸಹ ಕರೆಯಲಾಗುತ್ತದೆ. ಆದ್ದರಿಂದ ಇದು ಇಂಟರ್ನೆಟ್, ಸೋಶಿಯಲ್ ಮೀಡಿಯಾದಿಂದಲೂ ನಿಮಗೆ ಪ್ರಯೋಜನಗಳನ್ನು ನೀಡಬಹುದು. ಸಾಮಾಜಿಕ ಪ್ರತಿಷ್ಠೆಯನ್ನೂ ಇದು ಸುಧಾರಿಸಬಹುದು. ನೀವು ಹೊಸ ಜನರನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ಸಾಮಾಜಿಕ ಕಾರ್ಯಗಳನ್ನು ಮಾಡಲು ನೀವು ಇಷ್ಟಪಡುವಿರಿ. ಕರ್ಕ ರಾಶಿಯಲ್ಲಿ ಶುಕ್ರ ನೆಲೆಗೊಂಡಿರುವ ಕಾರಣದಿಂದಾಗಿ, ನಮ್ಮ ಅಗತ್ಯಗಳ ಬಗ್ಗೆ ನಮ್ಮ ಅರ್ಥಗರ್ಭಿತ ತಿಳುವಳಿಕೆ ಹೆಚ್ಚಾಗುತ್ತದೆ. ನಿಮಗೆ ಅನ್ಯೋನ್ಯತೆಗಾಗಿ ಹೆಚ್ಚಿನ ಆಸೆ ಇರುತ್ತದೆ. ನೀವು ಹೆಚ್ಚು ಭಾವುಕರಾಗುವಿರಿ ಮತ್ತು ನೀವು ಪ್ರೀತಿಸುವ ಜನರೊಂದಿಗೆ ಆಳವಾದ ಸಂಬಂಧವನ್ನು ಹೊಂದಿರುತ್ತೀರಿ. ಕರ್ಕ ರಾಶಿಯನ್ನು ಮನೆಯ ಅಂಶವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀವು ಯಾವುದೇ ಪುನರ್ವಿತರಣೆ ಯೋಜನೆಗಳನ್ನು ಪರಿಗಣಿಸಬಹುದು ಮತ್ತು ಈ ಕೆಲಸವನ್ನು ನೀವು ಪೂರ್ಣ ಶಕ್ತಿಯೊಂದಿಗೆ ಮಾಡುವಿರಿ. ಕರ್ಕ ರಾಶಿಯಲ್ಲಿ ಶುಕ್ರ ಸಂಚಾರದ ಸಮಯದಲ್ಲಿ ನೀವು ಹೊಸ ಸಸ್ಯಗಳನ್ನು ಖರೀದಿಸಬಹುದು ಅಥವಾ ನಿಮ್ಮ ಮನೆಯ ವಿನ್ಯಾಸದಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಬಹುದು.
ಈ ವಿಶೇಷ ಸಂಚಾರದ ಬಗ್ಗೆ ಮಾತನಾಡಿದರೆ, ಶುಕ್ರ ಗ್ರಹ 22 ಜೂನ್, 2021 ರಂದು ಮಧ್ಯಾಹ್ನ 2:07 ಗಂಟೆಯಿಂದ 17, 2021 ರಂದು ಬೆಳಿಗ್ಗೆ 09:13 ಗಂಟೆಯ ವರೆಗೆ ಕರ್ಕ ರಾಶಿಯಲ್ಲಿ ಗೋಚರಿಸುತ್ತದೆ. ಇದರ ನಂತರ ಇದು ಸಿಂಹ ರಾಶಿಗೆ ಸಾಗುತ್ತದೆ.
ನಡೆಯಿರಿ ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಈ ಸಂಚಾರದ ಪರಿಣಾಮವನ್ನು ತಿಳಿಯೋಣ:
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ.
Click Here to read in English
ಮೇಷ
ಮೇಷ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಎರಡನೇ ಮತ್ತು ಏಳನೇ ಮನೆಯ ಅಧಿಪತಿ. ಸಂಚಾರದ ಸಮಯದಲ್ಲಿ ಇದು ನಿಮ್ಮ ವಿಶ್ರಾಂತಿ, ಸಂತೋಷ ಸಂಪನ್ಮೂಲಗಳು, ತಾಯಿ ಇತ್ಯಾದಿಯ ನಾಲ್ಕನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ಮೇಷ ರಾಶಿಚಕ್ರದ ಸ್ಥಳೀಯರು ಶಾಂತಿಪೂರ್ಣ ವಾತಾವರಣಕ್ಕಾಗಿ ಹಂಬಲಿಸುತ್ತಾರೆ ಮತ್ತು ಸಮಾಜಿಕವಾಗಿ ಸಕ್ರಿಯರಾಗಿರುವ ಬದಲು ತಮ್ಮ ಮನೆಯ ಸದಸ್ಯರೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ಈ ಸಮಯದಲ್ಲಿ ಆರ್ಥಿಕವಾಗಿ ನೀವು ಉತ್ತಮ ಪ್ರದರ್ಶನ ಮಾಡುವಿರಿ. ಈ ಸಮಯದಲ್ಲಿ ಮನೆಯ ಪ್ರಮುಖ ಕೆಲಸಗಳು ಮತ್ತು ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡಬಹುದು. ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನೀವು ಚಿಂತೆಗೆ ಒಳಗಾಗುವಿರಿ ಮತ್ತು ಇದರತ್ತ ನೀವು ಗಮನ ಹರಿಸುವಿರಿ.
ನಿಮ್ಮ ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ಕೆಲಸದ ಸ್ಥಳದಲ್ಲಿ ಕೆಲವು ಬದಲಾವಣೆಗಳು ಉಂಟಾಗಬಹುದು. ಈ ಸಮಯದಲ್ಲಿ ಲಾಭ ಗಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನವು ಎತ್ತರವನ್ನು ಪಡೆಯುತ್ತದೆ. ನಿಮ್ಮ ಪ್ರೀತಿಯ ಸಂಬಂಧದ ಮೇಲೆ ದೃಷ್ಟಿ ಹಾಕಿದರೆ, ಈ ಸಮಯದಲ್ಲಿ ಮೇಷ ರಾಶಿಚಕ್ರದ ಜನರು ತುಂಬಾ ಭಾವುಕರಾಗಬಹುದು ಮತ್ತು ಸಣ್ಣ ಪುಟ್ಟ ವಿಷಯಗಳು ಸಹ ನಿಮ್ಮನ್ನು ನೋಯಿಸುತ್ತವೆ. ಈ ಕಾರಣದಿಂದಾಗಿ ಪ್ರೀತಿಯ ಸಂಬಂಧದಲ್ಲಿ ಕೆಅಲ್ವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಡ್ದರುಬಿದ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಲು ನಿಮಗೆ ಸಲಹೆ ನೀಡಲಾಗಿದೆ. ನಿಮ್ಮ ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಇದು ಅತ್ಯುತ್ತಮ ಸಮಯವಾಗಿರುತ್ತದೆ. ನಿಮ್ಮ ಶಕ್ತಿ ಉತ್ತುಂಗದಲ್ಲಿರುತ್ತದೆ, ಅದನ್ನು ನೀವು ಆನಂದಿಸುವಿರಿ.
ಪರಿಹಾರ - ಇತರರಿಂದ ಅಥವಾ ಉಚಿತವಾಗಿ ಯಾವುದೇ ಉಡುಗೊರೆ ತೆಗೆದುಕೊಳ್ಳುವುದನ್ನು ತಪ್ಪಿಸಿ.
ವೃಷಭ
ವೃಷಭ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಮೊದಲನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಧೈರ್ಯ, ಕಿರಿಯ ಸಹೋದರ ಸಹೋದರಿ ಮತ್ತು ಅಲ್ಪ ದೂರದ ಪ್ರಯಾಣಗಳ ಮೂರನೇ ಮನೆಗೆ ಗೋಚರಿಸಲಿದೆ. ಈ ಸಂಚಾರದ ಸಮಯದಲ್ಲಿ ನೀವು ಯಾವುದೇ ಉತ್ತಮ ಮತ್ತು ಸುಂದರವಾದ ಸರ್ಪ್ರೈಜ್ ಅನ್ನು ಪಡೆಯಬಹುದು. ಈ ಸಮಯದಲ್ಲಿ ನೀವು ಹೃದಯದ ಬದಲಾವಣೆಯನ್ನು ಹೊಂದಿರಬಹುದು ಮತ್ತು ಪ್ರೀತಿಯ ಸಂಬಂಧದಲ್ಲಿ ನೀವು ಸಾಕಷ್ಟು ಸಮಯವನ್ನು ಕಳೆಯಬಹುದು. ಈ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರಿಂದಲೂ ನೀವು ಯಾವುದೇ ಉಡುಗೊರೆಯನ್ನು ಪಡೆಯಬಹುದು. ಈ ಸಂಚಾರವು ನಿಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ತರಲು ಅನುಕೂಲಕರವಾಗಿದೆ. ಈ ಸಮಯದಲ್ಲಿ ನಿಮ್ಮ ಸೃಜನಶೀಲ ಭಾಗವನ್ನು ಕಂಡುಹಿಡಿಯಲು ನೀವು ಪ್ರಯತ್ನಿಸುತ್ತೀರಿ. ಆದ್ದರಿಂದ ಈ ಸಮಯದಲ್ಲಿ ಹೊಸದನ್ನು ಮಾಡುವ ಬಯಕೆಯನ್ನು ನಿಮ್ಮಲ್ಲಿ ಕಾಣಬಹುದು.
ಆದಾಗ್ಯೂ ಈ ಸಮಯದಲ್ಲಿ ನೀವು ತುಂಬಾ ಮಹತ್ವಕಾಂಕ್ಷಿಯಾಗುವುದನ್ನು ತಪ್ಪಿಸಬೇಕು. ಈ ಸಮಯದಲ್ಲಿ ನೀವು ಅನೇಕ ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ಸಾಮರ್ಥ್ಯವನ್ನು ಸರಿಯಾಗಿ ಬಳಸುವುದರ ಮೂಲಕ ನೀವು ಲಾಭವನ್ನು ಗಳಿಸಬಹುದು. ಮೂರನೇ ಮನೆಯಲ್ಲಿ ಶುಕ್ರ ಸಂಚಾರವು ನಿಮ್ಮಲ್ಲಿ ಸ್ವಲ್ಪ ಗೊಂದಲವನ್ನು ಉಂಟುಮಾಡಬಹುದು. ಈ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ತುಂಬಾ ಉತ್ತಮವಾಗಿರುತ್ತದೆ ಮತ್ತು ಕುಟುಂಬದ ಸದಸ್ಯರೊಂದಿಗೆ ನೀವು ಚೆನ್ನಾಗಿ ಮಾತನಾಡುವಿರಿ. ಕೆಲವು ಸ್ಥಳೀಯರ ಮನೆಯಲ್ಲಿ ಮಂಗಲಿಕ ಕಾರ್ಯ ನಡೆಯಬಹುದು. ನಿಮ್ಮ ಅರೋಗ್ಯ ಉತ್ತಮವಾಗಿರುತ್ತದೆ ಮತ್ತು ನೀವು ಶಕ್ತಿಯುತರಾಗಿರುತ್ತೀರಿ. ನಿಮ್ಮ ಶಕ್ತಿಯನ್ನು ಉಳಿಸಿಕೊಳ್ಳಲು ನಿಮ್ಮ ದಿನಚರಿಯನ್ನು ಸಮತೋಲನದಲ್ಲಿರಿಸಿಕೊಳ್ಳಿ.
ಪರಿಹಾರ - ಶುದ್ಧ ಹಸುವಿನ ತುಪ್ಪವನ್ನು ಯಾವುದೇ ಧಾರ್ಮಿಕ ಸ್ಥಳಕ್ಕೆ ದಾನ ಮಾಡಿ ಮತ್ತು ಅದನ್ನು ನಿಮ್ಮ ಅಡುಗೆಮನೆಯಲ್ಲಿ ನಿಯಮಿತವಾಗಿ ಬಳಸಲು ಪ್ರಾರಂಭಿಸಿ.
ಮಿಥುನ ರಾಶಿ
ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಅವರ ಐದನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಎರಡನೇ ಮನೆಗೆ ಗೋಚರಿಸುತ್ತದೆ. ಈ ಮನೆಯನ್ನು ನಿಮ್ಮ ಧ್ವನಿ, ಹಣ ಮತ್ತು ಕುಟುಂಬದ ಅಂಶವೆಂದು ಪರಿಗಣಿಸಲಾಗಿದೆ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರ ಆದಾಯ ಹೆಚ್ಚಾಗುತ್ತದೆ. ವಿದೇಶದಲ್ಲಿ ಹೂಡಿಕೆ ಮಾಡುವುದರಿಂದಲೂ ನೀವು ಪ್ರಯೋಜನ ಪಡೆಯಬಹುದು. ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ಸಂಚಾರವು ಸಾಕಷ್ಟು ಉತ್ತಮ ಫಲಿತಾಂಶಗಳನ್ನು ತರಬಹುದು. ಏಕೆಂದರೆ ಈ ಸಮಯದಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಬರಲಾಗುವ ಸಮಸ್ಯೆಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ಏಕೆಂದರೆ ಶುಕ್ರ ನಿಮ್ಮ ಐದನೇ ಮನೆಯ ಅಧಿಪತಿ.
ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರ ಸಂಬಂಧಗಳಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುವ ಸಾಧ್ಯತೆ ಇದೆ. ವಿವಾಹಿತ ಜನರು ಮಕ್ಕಳ ಕಡೆಯಿಂದ ಯಾವುದೇ ಸಂತೋಷದ ಸುದ್ಧಿಯನ್ನು ಪಡೆಯಬಹುದು. ಈ ರಾಶಿಚಕ್ರದ ವ್ಯಾಪಾರಸ್ಥರು ವಿಶೇಷವಾಗಿ ಸಹಭಾಗಿತ್ವದಲ್ಲಿ ವ್ಯಾಪಾರ ಮಾಡುತ್ತಿರುವ ಜನರಿಗೆ ಈ ಸಮಯದಲ್ಲಿ ಉತ್ತಮ ಲಾಭವಾಗಬಹುದು. ಈ ಸಂಚಾರದ ಸಮಯದಲ್ಲಿ ಮಿಥುನ ರಾಶಿಚಕ್ರದ ಸ್ಥಳೀಯರು ಪ್ರಯಾಣಗಳನ್ನು ಮಾಡಬಹುದು. ಅರೋಗ್ಯ ಜೀವನದ ಮೇಲೆ ದೃಷ್ಟಿ ಹಾಕಿದರೆ, ಈ ಸಮಯ ಉತ್ತಮವಾಗಿದೆ. ಏಕೆಂದರೆ ನಿಮ್ಮ ಆರೋಗ್ಯದಲ್ಲಿ ಯಾವುದೇ ದೊಡ್ಡ ನಕಾರಾತ್ಮಕ ಬದಲಾವಣೆಗಳಿಲ್ಲ. ಆದಾಗ್ಯೂ, ಆಡುವಾಗ ಅಥವಾ ವ್ಯಾಯಾಮ ಮಾಡುವಾಗ ನೀವು ಶಕ್ತಿಯ ಕೊರತೆಯನ್ನು ಅನುಭವಿಸಬಹುದು.
ಪರಿಹಾರ - ನಕಾರಾತ್ಮಕತೆಯನ್ನು ತೊಡೆದುಹಾಕಲು ಪ್ರತಿದಿನ ಸಾಯಂಕಾಲ ಮನೆಯಲ್ಲಿ ಕರ್ಪೂರ ದೀಪವನ್ನು ಬೆಳಗಿಸಿ
ಕರ್ಕ ರಾಶಿ
ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಮೊದಲನೇ ಮನೆಗೆ ಗೋಚರಿಸುತ್ತದೆ. ಈ ಮನೆಯನ್ನು ಬುದ್ಧಿವಂತಿಕೆ, ಆತ್ಮ ಮತ್ತು ವ್ಯಕ್ತಿತ್ವದ ಅಂಶವೆಂದು ಪರಿಗಣಿಸಲಾಗಿದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಬೌದ್ಧಿಕ ಸಾಮರ್ಥ್ಯಗಳನ್ನು ನೀವು ಸುಧಾರಿಸುವಿರಿ ಮತ್ತು ನೀವು ಯಾವ ರೀತಿ ಕೆಲಸ ಮಾಡುತ್ತೀರಿ ಎಂಬುದನ್ನು ಸಹ ನೀವು ನಿರ್ಧರಿಸುವಿರಿ. ಆರ್ಥಿಕವಾಗಿ, ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ನೀವು ದೀರ್ಘಕಾಲದ ವರೆಗೆ ಬಳಸಲು ಸಾಧ್ಯವಾಗದ ವಸ್ತುಗಳನ್ನು ಖರೀದಿಸುವುದನ್ನು ಈ ಸಮಯದಲ್ಲಿ ತಪ್ಪಿಸಿ, ಹಣಕಾಸು ಹೂಡಿಕೆ ಮಾಡಲು ನೀವು ಸರಿಯಾದ ಮಾರ್ಗದರ್ಶನ ತೆಗೆದುಕೊಳ್ಳಬೇಕು.
ವೃತ್ತಿಪರವಾಗಿ, ನೀವು ವಿದೇಶ ಸಹಕಾರದಿಂದ ಲಾಭ ಪಡೆಯಬಹುದು. ಈ ಸಮಯವೂ ವ್ಯಾಪಾರ ಮತ್ತು ಸಹಭಾಗಿತ್ವಕ್ಕೂ ಅನುಕೂಲಕರವಾಗಿರುತ್ತದೆ. ನಿಮ್ಮ ಸಂಪತ್ತು ಅಥವಾ ಹಳೆಯ ವಸ್ತುಗಳ ಮೇಲೆ ಯಾವುದೇ ಹೂಡಿಕೆ ಮಾಡಿದ್ದರೆ, ಈ ಸಂಚಾರದ ಸಮಯದಲ್ಲಿ ಸಾಕಷ್ಟು ಲಾಭವನ್ನು ಗಳಿಸುವಿರಿ. ವಿವಾಹಿತ ಜನರ ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಆದರೆ ಸಮಾಲೋಚಿಸಿದ ನಂತರ, ದಾಂಪತ್ಯ ಜೀವನದ ವಾಹನವು ಸಮತೋಲನದೊಂದಿಗೆ ಚಲಿಸುತ್ತದೆ. ಅರೋಗ್ಯ ಜೀವನದ ಮೇಲೆ ದೃಷ್ಟಿ ಹಾಕಿದರೆ, ಈ ರಾಶಿಚಕ್ರದ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಅವರು ತಮ್ಮ ಆಹಾರ ಮತ್ತು ಅಭ್ಯಾಸದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.
ಪರಿಹಾರ - ಶುಕ್ರ ದೇವರನ್ನು ಬಲಪಡಿಸಲು, ಯಾವುದೇ ನದಿಯಲ್ಲಿ ಬಿಳಿ ಹೂವುಗಳನ್ನು ಅರ್ಪಿಸುವುದು ಪ್ರಯಕನಕಾರಿ ಮತ್ತು ಉತ್ತಮವಾಗಿರುತ್ತದೆ.
ಸಿಂಹ ರಾಶಿ
ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ದೇವ ಮೂರನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ವಿದೇಶ ಲಾಭ, ವೆಚ್ಚ, ನಷ್ಟ ಇತ್ಯಾದಿಯ ಹನ್ನೆರಡನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ವಿದೇಶದಲ್ಲಿ ಅಥವಾ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಹೆಚ್ಚು ಲಾಭದ ನಿರೀಕ್ಷೆಯಿದೆ. ಈ ರಾಶಿಚಕ್ರದ ಜನರು ವಿದೇಶ ಪ್ರಯಾಣದ ಅವಕಾಶವನ್ನು ಸಹ ಪಡೆಯಬಹುದು. ಆರ್ಥಿಕವಾಗಿ, ನಿಮ್ಮ ಹಣಕಾಸಿನತ್ತ ಗಮನ ಹರಿಸಿ. ಸಾಧ್ಯವಾದಷ್ಟು ಕಡಿಮೆ ಖರ್ಚು ಮಾಡಲು ಪ್ರಯತ್ನಿಸಿ. ಆರ್ಥಿಕವಾಗಿ ಲಾಭದ ಸಾಧ್ಯತೆ ಇದೆ ಆದರೆ ನಿಮ್ಮ ವೆಚ್ಚಗಳು ಸಹ ಹೆಚ್ಚಾಗುತ್ತವೆ. ಇದರಿಂದಾಗಿ ಪರಿಸ್ಥಿತಿಯನ್ನು ಸಮತೋಲನಗೊಳಿಸಲು ಕಷ್ಟವಾಗುತ್ತದೆ. ವೈಯಕ್ತಿಕ ಮಟ್ಟದಲ್ಲಿ ನೀವು ಎಲ್ಲೆಡೆ ನಕಾರಾತ್ಮಕತೆಯಿಂದ ಸುತ್ತುವರೆದಿರುವಿರಿ. ಕುಟುಂಬ ಜೀವನದಲ್ಲಿ ಆಪ್ತರೊಂದಿಗೆ ವಿವಾದವನ್ನು ಎದುರಿಸಬೇಕಾಗಬಹುದು. ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ಮತ್ತು ಯಾವುದೇ ಸಮಸ್ಯೆಯಿದ್ದರೆ, ಅದನ್ನು ಸರಿಯಾಗಿ ಪರೀಕ್ಷಿಸಿ.
ಪರಿಹಾರ - ಓಂ ಶುಕ್ರಾಯ್ ನಮಃ ಮಂತ್ರವನ್ನು ಪಠಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಎರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಆದಾಯ, ಲಾಭ ಮತ್ತು ಆಸೆಗಳ ಹನ್ನೊಂದನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಾಯ್ದಲ್ಲಿ ನೀವು ನಿಮ್ಮ ಹಿರಿಯ ಸಹೋದರ ಸಹೋದರಿಯರ ಬಗ್ಗೆ ಸ್ವಲ್ಪ ಒತ್ತಡಕ್ಕೆ ಒಳಗಾಗಬಹುದು. ಈ ಸಮಯದಲ್ಲಿ ನೀವು ಯಾವುದೇ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಮತ್ತು ನೀವು ಪ್ರಶಸ್ತಿ ಪಡೆಯುವ ಸಾಧ್ಯತೆಯೂ ಇದೆ. ಈ ಸಮಯದಲ್ಲಿ ನೀವು ಬಹಳ ಸಾಮಾಜಿಕರಾಗಿರುವಿರಿ ಮತ್ತು ನಿಮ್ಮ ಸ್ನೇಹಿತರು ನಿಮಗೆ ತುಂಬಾ ಸಹಾಯಕರೆಂದು ಸಾಬೀತುಪಡಿಸುತ್ತಾರೆ. ನಿಮ್ಮ ಪರಿಸ್ಥಿತಿ ಸುಧಾರಿಸುವವರೆಗೆ ಅವರು ನಿಮ್ಮೊಂದಿಗೆ ನಿಲ್ಲುತ್ತಾರೆ. ಆರ್ಥಿಕವಾಗಿ, ಈ ರಾಶಿಚಕ್ರದ ಸ್ಥಳೀಯರು ಆದಾಯದಲ್ಲಿ ನಿರಂತರಾಗಿ ಹೆಚ್ಚಳವನ್ನು ಪಡೆಯಬಹುದು ಮತ್ತು ಕೆಲವರಿಗೆ ಇತರ ರೀತಿಗಳಿಂದಲೂ ಹಣಕಾಸಿನ ಲಾಭವಾಗುತ್ತದೆ. ಪ್ರೀತಿ ಮತ್ತು ವೈವಾಹಿಕ ಜೀವನದ ದೃಷ್ಟಿಯಿಂದ ಈ ಸಮಯ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಆನಂದಿಸುವಿರಿ, ಸಂಬಂಧಗಳಲ್ಲಿ ಮಾಧುರ್ಯವನ್ನು ಹೊಂದಿರುತ್ತೀರಿ. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಯಾವುದೇ ರೀತಿಯ ನೋವು ಅಥವಾ ಅರೋಗ್ಯ ಸಮಸ್ಯೆಗಳನ್ನು ತೊಡೆದುಹಾಕಲು ನಿಮ್ಮ ಸಂಪೂರ್ಣ ತಪಾಸಣೆ ಮಾಡಿಸಿ.
ಪರಿಹಾರ - ಸುಗಂಧ ದ್ರವ್ಯ ಮತ್ತು ಬೆಳ್ಳಿ ಆಭರಣಗಳನ್ನು ಉಪಯೋಗಿಸಿ.
ತುಲಾ ರಾಶಿ
ತುಲಾ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಮೊದಲನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ವೃತ್ತಿ ಜೀವನ, ಹೆಸರು ಮತ್ತು ಖ್ಯಾತಿಯ ಹತ್ತನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ಕೆಲವು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಮತ್ತು ಇದರೊಂದಿಗೆ ನಿಮ್ಮ ಜೀವನದಲ್ಲಿ ಕೆಲವು ಇತರ ರೀತಿಯ ಏರಿಳಿತಗಳನ್ನು ಸಹ ಎದುರಿಸಬೇಕಾಗಬಹುದು. ಆರ್ಥಿಕವಾಗಿ ನೀವು ಹಣಕಾಸಿನ ಕೊರತೆಯನ್ನು ಎದುರಿಸಬೇಕಾಗಬಹುದು ಮತ್ತು ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ವೃತ್ತಿಪರವಾಗಿ, ನಿಮ್ಮ ಕೆಲಸದಲ್ಲಿ ನೀವು ಹೆಚ್ಚು ನಿರತರಾಗಿರುವಿರಿ ಮತ್ತು ಹೆಚ್ಚು ಕಠಿಣ ಪರಿಶ್ರಮ ಮಾಡುವಿರಿ. ಕೆಲಸದ ಬಗ್ಗೆ ಮುಂದೂಡಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇದು ನಿಮ್ಮ ಸ್ಥಿತಿಯನ್ನು ಹದಗೆಡಿಸಬಹುದು ಮತ್ತು ವಿಷಯಗಳು ನಿಮ್ಮ ನಿಯಂತ್ರಣದಿಂದ ಹೊರಹೋಗಬಹುದು.
ಸಂಬಂಧಗಳ ದೃಷ್ಟಿಯಿಂದ ವಿವಾಹಿತ ಜನರ ಜೀವನದ ಸಂಗಾತಿಯೊಂದಿಗೆ ಯಾವುದೇ ವಿಷಯದ ಬಗ್ಗೆ ವಿವಾದವಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಈ ಪ್ರೀತಿಯ ಸಂಬಂಧದಲ್ಲಿರುವ ಈ ರಾಶಿಚಕ್ರದ ಸ್ಥಳೀಯರು ತಮ್ಮ ಪ್ರೇಮಿಯೊಂದಿಗೆ ಪ್ರಣಯದ ಸಮಯವನ್ನು ಆನಂದಿಸುತ್ತಾರೆ ಮತ್ತು ತಮ್ಮ ಸ್ನೇಹಿತರೊಂದಿಗೆ ಉತ್ತಮ ಗುಣಮಟ್ಟದ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಈ ಸಂಚಾರದ ಸಮಯದಲ್ಲಿ ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಕೆಲವು ಇತರ ಕೆಲಸಗಳಲ್ಲಿ ಕಾರ್ಯನಿರತರಾಗಿರುತ್ತಾರೆ. ಇದರಿಂದಾಗಿ ಅಧ್ಯಯನದತ್ತ ಕೇಂದ್ರೀಕರಿಸುವಲ್ಲಿ ಅವರು ಕೆಲವು ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಜಾಗರೂಕರಾಗಿರಬೇಕು. ಏಕೆಂದರೆ ಅರೋಗ್ಯ ಕುಸಿಯಬಹುದು.
ಪರಿಹಾರ - ಶುಕ್ರವಾರ ಸುಗಂಧ ದ್ರವ್ಯ ದಾನ ಮಾಡುವುದು ನಿಮಗೆ ಅನುಕೂಲಕರವಾಗಿರುತ್ತದೆ.
वृश्चिक / ವೃಶ್ಚಿಕ ರಾಶಿ
ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಹನ್ನೆರಡನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಅದೃಷ್ಟ, ದೂರಸ್ಥ ಪ್ರಯಾಣ, ಗುರು ಇತ್ಯಾದಿಯ ಒಂಬತ್ತನೇ ಮನೆಗೆ ಗೋಚರಿಸುತ್ತಾರೆ. ಈ ಸಂಚಾರದ ಸಮಯ್ದಲ್ಲಿ ನೀವು ವಿದೇಶಿ ಸಂಬಂಧಗಳ ಮೂಲಕ ಲಾಭ ಗಳಿಸಬಹುದು ಮತ್ತು ನೀವು ಧಾರ್ಮಿಕ ಚಟುವಟಿಕೆಗಳತ್ತ ಒಲವು ತೋರುತ್ತೀರಿ. ಈ ಸಮಯದಲ್ಲಿ ನೀವು ಇತರರಿಗೆ ಸಹಾಯ ಮಾಡಲು ಸಹ ಮುಂದುವರಿಯುತ್ತೀರಿ. ಇದಲ್ಲದೆ ಶುಕ್ರ ಸಂಚಾರದ ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ಸ್ವಯಂ ತಪಾಸಣೆ ಮಾಡುತ್ತಾರೆ ಮತ್ತು ತಮ್ಮ ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸುತ್ತಾರೆ. ಈ ಸಮಯ ಹೊಸ ಕಾರ್ಯಗಳಿಗೆ ಅನುಕೂಲಕರವಾಗಿರುತ್ತದೆ. ನೀವು ನಿರ್ಮಾಣ ಸಂಬಂಧಿತ ಕೃತಿಗಳನ್ನು ನವೀಕರಿಸಬಹುದು. ವ್ಯಾಪಾರದಲ್ಲಿ ಹೊಸ ಮತ್ತುಸಕಾರಾತ್ಮಕ ಬದಲಾವಣೆ ಮಾಡಿ, ಈ ರಾಶಿಚಕ್ರದ ವ್ಯಾಪಾರಸ್ಥರು ಲಾಭ ಗಳಿಸಬಹುದು. ಉದ್ಯೋಗದಲ್ಲಿರುವ ಜನರು ಈ ಸಮಯದಲ್ಲಿ ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ಚರ್ಮದ ಸೋಂಕಿನಿಂದ ಬಳಲುತ್ತಬಹುದು.
ಪರಿಹಾರ - ‘ಓಂ ದ್ರಾಂ ದ್ರೀಂ ದ್ರೌಂ ಸಃ ಶುಕ್ರಾಯ ನಮಃ’ ಶುಕ್ರ ಮಂತ್ರವನ್ನು ಜಪಿಸಿ.
ಧನು ರಾಶಿ
ಧನು ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಆರನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಜೀವನದಲ್ಲಿನ ಅಡೆತಡೆಗಳು, ಬದಲಾವಣೆ, ಮೃತ್ಯು, ಅಪಘಾತಗಳು ಇತ್ಯಾದಿಗಳ ಎಂಟನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ನಕಲಿ ಸ್ನೇಹಿತರು ಮತ್ತು ನಿಮ್ಮ ವಿರೋಧಿಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಏಕೆಂದರೆ ಅವರು ನಿಮಗೆ ಮೋಸ ಮಾಡಬಹುದು. ಕೆಲವು ವಿಷಯಗಳಲ್ಲಿ ನಿಮಗೆ ಹಠಾತ್ ಲಾಭ ಅಥವಾ ನಷ್ಟ ಸಧ್ಯ. ಮನೆಯಲ್ಲಿ ಜನರ ದೃಷ್ಠಿಕೋನವು ಸ್ವಲ್ಪ ಭಿನ್ನವಾಗಿರುತ್ತದೆ. ಈ ಕಾರಣದಿಂದಾಗಿ ಅವರೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಲು ನೀವು ಕೆಲವು ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು. ಉನ್ನತ ಶಿಕ್ಷಣ ಪಡೆಯಲು ಯೋಚಿಸುತ್ತಿದ್ದ ವಿದ್ಯಾರ್ಥಿಗಳು ಈ ಸಮಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರಸ್ಥರು ಪ್ರತಿಯೊಂದು ರೀತಿಯ ಆರ್ಥಿಕ ವಹಿವಾಟಿನಲ್ಲಿ ಜಾಗರೂಕರಾಗಿರಲು ಸೂಚಿಸಲಾಗಿದೆ. ಇದಲ್ಲದೆ ಈ ಸಂಚಾರದ ಸಮಯದಲ್ಲಿ ಯಾರಿಗಾದರೂ ಸಾಲ ನೀಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಆ ಮೊತ್ತವನ್ನು ನೀವು ಶಾಶ್ವತವಾಗಿ ಕಳೆದುಕೊಳ್ಳಬಹುದು. ಈ ರಾಶಿಚಕ್ರದ ಜನರು ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಈ ಸಮಯದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ನೀವು ಬಳಲುತ್ತಬಹುದು. ನಿಮ್ಮೊಂದಿಗೆ ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಬಗ್ಗೆಯೂ ನೀವು ಕಾಳಜಿ ವಹಿಸಬೇಕು.
ಪರಿಹಾರ - ಲಲಿತ ಸಹಸ್ರನಾಮವನ್ನು ಪಠಿಸುವುದು ನಿಮಗೆ ಉತ್ತಮ.
ಮಕರ ರಾಶಿ
ಮಕರ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ದೇವ ಐದನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಮದುವೆ, ಸಹಭಾಗಿತ್ವದ ಏಳನೇ ಮನೆಗೆ ಗೋಚರಿಸುತ್ತದೆ. ಈ ಸಾಗಣೆಯ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಗಮನಾರ್ಹ ಸುಧಾರಣೆ ಕಂಡುಬರುತ್ತದೆ ಮತ್ತು ನಿಮ್ಮ ಸಂಬಂಧದಲ್ಲಿ ಪ್ರಣಯ ಮತ್ತು ಪ್ರೀತಿ ಉಳಿದಿರುತ್ತದೆ. ಈ ಸಮಯದಲ್ಲಿ ಈ ರಾಶಿಚಕ್ರದ ಉದ್ಯೋಗಪರರ ಜೀವನದಲ್ಲೂ ಅನುಕೂಲಕರ ಬದಲಾವಣೆಗಳು ಬರಲಿವೆ ಮತ್ತು ಬಡ್ತಿ ಪಡೆಯುವ ಸಾಧ್ಯತೆ ಇದೆ. ಆರ್ಥಿಕವಾಗಿ ನಿಮ್ಮ ಜೀವನದಲ್ಲಿ ಸ್ಥಿರತೆ ಇರುತ್ತದೆ ಮತ್ತು ಇತ್ತೀಚಿನ ಮಾಡಲಾದ ಹೂಡಿಕೆಗಳಿಂದ ನೀವು ಲಾಭ ಪಡೆಯಬಹುದು. ವಿದ್ಯಾರ್ಥಿಗಳು ಈ ಸಮಯದಲ್ಲಿ ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಏಕೆಂದ್ರೆ ಒತ್ತಡ ಮತ್ತು ಭ್ರಮೆ ಈ ಸಮಯದಲ್ಲಿ ವಿಧ್ಯಾರ್ಥಿಗಳನ್ನು ತೊಂದರೆಗೊಳಿಸಬಹುದು. ಈ ಸಮಯದಲ್ಲಿ ನೀವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಆಸೆಪಡಬಹುದು. ಇದಲ್ಲದೆ ಕಲೆ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಈ ರಾಶಿಚಕ್ರದ ಸ್ಥಳೀಯರಿಗೂ ಈ ಸಮಯದಲ್ಲಿ ಲಾಭ ಸಿಗುವ ಸಾಧ್ಯತೆ ಇದೆ. ಏಕೆಂದರೆ ನಿಮ್ಮ ಸೃಜನಶೀಲ ಸಾಮರ್ಥ್ಯವನ್ನು ಪ್ರಶಂಸಿಸಲಾಗುತ್ತದೆ. ಈ ರಾಶಿಚಕ್ರದ ಒಬ್ಬಂಟಿಯಾಗಿರುವವರು ಅಂತಿಮವಾಗಿ ತಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಬಹುದು. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮನ್ನು ಸಕ್ರಿಯವಾಗಿ ಮತ್ತು ಆರೋಗ್ಯವಾಗಿಡಲು ನಿಯಮಿತವಾಗಿ ನಡಿಗೆ ಅಥವಾ ವ್ಯಾಯಾಮ ಮಾಡಲು ನಿಮಗೆ ಸಲಹೆ ನೀಡಲಾಗಿದೆ.
ಪರಿಹಾರ - ಕಡಿಮೆ ವಯಸ್ಸಿನ ಹುಡುಗಿಯರಿಗೆ ಉಡುಗೊರೆ ನೀಡಿ ಅಥವಾ ಶಿಕ್ಷಣದಲ್ಲಿ ಸಹಾಯ ಮಾಡಿ, ಇದಲ್ಲದೆ ಬಡ ಹುಡುಗಿಯರ ಮದುವೆ ಮಾಡಿಸುವುದು ಸಹ ನಿಮಗೆ ಅನುಕೂಲಕರವಾಗಿರುತ್ತದೆ.
ಕುಂಭ ರಾಶಿ
ಕುಂಭ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ನಾಲ್ಕನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಮಯದಲ್ಲಿ ವಿರೋಧಿಗಳು, ಸಾಲ ಮತ್ತು ಶತ್ರುಗಳ ಆರನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ಬಹಳಷ್ಟು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ಕೆಲವು ಹೊಸ ಅವಕಾಶಗಳು ನಿಮ್ಮ ಜೀವನದಲ್ಲಿ ಬರಬಹುದು. ನಿಮ್ಮ ಸಂಪರ್ಕಗಳ ಮೂಲಕ ಅನೇಕ ಸ್ವತಂತ್ರ ಕೆಲಸಗಳನ್ನು ಮಾಡುತ್ತಿರಬೇಕು. ಈ ಕಾರಣದಿಂದಾಗಿ ನೀವು ಕಾರ್ಯನಿರತರಾಗಿರುತ್ತೀರಿ. ವಿವಾಹಿತ ಜನರು ತಮ್ಮ ದಾಂಪತ್ಯ ಜೀವನದಲ್ಲಿ ಸ್ಥಿರತೆಯನ್ನು ಹೊಂದಿರುತ್ತಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾದರೆ, ಬುದ್ಧಿವಂತಿಕೆಯೊಂದಿಗೆ ಅದನ್ನು ಪರಿಹರಿಸಲು ಪ್ರಯತ್ನಿಸಿ. ಪ್ರೀತಿಯಲ್ಲಿರುವ ಜನರಿಗೆ ಈ ಸಮಯ ಉತ್ತಮವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಜಗಳ ಹೆಚ್ಚಾಗಬಹುದು ಮತ್ತು ಮನೆಯಲ್ಲಿ ಒತ್ತಡದ ಕಾರಣದಿಂದಾಗಿ ನೀವು ಅಸಮಾಧಾನವನ್ನು ಅನುಭವಿಸಬಹುದು. ಆರ್ಥಿಕ ಭಾಗದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ಆದ್ದರಿಂದ ಅನಗತ್ಯ ಖರ್ಚುಗಳ ಮೇಲೆ ನಿಗಾ ಇರಿಸಿ ಮತ್ತು ಹಣಕಾಸು ಸಂಗ್ರಹಿಸಲು ಉತ್ತಮ ಬಜೆಟ್ ತಯಾರಿಸಿ. ಆರೋಗ್ಯವಾಗಿರಲು ಈ ಸಮಯದಲ್ಲಿ ಸಾಹಸ ಮತ್ತು ಕಠಿಣ ಕ್ರೀಡಾಕೂಟಗಳಲ್ಲಿ ಭಾಗವಹಿಸಿ.
ಪರಿಹಾರ - ಶುಕ್ರವಾರ ಹಾಲಿನ ದಾನ ಮಾಡುವುದು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
ಮೀನಾ ರಾಶಿ
ಮೀನಾ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಮೂರನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಪ್ರೀತಿ, ಪ್ರಣಯ, ಮಕ್ಕಳು ಮತ್ತು ಶಿಕ್ಷಣದ ಐದನೇ ಮನೆಗೆ ಸಾಗಲಿದೆ. ಈ ಸಮಯ ಮೀನಾ ರಾಶಿಚಕ್ರದ ಸ್ಥಳೀಯರಿಗೆ ಅನುಕೂಲಕರವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ಲಾಭ ಗಳಿಸುವಲ್ಲಿ ಯಶಸ್ವಿಯಾಗುಆರೇ. ಈ ಸಮಯ ವಿದ್ಯಾರ್ಥಿಗಳಿಗೂ ಅನುಕೂಲಕರವಾಗಿರುತ್ತದೆ. ಏಕೆಂದರೆ ನಿಮ್ಮ ಅಧ್ಯಯನದತ್ತ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ಎಲ್ಲಾ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವಿರಿ. ಈ ರಾಶಿಚಕ್ರದ ಜನರು ತಮ್ಮ ಕಲಾತ್ಮಕ ಸಾಮರ್ಥ್ಯಗಳನ್ನು ಸುಧಾರಿಸಲು ಉತ್ಸುಕರಾಗಿರುತ್ತಾರೆ. ಪ್ರೀತಿಯಲ್ಲಿರುವ ಈ ರಾಶಿಚಕ್ರದ ಜನರು ತಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯುತ್ತಾರೆ. ಈ ಸಮಯದಲ್ಲಿ ವಿವಾಹಿತರ ಜೀವನವೂ ಸುಗಮವಾಗಿ ಸಾಗಲಿದೆ. ಆರ್ಥಿಕವಾಗಿ ಈ ಸಮಯದಲ್ಲಿ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ ಮತ್ತು ನಿಮ್ಮ ಖರ್ಚು ಸಹ ನಿಯಂತ್ರಿತ ರೀತಿಯಲ್ಲಿರುತ್ತದೆ. ಉದ್ಯೋಗಪರರು ಸಮಯಕ್ಕೆ ಅನುಗುಣವಾಗಿ ತಮ್ಮ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಮಾಡಬೇಕಾಗುತ್ತದೆ. ಇದರೊಂದಿಗೆ ಅವರು ಹೊಸ ಪೀಳಿಗೆಯೊಂದಿಗೆ ಹಂತ ಹಂತವಾಗಿ ಹೋಗಬಹುದು ಕುಟುಂಬದಲ್ಲಿ ಸಂಪತ್ತಿಗೆ ಸಂಬಂಧಿಸಿದ ವಿವಾದ ಸಾಧ್ಯ. ಅಥವಾ ಕೆಲವು ಕುಟುಂಬ ಸದಸ್ಯರ ಹಠಮಾರಿ ವರ್ತನೆಯಿಂದ ನೀವು ಅಸಮಾಧಾನಗೊಳ್ಳಬಹುದು. ಆರೋಗ್ಯವನ್ನು ಸುಧಾರಿಸಲು ನೀವು ಆಲ್ಕೋಹಾಲ್ ಮತ್ತು ಸಿಗರೇಟ್ ನಿಂದ ದೂರವಿರಬೇಕು ಮತ್ತು ಅಗತ್ಯವಿದ್ದರೆ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ.
ಪರಿಹಾರ - ಸಕಾರಾತ್ಮಕ ಫಲಿತಾಂಶಗಳಿಗಾಗಿ ಶುಕ್ರವಾರ ಬಿಳಿ ಶ್ರೀಗಂಧದ ತಿಲಕವನ್ನು ಹಚ್ಚಿಸಿ.