ವೃಷಭ ರಾಶಿಯಲ್ಲಿ ಸೂರ್ಯ ಸಂಚಾರ ( 14th May 2021 )
ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯನನ್ನು ಒಂಬತ್ತು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಸೂರ್ಯನನ್ನು ಎಲ್ಲರಲ್ಲೂ ಸರ್ವೋಚ್ಛ ಗ್ರಹವೆಂದು ಪರಿಗಣಿಸಲಾಗುತ್ತದೆ. ಭೂಮಿಯ ಮೇಲಿನ ಜೀವನಕ್ಕಾಗಿ ಸೂರ್ಯನನ್ನು ಹೊಂದಿರುವುದು ಬಹಳ ಮುಖ್ಯ. ಸೂರ್ಯನು ಸೌರವ್ಯೂಹದ ಕೇಂದ್ರವಾಗಿದೆ ಮತ್ತು ಎಲ್ಲಾ ಗ್ರಹಗಳು ಇದರ ಸುತ್ತ ಸುತ್ತುತ್ತವೆ. ಸೂರ್ಯನ ಗುರುತ್ವಾಕರ್ಷಣೆಯ ಬಲದಿಂದಾಗಿ ಗ್ರಹಗಳು ಒಂದು ನಿರ್ದಿಷ್ಟ ದೂರದಲ್ಲಿ ಚಲಿಸುತ್ತವೆ. ಈ ಕಾರಣದಿಂದ ಈ ಗ್ರಹವನ್ನು ರಾಜ ಎಂದು ಕರೆಯಲಾಗುತ್ತದೆ. ಸೂರ್ಯ ಸಂಚಾರವು ವೃಷಭ ರಾಶಿಯಲ್ಲಿ ಸಂಭವಿಸಲಿದೆ. ವೃಷಭ ರಾಶಿ ಭೂಮಿಯ ಅಂಶದ ರಾಶಿ, ಇದು ಸ್ಥಿರತೆ ಮತ್ತು ಕಠಿಣ ಪರಿಶ್ರಮದ ಸಂಕೇತವಾಗಿದೆ. ವೃಷಭ ರಾಶಿಯಲ್ಲಿ ಸೂರ್ಯ ಸಂಚಾರವು ಕಠಿಣ ಪರಿಶ್ರಮ ಮಾಡಲು ಮತ್ತು ಉದ್ದೇಶಗಳನ್ನು ಮತ್ತು ಕಡುಬಯಕೆಗಳನ್ನು ಪೂರ್ಣಗೊಳಿಸಲು ಜನರ ಪರಿಹರಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ. ಜಾತಕದಲ್ಲಿ ಸೂರ್ಯ ದೇವ ತಂದೆ ಅಧಿಕಾರ, ಶಕ್ತಿ ಮತ್ತು ಆರೋಗ್ಯವನ್ನು ಪ್ರತಿನಿಧಿಸುತ್ತದೆ. ಪ್ರತಿ ರಾಶಿಚಕ್ರದಲ್ಲಿ ಇದು ಸುಮಾರು ಒಂದು ತಿಂಗಳು ಇರುತ್ತದೆ. ಸೂರ್ಯನನ್ನು ವಿಶ್ವದ ಆತ್ಮ ಎಂದು ಕರೆಯಲಾಗುತ್ತದೆ. ಸೂರ್ಯ ಸಿಂಹ ರಾಶಿಚಕ್ರದ ಅಧಿಪತಿ ಮತ್ತು ಜಾತಕದಲ್ಲಿ ಇದರ ಅನುಕೂಲಕರ ಸ್ಥಾನವು ಎಲ್ಲಾ ರೀತಿಯ ಆರಾಮವನ್ನು ನೀಡುತ್ತದೆ. ಸೂರ್ಯ ದೇವ ಖ್ಯಾತಿ, ಸರಕಾರಿ ಕ್ಷೇತ್ರದಲ್ಲಿ ಯಶಸ್ಸು, ಗೌರವ ಮತ್ತು ಆಶೀರ್ವಾದವನ್ನು ನೀಡುತ್ತದೆ. ವೃಷಭ ರಾಶಿಯ ಅಧಿಪತಿ ಶುಕ್ರ, ಸೂರ್ಯನ ಶತ್ರು. ಈ ಸಂಚಾರದ ಸಮಯದಲ್ಲಿ ನೀವು ಬಲವಾದ, ಸ್ಫೂರ್ತಿದಾಯಕ ಮತ್ತು ಪ್ರಭಾವಶಾಲಿ ಆಗುತ್ತೀರಿ.
ವೃಷಭ ರಾಶಿಯಲ್ಲಿ ಸೂರ್ಯ ಸಂಚಾರವು 14 ಮೇ 2021 ರಂದು ಬೆಳಿಗ್ಗೆ 11:15 ಗಂಟೆಗೆ ಸಂಭವಿಸಲಿದೆ ಮತ್ತು 15 ಜೂನ್ 2021 ರಂದು, 05:49 ತಂಟೆಯ ವರೆಗೆ ಇದೇ ರಾಶಿಯಲ್ಲಿರುತ್ತದೆ. ಇದರ ನಂತರ ಮಿಥುನ ರಾಶಿಗೆ ಗೋಚರಿಸುತ್ತದೆ.
ಜೀವನದ ಪ್ರತಿಯೊಂದು ಸಮಸ್ಯೆಯ ಪರಿಹಾರಕ್ಕಾಗಿ ಪರಿಣಿತ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ.
ಮೇಷ
ಮೇಷ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಐದನೇ ಮನೆಯ ಅಧಿಪತಿ ಮತ್ತು ಸಂವಹನ, ಹಣ ಮತ್ತು ಕುಟುಂಬದ ಎರಡನೇ ಮನೆಗೆ ಇದು ಸಾಗಲಿದೆ. ಈ ಸಂಚಾರವು ಆರ್ಥಿಕ ಲಾಭ ಮತ್ತು ಮೇಷ ರಾಶಿಯ ಪ್ರಧಾನ ನಿವಾಸದ ಸ್ಥಳೀಯರಿಗೆ ಹಣಕಾಸಿನ ಹರಿವನ್ನು ಹೆಚ್ಚಿಸಬಹುದು. ಆದಾಗ್ಯೂ ಕುಟುಂಬ ಜೀವನದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಕುಟುಂಬ ಸದಸ್ಯರನ್ನು ಯಾವುದೇ ರೀತಿಯಲ್ಲಿ ನೋಯಿಸದಂತೆ ಮಾತನಾಡುವ ಮೊದಲು ಯೋಚಿಸುವಂತೆ ನಿಮಗೆ ಸೂಚಿಸಲಾಗಿದೆ. ಈ ಸಮಯದಲ್ಲಿ ಮೇಷ ರಾಶಿಚಕ್ರದ ಸ್ಥಳೀಯರು ಮದುವೆಯಾಗುವ ಸಾಧ್ಯತೆ ಇದೆ. ವೃತ್ತಿಪರ ಜೀವನದಲ್ಲಿ ಮೇಲಧಿಕಾರಿಗಳೋದಿಗೆ ನೀವು ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಆದರೆ ಮತ್ತೊಂದೆಡೆ ವೃತ್ತಿಪರ ಜೀವನದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳಿಗೆ ಈ ಸಮಯವು ಅನುಕೂಲಕರವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಈ ಸಂಚಾರವು ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ನೀವು ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ನೀವು ಸಣ್ಣ ವಿಷಯಗಳ ಬಗ್ಗೆ ಮಾನಸಿಕವಾಗಿ ಒತ್ತಡವನ್ನು ಅನುಭವಿಸಬಹುದು. ಆದ್ದರಿಂದ ನಿಮ್ಮ ಬಗ್ಗೆ ಕಾಳಜಿ ವಹಿಸಿ ಎಂದು ಸಲಹೆ ನೀಡಲಾಗಿದೆ.
ಪರಿಹಾರ - ತಾಮ್ರದ ಪಾತ್ರದಲ್ಲಿ ನೀರು ತುಂಬಿ ಅದನ್ನು ರಾತ್ರಿಯ ವೇಳೆಯಲ್ಲಿ ನಿಮ್ಮ ಮಂಚದ ಪಕ್ಕದಲ್ಲಿ ಇಟ್ಟು, ಬೆಳಿಗ್ಗೆ ಎದ್ದಾಗ ಆ ನೀರು ಕುಡಿಯುವುದು ನಿಮಗೆ ಪ್ರಯೋಜನಕಾರಿ.
ವೃಷಭ
ವೃಷಭ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ನಾಲ್ಕನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ಆತ್ಮ, ವ್ಯಕ್ತಿತ್ವದ ಮೊದಲನೇ ಮನೆಗೆ ಗೋಚರಿಸಲಿದೆ. ಸಂಚಾರದ ಈ ಅವಧಿಯು ನಿಮಗೆ ಶಕ್ತಿಯನ್ನು ಒದಗಿಸುತ್ತದೆ. ನಿಮ್ಮ ಅಹಂ ಅನ್ನು ಮಧ್ಯದಲ್ಲಿ ಬರಲು ಬಿಡದಿದ್ದರೆ, ನಿಮ್ಮ ಜೀವನದ ಕಷ್ಟಕರವಾದ ಸಮಸ್ಯೆಗಳನ್ನು ಸಹ ಸುಲಭವಾಗಿ ಪರಿಹರಿಸಲು ನಿಮಗೆ ಸಾಧ್ಯವಾಗುತ್ತದೆ. ಏಕೆಂದರೆ ಸೂರ್ಯ ನಿಮ್ಮ ಏಳನೇ ಮನೆಯ ಮೇಲೂ ದೃಷ್ಟಿ ಹಾಕುತ್ತಾರೆ, ಆದ್ದರಿಂದ ನೀವು ಜೀವನ ಸಂಗಾತಿಯ ಮೇಲೆ ನಿಮ್ಮ ಖರ್ಚು ಹೆಚ್ಚಾಗಬಹುದು. ನಿಮ್ಮ ಕಠಿಣ ನಡವಳಿಕೆಯು ನಿಮ್ಮ ಜೀವನ ಸಂಗಾತಿಯೊಂದಿಗಿನ ನಿಮ್ಮ ಅಡ್ಡಿಯಾಗದಂತೆ ನಿಮ್ಮ ಮಾತನ್ನು ನಿಯಂತ್ರಣದಲ್ಲಿಡುವುದು ಸಹ ನಿಮಗೆ ಅಗತ್ಯವಾಗಿದೆ. ವೃತ್ತಿಪರ ಕ್ಷೇತ್ರಕ್ಕೆ ಸಂಬಂಧಿಸಿದ ಈ ರಾಶಿಚಕ್ರದ ಸ್ಥಳೀಯರು ಕೆಲಸದ ಸ್ಥಳದಲ್ಲಿ ತಮ್ಮ ಭವಿಷ್ಯವನ್ನು ಉತ್ತಮಗೊಳಿಸಲು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ, ಭವಿಷ್ಯದ ಬಗ್ಗೆ ನೀವು ತುಂಬಾ ಆಶಾವಾದಿಗಳಾಗಿರಬಹುದು. ಈ ರಾಶಿಚಕ್ರದ ವ್ಯಾಪಾರಸ್ಥರು ಈ ಸಂಚಾರದ ಸಮಯದಲ್ಲಿ ಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಆರೋಗ್ಯದ ದೃಷ್ಟಿಯಿಂದ ನೀವು ಹೊಟ್ಟೆ, ಕಣ್ಣುಗಳು ಮತ್ತು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಬಹುದು. ಆದ್ದರಿಂದ ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುವಂತಹ ಯಾವುದನ್ನೂ ಮಾಡಬೇಡಿ.
ಪರಿಹಾರ - ಅರೋಗ್ಯ ಹೃದಯ ಸ್ತೋತ್ರವನ್ನು ಪ್ರತಿದಿನ ನಿಯಮಿತವಾಗಿ ಪಠಿಸುವುದು ನಿಮಗೆ ಉತ್ತಮ.
ಮಿಥುನ
ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ಗ್ರಹವು ಮೂರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ವಿದೇಶ, ನಷ್ಟ, ಖರ್ಚು, ಆಧ್ಯಾತ್ಮಿಕತೆ ಇತ್ಯಾದಿಯ ಹನ್ನೆರಡನೇ ಮನೆಗೆ ಪ್ರವೇಶಿಸುತ್ತದೆ. ಈ ಸಂಚಾರದ ಸಮಯದ್ಲಲಿ ನಿಮ್ಮ ವೆಚ್ಚಗಳತ್ತ ನೀವು ನಿಗಾ ಇಡಬೇಕು ಮತ್ತು ಹಣಕಾಸು ಚಿಂತನಶೀಲವಾಗಿ ಖರ್ಚಿಸಬೇಕು. ಇದಲ್ಲದೆ ಭವಿಷ್ಯದ ಅಗತ್ಯಗಳಿಗಾಗಿ ಹಣವನ್ನು ಹುಳಿಸುವ ರೀತಿಗಳನ್ನು ಹುಡುಕಲು ಸೂಚಿಸಲಾಗಿದೆ. ಈ ಸಂಚಾರದ ಸಮಯದಲ್ಲಿ ನಿಮಗೆ ಯಾವುದೇ ದೊಡ್ಡ ಆರ್ಥಿಕ ಲಾಭವಾಗುವುದಿಲ್ಲ. ಆದಾಗ್ಯೂ, ನೀವು ದೈನಂದಿನ ಖರ್ಚುಗಳನ್ನು ಆರಾಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ವಿದೇಶಕ್ಕೆ ಸಂಬಂಧಿಸಿದ ಯಾವುದೇ ಸಂಪರ್ಕದಿಂದ ಈ ರಾಶಿಚಕ್ರದ ಸ್ಥಳೀಯರಿಗೆ ಲಾಭವಾಗಬಹುದು. ಈ ಸಮಯದಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸಲು ನೀವು ಅವಕಾಶ ಪಡೆಯಬಹುದು. ಆದ್ದರಿಂದ ಸಿದ್ಧರಾಗಿರಿ ಏಕೆಂದರೆ ಇದ್ದಕ್ಕಿದ್ದಂತೆ ಅವಕಾಶ ನಿಮ್ಮ ಬಳಿ ಬರುತ್ತದೆ. ವ್ಯಾಪಾರಸ್ಥರು ವ್ಯಾಪಾರದಲ್ಲಿ ವಿಸ್ತರಣೆಗಾಗಿ ಹಣಕಾಸು ಖರ್ಚು ಮಾಡುವುದನ್ನು ತಪ್ಪಿಸಬೇಕು. ಸಂಬಂಧವನ್ನು ಉತ್ತಮಗೊಳಿಸಲು ಬುದ್ಧಿವಂತಿಕೆಯನ್ನು ಬಳಸಿಕೊಳ್ಳಿ. ನಿಮ್ಮ ಪ್ರೀತಿಯ ಜೀವನವು ಸುಧಾರಿಸುತ್ತದೆ ಮತ್ತು ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಸಂಗಾತಿ, ಸ್ನೇಹಿತರು ಮತ್ತು ಕುಟುಂಬದ ಜನರ ಮೇಲೆ ಹಣಕಾಸು ಖರ್ಚು ಮಾಡುವಿರಿ. ಆರೋಗ್ಯದ ದೃಷ್ಟಿಕೋನದಿಂದ ನೋಡಿದರೆ ನೀವು ನಿಮ್ಮನ್ನು ಸರಿಯಾಗಿ ನೋಡಿಕೊಳ್ಳಬೇಕು ಏಕೆಂದರೆ ಹೊಟ್ಟೆ, ಜ್ವರ ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು.
ಪರಿಹಾರ - ಭಕ್ತಿಯೊಂದಿಗೆ ಪ್ರತಿದಿನ ಭಗವಂತ ವಿಷ್ಣುವಿನ ಪೂಜೆ ಮಾಡುವುದರಿಂದ ನಿಮಗೆ ಬಹಳ ಲಾಭವಾಗುತ್ತದೆ.
ಕರ್ಕ
ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಕರ್ಕ ರಾಶಿಚಕ್ರದ ಸ್ಥಳೀಯರ ಆದಾಯ, ಅಸೆ ಮತ್ತು ಲಾಭದ ಹನ್ನೊಂದನೇ ಮನೆಗೆ ಗೋಚರಿಸಲಿದೆ. ಈ ಸಂಚಾರವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಏಕೆಂದರೆ ನೀವು ದೀರ್ಘಕಾಲದಿಂದ ಯೋಚಿಸುತ್ತಿದ್ದ ಆಸೆಗಳು ಸಹ ಈ ಸಮಯದಲ್ಲಿ ಪೂರ್ಣಗೊಳ್ಳುತ್ತವೆ. ಈ ಸಮಯದಲ್ಲಿ ನಿಮಗೆ ಲಾಭವಾಗುವ ಸಂಪೂರ್ಣ ಸಾಧ್ಯತೆ ಇದೆ. ಸರಿಯಾದ ಹೂಡಿಕೆಯೊಂದಿಗೆ ನೀವು ನಿಮ್ಮ ಪ್ರಸ್ತುತ ಆದಾಯವನ್ನು ಹೆಚ್ಚಿಸುವ ದಿಕ್ಕಿನತ್ತ ಪ್ರಯತ್ನಿಸಬಹುದು. ಆದ್ದರಿಂದ ಆರ್ಥಿಕವಾಗಿ ಈ ಅವಧಿಯು ನಿಮಗೆ ಪವಾಡವೆಂದು ಸಾಬೀತುಪಡಿಸುತ್ತದೆ. ನೀವು ಸರ್ಕಾರಿ ಕ್ಷೇತ್ರಗಳ ಮೂಲಕವೂ ಲಾಭ ಪಡೆಯಬಹುದು ಅಥವಾ ನೀವು ನಿಮ್ಮ ಮೇಲಧಿಕಾರಿಗಳಿಂದ ಕೆಲವು ರೀತಿಯ ಬೆಂಬಲವನ್ನು ಪಡೆಯುತ್ತೀರಿ. ವೃತ್ತಿಪರ ಜೀವನದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ಪ್ರೀತಿ ಮತ್ತು ಪ್ರಣಯದ ಐದನೇ ಮನೆಯ ಮೇಲೆ ಸೂರ್ಯನ ದೃಷ್ಟಿಯಿಂದಾಗಿ ನೀವು ನಿಮ್ಮ ಪ್ರೀತಿಯ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ಪ್ರೀತಿಪಾತ್ರರು ಮತ್ತು ನಿಮ್ಮ ಅಭಿಪ್ರಾಯಗಳ ನಡುವೆ ಕೆಲವು ವ್ಯತ್ಯಾಸಗಳಿರಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಬಂಧವನ್ನು ಉಳಿಸಲು ನೀವು ಸರಿಯಾರ ಸಂವಹನವನ್ನು ಸ್ಥಾಪಿಸಬೇಕಾಗಿದೆ. ಈ ಸಮಯ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುವುದಿಲ್ಲ. ಇದಲ್ಲದೆ ಅಧ್ಯಾಯಂದತ್ತ ಕೇಂದ್ರೇಕರಿಸುವಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಡಬೇಕಾಗಬಹುದು. ಆರೋಗ್ಯದ ದೃಷ್ಟಿಯಿಂದ ಈ ಸಮಯದಲ್ಲಿ ನೀವು ಬಹಳ ಬಲವಾಗಿರುತ್ತೀರಿ, ನಿಮ್ಮ ರೋಗನಿರೋಧಕ ಸಾಮರ್ಥ್ಯವು ಉತ್ತಮವಾಗಿರುತ್ತದೆ.
ಪರಿಹಾರ - ಭಗವಂತ ಸೂರ್ಯನನ್ನು ಪೂಜಿಸಿ ಏಕೆಂದರೆ ಇದು ನಿಮಗೆ ಪ್ರಯೋಜನಕಾರಿಯಾಗುತ್ತದೆ.
ಸಿಂಹ
ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಮೊದಲನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ವೃತ್ತಿ ಜೀವನ, ಹೆಸರು ಮತ್ತು ಖ್ಯಾತಿಯ ಹತ್ತನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ನೀವು ಉತ್ತಮ ಪ್ರಗತಿಯನ್ನು ನೋಡುತ್ತೀರಿ ಮತ್ತು ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಬಡ್ತಿ ಪಡೆಯಬಹುದು, ಮೇಲಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಸರ್ಕಾರಿ ಸಂಸ್ಥೆಗೆ ಸೇರಿ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಈ ಸಮಯ ಉತ್ತಮವಾಗಿದೆ. ನೀವು ಯಾವುದೇ ರೀತಿಯ ಒಪ್ಪಂದದ ಮೂಲಕ ಲಾಭವನ್ನು ಗಳಿಸಬಹುದು. ಈ ಸಮಯದಲ್ಲಿ ನಿಮ್ಮ ವಿರೋಧಿಗಳು ನಿಮ್ಮಿಂದ ದೂರವಿರುತ್ತಾರೆ. ಏಕೆಂದರೆ ಈ ಸಮಯದಲ್ಲಿ ನಿಮ್ಮಲ್ಲಿ ಆತ್ಮವಿಶ್ವಾಸದ ಹೆಚ್ಚಳವನ್ನು ಕಾಣಲಾಗುತ್ತದೆ. ಕುಟುಂಬದ ವಾತಾವರಣವು ಸಂತೋಷವಾಗಿರುತ್ತದೆ. ಮನೆಯ ಸದಸ್ಯರೊಂದಿಗೆ ನೀವು ಸಂತೋಷವಾಗಿರುತ್ತೀರಿ.ಮೂರನೇ ಮನೆಯ ಮೇಲೆ ಸೂರ್ಯನ ದೃಷ್ಟಿಯು ನಿಮಗೆ ಖ್ಯಾತಿ ಮತ್ತು ಗೌರವವನ್ನು ನೀಡುತ್ತದೆ. ಕೌಟುಂಬಿಕ ಮತ್ತು ವೈಯಕ್ತಿಕ ಜೀವನದಲ್ಲಿನ ನಿಮ್ಮ ಸ್ಥಿತಿ ಸುಧಾರಿಸುತ್ತದೆ ಮತ್ತು ಸಮಾಜದಲ್ಲಿ ನೀವು ಸ್ಥಾನಮಾನವನ್ನು ಗಳಿಸುವಿರಿ. ಆರೋಗ್ಯದ ದೃಷ್ಟಿಯಿಂದಲೂ ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ಆದಾಗ್ಯೂ, ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ನಿಮಗೆ ನೀಡಲಾಗಿದೆ. ಇದರಿಂದಾಗಿ ನೀವು ಆರೋಗ್ಯವಾಗಿರುವಿರಿ.
ಪರಿಹಾರ - ಸಾಧ್ಯವಾದರೆ ನಿಮ್ಮ ಕೈಯಲ್ಲಿ ಕೆಂಪು ದಾರವನ್ನು ಕಟ್ಟಿ ಮತ್ತು ಇದನ್ನು ನಿಮ್ಮ ಮಣಿಕಟ್ಟಿನ ಮೇಲೆ ಆರು ಬಾರಿ ಸುತ್ತಿ.
ಕನ್ಯಾ
ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಆಧ್ಯಾತ್ಮಿಕತೆ, ಅಂತರರಾಷ್ಟ್ರೀಯ ಪ್ರಯಾಣ, ಉನ್ನತ ಅಧ್ಯಯನದ ಒಂಬತ್ತನೇ ಮನೆಗೆ ಸ್ಥಳಾಂತರಗೊಳ್ಳುತ್ತಿದೆ. ಸೂರ್ಯ ನಿಮ್ಮ ಹನ್ನೆರಡನೇ ಮನೆಯ ಮಾಲೀಕನಾಗಿರುವುದರಿಂದ ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವವರು ಈ ಸಮಯದಲ್ಲಿ ಲಾಭವನ್ನು ಪಡೆಯಬಹುದು ಮತ್ತು ನೀವು ವ್ಯವಹಾರವನ್ನೂ ಹೆಚ್ಚಿಸಬಹುದು. ಇದಲ್ಲದೆ ಸೂರ್ಯ ಸಂಚಾರದ ಕಾರಣದಿಂದಾಗಿ ಆಧ್ಯಾತ್ಮಿಕ ಕ್ಷೇತ್ರಗಳಲ್ಲೂ ನೀವು ಆಸಕ್ತಿ ಹೊಂದಿರುತ್ತೀರಿ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನೀವು ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಆರ್ಥಿಕವಾಗಿ ಈ ಸಂಚಾರವು ನಿಮಗೆ ಸರಾಸರಿ ಎಂದು ಸಾಬೀತುಪಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ಯಾವುದೇ ದೊಡ್ಡ ಲಾಭವನ್ನು ಪಡೆಯುವ ಸಾಧ್ಯತ ಕಡಿಮೆಯಿದೆ. ಉದ್ಯೋಗಗಳಿಗೆ ಸಂಬಂಧಿಸಿದ ಜನರು ಕೆಲಸದ ಸ್ಥಳದಲ್ಲಿ ತಮ್ಮ ಸ್ಥಿತಿ ಮತ್ತು ಅವರಿಗೆ ವಹಿಸಲಾಗಿರುವ ಕೆಲಸದ ಬಗ್ಗೆ ವಿಶ್ವಾಸವಿರುತ್ತದೆ. ಸಾಮಾಜಿಕವಾಗಿ ನೀವು ಜನರೊಂದಿಗೆ ಸಂಪರ್ಕ ಹೊಂದಲು ಇಷ್ಟಪಡುತ್ತೀರಿ ಮತ್ತು ನಿಮ್ಮ ನೆಟ್ವರ್ಕ್ ಅನ್ನು ಸಹ ಹೆಚ್ಚಿಸುವಿರಿ. ಈ ಸಂಚಾರದ ಸಮಯದಲ್ಲಿ ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವು ಸ್ವಲ್ಪ ಹದಗೆಡಬಹುದು ಮತ್ತು ನಿಮ್ಮ ತಂದೆಯ ಆರೋಗ್ಯವು ಸಹ ನಿಮ್ಮನ್ನು ಚಿಂತೆಗೊಳಿಸಬಹುದು. ಆದರೆ ಚಿಂತೆ ಮಾಡಬೇಡಿ ಏಕೆಂದರೆ ನೀವು ನಿಮ್ಮ ಆಪ್ತರ ಬೆಂಬಲವನ್ನು ಪಡೆಯುತ್ತೀರಿ. ಈ ರಾಶಿಚಕ್ರದ ಸ್ಥಳೀಯರು ಸಾಮಾನ್ಯ ಅರೋಗ್ಯ ಸಮಸ್ಯೆಗಳನ್ನು ಹೊಂದಬಹುದು.ಆದರೆ ಚಿಂತೆ ಮಾಡುವಷ್ಟು ಯಾವುದೇ ದೊಡ್ಡ ವಿಷಯವಿಲ್ಲ.
ಪರಿಹಾರ - ಪ್ರತಿದಿನ ನಿಯಮಿತವಾಗಿ ಗಾಯತ್ರಿ ಮಂತ್ರವನ್ನು 108 ಬಾರಿ ಜಪಿಸಿ.
ತುಲಾ
ತುಲಾ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಅತಿಂದ್ರೀಯ ವಿಜ್ಞಾನ, ಸಂಶೋಧನೆ, ಬದಲಾವಣೆ, ಹಠಾತ್ ನಷ್ಟಗಳು ಮತ್ತು ಲಾಭಗಳ ಎಂಟನೇ ಮನೆಗೆ ಗೋಚರಿಸಲಿದೆ. ಈ ಸಮಯದಲ್ಲಿ ನೀವು ನಿಮ್ಮ ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಅಥವಾ ವೈರಲ್ ಸೋಂಕುಗಳು ಮತ್ತು ಲೈಂಗಿಕ ಸಮಸ್ಯೆಗಳು ಸಹ ಸಂಭವಿಸಬಹುದು. ಆದ್ದರಿಂದ ನೀವು ನಿಮ್ಮ ಬಗ್ಗೆ ಸರಿಯಾದ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ. ಈ ಸಮಯದಲ್ಲಿ ಆರ್ಥಿಕ ಲಾಭವನ್ನು ಗಳಿಸುವ ಯಾವುದೇ ದೊಡ್ಡ ಅವಕಾಶವನ್ನು ನೀವು ಕಳೆದುಕೊಳ್ಳಬಹುದು ಮತ್ತು ಈ ಅವಧಿಯಲ್ಲಿ ಯಾವುದೇ ದೊಡ್ಡ ಆರ್ಥಿಕ ಲಾಭವನ್ನು ನೀವು ಕಾಣುವುದಿಲ್ಲ. ಆದರೆ ಶೇರ್ ಮಾರ್ಕೆಟ್, ಪೂರ್ವಜರ ಸಂಪತ್ತು ಇತ್ಯಾದಿಗಳಂತಹ ಪಾಲುದಾರಿಕೆಯಲ್ಲಿ ನಡೆಸುತ್ತಿರುವ ಕೆಲಸಗಳ ಮೂಲಕ ನೀವು ಲಾಭ ಪಡೆಯಬಹುದು. ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧಗಳಲ್ಲಿ ಕಹಿ ಉಂಟಾಗಬಹುದು ಆದ್ದರಿಂದ ನಿಮ್ಮ ಧ್ವನಿಯನ್ನು ನಿಯಂತ್ರಣದಲ್ಲಿಡಲು ನಿಮಗೆ ಸೂಚಿಸಲಾಗಿದೆ. ಈ ಸಮಯವೂ ವಿವಾಹಿತರಿಗೂ ಉನತಮವಾಗಿರುವುದಿಲ್ಲ. ಗುಪ್ತ ಶತ್ರುಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ಜಾಗರೂಕರಾಗಿರಿ, ಒಬ್ಬ ಮೂರನೇ ವ್ಯಕ್ತಿಯ ವಿಷಯಗಳಲ್ಲಿ ಬಲವಂತವಾಗಿ ಹಸ್ತಕ್ಷೇಪಿಸಲು ಪ್ರಯತ್ನಿಸಬೇಡಿ. ಈ ರಾಶಿಚಕ್ರದ ಕೆಲವು ಸ್ಥಳೀಯರು ಅತ್ತೆಮನೆ ಕಡೆಯಿಂದ ಯಾವುದೇ ಅಶುಭ ಸುದ್ಧಿಯನ್ನು ಪಡೆಯುವ ಸಾಧ್ಯತೆ ಇದೆ.
ಪರಿಹಾರ - ಪ್ರತಿದಿನ ನಿಯಮಿತವಾಗಿ ಸೂರ್ಯ ದೇವರಿಗೆ ನೀರು ಅರ್ಪಿಸಿ ಮತ್ತು ಸೂರ್ಯೋದಯಕ್ಕೆ ಮುನ್ನ ಪೂರ್ವ ದಿಕ್ಕಿನತ್ತ ನಿಮ್ಮ ತಲೆಯನ್ನು ಬಾಗಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ.
ವೃಶ್ಚಿಕ
ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಮದುವೆ, ಪಾಲುದಾರಿಕೆ ಇತ್ಯಾದಿಯ ಏಳನೇ ಮನೆಗೆ ಗೋಚರಿಸಲಿದೆ. ಈ ಸಂಚಾರದ ಸಮಯದಲ್ಲಿ ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರು ಅಪಾರ ಲಾಭ ಪಡೆಯುವ ನಿರೀಕ್ಷೆಯಿದೆ. ಸೂರ್ಯನ ಈ ಸಂಚಾರವು ವೈವಾಹಿಕ ಜೀವನದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರುತ್ತದೆ. ಈ ಸಮಯದಲ್ಲಿ ನಿಮ್ಮ ಅಹಂ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸದಂತೆ ಎಂದು ನಿಮಗೆ ಸಲಹೆ ನೀಡಲಾಗಿದೆ. ಇದು ನಿಮ್ಮ ಸಂಗಾತಿಯನ್ನು ತೊಂದರೆಗೊಳಿಸಬಹುದು. ಸೂರ್ಯ ನಿಮ್ಮ ಹತ್ತನೇ ಮನೆಯ ಅಧಿಪತಿ, ಆದ್ದರಿಂದ ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳೊಂದಿಗೆ ಯಾವುದೇ ಕೆಲಸದ ಬಗ್ಗೆ ನೀವು ಭಿನ್ನಾಭಿಪ್ರಾಯವನ್ನು ಹೊಂದಿರಬಹುದು. ಆದ್ದರಿಂದ ನೀವು ಜನರಿಂದ ದೂರವಿದ್ದು ಕೆಲಸ ಮಾಡುವ ಬದಲು ಗುಂಪುಗಳಲ್ಲಿ ಕೆಲಸ ಮಾಡಲು ನಿಮಗೆ ಸಲಹೆ ನೀಡಲಾಗಿದೆ. ವ್ಯಾಪಾರ ಮತ್ತು ಸಹಭಾಗಿತ್ವದಲ್ಲಿ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ಅರ್ಥಿಕವಾಗಿ ನೀವು ತೃಪ್ತಿಯನ್ನು ಅನುಭವಿಸುವಿರಿ ಮತ್ತು ನಿಮ್ಮ ಖರ್ಚುಗಳಲ್ಲೂ ಸ್ಥಿರತೆ ಉಂಟಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಸ್ವಲ್ಪ ದೌರ್ಬಲ್ಯವನ್ನು ಅನುಭವಿಸಬಹುದು ಮತ್ತು ಕಿರಿಕಿರಿಯನ್ನು ಸಹ ನೀವು ಅನುಭವಿಸಬಹುದು. ಈ ಸಮಯದಲ್ಲಿ ನೀವು ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ತೀವ್ರ ಕೋಪಕ್ಕೆ ಒಳಗಾಗುವುದನ್ನು ತಪ್ಪಿಸಬೇಕು . ಹೊಸ ಒಪ್ಪಂದಗಳಿಗೆ ಇದು ಉತ್ತಮ ಸಮಯ. ಈ ಸಮಯದಲ್ಲಿ ಕೆಲವರು ಮದುವೆಯ ಪ್ರಸ್ತಾಪವನ್ನು ಒಪ್ಪಿಕೊಳ್ಳಬಹುದು.
ಪರಿಹಾರ - ಸೂರ್ಯ ದೇವರ ಆಶೀರ್ವಾದವನ್ನು ಪಡೆಯಲು ಪ್ರತಿದಿನ ಸ್ನಾನ ಮಾಡುವ ನೀರಿನಲ್ಲಿ ಶ್ರೀಗಂಧವನ್ನು ಸೇರಿಸಿ.
ಧನು
ಧನು ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಶತ್ರು, ದೈನಂದಿನ ಕೆಲಸ, ಸಾಲದ ಆರನೇ ಮನೆಗೆ ಗೋಚರಿಸಲಿದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಶತ್ರುಗಳು ಅಥವಾ ವಿರೋಧಿಗಳು ನಿಮ್ಮನ್ನು ಎದುರಿಸಲು ಧೈರ್ಯ ಮಾಡುವುದಿಲ್ಲ ಮತ್ತು ನೀವು ಅವರನ್ನು ಜಯಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳು ಸಂಚಾರದ ಸಮಯದಲ್ಲಿ ಯಶಸ್ಸು ಪಡೆಯುತ್ತಾರೆ. ವ್ಯಾಪಾರ ಮಾಡುತ್ತಿರುವ ಈ ರಾಶಿಚಕ್ರದ ಸ್ಥಳೀಯರು ಲಾಭವನ್ನು ಗಳಿಸಲು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗಬಹುದು. ಉದ್ಯೋಗಕ್ಕೆ ಸಂಬಂಧಿಸಿದ ಈ ರಾಶಿಚಕ್ರದ ಸ್ಥಳೀಯರು ತಮ್ಮ ಸ್ಥಿತಿಯನ್ನು ಸುಧಾರಿಸಲು ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಬೇಕು. ಈ ಸಮಯದಲ್ಲಿ ಆರ್ಥಿಕವಾಗಿ ನಿಮಗೆ ಯಾವುದೇ ದೊಡ್ಡ ಲಾಭವಾಗುವುದಿಲ್ಲ. ಈ ಸಮಯದಲ್ಲಿ ಅದೃಷ್ಟ ನಿಮ್ಮನ್ನು ಹೆಚ್ಚು ಬೆಂಬಲಿಸುವುದಿಲ್ಲ. ಆದ್ದರಿಂದ ಸ್ವಯಂ ನಿಯಂತ್ರಣವನ್ನು ಮಾಡಲು ನಿಮಗೆ ಸೂಚಿಸಲಾಗಿದೆ. ಇಲ್ಲದಿದ್ದರೆ, ನೀವು ಸೋಲನ್ನು ಎದುರಿಸಬೇಕಾಗಬಹುದು. ನಿಮ್ಮ ಗಂಡ ಹೆಂಡತಿಯೊಂದಿಗಿನ ಸಂಬಂಧವು ಸ್ವಲ್ಪ ಭಿನ್ನವಾಗಿರಬಹುದು ಮತ್ತು ದಾಂಪತ್ಯ ಜೀವನವು ತುಂಬಾ ಸಂತೋಷವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ.ಆರೋಗ್ಯದ ಮೇಲೆ ದೃಷ್ಟಿ ಹಾಕಿದರೆ, ನೀವು ಸ್ವಲ್ಪ ಅನಾರೋಗ್ಯ ಅನುಭವಿಸಬಹುದು ಮತ್ತು ಕಿರಿಕಿರಿಗೆ ಒಳಗಾಗಬಹುದು. ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಯನ್ನು ನೀವು ಹೊಂದಿರಬಹುದು.
ಪರಿಹಾರ - ಭಗವಂತ ಸೂರ್ಯನನ್ನು ಪೂಜಿಸಿ ಮತ್ತು ಸೂರ್ಯನ ಹೋರಾ ಸಮಯದಲ್ಲಿ ಸೂರ್ಯ ಮಂತ್ರವನ್ನು ಜಪಿಸುವುದರಿಂದ ನಿಮಗೆ ಅನೇಕ ಲಾಭವಾಗುತ್ತದೆ.
ಮಕರ
ಮಕರ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಪ್ರೀತಿ, ಪ್ರಣಯ, ಮಕ್ಕಳು ಮತ್ತು ಶಿಕ್ಷಣದ ಐದನೇ ಮನೆಗೆ ಗೋಚರಿಸಲಿದೆ. ಸೂರ್ಯನ ಈ ಸಂಚಾರವು ಮಕರ ರಾಶಿಚಕ್ರದ ಮಕ್ಕಳಿಗೆ ಕೆಲವು ದೈಹಿಕ ಸಮಸ್ಯೆಗಳನ್ನು ತರಬಹುದು ಮತ್ತು ಅವರ ಅಧ್ಯಯನದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು. ಶಿಕ್ಷಣದ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ವಿದ್ಯಾರ್ಥಿಗಳು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಆರ್ಥಿಕವಾಗಿ ನೀವು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಭವಿಷ್ಯದ ಅಗತ್ಯಗಳಿಗಾಗಿ ಹಣವನ್ನು ಉಳಿಸುವ ಅವಶ್ಯಕೆತೆಯಿದೆ. ವೃತ್ತಿಪರವಾಗಿ ತಾಳ್ಮೆಯಿಂದಿರಿ ಮತ್ತು ಆತ್ಮ ನಿಯಂತ್ರಣದ ಅಭ್ಯಾಸ ಮಾಡಿ. ಹಠಾತ್ ಹಣಕಾಸಿನ ಲಾಭದ ಸಾಧ್ಯತೆಯೂ ಇದೆ. ಈ ಸಮಯದಲ್ಲಿ ಈ ರಾಶಿಚಕ್ರದ ವೈವಾಹಿಕ ಜನರ ಜೀವನವು ಉತ್ತಮವಾಗಿರುತ್ತದೆ ಮತ್ತು ಸಾಮಾಜಿಕ ಸ್ಥಿತಿಯು ಸುಧಾರಿಸುತ್ತದೆ. ಪ್ರೀತಿಯ ವಿಷಯವನ್ನು ಮುಂದುವರಿಸಲು ಇದು ಉತ್ತಮ ಸಮಯವಲ್ಲ. ಉನ್ನತ ಶಿಕ್ಷಣ ಪಡೆಯಲು ಅಥವಾ ಏನಾದರೂ ಹೊಸದನ್ನು ಕಲಿಯಲು ಒಳ್ಳೆಯ ಅವಕಾಶಗಳನ್ನು ಪಡೆಯಬಹುದು ಮತ್ತು ಮುಂಬರುವ ಸಮಯದಲ್ಲಿ ಇದು ನಿಮಗೆ ಬಹಳ ಪ್ರಯೋಜನಕಾರಿ ಎಂದು ಸಾಬೀತುಪಯಿಸುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಸರಿಯಾದ ವ್ಯಾಯಾಮ ಮಾಡಲು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಲು ಸೂಚಿಸಲಾಗಿದೆ. ಇದಲ್ಲದೆ ಈ ರಾಶಿಚಕ್ರದ ಸ್ಥಳೀಯರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು, ಆದ್ದರಿಂದ ಅವರ ಸಮಸ್ಯೆಯನ್ನು ತಿಳಿಯಲು ಪ್ರಯತ್ನಿಸಿ.
ಪರಿಹಾರ - ನಿಮ್ಮ ಪೋಷಕರವನ್ನು ಗೌರವಿಸಲು ನಿಮಗೆ ಸೂಚಿಸಲಾಗಿದೆ ಮತ್ತು ಪ್ರತಿದಿನ ಬೇಗನೆ ಎದ್ದೇಳಲು ಅಭ್ಯಾಸ ಮಾಡಬೇಕು.
ಕುಂಭ
ಕುಂಭ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ಗ್ರಹವು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ರಿಯಲ್ ಎಸ್ಟೇಟ್, ತಾಯಿ ಮತ್ತು ಸಂತೋಷದ ನಾಲ್ಕನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ದೇಶಿಯ ವಿಷಯಗಳ ಬಗ್ಗೆ ಎಚ್ಚರದಿಂದಿರಲು ನಿಮಗೆ ಸೂಚಿಸಲಾಗಿದೆ, ಏಕೇನರೆ ಮನೆಯ ಅಗತ್ಯಗಳ ಬಗ್ಗೆ ಕುಟುಂಬದ ಸದಸ್ಯರ ನಡುವೆ ಕೆಲವು ವಿಂಗಡಣೆ ಉಂಟಾಗಬಹುದು. ಮನೆಯಲ್ಲಿ ನೀವು ಸಂತೋಷದ ಕೊರತೆಯನ್ನು ಅನುಭವಿಸಬಹುದು. ವ್ಯಾಪಾರ ಮತ್ತು ಸಹಭಾಗಿತ್ವದ ವ್ಯಾಪಾರದಲ್ಲಿ ತೊಡಗಿರುವವರು ಲಾಭ ಪಡೆಯುವ ಸಾಧ್ಯತೆ ಇದೆ ಏಕೆಂದರೆ ಈ ಸಮಯದಲ್ಲಿ ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ ಮತ್ತು ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಉದ್ಯೋಗದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರು ವೃತ್ತಿಪರ ಜೀವನದಲ್ಲಿ ಎತ್ತರವನ್ನು ಪಡೆಯುತ್ತಾರೆ ಮತ್ತು ನೀವು ಯಾವುದೇ ಚಟುವಟಿಕೆ/ ಯೋಜನೆಯಲ್ಲಿ ಯಶಸ್ಸು ಪಡೆಯಲು ಮತ್ತು ಉತ್ತಮ ಪ್ರದರ್ಶನ ಮಾಡಲು ಸಹ ಸಾಧ್ಯವಾಗುತ್ತದೆ. ಮನೆಗೆ ಸಂಬಂಧಿಸಿದ ವಿಷಯಗಳಲ್ಲಿ ನಿಮ್ಮ ತಾಯಿಯೊಂದಿಗೆ ವ್ಯವಹರಿಸುವಾಗ ತಾಳ್ಮೆಯಿಂದಿರಿ. ನೀವು ಯಾವುದೇ ಆಸ್ತಿ ಸಂಬಂಧಿತ ವಿಷಯವನ್ನು ಎದುರಿಸುತ್ತಿದ್ದರೆ, ಈ ಸಮಯದಲ್ಲಿ ಯಾವುದನ್ನೂ ಅಂತಿಮಗೊಳಿಸದಿರುವುದು ಜಾಣತನ. ಆರೋಗ್ಯದ ಬಗ್ಗೆ ಮಾತನಾಡಿದರೆ ಈ ಸಮಯವೂ ಸರಸರಿಯಾಗಿರುತ್ತದೆ. ಆದ್ದರಿಂದ ಯೋಗ ಮತ್ತು ಧ್ಯಾನದ ಅಭ್ಯಾಸ ಮಾಡಲು ನಿಮಗೆ ಸಲಹೆ ನೀಡಲಾಗಿದೆ.
ಪರಿಹಾರ - ಭಗವಂತ ಸೂರ್ಯನನ್ನು ಪೂಜಿಸಿ ಮತ್ತು ಸೂರ್ಯ ದೇವರಿಗೆ ಕೆಂಪು ಶ್ರೀಗಂಧ ಸೇರಿಸಿದ ನೀರು ಅರ್ಪಿಸಿ.
ಮೀನಾ
ಮೀನಾ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಧೈರ್ಯ, ಅಲ್ಪ ಪ್ರವಾಸಗಳು, ಮಾರಾಟ, ಸಹೋದರ - ಸಹೋದರಿಯರು ಮತ್ತು ಕೈ ಕಲೆಯ ಮೂರನೇ ಮನೆಗೆ ಗೋಚರಿಸಲಿದೆ. ಈ ಅವಧಿಯಲ್ಲಿ ಸೂರ್ಯ ಗ್ರಹವು ನಿಮ್ಮ ಏಕಾಗ್ರತೆ ಮತ್ತು ಸಮರ್ಪಣೆಯನ್ನು ಹೆಚ್ಚಿಸುತ್ತದೆ ಮತ್ತು ನೀವು ಶಕ್ತಿಯುತ ಮತ್ತು ತಾಜಾತನವನ್ನು ಅನುಭವಿಸುವಿರಿ ಮತ್ತು ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಸಿದ್ಧರಾಗಿರುವಿರಿ. ದಾಂಪತ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸರಾಸರಿಯಾಗಿರುತ್ತದೆ ಮತ್ತು ನೀವು ನಿಮ್ಮನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೀರಿ. ಈ ಸಮಯದಲ್ಲಿ ಈ ರಾಶಿಚಕ್ರದ ಕೆಲವರು ಅಲ್ಪ ದೂರದ ಪ್ರಯಾಣ ಮಾಡಬಹುದು. ಈ ಸಂಚಾರದ ಸಮಯದಲ್ಲಿ, ನಿಮ್ಮ ಕುಟುಂಬ ಮತ್ತು ನಿಮ್ಮ ಸ್ನೇಹಿತರು ನಿಮಗೆ ತುಂಬಾ ಸಹಾಯಕವಾಗುತ್ತಾರೆ. ಈ ಸಮಯದಲ್ಲಿ ನೀವು ಅಸಾಧಾರಣ ಫಲಿತಾಂಶಗಳನ್ನು ಸಾಧಿಸಲು ಅಪಾಯವನ್ನು ತೆಗೆದುಕೊಳ್ಳಲು ಸಹ ಹಿಂಜರಿಯುವುದಿಲ್ಲ. ಯೋಜನೆಗಳನ್ನು ಮುನ್ನಡೆಸಲು ಇದು ಉತ್ತಮ ಸಮಯ. ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಲು ಅದ್ಭುತ ಸಮಯ. ಈ ಸಮಯದಲ್ಲಿ ನೀವು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಯಾವುದೇ ತೊಂದರೆಗಳನ್ನು ತಪ್ಪಿಸಲು ನಿಮ್ಮ ಆರೋಗ್ಯದ ಬಗ್ಗ ಕಾಳಜಿ ವಹಿಸಿ.
ಪರಿಹಾರ - ಪ್ರತಿದಿನ ಸೂರ್ಯೋದಯಕ್ಕೆ ಮೊದಲು ಎದ್ದೇಳಲು ಪ್ರಯತ್ನಿಸಿ ಮತ್ತು ಸಾಮಾನ್ಯ ದಿನಂದಿನ ದಿನಚರಿಯನ್ನು ಕಾಪಾಡಿಕೊಳ್ಳುವುದು ನಿಮಗೆ ಪ್ರಯೋಜನಕಾರಿಯಾಗಿರುತ್ತದೆ.