ಮಿಥುನ ರಾಶಿಯಲ್ಲಿ ಶುಕ್ರ ಸಂಚಾರ ( 28th May 2021 )
ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನನ್ನು ಸ್ತ್ರೀ ಗ್ರಹ ಎಂದು ಕರೆಯಲಾಗುತ್ತದೆ. ಅಂತೆಯೇ ಅದನ್ನು ಸೌಂದರ್ಯ, ಐಷಾರಾಮಿ, ಪ್ರೇಮಿ ಮತ್ತು ಪ್ರಣಯದ ಅಂಶವೆಂದು ಕರೆಯಾಲಗುತ್ತದೆ. ಶುಕ್ರವು ಹಣ, ಮೌಲ್ಯಗಳು, ಸಂಗೀತ, ಸೌಂದರ್ಯ, ಮನರಂಜನೆ, ಸಂಬಂಧ,ಶಕ್ತಿ, ಪ್ರೀತಿ ಸಂಬಂಧದ ಭಾವನೆ, ಜೀವನ ಸಂಗಾತಿ, ತಾಯಿಯ ಪ್ರೀತಿ, ಸೃಜನಶೀಲ, ವಿವಾಹ, ಸಂಬಂಧ, ಕಲೆ, ಸಮರ್ಪಣೆ, ಮಾಧ್ಯಮ, ಫ್ಯಾಷನ್, ಪೇಂಟಿಂಗ್, ಇತ್ಯಾದಿಗಳ ಬಗ್ಗೆ ಈ ಗ್ರಹದ ಮೂಲಕ ತಿಳಿಯುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಚಂದ್ರ ದೇವ ವೃಷಭ ಮತ್ತು ತುಲಾ ರಾಶಿಯ ಅಧಿಪತಿ. ಶುಕ್ರವಾರದಂದು ಶುಕ್ರ ಗ್ರಹದ ಹೆಸರಿಡಲಾಗಿದೆ.ಸಂಬಂಧಗಳು, ಮದುವೆ ಮತ್ತು ಮಕ್ಕಳ ಜನನದ ಸಮಯದಲ್ಲಿ ಶುಕ್ರ ಗ್ರಹವು ಪ್ರಮುಖ ಪಾತ್ರವಹಿಸುತ್ತದೆ. ಜಾತಕದಲ್ಲಿ ಬಲವಾದ ಶುಕ್ರವು ಜೀವನದಲ್ಲಿ ನಿಮಗೆ ಎಲ್ಲಾ ಐಷಾರಾಮಿ ಮತ್ತು ಸಂತೋಷವನ್ನು ಒದಗಿಸುತ್ತದೆ ಮತ್ತು ದುರ್ಬಲ ಶುಕ್ರವು ಅವುಗಳಿಗಾಗಿ ನಿಮ್ಮನ್ನು ಕಷ್ಟಪಡುವಂತೆ ಮಾಡುತ್ತದೆ.
ಜೀವನದ ಪ್ರತಿಯೊಂದು ಸಮಸ್ಯೆಯ ಪರಿಹಾರಕ್ಕಾಗಿ ಪರಿಣಿತ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ
ಶುಕ್ರ ಗ್ರಹವು 28 ಮೇ 2021 ರಂದು ರಾತ್ರಿ 11:44 ಗಂಟೆಗೆ ಮಿಥುನ ರಾಶಿಯಲ್ಲಿ ಗೋಚರಿಸುತ್ತದೆ ಮತ್ತು 22 ಜೂನ್, 2021 2 ಗಂಟೆ 7 ನಿಮಿಷದ ವರೆಗೆ ಇದೇ ರಾಶಿಯಲ್ಲಿರುತ್ತದೆ. ಇದರ ನಂತರ ಶುಕ್ರನ ಸಂಚಾರವು ಕರ್ಕ ರಾಶಿಯಲ್ಲಿ ಸಂಭವಿಸುತ್ತದೆ.
ನಡೆಯಿರಿ ಶುಕ್ರನ ಈ ಸಂಚಾರವು ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಏನು ಬೀರುತ್ತದೆ ಎಂದು ತಿಳಿಯೋಣ.
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ.
ಮೇಷ ರಾಶಿ
ಮೇಷ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಮೂರನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಮಿಥುನ ರಾಶಿಯಲ್ಲಿ ಸಂಚಾರದಿಂದಾಗಿ ನಿಮ್ಮ ಧೈರ್ಯ, ಸಹೋದರ - ಸಹೋದರಿ, ಅಲ್ಪ ಪ್ರವಾಸಗಳು ಇತ್ಯಾದಿಯ ಮೂರನೇ ಮನೆ ಸಕ್ರಿಯವಾಗಿರುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಧೈರ್ಯ ಹೆಚ್ಚಾಗುತ್ತದೆ ಮತ್ತುನೀವು ಯಾವ ಕೆಲಸ ಮಾಡುವಿರೋ ಅದರ ಮೆಚ್ಚುಗೆ ಪಡುವಿರಿ. ಈ ಸಂಚಾರದ ಸಮಯದಲ್ಲಿ ನಿಮ್ಮ ಧೈರ್ಯಕ್ಕೆ ಯಾವುದೇ ಮಿತಿಯಿಲ್ಲ, ಆದ್ದರಿಂದ ನೀವು ಬಹಳಷ್ಟು ಸಾಧಿಸುವಿರಿ. ಈ ಸಮಯದಲ್ಲಿ ಅನೇಕ ನಿರ್ಧಾರಗಳು ನಿಮ್ಮ ಪರವಾಗಿರುತ್ತವೆ. ನೀವು ನಿಮ್ಮ ಎಲ್ಲಾ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆ ಮತ್ತು ಧೈರ್ಯದಿಂದ ತೆಗೆದುಕೊಳ್ಳುವಿರಿ. ಶುಕ್ರ ನಿಮ್ಮ ಎರಡನೇ ಮನೆಯ ಅಧಿಪತಿ ಆದ್ದರಿಂದ ಆರ್ಥಿಕವಾಗಿ ನೀವು ಐಷಾರಾಮಿಯ ಉತ್ಪನ್ನಗಳಿಗೆ ಕೆಲವು ಅನಗತ್ಯ ವೆಚ್ಚಗಳನ್ನು ಮಾಡಬಹುದು. ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮ ಪ್ರಗತಿಯಾಗುತ್ತದೆ, ಉದ್ಯೋಗದಲ್ಲಿ ಬದಲಾವಣೆಯ ಕೆಲವು ಉತ್ತಮ ಪ್ರಸ್ತಾಪಗಳನ್ನು ನೀವು ಪಡೆಯಬಹುದು. ನಟನೆ, ನಟಗಾರಿಕೆ, ಕಲೆ ಇತ್ಯಾದಿಗಳಲ್ಲಿ ವೃತ್ತಿ ಜೀವನವನ್ನು ಹೊಂದಿರುವ ಜನರು ತಮ್ಮ ವೃತ್ತಿಜೀವನದಲ್ಲಿ ಹೆಚ್ಚಳವನ್ನು ಕಾಣುತ್ತಾರೆ. ಶುಕ್ರ ಏಳನೇ ಮನೆಯ ಅಧಿಪತಿ, ಈ ಕಾರಣದಿಂದಾಗಿ ನಿಮ್ಮ ಜೀವನ ಸಂಗಾತಿ ಅಥವಾ ಪ್ರೇಮಿಯೊಂದಿಗಿನ ನಿಮ್ಮ ಸಂಬಂಧವು ಬಹಳ ಶಾಂತಿಯುತ ಮತ್ತು ಸಂತೋಷವಾಗಿರುತ್ತದೆ. ಒಂಬತ್ತನೇ ಮನೆಯ ಮೇಲೆ ಶುಕ್ರನ ದೃಷ್ಟಿಯು ನಿಮ್ಮ ವಿದೇಶ ಪ್ರವಾಸಕ್ಕೆ ಕಾರಣವಾಗಬಹುದು. ಆರೋಗ್ಯದ ದೃಷ್ಟಿಯಿಂದ ಈ ಸಮಯ ನಿಮಗೆ ಅನುಕೂಲಕರವಾಗಿರುತ್ತದೆ ಮತ್ತು ನೀವು ಫಿಟ್ ಮತ್ತು ಆರೋಗ್ಯವನ್ನು ಅನುಭವಿಸುವಿರಿ. ಈ ಸಮಯದಲ್ಲಿ ತಣ್ಣನೆಯ ಆಹಾರವನ್ನು ಸೇವಿಸುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ. ಇಲ್ಲದಿದ್ದರೆ ನೀವು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಬಹುದು
ಪರಿಹಾರ - ನೀವು ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ಯಾವಾಗಲೂ ನಿಮ್ಮ ತಂದೆಯಿಂದ ಸಲಹೆಯನ್ನು ಪಡೆದುಕೊಳ್ಳುವುದು ನಿಮಗೆ ಉತ್ತಮ.
ವೃಷಭ ರಾಶಿ
ವೃಷಭ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ದೇವ ಮೊದಲನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಸಂವಹನ, ಹಣಕಾಸು ಮತ್ತು ಕುಟುಂಬದ ಎರಡನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ನಿಮಗೆ ಹಣಕಾಸಿನ ಲಾಭವಾಗುತ್ತದೆ, ಸಂಬಂಧಿಕರೊಂದಿಗೆ ಭೇಟಿ ಮಾಡುವಿರಿ ಮತ್ತು ನಿಮ್ಮ ಕುಟುಂಬದಲ್ಲಿ ಯಾವುದೇ ಶುಭ ಕಾರ್ಯ ಸಂಭವಿಸಬಹುದು. ವಾಹನ, ಭೂಮಿ ಮತ್ತು ಮನೆಯಂತಹ ಸಂಪತ್ತಿನಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ. ವೃತ್ತಿಪರವಾಗಿ, ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಭಾರೀ ಹಣಕಾಸಿನ ವೆಚ್ಚಗಳೊಂದಿಗೆ ಕೆಲಸ ಮಾಡುವ ಯಾವುದೇ ಅಪಾಯಕಾರಿ ಹೂಡಿಕೆಗಳು ಅಥವಾ ಚಟುವಟಿಕೆಗಳನ್ನು ತಪ್ಪಿಸಿ. ಪಶುಸಂಗೋಪನೆ, ಮಣ್ಣಿನ ಕೆಲಸ ಇತ್ಯಾದಿಗಳಿಗೆ ಸಂಬಂಧಿಸಿದ ಜನರು ತುಂಬಾ ಲಾಭವನ್ನು ಪಡೆಯುತ್ತಾರೆ. ಶೇರ್ ಮಾರ್ಕೆಟ್ ನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುವ ಈ ರಾಶಿಚಕ್ರದ ಜನರು ಸಹ ಪ್ರಯೋಜನಗಳನ್ನು ಪಡೆಯುತ್ತಾರೆ. ಆದರೆ ದೊಡ್ಡ ಪ್ರಮಾಣದಲ್ಲಿ ಅಲ್ಲ. ಈ ಸಮಯದಲ್ಲಿ ಸಂಬಂಧ ಮತ್ತು ದಾಂಪತ್ಯ ಜೀವನವು ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಮಕ್ಕಳ ಸಂತೋಷವನ್ನು ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ಈ ಸಂಚಾರದ ಸಮಯದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕಾಗುತ್ತದೆ. ಶುಕ್ರ ನಏಳನೇ ಮನೆಯ ಮೇಲೆ ದೃಷ್ಟಿಯು ನಿಮ್ಮ ಎಂಟನೇ ಮನೆಯಲ್ಲಿರುತ್ತದೆ ಆದ್ದರಿಂದ ಯಾವುದೇ ಅರೋಗ್ಯ ಸಮಸ್ಯೆಯಾದರೆ ವೈದ್ಯರನ್ನು ಸಂಪರ್ಕಿಸಿ.
ಪರಿಹಾರ - ಪ್ರತಿದಿನ ದೇವಸ್ಥಾನದಲ್ಲಿ ಕರ್ಪುರದ ದೀಪವನ್ನು ಬೆಳಗಿಸಿ ಮತ್ತು ಭಗವಂತ ಶುಕ್ರನ ಆಶೀರ್ವಾದವನ್ನು ಪಡೆದುಕೊಳ್ಳಿ.
ಮಿಥುನ ರಾಶಿ
ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಐದನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಆತ್ಮ, ವ್ಯಕ್ತಿತ್ವ, ಮೈಮನಸ್ಸು ಮತ್ತು ಅದೃಷ್ಟದ ಮೊದಲನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ಶುಕ್ರನ ಸಂಚಾರವು ನಿಮಗೆ ಅನುಕೂಲಕರವಾಗಿರುತ್ತದೆ. ಏಕೆಂದರೆ ಉದ್ಯೋಗದಲ್ಲಿ ನೀವು ಸರಿಯಾದ ಸ್ಥಾನವನ್ನು ಪಡೆಯುತ್ತೀರಿ ಮತ್ತು ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ. ಏಳನೇ ಮನೆಯ ಮೇಲೆ ಶುಕ್ರನ ದೃಷ್ಟಿಯ ಕಾರಣದಿಂದಾಗಿ ವೃತ್ತಿಪರ ಸ್ಥಳೀಯರು ಸಹ ವ್ಯಾಪಾರದಲ್ಲಿ ಪ್ರಗತಿ ಪಡೆಯುತ್ತಾರೆ. ಶುಕ್ರ ನಿಮ್ಮ ಐದನೇ ಮನೆಯ ಅಧಿಪತಿ, ಆದ್ದರಿಂದ ಈ ರಾಶಿಚಕ್ರದ ಇದ್ಯಾರ್ಥಿಗಳು ಶಿಕ್ಷಣದ ಕ್ಷೇತ್ರದಲ್ಲಿ ಅನುಕೂಲಕಲರ ಫಲಿತಾಂಶಗಳನ್ನು ಪಡೆಯುತ್ತಾರೆ ಮತ್ತು ಅಧ್ಯಯನದತ್ತ ಅವರ ಗಮನ ಉತ್ತಮವಾಗುತ್ತದೆ. ನೀವು ನಿಜವಾದ ಆತ್ಮ ಸಂಗಾತಿಯನ್ನು ಹುಡುಕುತ್ತಿದ್ದರೆ, ಈ ಮಧ್ಯೆ ನೀವು ಉತ್ತಮ ಸಂಬಂಧವನ್ನು ಪಡೆಯಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ ವಿವಾಹಿತ ಜನರು ತಮ್ಮ ಕುಟುಂಬವನ್ನು ಹೆಚ್ಚಿಸಲು ಮುಂದುವರಿಯಲು ಸೂಚಿಸಲಾಗಿದೆ. ನಿಮ್ಮ ಮಕ್ಕಳಿಗೆ ಕೆಲವು ಸಮಸ್ಯೆಗಳಿರಬಹುದು ಆದ್ದರಿಂದ ಅವರ ಬಗ್ಗೆ ಕಾಳಜಿ ವಹಿಸಿ. ಈ ರಾಶಿಚಕ್ರದ ಸ್ಥಳೀಯರು ಅಲರ್ಜಿಯ ಸಮಸ್ಯೆಯನ್ನು ಸಹ ಎದುರಿಸಬೇಕಾಗಬಹುದು. ಆದ್ದರಿಂದ ನಿಮಗೆ ಅಲರ್ಜಿ ಆಗುವಂತಹ ಯಾವುದನ್ನೂ ಮಾಡಬೇಡಿ. ಈ ಸಮಯದಲ್ಲಿ ಯಾವುದೇ ದೀರ್ಘಕಾಲದ ರೋಗವು ನಿಮ್ಮನ್ನು ಕಾಡುತ್ತದೆ.
ಪರಿಹಾರ - ಪ್ರತಿದಿನ ನಿಮ್ಮ ಭೋಜನದಲ್ಲಿ ಬೆಲ್ಲವನ್ನು ಸೇರಿಸಿ.
ಕರ್ಕ ರಾಶಿ
ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ದೇವ ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ಹಾನಿ, ವಿದೇಶಿ ಲಾಭ, ಬದಲಾವಣೆ ಮತ್ತು ಆಧ್ಯಾತ್ಮಿಕತೆಯ ಹನ್ನೆರಡನೇ ಮನೆಗೆ ಗೋಚರಿಸುತ್ತದೆ.ಈ ಸಮಯಾವಧಿಯಲ್ಲಿ, ಅನಿವಾರ್ಯವಲ್ಲದ ವಸ್ತುಗಳ ಮೇಲೆ ಖರ್ಚು ಮಾಡುವುದನ್ನು ತಪ್ಪಿಸಲು ಪ್ರಯತ್ನಿಸಿ ಮತ್ತು ಅಗತ್ಯವಿದ್ದರೆ ಸರಿಯಾದ ಪರಿಗಣೆಯ ನಂತರ ಮಾತ್ರ ಖರ್ಚು ಮಾಡಿ. ಯಾವುದೇ ಗೊಂದಲ ಇದ್ದರೆ, ನಿಮ್ಮ ಮೇಲಧಿಕಾರಿಗಳ ಸಲಹೆ ಪಡೆಯಿರಿ. ಈ ಸಂಚಾರವು ನಿಮ್ಮ ಹಣಕಾಸಿನ ವ್ಯವಹಾರಗಳಿಗೆ ಸರಾಸರಿ ಎಂದು ಸಾಬೀತುಪಡಿಸುತ್ತದೆ. ನೀವು ಸ್ವಲ್ಪ ಸಮಯದವರೆಗೆ ನಿಮ್ಮ ಮನೆಯಿಂದ ದೂರ ಹೋಗಬೇಕಾಗಬಹುದು ಮತ್ತು ಅವರಿಂದ ದೂರವಿರುವುದರಿಂದ ಆಭಾಗಲಬ್ದ ವರ್ತನೆಯಿಂದ ನೀವು ಅಸಮಾಧಾನಗೊಳ್ಳಬಹುದು. ನಿಮ್ಮ ಸಂಬಂಧಿಕರೊಂದಿಗೆ ನೀವು ಕೆಲವು ವಿವಾದಗಳನ್ನು ಹೊಂದಿರಬಹುದು ಮತ್ತು ಇದು ದೀರ್ಘಕಾಲದ ವರೆಗೆ ಮುಂದುವರಿಯಬಹುದು. ವೃತ್ತಿಪರವಾಗಿ ಇದು ವ್ಯಾಪಾರಸ್ಥರಿಗೆ ಉತ್ತಮ ಸಮಯ, ವಿದೇಶಕ್ಕೆ ಸಂಬಂಧಿಸದ ವ್ಯಾಪಾರದಲ್ಲಿ ತೊಡಗಿರುವ ಜನರು ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಶುಕ್ರ ಗ್ರಹವು ನಿಮ್ಮ ನಾಲ್ಕನೇ ಮನೆಯ ಅಧಿಪತಿ ಆದ್ದರಿಂದ ಈ ಸಂಚಾರದ ಸಮಯದಲ್ಲಿ ನಿಮ್ಮ ಆರೋಗ್ಯವು ಹದಗೆಡಬಹುದು ಆದ್ದರಿಂದ ಈ ಸಮಯದಲ್ಲಿ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಲು ನಿಮಗೆ ಸೂಚಿಸಲಾಗಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಸರಿಯಾಗಿ ಕಾಳಜಿ ವಹಿಸಬೇಕು ಮತ್ತು ಭವಿಷ್ಯದಲ್ಲಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸದಿರಲು ಆರೋಗ್ಯದ ಬಗ್ಗೆ ಸಮಯಕ್ಕೆ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕು.
ಪರಿಹಾರ - ನೀಲಿ ಹೂವನ್ನು ತೆಗೆದುಕೊಂಡು ಅದನ್ನು ಮನೆಯಿಂದ ದೂರದಲ್ಲಿರುವ ಏಕಾಂತ ಸ್ಥಳದಲ್ಲಿ ಒತ್ತಿರಿ. ಇದರಿಂದಾಗಿ ನೀವು ಹೊಂದಿರುವ ಪ್ರತಿಯೊಂದು ಸಮಸ್ಯೆಯನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ.
ಸಿಂಹ ರಾಶಿ
ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಮೂರನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಮಹತ್ವಾಕಾಂಕ್ಷೆಗಳು, ಆಸೆಗಳು ಮತ್ತು ಹಿರಿಯ ಸಹೋದರ ಸಹೋದರಿಯರ ಹನ್ನೊಂದನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಮೊದಲನೇ ಹಂತವು ಸಾಕಷ್ಟು ಉತ್ತಮವಾಗಿರುತ್ತದೆ ಏಕೆಂದರೆ ನೀವು ನಿಮ್ಮ ಕಠಿಣ ಪರಿಶ್ರಮವನ್ನು ಮುಂದುವರಿಸುತ್ತೀರಿ. ಇದು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಕಠಿಣ ಪರಿಶ್ರಮ ಉತ್ತಮ ಫಲಿತಾಂಶಗಳನ್ನು ಸಹ ಸಮಯದಲ್ಲಿ ನೀವು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಎಲ್ಲಾ ವೈಫಲ್ಯಗಳನ್ನು ನೀವು ನಿವಾರಿಸಬಹುದು ಮತ್ತು ನಿಮ್ಮ ಎಲ್ಲಾ ಆಸೆಗಳನ್ನು ನೀವು ಪೂರ್ಣಗೊಳಿಸಬಹುದು. ಕೆಲಸದ ಬಗ್ಗೆ ನಿಮ್ಮ ಆಲೋಚನೆಗಳು ಬದಲುತ್ತಿರುತ್ತವೆ. ವೃತ್ತಿಪರವಾಗಿ ಈ ಅವಧಿಯು ನಿಮಗೆ ಅದ್ಬುತ ಫಲಿತಾಂಶಗಳನ್ನು ತರುತ್ತದೆ. ವ್ಯಾಪಾರಕ್ಕೆ ಸಂಬಂಧಿಸಿದ ಸಂಬಂಧಿಸಿದ ಅಲ್ಪ ಪ್ರಯಾಣಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗುತ್ತವೆ ಮತ್ತು ನಿಮ್ಮ ಕುಟುಂಬದೊಂದಿಗೆ ನೀವು ಯಾವುದೇ ಪ್ರವಾಸವನ್ನು ಯೋಜಿಸುತ್ತಿದ್ದರೆ, ಅದು ಸಹ ನಿಮಗೆ ಪ್ರಯೋಜನಕಾರಿಯಾಗಬಹುದು. ಸಾಧ್ಯತೆಗಳ ಐದನೇ ಮನೆಯ ಮೇಲೆ ಶುಕ್ರನ ದೃಷ್ಟಿ ಇರುತ್ತದೆ, ಇದರಿಂದಾಗಿ ಸಿಂಹ ರಾಶಿಚಕ್ರದ ಸ್ಥಳೀಯರು ಬೆಟ್ಟಿಂಗ್ ಮೂಲಕ ಲಾಭವನ್ನು ಪಡೆಯಬಹುದು . ಆದಾಗ್ಯೂ , ಇದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಈ ಸಮಯದಲ್ಲಿ ನಿಮಗೆ ಭಾರೀ ನಷ್ಟದ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಯಿಂದ ಈ ಅವಧಿಯು ನಿಮಗೆ ಅನುಕೂಲಕರವಾಗಿರುತ್ತದೆ, ಆದರೂ ಅಗತ್ಯವಿದ್ದಾಗ ಸರಿಯಾದ ತನಿಖೆ ಮಾಡಿಸಲು ಸಲಹೆ ನೀಡಲಾಗಿದೆ.
ಪರಿಹಾರ - ದೇವಸ್ಥಾನದಲ್ಲಿ ದೀಪವನ್ನು ಬೆಳಗಿಸಲು ಹತ್ತಿಯ ದಾನ ಮಾಡುವುದು ಉತ್ತಮ.
ಕನ್ಯಾ ರಾಶಿ
ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಎರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ವೃತ್ತಿಪರ ಜೀವನ, ತಂದೆ ಇತ್ಯಾದಿಯ ಹತ್ತನೇ ಮನೆಗೆ ಗೋಚರಿಸಲಿದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಯಶಸ್ಸು ಮತ್ತು ಖ್ಯಾತಿ ಪಡೆಯುತ್ತೀರಿ. ಮನರಂಜನೆ, ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ದೊಡ್ಡ ಯಶಸ್ಸು ಪಡೆಯಬಹುದು. ಯಾವುದೇ ಪ್ರೊಜೆಕ್ಟ್ ಮೂಲಕ ನೀವು ಯಶಸ್ವಿಯಾಗುವ ಉತ್ತಮ ಅವಕಾಶವನ್ನು ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಆಸೆಗಳು ಪೂರ್ಣಗೊಳ್ಳಬಹುದು. ಈ ಸಮಯದಲ್ಲಿ ತಂದೆಯೊಂದಿಗಿನ ನಿಮ್ಮ ಸಂಬಂಧವು ತುಂಬಾ ಉತ್ತಮವಾಗಿರುತ್ತದೆ. ನಿಮ್ಮ ಕುಟುಂಬದ ಸದಸ್ಯರು ಮತ್ತು ನಿಮ್ಮ ಜೀವನ ಸಂಗಾತಿ ನಿಮ್ಮೊಂದಿಗೆ ಸಂತೋಷ ಮತ್ತು ಆನಂದವನ್ನು ಅನುಭವಿಸುತ್ತಾರೆ ಮತ್ತು ಸಂಬಂಧದಲ್ಲಿ ನಿಖರತೆ ಉಂಟಾಗುತ್ತದೆ. ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಸಹ ಆಸಕ್ತಿ ವಹಿಸುತ್ತಾರೆ. ಆರ್ಥಿಕವಾಗಿ ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಸ್ಥಿರತೆ ಇರುತ್ತದೆ ಮತ್ತು ಈ ಅವಧಿಯಲ್ಲಿ ನೀವು ಐಷಾರಾಮಿಯ ಮೇಲೆ ಖರ್ಚು ಮಾಡಬಹುದು. ಈ ಸಮಯದಲ್ಲಿ ನೀವು ವಾಹನದ ಸಂತೋಷವನ್ನು ಪಡೆಯುವ ಸಾಧ್ಯತೆ ಇದೆ.
ಪರಿಹಾರ - ಬೆಳಿಗ್ಗೆ ಶುಕ್ರ ಬೀಜ ಮಂತ್ರವನ್ನು ಜಪಿಸಿ.
ತುಲಾ ರಾಶಿ
ತುಲಾ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಮೊದಲನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಮಿಥುನ ರಾಶಿಯಲ್ಲಿ ಗೋಚರಿಸುವ ಸಮಯದಲ್ಲಿ ನಿಮ್ಮ ಅದೃಷ್ಟ, ಧಾರ್ಮ , ದೂರಸ್ಥ ಪ್ರಯಾಣ, ಆಧ್ಯಾತ್ಮಿಕತೆ ಇತ್ಯಾದಿಯ ಒಂಬತ್ತನೇ ಮನೆಗೆ ಗೋಚರಿಸಲಿದೆ. ಈ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಏಕೆಂದರೆ ಅದೃಷ್ಟವು ಅವರನ್ನು ಮತ್ತು ಎತ್ತರಕ್ಕೆ ತಲುಪಲು ಸಹಾಯ ಮಾಡುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ದೂರಸ್ಥ ಪ್ರಯಾಣಗಳನ್ನು ಮಾಡಬಹುದು. ಉನ್ನತ ಜ್ಞಾನವನ್ನು ಪಡೆಯುವತ್ತ ನೀವು ಒಲವು ಹೊಂದಿರುತ್ತೀರಿ. ನೀವು ಯಾವುದೇ ಧಾರ್ಮಿಕ, ಆಧ್ಯಾತ್ಮಿಕ ಸ್ಥಾನಕ್ಕೆ ಹೋಗಬಹುದು. ವೃತ್ತಿಪರವಾಗಿ ಈ ಅವಧಿಯು ತುಲಾ ರಾಶಿಚಕ್ರದ ಸ್ಥಳೀಯರಿಗೆ ಅನುಕೂಲಕರವಾಗಿರುತ್ತದೆ ಏಕೆಂದರೆ ಅವರು ತಮ್ಮ ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ ಮತ್ತು ಅವರು ಹೊಸ ಒಪ್ಪಂದಗಳನ್ನು ಸಹ ಪಡೆಯಬಹುದು. ಶೇರ್ ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡಲು ಬಯಸುತ್ತಿರುವ ಎಲ್ಲರಿಗೂ ಈ ಸಂಚಾರವು ಅನುಕೂಲಕರವಾಗಿರುತ್ತದೆ. ಶುಕ್ರ ಸಂಚಾರದ ಸಮಯದಲ್ಲಿ ಮಾಡಲಾಗುವ ಪ್ರಯಾಣದ ಮೂಲಕ ನಿಮಗೆ ಲಾಭವಾಗುವ ಸಂಪೂರ್ಣ ಸಾಧ್ಯತೆ ಇದೆ. ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ನೀವು ಏನು ಮಾಡಿದರೂ ಅದರಲ್ಲಿ ನಿಮ್ಮ ಕುಟುಂಬವು ನಿಮ್ಮನ್ನು ಬೆಂಬಲಿಸುತ್ತದೆ. ನಿಮ್ಮ ಪ್ರೀತಿಯ ಜೀವನವು ಪ್ರಣಯಾಡಿದ ತುಂಬಿರುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಸುಂದರವಾದ ಕ್ಷಣಗಳನ್ನು ಕಳೆಯುವಿರಿ. ಈ ಅವಧಿಯು ವಿವಾಹಿತ ಜನರಿಗೂ ಅನುಕೂಲಕರವಾಗಿರುತ್ತದೆ. ಆರೋಗ್ಯದ ಬಗ್ಗೆ ನೀವು ಮುನ್ನೆಚ್ಚರಿಕೆ ಮತ್ತು ಕಾಳಜಿ ವಹಿಸಬೇಕು. ಏಕೆಂದರೆ ಈ ಸಮಯದಲ್ಲಿ ನೀವು ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮನ್ನು ಆರೋಗ್ಯವಾಗಿಡಲು ನಿಮ್ಮ ದಿನಚರಿಯಲ್ಲಿ ದೈಹಿಕ ವ್ಯಾಯಾಮ ಮತ್ತು ಧ್ಯಾನವನ್ನು ಸೇರಿಸಲು ನಿಮಗೆ ಸೂಚಿಸಲಾಗಿದೆ.
ಪರಿಹಾರ - ಶುಕ್ರವಾರ ‘ಓಂ ಶುಂ ಶುಕ್ರಾಯ ನಮ:’ ಮಂತ್ರವನ್ನು ಜಪಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಏಳನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಅಡೆತಡೆಗಳು, ಅಪಘಾತ, ವಿರೋಧಿಗಳು ಮತ್ತು ಶತ್ರುಗಳ ನಿಮ್ಮ ಎಂಟನೇ ಮನೆಗೆ ಗೋಚರಿಸಲಿದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ಮತ್ತು ಪ್ರೇಮಿಯೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ನಿಮಗೆ ಕಷ್ಟವಾಗಬಹುದು. ಆರ್ಥಿಕವಾಗಿ ಈ ಅವಧಿ ನಿಮಗೆ ಸರಾಸರಿ ಆಗಿರುತ್ತದೆ ಆದ್ದರಿಂದ ಅನಿರೀಕ್ಷಿತ ಲಾಭ ಅಥವಾ ತಪ್ಪಾದ ರೀತಿಯಲ್ಲಿ ಹಣಕಾಸು ಗಳಿಸುವುದನ್ನು ತಪ್ಪಿಸಿ. ಇಲ್ಲದಿದ್ದರೆ ನಿಮಗೆ ಭಾರೀ ನಷ್ಟವಾಗಬಹುದು. ಈ ಸಮಯದಲ್ಲಿ ಮನೆ ಅಥವಾ ವಾಹನವನ್ನು ಖರೀದಿಸಬಹುದು. ವೃತ್ತಿಪರ ಜೀವನದ ದೃಷ್ಟಿಯಿಂದ ಇದು ಪ್ರಗತಿಯ ಸಮಯ ಆದರೆ ಅದೇ ಸಮಯದಲ್ಲಿ ನೀವು ಕೆಲವು ಮಾನಸಿಕ ಚಿಂತೆಗಳನ್ನು ಹೊಂದಿರಬಹುದು. ಈ ಸಂಚಾರದ ಸಮಯದಲ್ಲಿ ನಿಮ್ಮ ಶತ್ರುಗಳು ಹೆಚ್ಚಾಗುತ್ತಾರೆ ಮತ್ತು ನಿಮ್ಮ ವಿರುದ್ಧ ಪಿತೂರಿಯನ್ನು ಮುಂದುವರಿಸುತ್ತಾರೆ ಆದರೆ ನೀವು ಅವರೆಲ್ಲರನ್ನೂ ಆಶ್ಚರ್ಯಗೊಳಿಸುವ ಮೂಲಕ ನಿಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ, ಈ ಸಮಯದಲ್ಲಿ ನಿಮ್ಮ ವೈವಾಹಿಕ ಸಂಬಂಧವು ಸಕಾರಾತ್ಮಕವಾಗಿರುತ್ತದೆ ಮತ್ತು ನಿಮ್ಮ ಸಂಗಾತಿಯ ಮೂಲಕ ನೀವು ಸರ್ಪ್ರೈಜ್ ಪಡೆಯಬಹುದು. ನಿಮ್ಮ ಜೀವನ ಸಂಗಾತಿ ನಿಮ್ಮ ಆರೋಗ್ಯದ ಬಗ್ಗೆ ಚಿಂತೆಗೆ ಒಳಗಾಗುತ್ತಾರೆ ಮತ್ತು ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಏಕೆಂದರೆ ಈ ಸಮಯದಲ್ಲಿ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಈ ಸಮಯದಲ್ಲಿ ಪ್ರೀತಿ ಮತ್ತು ವಿವಾಹಿತ ಜನರು ತಮ್ಮ ಸಂಗಾತಿಯೊಂದಿಗೆ ಸರಿಯಾದ ವರ್ತನೆ ಮತ್ತು ಸರಿಯಾದ ಪದಗಳನ್ನು ಬಳಸಬೇಕು. ಇಲ್ಲದಿದ್ದರೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು ಮತ್ತು ಸಮಯಕ್ಕೆ ಸರಿಯಾಗಿ ನಿಮ್ಮ ಸರಿಯಾದ ತನಿಖೆ ಮಾಡಬೇಕು.
ಪರಿಹಾರ - ನಿಮ್ಮ ಮನೆಯ ಹೊರಗೆ ನೆಲದಲ್ಲಿ ಸ್ವಲ್ಪ ಜೇನುತುಪ್ಪವನ್ನು ಇಡಬೇಕು, ಇದರಿಂದಾಗಿ ನೀವು ಶುಭ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಧನು ರಾಶಿ
ಧನು ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಆರನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಮದುವೆ ಮತ್ತು ಪಾಲುದಾರಿಕೆಯ ಏಳನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರವು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ತರಲಿದೆ. ಏಕೆಂದರೆ ವೃತ್ತಿಪರ ಜೀವನದಲ್ಲಿ ಮಾತನಾಡುವ ಮೂಲಕ ನೀವು ಅಪೇಕ್ಷಿತ ಒಪ್ಪಂದ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಕೆಲಸವನ್ನು ಮಿತಿಗೊಳಿಸಲು ಮತ್ತು ನಿಮ್ಮ ಆದ್ಯತೆಗಳತ್ತ ಗಮನಹರಿಸಲು ನಿಮಗೆ ಸಲಹೆ ನೀಡಲಾಗಿದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರು ಸಹ ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ ಮತ್ತು ಅವರು ತಮ್ಮ ವ್ಯಾಪಾರವನ್ನು ವಿಸ್ತರಿಸುವ ಬಗ್ಗೆಯೂ ಪರಿಗಣಿಸಬಹುದು. ಉದ್ಯೋಗಕ್ಕೆ ಸಂಬಂಧಿಸಿದ ಈ ರಾಶಿಚಕ್ರದ ಜನರು ಕೆಲಸದ ಸ್ಥಳದಲ್ಲಿ ಸ್ಥಿರ ಮತ್ತು ತೃಪ್ತಿಯನ್ನು ಅನುಭವಿಸುತ್ತಾರೆ. ಪ್ರೀತಿಯಲ್ಲಿರುವ ಈ ರಾಶಿಚಕ್ರದ ಜನರು ತಮ್ಮ ಸಂಬಂಧವನ್ನು ಮುಂದಿನ ಹಂತದವರೆಗೆ ಕೊಂಡೊಯ್ಯಬಹುದು.ವಿವಾಹಿತ ಜನರ ಜೀವನವು ಅನುಕೂಲಕರವಾಗಿರುತ್ತದೆ. ಆದಾಗ್ಯೂ, ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಅವರ ಅರೋಗ್ಯ ಹದಗೆಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ಆರ್ಥಿಕವಾಗಿ ನಿಮಗೆ ಉತ್ತಮ ಲಾಭವಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಸಮಯವು ಸಂತೋಷಕರವಾಗಿರುತ್ತದೆ. ಈ ಸಮಯದಲ್ಲಿ ನೀವು ಮತ್ತು ನಿಮ್ಮ ಜೀವನ ಸಂಗಾತಿ ಯೋಗ ಮತ್ತು ಧ್ಯಾನವನ್ನು ಆಶ್ರಯಿಸುವುದು ಉತ್ತಮ.
ಪರಿಹಾರ - ಯಾವುದೇ ಶುಕ್ರವಾರದಂದು ಸಾಯಂಕಾಲ ಹಿತ್ತಾಳೆ ಪಾತ್ರವನ್ನು ದಾನ ಮಾಡಿ
ಮಕರ ರಾಶಿ
ಮಕರ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಐದನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ಸ್ಪರ್ಧೆ, ರೋಗ, ಸಾಲ ಇತ್ಯಾದಿಯ ಆರನೇ ಮನೆಗೆ ಗೋಚರಿಸಲಿದೆ. ಈ ಸಮಯದಲ್ಲಿ ಮಕರ ರಾಶಿಚಕ್ರದ ಜನರು ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಸಣ್ಣ ಪುಟ್ಟ ವಿಷಯಗಳ ಬಗ್ಗೆ ನಿಮ್ಮ ವಿವಾದದ ಸಾಧ್ಯತೆಯೂ ಇದೆ. ಆದ್ದರಿಂದ ತಾಳ್ಮೆಯಿಂದಿರಲು ಸಲಹೆ ನೀಡಲಾಗಿದೆ. ಆರ್ಥಿಕವಾಗಿ ಈ ಸಂಚಾರದ ಸಮಯದಲ್ಲಿ ಜಾಗರೂಕರಾಗಿರಿ. ಯಾವುದೇ ಸಾಲ ತೆಗೆದುಕೊಳ್ಳುವುದು ಅಥವಾ ಸಾಲ ನೀಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಉದ್ಯೋಗ ವೃತ್ತಿಗೆ ಸಂಬಂಧಿಸಿದ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಅವರು ಮಾಡುತ್ತಿರುವ ಕೆಲಸವನ್ನು ಮುಂದುವರಿಸಬೇಕು, ಯಾವುದೇ ರೀತಿಯ ಹೊಸ ಕೆಲಸಕ್ಕೆ ಹೋಗಲು ಪ್ರಯತ್ನಿಸಬೇಡಿ. ಇಲ್ಲದಿದ್ದರೆ ತೊಂದರೆಕ್ಕೊಳಗಾಗಬಹುದು. ನೀವು ಊಹಿಸುವುದು ಅನಾನುಕೂಲವಾಗಬಹುದು. ರಿಯಲ್ ಎಸ್ಟೇಟ್ ಏಜೆಂಟರು ಈ ಸಮಯದಲ್ಲಿ ಉತ್ತಮ ಗ್ರಾಹಕರನ್ನು ಪಡೆಯಬಹುದು ಮತ್ತು ಬೆಳವಣಿಗೆಯನ್ನು ಪಡೆಯಬಹುದು. ಸಂಬಂಧಗಳ ದೃಷ್ಟಿಯಿಂದ ನೋಡಿದರೆ, ಈ ಸಮಯದಲ್ಲಿ ನಿಮ್ಮ ಪ್ರೀತಿಯ ಸಂಬಂಧವು ತುಂಬಾ ಶಕ್ತಿಯುತವಾಗಿ ಇರುವುದಿಲ್ಲ ಮತ್ತು ಯಾವುದೇ ಕಾರಣದಿಂದಾಗಿ ನಿಮ್ಮ ಸಂಬಂಧವು ಹದಗೆಡಬಹುದು. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲವಾಗಿಡಲು ಮತ್ತು ಆರೋಗ್ಯವಾಗಿಡಲು ಪ್ರಯತ್ನಿಸಿ
ಪರಿಹಾರ - ಪರಶುರಾಮ ಚರಿತ್ರವನ್ನು ಓದಿರಿ.
ಕುಂಭ ರಾಶಿ
ಕುಂಭ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ನಾಲ್ಕನೇ ಮತ್ತು ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಪ್ರೀತಿ, ಪ್ರಣಯ ಮತ್ತು ಮಕ್ಕಳ ಐದನೇ ಮನೆಗೆ ಗೋಚರಿಸುತ್ತದೆ. ಈಸಂಚಾರವು ನಿಮಗೆ ಪ್ರಯೋಜನಕಾರಿ ತರುತ್ತದೆ ಏಕೆಂದರೆ ನಿಮ್ಮ ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಸಾಮರಸ್ಯ ಉಳಿದಿರುತ್ತದೆ. ಇದು ನಿಮ್ಮನ್ನು ಸಂತೋಷಪಡಿಸುತ್ತದೆ. ಶುಕ್ರ ಸಂಚಾರದಿಂದ ನೀವು ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತೀರಿ. ಉದಾಹರಣೆಗೆ ನೀವು ವೃತ್ತಿ ಜೀವನದಲ್ಲೂ ಪ್ರಗತಿ ಮತ್ತು ಅಭಿವೃದ್ಧಿಯನ್ನು ಪಡೆಯುತ್ತೀರಿ. ಈ ಸಂಚಾರದ ಸಮಯದಲ್ಲಿ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳ ಏಕಾಗ್ರತೆಯಲ್ಲಿ ಸುಧಾರಣೆಯನ್ನು ಕಾಣಲಾಗುತ್ತದೆ. ಈ ಸಮಯದಲ್ಲಿ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಬಹುದು. ಏಕೆಂದರೆ ಈ ರಾಶಿಚಕ್ರದ ಸ್ಥಳೀಯರಿಗೆ ಪ್ರಯೋಜನವಾಗುತ್ತದೆ. ಹೂಡಿಕೆ ಮಾಡುವ ಮೊದಲು ಶೇರ್ ಮಾರ್ಕೆಟ್ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಲು ನಿಮಗೆ ಸಲಹೆ ನೀಡಲಾಗಿದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಪ್ರೀತಿ ಮತ್ತು ಪ್ರಣಯ ಹೆಚ್ಚಾಗುತ್ತದೆ ಮತ್ತು ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯ ಸಾಧ್ಯವಾಗುತ್ತದೆ. ಈ ರಾಶಿಚಕ್ರದ ವಿವಾಹಿತ ಜನರು ಮಕ್ಕಳಿಂದ ಸಂತೋಷಪಡುತ್ತಾರೆ. ಏಕೆಂದರೆ ಅವರು ನಿಮ್ಮ ಗೌರವವನ್ನು ಹೆಚಿಸುವಂತಹದನ್ನು ಮಾಡಬಹುದು. ಆರೋಗ್ಯದ ಬಗ್ಗೆ ಎಚ್ಚರದಿಂದಿರಿ, ಉತ್ತಮ ಡಯಟ್ ಪ್ಲಾನ್ ಮಾಡಿ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ. ಈ ಸಮಯದಲ್ಲಿ ನಿಮಗೆ ಅಜೀರ್ಣ ಸಮಸ್ಯೆಗಳಿರಬಹುದು.
ಪರಿಹಾರ - ಹಸುವಿಗೆ ಬೇಯಿಸಿದ ಆಲೂಗೆಡ್ಡೆಯನ್ನು ತಿನ್ನಿಸಿ.
ಮೀನಾ ರಾಶಿ
ಮೀನಾ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಮೂರನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ತಾಯಿ, ಐಷಾರಾಮಿ, ವಿಶ್ರಾಂತಿ ಇತ್ಯಾದಿಯ ನಾಲ್ಕನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ಭೂಮಿ, ಭವನ ಮತ್ತು ವಾಹನದ ಮೂಲಕ ನೀವು ಲಾಭವನ್ನು ಪಡೆಯುತ್ತೀರಿ. ವೃತ್ತಿಪರವಾಗಿ ಉದ್ಯೋಗ ಮತ್ತು ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರು ಖಂಡಿತವಾಗಿಯೂ ತಮ್ಮ ಕಠಿಣ ಪರಿಶ್ರಮದ ಫಲಿತಾಂಶವನ್ನು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ಇತರರೊಂದಿಗೆ ವ್ಯವಹರಿಸುವಾಗ ಬಹಳ ರಾಜತಾಂತ್ರಿಕವಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಕೆಲಸಕ್ಕೆ ಸಂಬಂಧಿಸಿದ ಪ್ರಯಾಣವು ಹೆಚ್ಚು ಪ್ರಯೋಜನಕಾರಿಯಾಗುವುದಿಲ್ಲ, ಆದ್ದರಿಂದ ಇದನ್ನು ತಪ್ಪಿಸುವುದು ಉತ್ತಮ. ಕೆಲಸದ ಸ್ಥಳದಲ್ಲಿ ನಿಮ್ಮ ಉತ್ತಮ ಸ್ಥಾನವನ್ನು ಕಾಪಾಡಿಕೊಳ್ಳಲು ನೀವು ಬಹಳ ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ನಿಮ್ಮ ಭಾವನಾತ್ಮಕ ಭಾಗವನ್ನು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಈ ರಾಶಿಚಕ್ರದ ಜನರು ತಮ್ಮ ಪ್ರೀತಿಯ ಸಂಬಂಧದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಕೆಲವು ವಿವಾದಗಳು ಉದ್ಭವಿಸಬಹುದು. ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ, ನೀವು ಮತ್ತು ವೈರಲ್ ಸೋಂಕಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ತಣ್ಣನೆಯ ಆಹಾರವನ್ನು ಸೇವಿಸುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ.
ಪರಿಹಾರ - ಮನೆಯ ದೇವಸ್ಥಾನದಲ್ಲಿ ಕರ್ಪುರದ ದೀಪವನ್ನು ಬೆಳಗಿಸಿ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025