ಕನ್ಯಾ ರಾಶಿಯಲ್ಲಿ ಸೂರ್ಯ ಸಂಚಾರ ( 17th September 2021 )

ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ ಮಾತು ಒಬ್ಬ ವ್ಯಕ್ತಿಯ ಜಾತಕದಲ್ಲಿ ಸೂರ್ಯ ದೇವ ಅನುಕೂಲಕರವಾಗಿದ್ದರೆ, ಆ ವ್ಯಕ್ತಿ ರಾಜಕೀಯ ಯಶಸ್ಸನ್ನು ಸಾಧಿಸಬಹುದು. ಸೂರ್ಯನನ್ನು ದೇವರಂತೆ ಪೂಜಿಸಲಾಗುತ್ತದೆ. ಏಕೆಂದರೆ ಎಲ್ಲಾ ಜೀವಿಗಳ ಅಸ್ತಿತ್ವವು ಸೂರ್ಯನ ಕಿರಣಗಳಿಂದ ಇರುವುದು. ಮತ್ತು ಇದು ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಂದ್ರ, ಗುರು ಮತ್ತು ಮಂಗಳ ಸೂರ್ಯನ ಸ್ನೇಹಿತರು. ಬುಧವು ಸೂರ್ಯನೊಂದಿಗೆ ತಟಸ್ಥ ಸಂಬಂಧವನ್ನು ಹಂಚಿಕೊಳ್ಳುತ್ತದೆ.

ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಗಳ ಪರಿಹಾರವನ್ನು ತಿಳಿಯಲು ಪರಿಣಿತ ಜ್ಯೋತಿಷಿಗಳೊಂದಿಗೆ ಚಾಟ್ ಮತ್ತು ಕರೆಯಲ್ಲಿ ಮಾತನಾಡಿ

ಸೂರ್ಯ ಗ್ರಹವು ಕನ್ಯಾ ರಾಶಿಯಲ್ಲಿ ಪ್ರವೇಶಿಸಿದರೆ, ಈ ಸಮಯದಲ್ಲಿ ಜನರು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ. ಸೂರ್ಯನು ಅಗ್ನಿಯ ಅಂಶದ ಉರಿಯುತ್ತಿರುವ ಸಿಂಹ ರಾಶಿಯಿಂದ ಭೂಮಿಯ ರಾಶಿಗೆ ಗೋಚರಿಸುತ್ತಾನೆ. ಆದ್ದರಿಂದ ಈ ಸಂಚಾರದ ಸಮಯದಲ್ಲಿ ಜನರ ದೃಷ್ಟಿಕೋನವು ಪ್ರಯೋಗಿಕವಾಗಿರುತ್ತದೆ. ಗಮನವನ್ನು ಕೇಂದ್ರೀಕರಿಸಲು ಮತ್ತು ನಿರ್ಧರಿಸಲು ಇದು ಉತ್ತಮ ಸಮಯ. ಇದು ಭೌತಿಕ ದೇಹ ಮತ್ತು ಗುಣಪಡಿಸುವಿಕೆಗೆ ಅನುಕೂಲಕರ ಸಮಯವಾಗಿರುತ್ತದೆ, ಪರೀಕ್ಷಿಸಲು ಈ ಸಮಯದಲ್ಲಿ ನೀವು ವೈದ್ಯರು ಅಥವಾ ದಂತ ವೈದ್ಯರನ್ನು ಭೇಟಿ ಮಾಡಬಹುದು. ನೀವು ಯಾವುದೇ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ, ಅದನ್ನು ಗುಣಪಡಿಸುವುದು ಸುಲಭ. ಈ ಸಮಯವು ಸಂಶೋಧನೆಗೆ ಉತ್ತಮವಾಗಿರುತ್ತದೆ, ಇದರೊಂದಿಗೆ ಅರೋಗ್ಯ, ಆಹಾರ ಮತ್ತು ವ್ಯಾಯಾಮವನ್ನು ನಿಮ್ಮ ದಿನಚರಿಯಲ್ಲಿ ಸೇರಿಸುವುದು ಉತ್ತಮವಾಗಿರುತ್ತದೆ

ಏನಾದರು ಹೊಸದನ್ನು ಕಲಿಯಲು ಇದು ಉತ್ತಮ ಸಮಯ. ನಿಮ್ಮ ಗುರಿಗಳನ್ನು ನಿರ್ಧರಿಸಿ ಮತ್ತು ನಿಮ್ಮ ಗುರಿಗಳನ್ನು ಸಾಧಿಸುವ ದಿಕ್ಕಿನಲ್ಲಿ ನೀವು ಪ್ರತಿದಿನ ಕೆಲಸ ಮಾಡುತ್ತೀರಿ ಖಚಿತಪಡಿಸಿಕೊಳ್ಳಿ. ಕನ್ಯಾ ರಾಶಿಯಲ್ಲಿರುವ ಸೂರ್ಯನು, ನಿಮ್ಮ ಜೀವನದಲ್ಲಿ ನೀವು ಯಾವ ವಿಷಯಗಳನ್ನು ಮಾಡಬೇಕು ಮತ್ತು ಯಾವ ವಿಷಯಗಳಿಂದ ದೂರವಿರಬೇಕು ಎಂಬುದನ್ನು ನಿರ್ಧರಿಸಲು ನಿಮಗೆ ಸಹಾಯ ಮಾಡುತ್ತಾನೆ. ನಿಮ್ಮ ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳಿ ಮತ್ತು ಜೀವನದಲ್ಲಿ ಎಲ್ಲವನ್ನೂ ಸಂಘಟಿಸಿ. ಸಂಚಾರದ ಸಮಯದಲ್ಲಿ ನೀವು ದಾನ-ಪುಣ್ಯ ಮತ್ತು ಧರ್ಮದ ಕಾರ್ಯಗಳನ್ನು ಮಾಡಬಹುದು ಅಥವಾ ಯಾವುದೇ ಸಂಸ್ಥೆಗೆ ಸೇರುವ ಮೂಲಕ ಸಮಾಜ ಕಲ್ಯಾಣದತ್ತ ಮುಂದುವರಿಯಬಹುದು

ಕನ್ಯಾ ರಾಶಿಯಲ್ಲಿ ಸೂರ್ಯ ಸಂಚಾರವು 17 ಸೆಪ್ಟೆಂಬರ್ 2021 ರಂದು ರಾತ್ರಿ 1:02 ಗಂಟೆಗೆ ಸಂಭವಿಸಲಿದೆ ಮತ್ತು 17 ಅಕ್ಟೋಬರ್, ಮಧ್ಯಾಹ್ನ 1:00 ಗಂಟೆಯ ವರೆಗೆ ಇದು ಕನ್ಯಾ ರಾಶಿಯಲ್ಲೇ ಇರುತ್ತದೆ ಮತ್ತು ಅದರ ನಂತರ ತುಲಾ ರಾಶಿಗೆ ಪ್ರವೇಶಿಸುತ್ತದೆ.

ನಡೆಯಿರಿ ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಈ ಸಂಚಾರವು ಹೇಗಿರುತ್ತದೆ ಎಂದು ತಿಳಿಯೋಣ.

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

मेष / ಮೇಷ

ರಾಶಿ ಮೇಷ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಆರನೇ ಮನೆಗೆ ಸಾಗಣಿಸುತ್ತದೆ. ಈ ಮನೆಯ ಮೂಲಕ ನಿಮ್ಮ ಸಾಲ, ಶತ್ರು ಮತ್ತು ರೋಗಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಉತ್ತಮವಾಗಿರುತ್ತದೆ. ಏಕೆಂದರೆ ನಿಮ್ಮ ಶತ್ರುಗಳನ್ನು ಜಯಿಸಲು ನಿಮಗೆ ಸಾಧ್ಯವಾಗುತ್ತದೆ ಮತ್ತು ನಿಮ್ಮ ಕೆಲಸಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಕೆಲಸದ ಸ್ಥಳದಲ್ಲಿ ವಿಷಯಗಳು ತುಂಬಾ ಉತ್ತಮವಾಗಿರುತ್ತವೆ. ಯಾವುದೇ ರೀತಿಯ ಸಮಸ್ಯೆಯನ್ನು ಹೊಂದಿದ್ದರೆ, ಈ ಸಮಯದಲ್ಲಿ ಅದನ್ನು ಪರಿಹರಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಸಹ ಈ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ, ನೀವು ನಿರಂತರವಾಗಿ ಕೆಲಸದತ್ತ ಗಮನ ಹರಿಸಬೇಕಾಗುತ್ತದೆ. ಆರ್ಥಿಕವಾಗಿ ಈ ರಾಶಿಚಕ್ರದ ವ್ಯಾಪಾರಸ್ಥರು ವ್ಯವಹಾರವನ್ನು ವಿಸ್ತರಿಸಲು ಸಾಲ ಅಥವಾ ಲೋನ್ ಗಾಗಿ ಅರ್ಜಿ ಸಲ್ಲಿಸಬಹುದು. ಆದಾಗ್ಯೂ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೀವು ಚಿಂತನಶೀಲವಾಗಿ ಯೋಚಿಸಬೇಕು.

ಸಂಬಂಧಗಳ ಬಗ್ಗೆ ಮಾತನಾಡಿದರೆ, ಈ ಸಾಚಾರವು ನಿಮಗೆ ತುಂಬಾ ಉತ್ತಮವೆಂದು ಹೇಳಲಾಗುವುದಿಲ್ಲ. ಅಹಂ ಸಂಘರ್ಷದಿಂದಾಗಿ ಸಂಬಂಧಗಳಲ್ಲಿ ಅಂತರ ಉಂಟಾಗಬಹುದು. ಈ ರಾಶಿಚಕ್ರದ ವಿವಾಹಿತರು ದಾಂಪತ್ಯ ಜೀವನದಲ್ಲಿ ಅನುಕೂಲತೆಯನ್ನು ಕಾಪಾಡಿಕೊಳ್ಲಲು ಪ್ರಯತ್ನಿಸಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದ ಜನರು ಈ ಸಮಯದಲ್ಲಿ ತಮ್ಮ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಈ ಸಂಚಾರದ ಸಮಯದಲ್ಲಿ ನೀವು ಜೀವನದ ಬಹುತೇಕ ಪ್ರತಿಯೊಂದು ಭಾಗದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಕಾಣುವಿರಿ.

ಪರಿಹಾರ - ಪ್ರತಿದಿನ ಸೂರ್ಯ ದೇವರಿಗೆ ನೀರು ಅರ್ಪಿಸಿ.

वृषभ / ವೃಷಭ ರಾಶಿ

ವೃಷಭ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ನಾಲ್ಕನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಪ್ರೀತಿ, ಪ್ರಣಯ, ಮಕ್ಕಳು, ಭಾವನೆಗಳು ಇತ್ಯಾದಿಗಳ ಐದನೇ ಮನೆಗೆ ಗೋಚರಿಸುತ್ತಾರೆ. ಈ ಸಮಯದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಸಂಭವಿಸುವ ಸಾಧ್ಯತೆ ಇದೆ ಮತ್ತು ಇದು ನಿಮಗೆ ಹೆಚ್ಚು ಅನುಕೂಲಕರ ಸಮಯವಾಗಿರುವುದಿಲ್ಲ. ಈ ಸಂಚಾರದ ಸಮಯದಲ್ಲಿ ನೀವು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಕೆಲಸದ ಸ್ಥಳದಲ್ಲಿ ಕೆಲವು ವಿಷಯಗಳ ಬಗ್ಗೆ ನಿಮ್ಮ ಮೇಲಧಿಕಾರಿಗಳೊಂದಿಗೆ ನೀವು ವಿವಾದಕ್ಕೆ ಒಳಗಾಗಬಹುದು ಮತ್ತು ಮೇಲಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಒತ್ತಡದಿಂದಿರಬಹುದು. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಜನರೊಂದಿಗೆ ವರ್ತಿಸುವಾಗ ನೀವು ಹೆಚ್ಚು ಜಾಗರೂಕರಾಗಿರಬೇಕು. ಸೌಹಾರ್ದಯುತ ಸಂಬಂಧವನ್ನು ಉಳಿಸಿಕೊಳ್ಳಲು ನೀವು ನಿರಂತರವಾಗಿ ಪ್ರಯತ್ನಿಸಬೇಕು ಮತ್ತು ಯಾರೊಂದಿಗಾದರೂ ಮುಖಾಮುಖಿಯಾಗುವುದನ್ನು ತಪ್ಪಿಸಬೇಕು ಮತ್ತು ಹಸ್ತಕ್ಷೇಪವನ್ನು ತಪ್ಪಿಸಬೇಕು.

ದಾಂಪತ್ಯ ಜೀವನವನ್ನು ನೋಡಿದರೆ, ಜೀವನ ಸಂಗಾತಿಯೊಂದಿಗೆ ಕೆಲವು ಸಮಸ್ಯೆಗಳಾಗಬಹುದು ಮತ್ತು ಈ ಸಂಚಾರದ ಸಮಯದಲ್ಲಿ ನಿಮ್ಮ ಮಕ್ಕಳು ಸಹ ಕೆಲವು ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಜೀವನ ಸಂಗಾತಿಯೊಂದಿಗೆ ಕೆಲವು ತಪ್ಪು ಗ್ರಹಿಕೆಗಳು ಉದ್ಭವಿಸಬಹುದು. ಆದ್ದರಿಂದ ಈ ಸಮಯದಲ್ಲಿ ಯಾವುದೇ ರೀತಿಯ ತಪ್ಪುಗ್ರಹಿಕೆಗಳನ್ನು ತಪ್ಪಿಸಿ, ಇಲದಿದ್ದರೆ ಇದು ಸಂಬಂಧಕ್ಕೆ ಕೆಟ್ಟದಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಸಾಮಾಜಿಕ ಪರಿಸ್ಥಿತಿಯಲ್ಲಿ ಅಡೆತಡೆ ಉಂಟಾಗುವ ಸಾಧ್ಯತೆ ಇದೆ ಮತ್ತು ಸಮಾಜದಲ್ಲಿ ನೀವು ಗೌರವವನ್ನು ಕಳೆದುಕೊಳ್ಳಬಹುದು. ಇದು ನಿಮ್ಮ ಮಾನಸಿಕ ಶಾಂತಿಯನ್ನು ಭಂಗಗೊಳಿಸಬಹುದು. ಆರೋಗ್ಯದ ಬಗ್ಗೆ ಮಾತನಾಡಿದರೆ, ವೈರಲ್ ಸೋಂಕಿನಿಂದ ನಿಮ್ಮನ್ನು ತಪ್ಪಿಸಲು ನೀವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ಪರಿಹಾರ - ಆದಿತ್ಯ ಹೃದಯ ಸ್ತೋತ್ರಂ ಅನ್ನು ಪ್ರತಿದಿನ ಪಠಿಸುವುದು ನಿಮಗೆ ಉತ್ತಮ.

मिथुन / ಮಿಥುನ ರಾಶಿ

ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಮೂರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ತಾಯಿ, ವಿಶ್ರಾಂತಿ ಮತ್ತು ಐಷಾರಾಮಿಯ ನಾಲ್ಕನೇ ಮಎಂಗೆ ಗೋಚರಿಸುತ್ತದೆ. ಈ ಸಂಚಾರವು ಯಾವುದೇ ಕೌಟುಂಬಿಕ ಸಮಸ್ಯೆಯನ್ನು ಪರಿಹರಿಸಲು ಮತ್ತು ಅಗತ್ಯವಿದ್ದರೆ ಮುಕ್ತ ಖರ್ಚು ಮಾಡಲು ಉತ್ತಮ ಸಮಯವನ್ನು ಒದಗಿಸುತ್ತದೆ. ಶಿಕ್ಷಣದಲ್ಲಿ ಯಾವುದೇ ಅಡೆತಡೆಯನ್ನು ಹೊಂದಿದ್ದರೆ ಮತ್ತು ನೀವು ಪುನಃ ಅಧ್ಯಯನ ಮಾಡಲು ಬಯಸುತ್ತಿದ್ದರೆ, ಈ ಸಂಚಾರವು ನಿಯಂಗೆ ಒಳ್ಳೆಯ ಸುದ್ದಿಯನ್ನು ತರಬಹುದು. ಈ ಸಂಚಾರದ ಸಮಯದಲ್ಲಿ ನಿಮ್ಮ ಆಪ್ತರೊಂದಿಗೆ ಯಾವುದೇ ರೀತಿಯ ಸಂಘರ್ಷವನ್ನು ನೀವು ತಪ್ಪಿಸಬೇಕು. ಈ ಸಮಯದಲ್ಲಿ ತಿಳುವಳಿಕೆಯ ಕೊರತೆಯಿಂದಾಗಿ ಸಂಬಂಧಗಳು ಹದಗೆಡಬಹುದು ಆದ್ದರಿಂದ ಜಾಗರೂಕರಾಗಿರಿ. ನಿಮ್ಮ ಜೀವನ ಸಂಗಾತಿಯೊಂದಿಗೆ ಯಾವುದೇ ವಿವಾದ ಅಥವಾ ಜಗಳವನ್ನು ತಪ್ಪಿಸಲು, ಮಾತನಾಡುವ ಮೊದಲು ಯೋಚಿಸುವುದು ಸೂಕ್ತ. ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಕೆಲಸದ ಸ್ಥಳದಲ್ಲಿ ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗಬಹುದು, ಈ ಕಾರಣದಿಂದಾಗಿ ನೀವು ಅಸಮಾಧಾನಗೊಳ್ಳಬಹುದು. ಈ ರಾಶಿಚಕ್ರದ ಜನರು ಈ ಸಂಚಾರದ ಸಮಯದಲ್ಲಿ ಸಂಪತ್ತು ಖರೀದಿಸುವಾಗ ತುಂಬಾ ಜಾಗರೂಕರಾಗಿರಬೇಕು. ನಿಮ್ಮೊಂದಿಗೆ ಮೋಸವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ನಿಮಗೆ ಕಷ್ಟವಾಗಬಹುದು. ಆದ್ದರಿಂದ ಯಾವುದೇ ಕೆಟ್ಟ ಪರಿಸ್ಥಿತಿಯನ್ನು ತಪ್ಪಿಸಲು, ಯಾವುದೇ ಕಾಗದಪತ್ರದ ಕೆಲಸವನ್ನು ಮಾಡುವ ಮೊದಲು ಯಾವುದೇ ವಿಶ್ವಾಸಾರ್ಹ ವ್ಯಕ್ತಿಯ ಸಲಹೆಯನ್ನು ಪಡೆದುಕೊಳ್ಳಿ. ಆಪ್ತರೊಂದಿಗೆ ಮಾತನಾಡುವಾಗ ಧ್ವನಿಯನ್ನು ನಿಯಂತ್ರಿಸಿ ಇಲ್ಲದಿದ್ದರೆ ನೀವು ತೊಂದರೆಕ್ಕೊಳಗಾಗಬಹುದು. ಆರೋಗ್ಯದ ದೃಷ್ಟಿಯಿಂದ ಇದು ನಿಮಗೆ ಅನುಕೂಲಕರ ಸಮಯವಾಗಿರುತ್ತದೆ ಮತ್ತು ಹೆಚ್ಚಿನ ಸಮಯದಲ್ಲಿ ನೀವು ಉತ್ತಮ ಆರೋಗ್ಯವನ್ನು ಆನಂದಿಸುವಿರಿ.

ಪರಿಹಾರ - ಪ್ರತಿದಿನ ವಿಷ್ಣು ದೇವರನ್ನು ಪೂಜಿಸಿ.


ರಾಜ ಯೋಗ ರಿಪೋರ್ಟ್ ಮೂಲಕ ನಿಮ್ಮ ಅದೃಷ್ಟ ಯಾವಾಗ ತೆರೆಯುತ್ತದೆ ಮತ್ತು ನಿಮ್ಮ ಜೀವನದಲ್ಲಿ ಯಾವಾಗ ಸಂತೋಷ ಬರುತ್ತದೆ ಎಂಬುದನ್ನು ತಿಳಿಯಿರಿ

कर्क / ಕರ್ಕ ರಾಶಿ

ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಎರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಧೈರ್ಯ- ಪರಾಕ್ರಮ, ಸಹೋದರ - ಸಹೋದರಿಯರು ಮತ್ತು ಅಲ್ಪ ಪ್ರಯಾಣಗಳ ಮೂರನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಸಂವಹನ ಕೌಶಲ್ಯ ಮತ್ತು ಇತರರನ್ನು ಮನವರಿಕೆ ಮಾಡುವ ಸಾಮರ್ಥ್ಯವು ಹೊಸ ಸಂಪರ್ಕಗಳನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ಪದಗಳ ಮೂಲಕ ಇತರರನ್ನು ಮೆಚ್ಚಿಸಲು ನಿಮಗೆ ಸಾಧ್ಯವಾಗುತ್ತದೆ. ಭವಿಷ್ಯವನ್ನು ಉತ್ತಮಗೊಳಿಸುವ ದಿಕ್ಕಿನಲ್ಲಿ ಕೆಲಸ ಮಾಡುವ ಮೂಲಕ ನೀವು ಉತ್ತಮ ಅವಕಾಶಗಳನ್ನು ಹೊಂದಿರುತ್ತೀರಿ. ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳು ಈ ಸಮಯದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು.

ಆರ್ಥಿಕ ಭಾಗದ ಮೇಲೆ ದೃಷ್ಟಿ ಹಾಕಿದರೆ, ಈ ರಾಶಿಚಕ್ರದ ಕೆಲವು ಜನರು ಈ ಸಮಯದಲ್ಲಿ ವಾಹನ ಅಥವಾ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಬಹುದು. ಆದಾಗ್ಯೂ, ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ನೀವು ಕೆಲಸಕ್ಕೆ ಸಂಬಂಧಿಸಿದ ಯಾವುದೇ ಪ್ರಯಾಣಕ್ಕೆ ಹೋಗಬೇಕಾಗಬಹುದು. ಇದರಿಂದ ನೀವು ಉತ್ತಮ ಹಣಕಾಸಿನ ಲಾಭವವನ್ನು ಪಡೆಯುವ ಸಾಧ್ಯತೆ ಇದೆ. ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ದಾಂಪತ್ಯ ಜೀವನಕ್ಕೆ ಇದು ಉತ್ತಮ ಸಮಯ ಮತ್ತು ಅಲ್ಪ ಆದರೆ ಆಹ್ಲಾದಕರ ಕುಟುಂಬ ಪ್ರವಾಸಕ್ಕೆ ಹೋಗಬಹುದು. ವಿವಾಹಿತ ಜನರು ತಮ್ಮ ವಿಅಹಿತ ಜೀವನದಲ್ಲಿ ಸಂತೋಷವನ್ನು ಪಡೆಯುತ್ತಾರೆ ಮತ್ತು ಸ್ನೇಹಿತರಿಂದ ಸಹಾಯವನ್ನು ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ನಿಮ್ಮ ಅರೋಗ್ಯ ಉತ್ತಮವಾಗಿರುತ್ತದೆ ಮತ್ತು ಮಾನಸಿಕ ಶಾಂತಿ ಉಳಿದಿರುತ್ತದೆ. ಕರ್ಕ ರಾಶಿಚರ್ಕದ ಸ್ಥಳೀಯರಿಗೆ ಇದು ಉತ್ತಮ ಸಮಯ. ಈ ಸಮಯದಲ್ಲಿ ಐಷಾರಾಮಿ, ಹಣ, ಹೆಸರು ಮತ್ತು ಖ್ಯಾತಿಯನ್ನು ಆನಂದಿಸಬಹುದು.

ಪರಿಹಾರ - “ಓಂ ಘೃಣಿ ಸೂರ್ಯಾಯ ನಮಃ” ಮಂತ್ರವನ್ನು ಜಪಿಸಲು ನಿಮಗೆ ಸಲಹೆ ನೀಡಲಾಗಿದೆ.


ವೃತ್ತಿ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ನಿವಾರಿಸಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್

सिंह / ಸಿಂಹ ರಾಶಿ

ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಮೊದಲನೇ ಮನೆಯ ಅಧಿಅಪ್ಟಿ ಮತ್ತು ಕುಟುಂಬ, ಹಣ ಮತ್ತು ಧ್ವನಿಯ ನಿಮ್ಮ ಎರಡನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ಹಠಾತ್ ಹಣಕಾಸಿನ ಲಾಭವನ್ನು ಪಡೆಯುತ್ತೀರಿ. ನೀವು ಬೆಟ್ಟಿಂಗ್ ಮತ್ತು ಅಪಾಯಕಾರಿ ಕೆಲಸದಿಂದಲೂ ಹಣ ಗಳಿಸಬಹುದು. ವಿಶೇಷವಾಗಿ ಜಾತಕದಲ್ಲಿ ಸೂರ್ಯ ದೇವ ಅನುಕೂಲಕರ ಸ್ಥಿತಿಯಲ್ಲಿರುವ ಸಿಂಹ ರಾಶಿಚಕ್ರದ ಜನರು ಈ ಸಮಯದಲ್ಲಿ ಯಶಸ್ಸು ಪಡೆಯುತ್ತಾರೆ. ನಿಮ್ಮ ಸಂವಹನ ಕೌಶಲ್ಯಗಳು ಸುಧಾರಿಸುವ ಸಾಧ್ಯತೆ ಇದೆ ಮತ್ತು ವಿದೇಶದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದರೆ, ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಏಕೆಂದರೆ ಈ ಸಮಯದಲ್ಲಿ ಭೂಮಿಯಿಂದ ವಿದೇಶಿ ಲಾಭವನ್ನು ಪಡೆಯುವ ಅವಕಾಶವಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಮತ್ತು ಗೌರವ ಸುಧಾರಿಸುವ ಸಾಧ್ಯತೆ ಇದೆ. ನಿಮ್ಮ ಮೇಲಧಿಕಾರಿಗಳೊಂದಿಗೆ ಯಾವುದೇ ರೀತಿಯ ವಾದ - ವಿವಾದದಲ್ಲಿ ನಿಮನ್ನು ತೊಡಗಿಸಿಕೊಳ್ಳದಂತೆ ನಿಮಗೆ ಸಲಹೆ ನೀಡಲಾಗಿದೆ ಮತ್ತು ಹೂಡಿಕೆ ಮಾಡುವಾಗ ನಿರ್ಧಾರಗಳನ್ನು ತುರಾತುರಿಯಲ್ಲಿ ತೆಗೆದುಕೊಳ್ಳಬೇಡಿ.

ಆರ್ಥಿಕವಾಗಿ, ನೀವು ಹೆಚ್ಚು ಹಣವನ್ನು ಹುಡುಕುವಿರಿ ಮತ್ತು ಇದರೊಂದಿಗೆ ನೀವು ದೀರ್ಘಾವಧಿಯ ಹೂಡಿಕೆಯನ್ನು ಮಾಡುತ್ತೀರಿ. ಕುಟುಂಬ ಜೀವನದ ಮೇಲೆ ದೃಷ್ಟಿ ಹಾಕಿದರೆ, ಈ ಸಂಚಾರವು ಇತರರೊಂದಿಗಿನ ಸಂಬಂಧಗಳಿಗೆ ತಟಸ್ಥವಾಗಿದೆ. ಏಕೆಂದರೆ ಈ ಸಮಯದಲ್ಲಿ ಕೆಲವು ವಾದಗಳು ಮತ್ತು ಸಂಘರ್ಷಗಳು ಉದ್ಭವಿಸುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಂಚಾರದ ಸಮಯದಲ್ಲಿ ನಿಮ್ಮ ಅರೋಗ್ಯ ಹದಗೆಡಬಹುದು ಮತ್ತು ಸಣ್ಣ ಅಪಘಾತಗಳಾಗುವ ಸಾಧ್ಯತೆ ಇದೆ. ನಿಮ್ಮ ಜ್ಞಾನವನ್ನು ಹೆಚ್ಚಿಸಲು ಮತ್ತು ಆಳವಾಗಿ ಕಲಿಯಲ್ಲಿ ಇದು ಉತ್ತಮ ಸಮಯ.

ಪರಿಹಾರ - ಪ್ರತಿದಿನ ಸೂರ್ಯೋದಯದಲ್ಲಿ ನಿಯಮಿತವಾಗಿ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ

कन्या / ಕನ್ಯಾ ರಾಶಿ

ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಆತ್ಮ ಮತ್ತು ವ್ಯಕ್ತಿತ್ವದ ನಿಮ್ಮ ಮೊದಲನೇ ಮನೆಗೆ ಸಾಗುತ್ತದೆ. ಈ ಸಮಯದಲ್ಲಿ ಹಣಕಾಸಿನ ವಿಷಯದಲ್ಲಿ ಸೂರ್ಯ ಸಂಚಾರವು ನಿಮಗೆ ಉತ್ತಮವಾಗಿರುವುದಿಲ್ಲ. ಈ ಸಂಚಾರದ ಸಮಯದಲ್ಲಿ ನೀವು ಲಾಭವನ್ನು ಗಳಿಸುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಈ ರಾಶಿಚಕ್ರದ ವ್ಯಾಪಾರಸ್ಥರ ಬಗ್ಗೆ ಮಾತನಾಡಿದರೆ, ನೀವು ಸಹ ಪ್ರಯೋಜನಕಾರಿ ಒಪ್ಪಂದಗಳನ್ನು ಪಡೆಯುವಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಉದ್ಯೋಗದಲ್ಲಿರುವ ಈ ರಾಶಿಚಕ್ರದ ಜನರು ದೀರ್ಘಕಾಲದ ವರೆಗೆ ಪ್ರೋತ್ಸಾಹವನ್ನು ಪಡೆಯದಿದ್ದಕ್ಕಾಗಿ ಕಿರಿಕಿರಿಯನ್ನು ಅನುಭವಿಸುತ್ತಾರೆ.

ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮ ಜಾತಕದಲ್ಲಿ ಸೂರ್ಯ ದೇವ ಅನುಕೂಲಕರ ಸ್ಥಿತಿಯಲ್ಲಿದ್ದರೆ, ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಜಾತಕದಲ್ಲಿ ಇದು ಅನುಕೂಲಕರವಾಗಿಲ್ಲದಿದ್ದರೆ, ಸಂಗಾತಿಯೊಂದಿಗೆ ವಿವಾದ ಮಾತು ಸಂಘರ್ಷವಾಗಬಹುದು. ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿರುವ ಕಾರಣದಿಂದಾಗಿ, ನಿಮ್ಮ ಕುಟುಂಬ ಜೀವನಕ್ಕೆ ಸಮಯ ನೀಡುವಲ್ಲಿ ನೀವು ಅಸಮರ್ಥರಾಗಬಹುದು. ಇದು ನಿಮ್ಮ ಸಂಬಂಧಗಳನ್ನು ಬದಲಿಸುವ ಸಾಧ್ಯತೆ ಇದೆ. ನಿಮ್ಮ ಆಪ್ತರೊಂದಿಗೆ ಸಂವಹನವನ್ನು ನಿರ್ವಹಿಸಲು ನಿಮಗೆ ಸಲಹೆ ನೀಡಲಾಗಿದೆ. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಕನ್ಯಾ ರಾಶಿಚರದ ಸ್ಥಳೀಯರ ಆರೋಗ್ಯಕ್ಕೆ ಇದು ಉತ್ತಮ ಸಮಯವಲ್ಲ ಏಕೆಂದರೆ, ನೀವು ಸಣ್ಣ ಪುಟ್ಟ ರೋಗಗಳು ಅಥವಾ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಪರಿಹಾರ - ಭಾನುವಾರ ಬೆಲ್ಲದ ದಾನ ಮಾಡುವುದು ನಿಮಗೆ ಶುಭವಾಗಿರುತ್ತದೆ.

ರಾಜ ಯೋಗ ರಿಪೋರ್ಟ್ ಮೂಲಕ ನಿಮ್ಮ ಅದೃಷ್ಟ ಮತ್ತು ಜೀವನದಲ್ಲಿ ಸಂತೋಷ ಯಾವಾಗ ಬರುತ್ತದೆ ಎಂದು ತಿಳಿಯಿರಿ

तुला / ತುಲಾ ರಾಶಿ

ತುಲಾ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ವಿದೇಶಿ ಲಾಭ, ಆಧ್ಯಾತ್ಮಿಕತೆ ಮತ್ತು ವೆಚ್ಚದ ಮನೆಗೆ ಗೋಚರಿಸುತ್ತದೆ. ಈ ಸಮಯವು ನಿಮಗೆ ಸರಾಸರಿ ಎಂದು ಸಾಬೀತುಪಡಿಸುತ್ತದೆ. ಈ ಸಮಯವು ದೀರ್ಘಾವಧಿಯ ಯೋಜನೆಗಳನ್ನು ಪೂರ್ಣಗೊಳಿಸಲು ನಿಮಗೆ ಅವಕಾಶವನ್ನು ನೀಡುತ್ತದೆ. ಈ ಸಮಯದಲ್ಲಿ ಸಮಾಜದಿಂದ ನೀವು ಸ್ವಲ್ಪ ಅಂತರವನ್ನು ಹೊಂದಬಹುದು. ಈ ಸಂಚಾರವು ನಿಮ್ಮ ಶಿಕ್ಷಣದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಅಧ್ಯಯನದತ್ತ ಕೇಂದ್ರೀಕರಿಸುವಲ್ಲಿ ನೀವು ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು. ವೃತ್ತಿಪರವಾಗಿ ಈ ಸಮಯದಲ್ಲಿ ಹೂಡಿಕೆ ಮಾಡುವುದು ಮತ್ತು ವ್ಯಾಪಾರ ಪಾಲುದಾರರೊಂದಿಗೆ ನೀವು ಜಾಗರೂಕರಾಗಿರಬೇಕು. ಈ ಸಂಚಾರವು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು ಮತ್ತು ನಿಮ್ಮ ಸುತ್ತಲಿನ ಜನರು ಮತ್ತು ನಿಮ್ಮ ನಿಮ್ಮ ನಿಕಟ ಜನರೊಂದಿಗೆ ವಾದವಾಗಬಹುದು. ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದವರಿಗೆ ಅಥವಾ ವಿದೇಶದಲ್ಲಿ ಯಾವುದೇ ಅವಕಾಶವನ್ನು ಕಾಯುತ್ತಿದ್ದವರಿಗೆ ಸಕಾರಾತ್ಮಕ ಫಲಿತಾಂಶಗಳು ಸಿಗುತ್ತವೆ. ಆರ್ಥಿಕವಾಗಿ ನಿಮ್ಮ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ಇದು ನಿಮ್ಮ ಆದಾಯಕ್ಕಿಂತ ಹೆಚ್ಚಾಗಿರುವವುದಿಲ್ಲ. ಲಾಭದ ನಿರೀಕ್ಷೆ ಕಡಿಮೆ ಇರುವಂತಹ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ

ವ್ಯಾಪಾರಕ್ಕೆ ಸಂಬಂಧಿಸಿದ ಪ್ರವಾಸಗಳನ್ನು ಈ ರಾಶಿಚಕ್ರದ ಜನರು ತಪ್ಪಿಸಬೇಕು ಏಕೆಂದರೆ ಇದರಿಂದ ಲಾಭವನ್ನು ಪಡೆಯುವ ಸಾಧ್ಯತೆ ತುಂಬಾ ಕಡಿಮೆಯಿದೆ. ಸಂಬಂಧಗಳ ದೃಷ್ಟಿಕೋನದಿಂದ ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ನಿಮಗೆ ಕಷ್ಟವಾಗಬಹುದು. ಮತ್ತು ಇದು ನಿಮಗೆ ಮಾನಸಿಕ ಚಿಂತೆಯನ್ನು ನೀಡಬಹುದು. ವಿವಾಹಿತ ಜನರು ಈ ಸಮಯದಲ್ಲಿ ತಮ್ಮ ವೈವಾಹಿಕ ಜೀವನದಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯಬಹುದು. ಆರನೇ ಮನೆಯ ಮೇಲೆ ಸೂರ್ಯನ ದೃಷ್ಟಿಯಿಂದಾಗಿ ಲೋನ್ ಗಾಗಿ ನೀವು ಅರ್ಜಿ ಸಲ್ಲಿಸಬಹುದು ಮತ್ತು ಈ ಸಮಯದಲ್ಲಿ ಅದನ್ನು ಅನುಮೋದಿಸುವ ಸಾಧ್ಯತೆಯೂ ಇದೆ. ಅರೋಗ್ಯ ಜೀವನದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ ಆದ್ದರಿಂದ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ಗಾಯ, ಅಪಘಾತ ಇತ್ಯಾದಿ ಸಾಮಾನ್ಯ ಸಮಸ್ಯೆಗಳಾಗುವ ಸಾಧ್ಯತೆ ಇದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಬಗ್ಗೆ ಸರಿಯಾದ ಕಾಳಜಿ ವಹಿಸಲು ನಿಮಗೆ ಸಲಹೆ ನೀಡಲಾಗಿದೆ.

ಪರಿಹಾರ - ಸೂರ್ಯ ದೇವರ ಅನುಗ್ರಹವನ್ನು ಪಡೆಯಲು ನಿಮ್ಮ ತಂದೆ ಅಥವಾ ತಂದೆಯಂತಹ ಜನರ ಸೇವೆ ಮಾಡಿ.

वृश्चिक / ವೃಶ್ಚಿಕ ರಾಶಿ

ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಆದಾಯ, ಲಾಭ ಮತ್ತು ಆಸೆಗಳ ಹನ್ನೊಂದನೇ ಮನೆಗೆ ಸಾಗುತ್ತದೆ. ಸೂರ್ಯನ ಈ ಸಂಚಾರವು ನಿಮಗೆ ಅನುಕೂಲಕರವಾಗಿದೆ ಎಂದು ಸಾಬೀತುಪಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಸಾಮಾಜಿಕ ವಲಯ ಬಲವಾಗುತ್ತದೆ ಇದರಿಂದಾಗಿ ಕೆಲಸದ ಸ್ಥಳದಲ್ಲೂ ನೀವು ಲಾಭವನ್ನು ಪಡೆಯುತ್ತೀರಿ. ಈ ಸಂಚಾರದ ಸಮಯದಲ್ಲಿ ನೀವು ಯಶಸ್ಸು ಮತ್ತು ಖ್ಯಾತಿಯನ್ನು ಪಡೆಯುತ್ತೀರಿ ಮತ್ತು ಸರಿಯಾದ ಮಾಧ್ಯಮದಿಂದ ಹಣವನ್ನು ಗಳಿಸುತ್ತೀರಿ. ಈ ರಾಶಿಚಕ್ರದ ವ್ಯಾಪಾರಸ್ಥರು ಈ ಸಮಯದಲ್ಲಿ ತಮ್ಮ ವ್ಯವಹಾರವನ್ನು ಉತ್ತಮವಾಗಿ ನಡೆಸಲು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿ ಈ ರಾಶಿಚಕ್ರದ ಜನರು ಮೇಲಧಿಕಾರಿಗಳಿಂದ ಪ್ರಶಂಸೆ ಪಡೆಯುತ್ತಾರೆ. ಈ ರಾಶಿಚಕ್ರದ ಜನರು ಈ ಸಂಚಾರದ ಸಮಯದಲ್ಲಿ ತಮ್ಮ ಭವಿಷ್ಯದ ಬಗ್ಗೆ ಸಕಾರಾತ್ಮಕವಾಗಿರುತ್ತಾರೆ. ಆಂತರಿಕವಾಗಿ ಈ ರಾಶಿಚಕ್ರದ ಜನರು ಆಶಾವಾದಿ ಮತ್ತು ಧನಾತ್ಮಕವಾಗಿರುತ್ತಾರೆ, ಇದರಿಂದಾಗಿ ಪ್ರತಿಯೊಂದು ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಸಂಬಂಧಗಳ ಬಗ್ಗೆ ಮಾತನಾಡಿದರೆ, ನಿಮ್ಮ ಕುಟುಂಬ, ಮಕ್ಲು ಮತ್ತು ಸ್ನೇಹಿತರೊಂದಿಗೆ ನೀವು ಸೌಹಾರ್ದಯುತ ಸಂಬಂಧವನ್ನು ಹೊಂದಿರುತ್ತೀರಿ. ವಿವಾಹಿತ ಜನರು ಈ ಸಂಚಾರದ ಸಮಯದಲ್ಲಿ ಸಂತೋಷವಾಗಿರುತ್ತಾರೆ. ಈ ಸಮಯದಲ್ಲಿ ನಿಮ್ಮ ಅರೋಗ್ಯ ಉತ್ತಮವಾಗಿರುತ್ತದೆ ಮತ್ತು ಯಾವುದೇ ರೀತಿಯ ದೊಡ್ಡ ರೋಗವು ನಿಮ್ಮನ್ನು ತೊಂದರೆಗೊಳಿಸುವುದಿಲ್ಲ.

ಪರಿಹಾರ - ಭಾನುವಾರ ಅಗತ್ಯವಿರುವ ಜನರಿಗೆ ಅಗತ್ಯ ವಸ್ತುಗಳ ದಾನ ಮಾಡಿ.


ವೃತ್ತಿ ಜೀವನಕ್ಕೆ ಸಂಬಂಧಿಸಿದ ಪ್ರತಿ ಸಮಸ್ಯೆಯನ್ನು ಪರಿಹರಿಸಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್

धनु / ಧನು ರಾಶಿ

ಧನು ರಾಶಿಚಕ್ರದ ಜನರಿಗೆ ಸೂರ್ಯ ದೇವ ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ವೃತ್ತಿಪರ, ಹೆಸರು ಮತ್ತು ಖ್ಯಾತಿಯ ಹತ್ತನೇ ಮನೆಗೆ ಇದು ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮ ಮತ್ತು ನಿಮ್ಮ ಮೂಲಕ ಮಾಡಲಾದ ಪ್ರಯತ್ನಗಳಿಗೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಉದ್ಯೋಗದ ವಿಷಯದಲ್ಲಿ ನೀವು ಅಭಿವೃದ್ಧಿ ಮತ್ತು ಪ್ರಗತಿಯನ್ನು ಪಡೆಯುವ ಸಾಧ್ಯತೆ ಇದೆ ಮತ್ತು ಉನ್ನತ ಸ್ಥಾನದ ಸಾಧ್ಯತೆಯೂ ಇದೆ. ಆಥಿಕ ಜೀವನದ ಬಗ್ಗೆ ಮಾತನಾಡಿದರೆ, ಹೂಡಿಕೆಯಿಂದ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ ಮತ್ತು ನಿಮ್ಮ ಖರ್ಚುಗಳು ಸಹ ನಿಯಂತ್ರಣದಲ್ಲಿರುತ್ತವೆ. ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮ ಆಪ್ತರೊಂದಿಗೆ ನೀವು ಉತ್ತಮ ಗುಣಮಟ್ಟದ ಸಮಯವನ್ನು ಕಳೆಯಬಹುದು. ನಿಮ್ಮ ಕೌಶಲ್ಯವನ್ನು ಹೆಚ್ಚಿಸಲು ಹೊಸ ವಿಷಯಗಳನ್ನು ಕಲಿಯಲು ಮತ್ತು ತಿಳಿಯಲು ಪ್ರಯತ್ನಿಸುವಿರಿ. ಇದು ಭವಿಷ್ಯದಲ್ಲಿ ನಿಮಗೆ ಸಹಾಯ ಮಾಡುತ್ತದೆ. ಅರೋಗ್ಯ ಜೀವನದ ಮೇಲೆ ದೃಷ್ಟಿ ಹಾಕಿದರೆ, ದೀರ್ಘಾಕಾಲದಿಂದ ಯಾವುದೇ ರೋಗದಿಂದ ಬಳಲುತ್ತಿದ್ದ ಈ ರಾಶಿಚಕ್ರದ ಜನರು ಈ ಸಮಯದಲ್ಲಿ ವಿಶ್ರಾಂತಿ ಪಡೆಯಬಹುದು. ಈ ರಾಶಿಚಕ್ರದ ಉಳಿದ ಸ್ಥಳೀಯರ ಅರೋಗ್ಯ ಜೀವನವು ಉತ್ತಮವಾಗಿರುತ್ತದೆ.

ಪರಿಹಾರ - ಭಾನುವಾರದಂದು ನಿಮ್ಮ ಬೆರಳಿನಲ್ಲಿ ಮಾಣಿಕ್ಯ ರತ್ನವನ್ನು ಧರಿಸಿ

मकर / ಮಕರ ರಾಶಿ

ಮಕರ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಅದೃಷ್ಟ, ಧರ್ಮ, ಅಧ್ಯಾತ್ಮದ ಒಂಬತ್ತನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ಈ ರಾಶಿಚಕ್ರದ ಜನರು ತುಂಬಾ ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ನೀವು ಯಾವುದೇ ವಿಶ್ವಾಸಾರ್ಹ ವ್ಯಕ್ತಿಯ ಮೂಲಕ ಮೋಸ ಹೋಗಬಹುದು. ಆದ್ದರಿಂದ ಎಚ್ಚರದಿಂದಿರಿ. ಈ ಸಂಚಾರದ ಸಮಯದಲ್ಲಿ ನೀವು ಮೋಸಹೋಗುವ ಸಾಧ್ಯತೆ ತುಂಬಾ ಹೆಚ್ಚು. ಈ ಸಮಯದಲ್ಲಿ ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ಯಾವುದೇ ರಹಸ್ಯವನ್ನು ಹಂಚಿಕೊಳ್ಳಬೇಡಿ. ಏಕೆಂದರೆ ಕೆಲವು ಜನರು ಈ ಮಾಹಿತಿಯನ್ನು ನಿಮ್ಮ ವಿರುದ್ಧವಾಗಿ ಬಳಸಬಹುದು. ನೀವು ವ್ಯಾಪಾರ ಅಥವಾ ಉದ್ಯೋಗವನ್ನು ಬದಲಾಯಿಸಲು ಯೋಜಿಸುತ್ತಿದ್ದರೆ, ಈ ಸಮಯಕ್ಕೆ ಈ ಆಲೋಚನೆಯನ್ನು ನೀವು ಮುಂದೂಡಬೇಕು. ಈ ಅವಧಿಯಲ್ಲಿ ಶಾಂತವಾಗಿರಿ ಮತ್ತು ನಿಮ್ಮ ಸ್ಥಿತಿಯನ್ನು ಸುಧಾರಿಸಲು, ಇದರೊಂದಿಗೆ ಯಾವುದೇ ಬದಲಾವಣೆಯನ್ನು ಮಾಡದಂತೆ ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಇದು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು.

ಆರ್ಥಿಕವಾಗಿ, ಈ ಸಮಯದಲ್ಲಿ ಹಣಕಾಸಿನ ಪರಿಸ್ಥಿತಿಗಳು ಸರಸರಿಯಾಗಿರುತ್ತವೆ ಮತ್ತು ಸೀಮಿತ ಆದಾಯದಿಂದಾಗಿ ಈ ಸಮಯದಲ್ಲಿ ನೀವು ನಿರಾಶೆಗೊಳ್ಳಬಹುದು. ಈ ಅವಧಿಯಲ್ಲಿ ಯಾವುದೇ ರೀತಿಯ ಬೆಟ್ಟಿಂಗ್ ಅಥವಾ ಕಾನೂನು ಬಾಹಿರ ಚಟುವಟಿಕೆಯನ್ನು ತಪ್ಪಿಸಿ. ಏಕೆಂದರೆ ಇದರಿಂದಾಗಿ ನಷ್ಟವಾಗುವ ಸಾಧ್ಯತೆ ಹೆಚ್ಚಾಗಿದೆ. ಸಂಬಂಧಗಳ ಬಗ್ಗೆ ಮಾತನಾಡಿದರೆ, ವಿವಾಹಿತ ಜನರ ಜೀವನದಲ್ಲಿ ಮಾನಸಿಕ ಶಾಂತಿಯ ಕೊರತೆ ಇರುತ್ತದೆ. ನಿಮ್ಮ ಕುಟುಂಬದ ಸದಸ್ಯರು ವಿಭಿನ್ನ ಅಭಿಪ್ರಾಯವನ್ನು ಹೊಂದಿರುತ್ತಾರೆ ಮತ್ತು ನಿಮ್ಮದು ಭಿನ್ನವಾಗಿರುತ್ತದೆ. ಇದರಿಂದಾಗಿ ಅವರೊಂದಿಗೆ ನಿಮ್ಮ ವಿವಾದವಾಗಬಹುದು. ಇದು ನಂತರ ನಿಮ್ಮ ಮಾನಸಿಕ ಆತಂಕ ಮತ್ತು ಒತ್ತಡವನ್ನು ಹೆಚ್ಚಿಸಬಹುದು. ಈ ಸಂಚಾರದ ಸಮಯದಲ್ಲಿ ವಿದೇಶ ಪ್ರಯಾಣದ ಅವಕಾಶವನ್ನು ನೀವು ಪಡೆಯಬಹುದು. ಆರೋಗ್ಯದ ದೃಷಿಕೋನದಿಂದ, ತಮ್ಮ ಆರೋಗ್ಯದ ಬಗ್ಗೆ ಗಂಭೀರರಾಗಿರಿ ಎಂದು ಮಕರ ರಾಶಿಚಕ್ರದ ಸ್ಥಳೀಯರಿಗೆ ಸಲಹೆ ನೀಡಲಾಗಿದೆ. ನಿಯಮಿತವಾಗಿ ವ್ಯಾಯಾಮ ಮಾಡಿ, ಇದರೊಂದಿಗೆ ನಿಮ್ಮನ್ನು ಮಾನಸಿಕವಾಗಿ ಆರೋಗ್ಯವಾಗಿಡಲು ಪ್ರಯತ್ನಿಸಿ.

ಪರಿಹಾರ - ಪ್ರತಿದಿನ ಬೆಳಿಗ್ಗೆ ಸೂರ್ಯ ನಮಸ್ಕಾರ ಮಾಡುವುದು ನಿಮಗೆ ಅನುಕೂಲಕರವಾಗಿರುತ್ತದೆ.


ಶನಿ ರಿಪೋರ್ಟ್ ಮೂಲಕ ನಿಮ್ಮ ಜೀವನದ ಮೇಲೆ ಶನಿ ದೇವರ ಪರಿಣಾಮ ಏನು ಎಂದು ತಿಳಿದುಕೊಳ್ಳಿ

कुंभ / ಕುಂಭ ರಾಶಿ

ಕುಂಭ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಎಂಟನೇ ಮನೆಗೆ ಸಾಗುತ್ತಾರೆ. ಎಂಟನೇ ಮನೆಯನ್ನು ಹಠಾತ್ ಹಾನಿ/ಲಾಭ ಮತ್ತು ಸಾವಿನ ಮನೆಯೆಂದು ಕರೆಯಲಾಗುತ್ತದೆ. ಈ ಸಂಚಾರದ ಸಮಾಯ್ದಲ್ಲಿ ಈ ರಾಶಿಚಕ್ರದ ಜನರು ತಮ್ಮ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳ ಗಮನ ವಿಚಲಿತವಾಗಬಹುದು. ಇದರಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಅವರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ರಾಶಿಚಕ್ರದ ಜನರು ತಮ್ಮ ವೃತ್ತಿಪರ ಜೀವನದಲ್ಲಿ ಹಿರಿಯದ ಬೆಂಬಲವನ್ನು ಪಡೆಯುವುದಿಲ್ಲ ಮತ್ತು ಇದರೊಂದಿಗೆ ನೀವು ಕೆಲಸದ ಸ್ಥಳದ ಆಂತರಿಕ ರಾಜಕೀಯದಲ್ಲಿ ತೊಡಗಿಸಿಕೊಳ್ಳಬಹುದು. ಯಾವುದೇ ಕಾನೂನು ಬಾಹಿರ ಕೆಲಸದ ಬಗ್ಗೆ ನಿಮ್ಮ ಮೇಲೆ ಕಾನೂನು ಕ್ರಮ ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಜಾಗರೂಕರಾಗಿರಿ. ಈ ಸಮಯದಲ್ಲಿ ನೀವು ವ್ಯಾಪಾರಕ್ಕೆ ಸಂಬಂಧಿಸಿದ ಅಲ್ಪ ಪ್ರಯಾಣಗಳನ್ನು ಮಾಡಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಇದರಿಂದ ನಿಮಗೆ ಯಾವುದೇ ಲಾಭವಾಗುವುದಿಲ್ಲ.

ನಿಮ್ಮ ವೃತ್ತಿ ಜೀವನದಲ್ಲಿ ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ಆರ್ಥಿಕವಾಗಿ ಹಠಾತ್ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಇದು ನಿಮಗೆ ಸಂತೋಷವನ್ನು ನೀಡುತ್ತದೆ. ಸಂಬಂಧಗಳ ಬಗ್ಗೆ ಮಾತನಾಡಿದರೆ, ಪ್ರೀತಿಪಾತ್ರರೊಂದಿಗೆ ಪ್ರಣಯದ ಸಂಬಂಧವನ್ನು ಹೊಂದಲು ಇದು ಉತ್ತಮ ಸಮಯವಾಗಿರುತ್ತದೆ. ನಿಮ್ಮ ಸಂಬಂಧದಲ್ಲಿ ನೀವು ಮೊದಲಿಂದಲೇ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ಸಂಚಾರವು ಪರಿಸ್ಥಿತಿಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕುಟುಂಬ ಸದಸ್ಯರರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ ಮತ್ತು ಈ ಸಮಯದಲ್ಲಿ ಅವರೊಂದಿಗೆ ನೀವು ಆಹ್ಲಾದಕರ ಸಮಯವನ್ನು ಕಳೆಯಬಹುದು. ನಿಮ್ಮ ಆರೋಗ್ಯದ ಬಗ್ಗೆ ಉತ್ತಮ ಕಾಳಜಿ ವಹಿಸಿ ಎಂದು ಆರೋಗ್ಯದ ಬಗ್ಗೆ ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಈ ಸಂಚಾರದ ಸಮಯದಲ್ಲಿ ನಿಮಗೆ ದೇಹದ ನೋವು ಅಥವಾ ಯಾವುದೇ ಮೂಳೆಯಲ್ಲಿ ಸಮಸ್ಯೆ ಇರಬಹುದು. ಆರೋಗ್ಯವಾಗಿರಲು ನಿಯಮಿತವಾಗಿ ವ್ಯಾಯಾಮ ಮಾಡುವುದು ನಿಮಗೆ ಉತ್ತಮ.

ಪರಿಹಾರ - ಸೂರ್ಯೋದಯದ ಸಮಯದಲ್ಲಿ ದೇವಸ್ಥಾನದಲ್ಲಿ ದಾನ ಮಾಡುವುದು ನಿಮಗೆ ಉತ್ತಮ.

मीन / ಮೀನ ರಾಶಿ

ಮೀನ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಮಾಡುವೆ ಮತ್ತು ಪಾಲುದಾರಿಕೆಯ ಏಳನೇ ಮನೆಗೆ ಪ್ರವೇಶಿಸುತ್ತದೆ. ಈ ಸಂಚಾರದ ಸಮಯದಲ್ಲಿ ಮೀನ ರಾಶಿಚಕ್ರದ ಸ್ಥಳೀಯರು ತಮ್ಮ ವಿರೋಧಿಗಳ ಕಾರಣದಿಂದ್ಗಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಬಹುದು ಮತ್ತು ನಿಮ್ಮ ಹೆಚ್ಚಿನ ಸಮಯವನ್ನು ಇತರರೊಂದಿಗೆ ಸ್ಪರ್ಧಿಸುವಲ್ಲಿ ಕಳೆಯಬಹುದು. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ಮತ್ತು ಇತರ ಜನರೊಂದಿಗಿನ ಸಂಬಂಧಗಳು ಉತ್ತಮವಾಗಿರುತ್ತವೆ ಎಂದು ಹೇಳಲಾಗುವುದಿಲ್ಲ. ಜೀವನ ಸಂಗಾತಿಯೊಂದಿಗೆ ಅಹಂ ಸಂಘರ್ಷದ ಸಾಧ್ಯತೆ ಹೆಚ್ಚಾಗಿದೆ. ಅಹಂ ಅನ್ನು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಅನುಮತಿಸಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ, ಇಲ್ಲದಿದ್ದರೆ ಇದು ನಿಮ್ಮ ಸಂಬಂಧವನ್ನು ಹದಗೆಡಿಸಬಹುದು. ನಿಮ್ಮ ದಾಂಪತ್ಯ ಜೀವನದತ್ತ ಗಮನ ಹರಿಸಿ ಮತ್ತು ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳುವಂತಹ ಕೆಲಸ ಮಾಡಿ. ವೃತ್ತಿಪರವಾಗಿ ಈ ಸಂಚಾರ ನಿಮಗೆ ಸರಾಸರಿ ಎಂದು ಸಾಬೀತಾಗುತ್ತದೆ. ಏಕೆಂದರೆ ನಿಮ್ಮ ಕೆಲಸದಲ್ಲಿ ನೀವು ಪ್ರಗತಿ ಪಡೆಯುತ್ತೀರಿ. ಆದರೆ ನಿಮ್ಮ ಮೇಲಧಿಕಾರಿಗಳೊಂದಿಗೆ ಸಂವಹನ ನಡೆಸುವಾಗ ಬುದ್ಧಿವಂತಿಕೆಯಿಂದ ಪದಗಳನ್ನು ಬಳಸಬೇಕು ಎಂಬುದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಯಾವುದೇ ಅಧಿಕೃತ ಪ್ರವಾಸವನ್ನು ತಪ್ಪಿಸಿ. ಏಕೆಂದರೆ ಇದು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತಾಗುವುದಿಲ್ಲ. ಆರೋಗ್ಯದ ಬಗ್ಗೆ ಮಾತನಾಡಿದರೆ, ನೀವು ನಿರಂತರ ಮಾನಸಿಕ ಒತ್ತಡದಲ್ಲಿರಬಹುದು. ಆದ್ದರಿಂದ ಈ ಸಮಯದಲ್ಲಿ ಯೋಗ ಮತ್ತು ಧ್ಯಾನವನ್ನು ಆಶ್ರಯಿಸಲು ನಿಮಗೆ ಸಲಹೆ ನೀಡಲಾಗಿದೆ. ಇದು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಪರಿಹಾರ - ಶುಭ ಫಲಿತಾಂಶಗಳನ್ನು ಪಡೆಯಲು ಭಾನುವಾರ ತಾಮ್ರದ ದಾನ ಮಾಡುವುದು ನಿಮಗೆ ಉತ್ತಮ.


ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್‌ನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ತುಂಬಾ ಧನ್ಯವಾದಗಳು.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer