ಕುಂಭ ರಾಶಿಯಲ್ಲಿ ವಕ್ರ ಗುರು ಸಂಚಾರ ( 20th June 2021 )
ಜ್ಯೋತಿಷ್ಯದಲ್ಲಿ ವಕ್ರತೆಯು ಯಾವುದಾದರೂ ಒಂದು ರೀತಿಯಲ್ಲಿ ಸವಾಲಾಗಿರುತ್ತದೆ. ಏಕೆಂದರೆ ಇದು ನಿಮ್ಮ ಜೇವನದ ಕೆಲವು ಕಾರ್ಯಗಳನ್ನು ನಿಲ್ಲಿಸುತ್ತದೆ ಮತ್ತು ಆಯಾ ಗ್ರಹದಿಂದ ನಿಯಂತ್ರಿಸಲ್ಪಡುವ ಪ್ರದೇಶಗಳನ್ನು ಪರಿಶೀಲಿಸಲು, ಮೌಲ್ಯಮಾಪನ ಮಾಡಲು ಮತ್ತು ತಿದ್ದುಪಡಿ ಮಾಡಲು ನಿಮ್ಮನ್ನು ಒತ್ತಾಯಿಸುತ್ತದೆ. ಗುರು ಗ್ರಹವನ್ನು ಅದೃಷ್ಟ ಮತ್ತು ಸಮೃದ್ಧಿಗೆ ಕಾರಣವಾಗುವ ಗ್ರಹವೆಂದು ಪರಿಗಣಿಸಲಾಗಿದೆ. ಈ ಗ್ರಹವು ವಕ್ರ ಚಲನೆಯನ್ನು ಹೊಂದಿದಾಗ, ಇದರ ವೇಗ ನಿಧಾನವಾಗುತ್ತದೆ, ಇದರಿಂದಾಗಿ ವ್ಯಕ್ತಿಯು ಹತಾಷೆಗಿಂತ ಹೆಚ್ಚಾಗಿ ಜ್ಞಾನವನ್ನು ಪಡೆಯುತ್ತಾನೆ. ಅದೃಷ್ಟ, ಶಿಕ್ಷಣ, ತರ್ವಶಾಸ್ತ್ರ ಮತ್ತು ಅಭ್ಯಾಸವನ್ನು ತೋರಿಸುವ ಈ ಗ್ರಹವು ಹಿಮ್ಮೆಟ್ಟಿದಾಗ, ವ್ಯಕ್ತಿಯು ಆಂತರಿಕ ಅಭಿವೃದ್ಧಿಯತ್ತ ಸಾಗುತ್ತಾನೆ.
ಆಸ್ಟ್ರೋಸೇಜ್ ವಾರ್ತಾ ಮೂಲಕ ವಿಶ್ವದ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ
ಗುರುವು ಪ್ರತಿ ವರ್ಷ ವಕ್ರೀ ಆಗುತ್ತಾನೆ ಮತ್ತು ಈ ಸಮಯದಲ್ಲಿ ಸಾಮಾನ್ಯವಾಗಿ ಹೊರಕ್ಕೆ ನಿರ್ದೇಶಿಸಲ್ಪಟ್ಟ ಬೆಳವಣಿಗೆ ಒಳಮುಖವಾಗಿ ತಿರುಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಉತ್ತಮವಾಗಿ ಬೆಳೆಯುವ ವಿಷಯಗಳು ನಿಧಾನವಾಗುತ್ತವೆ ಅಥವಾ ನಿಲ್ಲುತ್ತವೆ. ಇದು ವಿಷಯಗಳ ವಿಭಿನ್ನ ಅಂಶಗಳನ್ನು ಮತ್ತು ನಮ್ಮ ಸಮಸ್ಯೆಗಳನ್ನು ನಿವಾರಿಸಲು ಹೊಸ ಮಾರ್ಗಗಳನ್ನು ಪರಿಗಣಿಸಲು ನಮ್ಮನ್ನು ಒತ್ತಾಯಿಸುತ್ತದೆ. ಗುರು ಗ್ರಹವು ಕುಂಭ ರಾಶಿಯಲ್ಲಿ ಹಿಮ್ಮೆಟ್ಟಿದಾಗ, ನಾವು ಮಾಡಲು ಬಯಸುವ ಕೆಲಸ ಅಥವಾ ನಾವು ಮುಂದುವರಿಯಲು ಬಯಸುವ ಪ್ರದೇಶಗಳನ್ನು ಪರಿಶೀಲಿಸಲು ನಮಗೆ ಸಮಯ ಸಿಗುತ್ತದೆ. ನಂತರ ಗುರುವು ಮಾರ್ಗಿಯಾದಾಗ, ನಮ್ಮ ವಿಮರ್ಶೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ, ನಾವು ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಬಹುದು. ಆದ್ದರಿಂದ ವಕ್ರೀ ಗುರುವು, ನಮ್ಮ ಯೋಜನೆಗಳ ಅಭಿವೃದ್ಧಿ ಮತ್ತು ಪ್ರಗತಿಗೆ ನಮ್ಮನ್ನು ಸಿದ್ಧಪಡಿಸುತ್ತದೆ, ಇದು ಉತ್ತಮ ಯಶಸ್ಸನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತದೆ.
ಗುರುವು ಪ್ರತಿ 13 ತಿಂಗಳಿಗೊಮ್ಮೆ ತಿಂಗಳಿಗೆ ವಕ್ರನಾಗುತ್ತಾನೆ. ಈ ಸಂಚಾರದ ಸಮಯದಲ್ಲಿ ನಾವು ನಮ್ಮ ನಂಬಿಕೆಗಳು, ಮೌಲ್ಯಗಳ ಮೇಲೆ ಕೆಲಸ ಮಾಡುತ್ತೇವೆ ಮತ್ತು ಸಮಾಜದ ಅಚ್ಚಿನಿಂದ ಹೊರಬರಲು ಪ್ರಯತ್ನಿಸುತ್ತೇವೆ. ವಕ್ರೀ ಗುರುವು, ಬೆಟ್ಟಿಂಗ್, ಹೂಡಿಕೆ ಅಥವಾ ಜೂಜಾಟಕ್ಕೆ ಅನುಕೂಲಕರವೆಂದು ಪರಿಗಣಿಸಲಾಗುವುದಿಲ್ಲ, ಏಕೆಂದರೆ ಈ ಸಮಯದಲ್ಲಿ ಗೆಲ್ಲುವ ಸಾಧ್ಯತೆಗಳು ಕಡಿಮೆ.
20 ಜೂನ್, 2021 ರಂದು ಗುರುವು ಕುಂಭ ರಾಶಿಯಲ್ಲಿ ಹಿಮ್ಮೆಟ್ಟುತ್ತದೆ ಮತ್ತು 14 ಸೆಪ್ಟೆಂಬರ್, 2021 ರಂದು ಅದು ಮಾರ್ಗಿಯಾಗಿ ಚಲಿಸಲು ಆರಂಭಿಸುತ್ತದೆ.
ನಡೆಯಿರಿ ಎಲ್ಲಾ ರಾಶಿಗಳ ಇದು ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ:
ಮೇಷ ರಾಶಿ
ಮೇಷ ರಾಶಿಚಕ್ರದ ಸ್ಥಳೀಯರಿಗೆ ಗುರುವು ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಆದಾಯ, ಲಾಭ ಮತ್ತು ಆಸೆಗಳ ನಿಮ್ಮ ಹನ್ನೆರಡನೇ ಮನೆಯಲ್ಲಿ ಇದು ವಕ್ರನಾಗಿ ಗೋಚರಿಸುತ್ತದೆ. ಹನ್ನೆರಡನೇ ಮನೆಯಲ್ಲಿ ಗುರುವಿನ ಉಪಸ್ಥಿತಿಯು, ನಿಮಗೆ ನಿಮ್ಮ ಆಸೆಗಳು, ನಿರೀಕ್ಷೆಗಳು ಮತ್ತು ಕನಸುಗಳನ್ನು ಪೂರ್ಣಗೊಳಿಸುವಲ್ಲಿ ಈ ಸಮಯದಲ್ಲಿ ಕಷ್ಟವಾಗುತ್ತದೆ ಎಂದು ತೋರಿಸುತ್ತದೆ. ಈ ಸಮಯದಲ್ಲಿ ನೀವು ನಿರೀಕ್ಷಿಸುತ್ತಿರುವ ಎಲ್ಲವನ್ನೂ ಪೂರ್ಣಗೊಳಿಸುವಲ್ಲಿ ವಿಳಂಬವಾಗಬಹುದು ಅಥವಾ ನೀವು ನಿರೀಕ್ಷಿಸಿದ ಫಲವನ್ನು ನೀವು ಪಡೆಯುವುದಿಲ್ಲ. ಅರ್ಥಿಕ್ವಾಗಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಮತ್ತು ಭವಿಷ್ಯದಲ್ಲಿ ನಿಮ್ಮ ವೆಚ್ಚಗಳು ಹೆಚಾಗುತವ ಸಂಪೂರ್ಣ ಸಾಧ್ಯತೆ ಇದೆ. ನಿಮ್ಮ ಪ್ರೀತಿಯ ಸಂಬಂಧಗಳ ಮೇಲೆ ದೃಷ್ಟಿ ಹಾಕಿದರೆ, ಈ ಸಮಯದಲ್ಲಿ ಸಂಗಾತಿಗಾಗಿ ನೀವು ಸಾಕಷ್ಟು ಸಮಯವನ್ನು ಹೊಂದಿರುವುದಿಲ್ಲ. ಆದ್ದರಿಂದ ಯಾವುದೇ ರೀತಿಯ ತಪ್ಪು ಗ್ರಹಿಕೆಯನ್ನು ತಪ್ಪಿಸಲು ನಿಮ್ಮ ಸಂಗಾತಿಯೊಂದಿಗೆ ಸರಿಯಾದ ಸಂವಹನ ನಡೆಸಲು ನಿಮಗೆ ಸೂಚಿಸಲಾಗಿದೆ ಮತ್ತು ಅವರಿಗೆ ಸಮಯ ನೀಡಿ. ವಿವಾಹಿತ ಜನರು ತಮ್ಮ ಕುಟುಂಬವನ್ನು ವಿಸ್ತರಿಸಲು ಬಯಸುತ್ತಿದ್ದರೆ, ಗುರುವು ಮಾರ್ಗಿಯಾಗುವ ವರೆಗೆ ಕಾಯಬೇಕು. ಅರೋಗ್ಯ ಜೀವನದ ಮೇಲೆ ದೃಷ್ಟಿ ಹಾಕಿದರೆ, ಇದು ನಿಮಗೆ ಅನುಕೂಲಕರ ಸಮಯ. ಸರಿಯಾದ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉಳಿಸಿಕೊಳ್ಳಲು ನಿಮಗೆ ಸೂಚಿಸಲಾಗಿದೆ.
ಪರಿಹಾರ - ಶ್ರೀ ರುದ್ರಂ ಅನ್ನು ಪಠಿಸಿ.
ವೃಷಭ ರಾಶಿ
ವೃಷಭ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ವೃತ್ತಿಪರ, ಹೆಸರು ಮತ್ತು ಖ್ಯಾತಿಯ ಹತ್ತನೇ ಮನೆಗೆ ಗೋಚರಿಸಲಿದೆ. ಹತ್ತನೇ ಮನೆಯಲ್ಲಿ ಗುರುವಿನ ವಕ್ರ ಸಂಚಾರದ ಸಮಯದಲ್ಲಿ ನಿಮ್ಮ ಮಟ್ಟವನ್ನು ನೀವು ಕಾಪಾಡಿಕೊಳ್ಳಬೇಕು ಮತ್ತು ಯಾವುದೇ ಕೆಲಸವನ್ನು ಮಾಡುವಾಗ ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ನೀವು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಇದಲ್ಲದೆ ನಿಮ್ಮ ಧ್ವನಿ ಮತ್ತು ಪದಗಳ ಮೇಲೆ ಗಮನ ಹರಿಸಲು ಸೂಚಿಸಲಾಗಿದೆ ಮತ್ತು ಎಲ್ಲರನ್ನು ಗೌರವಿಸಿ. ವ್ಯಾಪಾರಿಕ ಮತ್ತು ವೃತ್ತಿಪರ ಜೀವನದಲ್ಲಿ ಈ ಸಮಯದಲ್ಲಿ ಯಾವುದೇ ಹೊಸ ಪ್ರಾರಂಭಿಸದಿರಲು ನಿಮಗೆ ಸೂಚಿಸಲಾಗಿದೆ. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಪರಿಸ್ಥಿತಿಗಳು ನಿಮಗೆ ಅನುಕೂಲಕರವಾಗಿಲ್ಲದಿದ್ದರೂ, ಈ ಸಮಯದಲ್ಲಿ ಉದ್ಯೋಗ ಬದಲಾವಣೆಯ ಬಗ್ಗೆ ಕಾಳಜಿವಹಿಸಬೇಡಿ. ಆದಾಗ್ಯೂ ವ್ಯಾಪಾರಸ್ಥರು ಈ ಸಮಯದಲ್ಲಿ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಹೇಗಾದರೂ ಈ ಲಾಭವನ್ನು ಪಡೆಯುವಲ್ಲಿ ವಿಳಂಬದದ ಸಾಧ್ಯಾತೆ ಇದೆ, ಕುಟುಂಬ ವಾತಾವರಣವು ನಿಮಗೆ ಆನುಕೂಲಕರವಾಗಿರುತ್ತದೆ, ಏಕೆಂದರೆ ಈ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಹೆಚ್ಚಾಗುತ್ತದೆ.
ಪರಿಹಾರ - ಗುರುವಾರ ಉಪವಾಸ ಮಾಡುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
ಮಿಥುನ ರಾಶಿ
ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಧರ್ಮ, ಅಂತರರಾಷ್ಟ್ರೀಯ ಪ್ರವಾಸಗಳು ಮತ್ತು ಅದೃಷ್ಟದ ಒಂಬತ್ತನೇ ಮನೆಗೆ ಗೋಚರಿಸುತ್ತದೆ. ವಕ್ರೀ ಗುರು ಒಂಬತ್ತನೇ ಮನೆಯಲ್ಲಿದ್ದಾಗ, ಇದು ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅಶಾಂತಿ ಸೃಷ್ಟಿಸುತ್ತದೆ. ಆದರೆ ಕ್ರಮೇಣ ಈ ರಾಶಿಚಕ್ರದ ಜನರು ಶಿಕ್ಷಣದ ಕ್ಷೇತ್ರದಲ್ಲಿ ಸುಧಾರಣೆ ಕಾಣುತ್ತಾರೆ. ನಿಮ್ಮ ಶಿಕ್ಷಣ ಪೂರ್ಣಗೊಳ್ಳಬಹುದು ಆದರೆ ಸಂಬಂಧಿತ ಕ್ಷೇತ್ರದಲ್ಲಿ ನಿಮ್ಮ ವೃತ್ತಿಜೀವನವನ್ನು ಹೊಂದದಿರುವ ಸಾಧ್ಯತೆ ಇದೆ. ಒಂಬತ್ತನೇ ಮನೆಯಲ್ಲಿ ವಕ್ರೀ ಗುರುವು ವಿಭಿನ್ನ ನಂಬಿಕೆ ವ್ಯವಸ್ಥೆಯನ್ನು ನೀಡುತ್ತದೆ, ಈ ಸಮಯದಲ್ಲಿ ನಿಮ್ಮ ಗುರುಗಳ ಹೊರಗೆ ನೀವು ವಿಚಾರಗಳನ್ನು ರಚಿಸಬಹುದು. ಈ ಸಂಚಾರದ ಸಮಯದಲ್ಲಿ ನೀವು ಕಾನೂನು ವ್ಯವಸ್ಥೆಯಲ್ಲಿ ಕೆಲವು ಸಮಸ್ಯೆಗಳನ್ನು ಹೊಂದಿರಬಹುದು. ವೃತ್ತಿಪರ ಜೀವನದ ಮೇಲೆ ದೃಷ್ಟಿ ಹಾಕಿದರೆ, ನಿಮಗೆ ಉದ್ಯೋಗವಿಲ್ಲದಿದ್ದರೆ ಅಥವಾ ನೀವು ಹೊಂದಿರುವ ಉದ್ಯೋಗ ತೃಪ್ತಕರವಾಗಿಲ್ಲದಿದ್ದರೆ ನೀವು ಒಂದು ಹೊಸ ಅವಕಾಶವನ್ನು ಪಡೆಯಬಹುದು ಆದರೆ ನೀವು ತಾಳ್ಮೆಯಿಂದಿರಲು ನಿಮಗೆ ಸೂಚಿಸಲಾಗಿದೆ. ಏಕೆಂದರೆ ಅದರಲ್ಲಿ ಸ್ವಲ್ಪ ವಿಳಂಬವಾಗಬಹುದು. ಈ ಸಂಚಾರದ ಸಮಯದಲ್ಲಿ ನೀವು ಕುಟುಂಬದ ಬೆಂಬಲವನ್ನು ಪಡೆಯಬಹುದು. ಈ ಸಮಯದಲ್ಲಿ ಮಕ್ಕಳು ಮತ್ತು ಸಹೋದರರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಕಠಿಣ ಪರಿಶ್ರಮದ ಮೂಲಕ ನಿಮ್ಮ ಅನೇಕ ಆಸೆಗಳನ್ನು ಪೂರೈಸಬಹುದು ಮತ್ತು ನೀವು ಮೊದಲು ಎದುರಿಸಿದ ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಸಾಧ್ಯವಾಗುತ್ತದೆ.
ಪರಿಹಾರ - ಗುರುವಾರ ಹಣೆಯ ಮೇಲೆ ಹಳದಿ ಅಥವಾ ಕೇಸರಿ ತಿಲಕವನ್ನು ಹಚ್ಚಿಸಿ.
ಕರ್ಕ ರಾಶಿ
ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಗುರು ಆರನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ಜಂಟಿ ಉದ್ಯಮ, ತೆರಿಗೆ, ಸಾಲ ಮತ್ತು ಸಾವಿನ ಎಂಟನೇ ಮನೆಗೆ ಪ್ರವೇಶಿಸುತ್ತದೆ. ಎಂಟನೇ ಮನೆಯಲ್ಲಿ ಗುರುವು ನೆಲೆಗೊಂಡಿದ್ದರೆ, ಸ್ಥಳೀಯರು ತೆರಿಗೆ ಮೊತ್ತದಿಂದ ಲಾಭ ಪಡೆಯಬಹುದು ಆದರೆ ಇದು ಸಹ ವಿಳಂಬವಾಗಬಹುದು. ವಿಮಾ ಸೌಲಭ್ಯಗಳನ್ನು ಪಡೆಯಲು ನೀವು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗಿದೆ. ನಿಮ್ಮ ಲೈಂಗಿಕ ಆಸೆಗಳ ಬಗ್ಗೆ ನೀವು ತುಂಬಾ ಸಕ್ರಿಯರಾಗಿರುತ್ತೀರಿ ಆದರೆ ಗುರುವಿನ ವಕ್ರೀ ಸ್ಥಿತಿಯ ಕಾರಣದಿಂದಾಗಿ ಲೈಂಗಿಕ ಜೀವನದಲ್ಲಿ ಕೆಲವು ಅಸಮಾಧಾನಗಳು ಉಂಟಾಗಬಹುದು. ಆಧ್ಯಾತ್ಮಿಕ ವಿಷಯಗಳ ಬಗ್ಗೆ ನಿಮ್ಮಲ್ಲಿ ಅಸಮಾಧಾನವನ್ನು ಕಾಣಬಹುದು. ಈ ಸಮಯದಲ್ಲಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮುನ್ನಡೆಯಲು ನೀವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಆರೋಗ್ಯದ ದೃಷ್ಟಿಯಿಂದ, ಸಾಧ್ಯವಾದಷ್ಟು ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಲು ಸೂಚಿಸಲಾಗಿದೆ ಏಕೆಂದರೆ ಈ ಸಮಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಈ ಮಧ್ಯೆ ನಿಮ್ಮ ಶಕ್ತಿಯನ್ನು ಅನಗತ್ಯವಾಗಿ ವ್ಯರ್ಥ ಮಾಡುವುದನ್ನು ತಪ್ಪಿಸಬೇಕು.
ಪರಿಹಾರ - ‘ಓಂ ಗ್ರಾಂ ಗ್ರೀಂ ಗ್ರೌಂ ಸಃ ಗುರುವೇ ನಮಃ’ ಗುರು ಬೀಜ ಮಂತ್ರವನ್ನು ಜಪಿಸಿ.
ಸಿಂಹ ರಾಶಿ
ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಐದನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಮದುವೆ ಮತ್ತು ಪಾಲುದಾರಿಕೆಯ ಏಳನೇ ಮನೆಗೆ ವಕ್ರೀ ಸ್ಥಿತಿಯಲ್ಲಿ ಗೋಚರಿಸುತ್ತದೆ. ವಕ್ರ ಗುರುವು ಈ ರಾಶಿಚಕ್ರದ ಸ್ಥಳೀಯರನ್ನು ಉದಾರ ಮತ್ತು ನೈತಿಕ ಸಂಗಾತಿಯನ್ನು ಹುಡುಕುವಂತೆ ಮಾಡುತ್ತದೆ. ಈ ರಾಶಿಚಕ್ರದ ಜನರು ಪ್ರೀತಿಯ ಸಂಬಂಧದಲ್ಲಿ ಸ್ವಾತಂತ್ರ್ಯವನ್ನು ಬಯಸುತ್ತಾರೆ ಆದರೆ ಗುರುವಿನ ವಕ್ರ ಚಲನೆಯ ಸಮಯದಲ್ಲಿ ಪ್ರೀತಿಯ ಸಂಬಂಧದಲ್ಲಿ ಕೆಲವು ಅಧೀನತೆಯನ್ನು ಕಾಣಲಾಗುತ್ತದೆ. ಗುರುವು ಮದುವೆಯ ಅಂಶದ ಗ್ರಹ ಮತ್ತು ಈ ಸಮಯದಲ್ಲಿ ವಕ್ರ ಸ್ಥಿತಿಯಲ್ಲಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಕೆಲವು ಸ್ಥಳೀಯರು ಎರಡನೇ ಮಾಡುವೆ ಮಾಡಿಕೊಳ್ಳಬಹುದು. ವೃತ್ತಿಪರವಾಗಿ ಈ ಸಮಯದಲ್ಲಿ ಉದ್ಯೋಗ ಬದಲಾಯಿಸುವುದನ್ನು ತಪ್ಪಿಸಬೇಕು. ಏಕೆಂದರೆ ನೀವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗುವುದಿಲ್ಲ. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳೊಂದಿಗೆ ಹೋರಾಡುವುದನ್ನು ಕಾಣಲಾಗುತ್ತದೆ. ಆರ್ಥಿಕವಾಗಿ ನೀವು ಅನೇಕ ಏರಿಳಿತಗಳನ್ನು ಎದುರಿಸಬೇಕಾಗಬಹುದು ಮತ್ತು ಹಣಕಾಸಿನ ವಹಿವಾಟಿನ ಮೂಲಕ ಲಾಭವಾಗುವ ಸಾಧ್ಯತೆ ಬಹಳ ಣಿಯನ್ನು ಧರಿಸಿ. ಕಡಿಮೆಯಿದೆ.
ಪರಿಹಾರ - ಹಳದಿ ನೀಲಮಣಿಯನ್ನು ಧರಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಗುರುವು ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಆರನೇ ಮನೆಯಲ್ಲಿ ವಕ್ರಿಯಾಗಿ ಗೋಚರಿಸುತ್ತದೆ. ಆರನೇ ಮನೆ ಸಂಘರ್ಷ ಅಹಿತಕರ ಕೆಲಸ, ವಿಚ್ಛೇದನೆ, ಶತ್ರು ಇತ್ಯಾದಿಗಳ ಪರಿಗಣಿಸಲಾಗಿದೆ. ಈ ಸಂಚಾರದ ಸಮಯದಲ್ಲಿ ಕನ್ಯಾ ರಾಶಿಚಕ್ರದ ಸ್ಥಳೀಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲವಾಗಿ ಕಂಡುಬರುತ್ತಾರೆ. ನೀವು ನಿಮ್ಮ ಅಗತ್ಯಗಳನ್ನು ಪೂರೈಸುವಲ್ಲಿ ಸಮರ್ಥರಾಗುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಸ್ಪರ್ಧಿಗಳ ಮೇಲೆ ನೀವು ಪ್ರಾಬಲ್ಯ ಸಾಧಿಸುವಿರಿ. ಗುರುವಿನ ವಕ್ರತೆಯು ನಿಮ್ಮ ಆರೋಗ್ಯದ ಮೇಲೆ ಕೆಲವು ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ನೀವು ಮಧುಮೇಹವನ್ನು ಹೊಂದುವ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಿ. ಇದಲ್ಲದೆ ಈ ಸಮಯದಲ್ಲಿ ಕೆಲವು ಸ್ಥಳೀಯರ ತೂಕ ಹೆಚ್ಚಾಗಬಹುದು. ಈ ರಾಶಿಚಕ್ರದ ವೃತ್ತಿಪರ ಸ್ಥಳೀಯರು ಕೆಲಸದ ಸ್ಥಳದಲ್ಲಿ ತುಂಬಾ ಹೆಚ್ಚು ಕೆಲಸ ಮಾಡಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಬೆಂಬಲಿಸುವುದಿಲ್ಲ ಮತ್ತು ನಿಮ್ಮ ಲಾಭವನ್ನು ಪಡೆದುಕೊಳ್ಳಲು ಬಯಸುತ್ತಾರೆ. ನೀವು ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುತ್ತಿದ್ದರೆ, ಅದರಲ್ಲಿ ಯಶಸ್ಸು ಪಡೆಯಲು ನೀವು ಸಾಕಷ್ಟು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಈ ರಾಶಿಚಕ್ರದ ವಿವಾಹಿತ ಜನರು ತಮ್ಮ ದಾಂಪತ್ಯ ಜೀವನದಲ್ಲಿ ಕೆಲವು ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು.
ಪರಿಹಾರ - ಗುರು ಸ್ತೋತ್ರವನ್ನು ಪಠಿಸಿ.
ತುಲಾ ರಾಶಿ
ತುಲಾ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಮೂರನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಪ್ರಣಯ, ಹೂಡಿಕೆ, ಮಕ್ಕಳು, ಶಿಕ್ಷಣ, ಶೇರ್ ಮಾರ್ಕೆಟ್ ಇತ್ಯಾದಿಯ ಐದನೇ ಮನೆಯಲ್ಲಿ ವಕ್ರನಾಗಿ ಗೋಚರಿಸುತ್ತದೆ. ವಕ್ರ ಗುರುವಿನ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ತಮ್ಮ ದಾಂಪತ್ಯ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಪ್ರಣಯದ ಕನಸುಗಳು ವಾಸ್ತವಕ್ಕೆ ತಿರುಗುವುದಿಲ್ಲ. ಈ ಸಾಗಣೆಯ ಸಮಯದಲ್ಲಿ ತುಲಾ ರಾಶಿಚಕ್ರದ ಸ್ಥಳೀಯರ ಭಾವನೆಯು ವಿಶೇಷವಾಗಿ ತಮ್ಮ ಮಕ್ಕಳ ಬಗ್ಗೆ ಶೂನ್ಯವಾಗಿರುತ್ತದೆ. ಈ ಸಮಯದಲ್ಲಿ ಈ ರಾಶಿಚಕ್ರದ ಜನರು ಒಂದಕ್ಕಿಂತ ಹೆಚ್ಚು ವಿರುದ್ಧ ಲಿಂಗಗಳೊಂದಿಗೆ ಸಂಬಂಧವನ್ನು ಹೊಂದಬಹುದು. ಮದುವೆಯಾಗಲು ಬಯಸುತ್ತಿರುವ ಈ ರಾಶಿಚಕ್ರದ ಜನರು ಸಹ ಕೆಲವು ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು ಮತ್ತು ಮದುವೆ ಕೂಡ ವಿಳಂಬವಾಗಬಹುದು. ಈ ವಕ್ರ ಸಂಚಾರದ ಸಮಯದಲ್ಲಿ ನೀವು ಬೆಟ್ಟಿಂಗ್ ನಿಂದ ದೂರವಿರಬೇಕು. ಶೇರ್ ಮಾರ್ಕೆಟ್ ನಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡಬೇಡಿ. ಏಕೆಂದರೆ ಈ ಸಮಯದಲ್ಲಿ ನಿಮ್ಮ ನಿರೀಕ್ಷೆಗೆ ಅನುಗುಣವಾಗಿ ಪ್ರಯೋಜನೆಗಳನ್ನು ಪಡೆಯುವ ಸಾಧ್ಯತೆ ಕಡಿಮೆ ಇದೆ.
ಪರಿಹಾರ - ಹಸುವಿಗೆ ಬೆಲ್ಲ ಮತ್ತು ಹಿಟ್ಟು ತಿನ್ನಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಗುರುವು ಎರಡನೇ ಮತ್ತು ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಸಂತೋಷ, ತಾಯಿ, ವಿಶ್ರಾಂತಿ, ವಾಹನ ಇತ್ಯಾದಿಯ ನಾಲ್ಕನೇ ಮನೆಗೆ ವಕ್ರನಾಗಿ ಗೋಚರಿಸುತ್ತದೆ. ಈ ಸಂಚಾರವು ಈ ರಾಶಿಚಕ್ರದ ಸ್ಥಳೀಯರನ್ನು ದುರಹಂಕಾರದಿಂದ ತುಂಬುತ್ತದೆ ಮತ್ತು ನೀವು ತುಂಬಾ ಸೊಕ್ಕಿನವರಾಗಬಹುದು. ಜನರ ಕಡೆಗೆ ತಪ್ಪುಪದಗಳನ್ನು ಬಳಸುವ ಮೂಲಕ ನಿಮಗಾಗಿ ನೀವು ಶತ್ರುಗಳನ್ನು ಮಾಡಬಹುದು. ಆರ್ಥಿಕವಾಗಿ ಈ ಸಮಯ ನಿಮಗೆ ಅದೃಷ್ಟವಾಗಿರುತ್ತದೆ ಮತ್ತು ನಿಮ್ಮ ಕಠಿಣ ಪರಿಶ್ರಮದ ಮೂಲಕ ನೀವು ಯಶಸ್ಸು ಪಡೆಯುತ್ತೀರಿ. ತಾಯಿಯೊಂದಿಗಿನ ಸಂಬಂಧದಲ್ಲಿ ಕೆಲವು ಏರಿಳಿತಗಳು ಉಂಟಾಗಬಹುದು. ನಿಮ್ಮ ಮಾನಸಿಕ ಶಾಂತಿ ಹದಗೆಡಬಹುದು. ಮತ್ತೊಂದೆಡೆ, ವಾಹನವನ್ನು ಹೊಂದಿರುವವರ ವಾಹನದಲ್ಲಿ ಯಾವುದೇ ದೋಷ ಉಂಟಾಗುವ ಸಾಧ್ಯತೆ ಇದೆ. ನಾಲ್ಕನೇ ಮನೆಯಲ್ಲಿ ಗುರುವಿನ ಉಪಸ್ಥಿತಿಯಿಂದಾಗಿ, ಸಂಪತ್ತು ಮತ್ತು ವಾಹನದ ಸಂತೋಷವನ್ನು ಪಡೆಯಲಾಗುತ್ತದೆ, ಇದರೊಂದಿಗೆ ಕುಟುಂಬದ ಜನರ ಬೆಂಬಲವನ್ನು ಸಹ ಪಡೆಯಲಾಗುತ್ತದೆ. ಆದರೆ ಗುರುವು ವಕ್ರ ಚಾಲನೆಯಲ್ಲಿರುವ ಕಾರಣದಿಂದಾಗಿ ನೀವು ನಿರೀಕ್ಷಿಸಿದಂತೆ ಫಲಿತಾಂಶವನ್ನು ಪಡೆಯುವುದಿಲ್ಲ. ದೈಹಿಕವಾಗಿ ನೀವು ದುರ್ಬಲರಾಗಿರುತ್ತೀರಿ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸಾಮಾನ್ಯಾಗಿರುತ್ತದೆ. ಈ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ಜನರು ಗೌರವವನ್ನು ಪಡೆಯುತ್ತಾರೆ ಮತ್ತು ನಿಮ್ಮ ಕೆಲಸದಿಂದ ರಜೆ ತೆಗೆದುಕೊಂಡು ನೀವು ಕೆಲವು ವಿರಾಮ ಕ್ಷಣಗಳನ್ನು ಕಳೆಯಬಹುದು.
ಪರಿಹಾರ - ಪ್ರತಿ ಗುರುವಾರ ರಾಗಿ ಮರವನ್ನು ಮುಟ್ಟದೆ ಅದಕ್ಕೆ ಅರ್ಪಿಸಿ.
ಧನು ರಾಶಿ
ಧನು ರಾಶಿಚಕ್ರದ ಸ್ಥಳೀಯರಿಗೆ ಗುರುವು ಮೊದಲನೇ ಮತ್ತು ನಾಲ್ಕನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಮೂರನೇ ಮನೆಗೆ ವಕ್ರತೆಯೊಂದಿಗೆ ಗೋಚರಿಸುತ್ತದೆ. ಮೂರನೇ ಮನೆಯು ನಿಮ್ಮ ಸಹೋದರ - ಸಹೋದರಿಯರು, ನೆರೆಹೊರೆಯವರು, ಸಂವಹನ, ಅಲ್ಪ ದೂರದ ಪ್ರಯಾಣಗಳು, ಧೈರ್ಯ - ಸಾಹಸ ಇತ್ಯಾದಿಯ ಅಂಶವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧದಲ್ಲಿ ಕಠೋರತೆ ಉಂಟಾಗಬಹುದು ಮತ್ತು ಅವರೊಂದಿಗಿನ ಸಂಬಂಧದ ಬಗ್ಗೆ ನೀವು ಅಸಮಾಧಾನಗೊಳ್ಳಬಹುದು. ಒಡಹುಟ್ಟಿದವರೊಂದಿಗೆ ಸೈದ್ಧಾಂತಿಕ ಭಿನ್ನತೆಗಳು ಇರಬಹುದು. ಸಾಮಾಜಿಕ ಮತ್ತು ವೃತ್ತಿಪರ ಜೀವನದಲ್ಲಿನ ಪ್ರಯತ್ನಗಳು ಯಶಸ್ವಿಯಾಗುತ್ತವೆ ಮತ್ತು ನೀವುಗೌರವ ಪಡೆಯುತ್ತೀರಿ. ಆರ್ಥಿಕವಾಗಿ ಸಮಯ ನಿಮಗೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಬಹಳ ಮಹತ್ವಾಕಾಂಕ್ಷೆಯಾಗಬಹುದು. ನಿಮ್ಮಲ್ಲಿ ಅಹಂಕಾರದ ಭಾವನೆ ಉಂಟಾಗಬಹುದು. ನಿಮ್ಮ ಅಹಂಕಾರವು ಹೆಚ್ಚು ಕಾಲ ನಿಮ್ಮನ್ನು ಮೇಲುಗೈ ಸಾಧಿಸಲು ಬಿಡಬೇಡಿ. ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ವಿಷಯಗಳನ್ನು ಹೇಗೆ ಸಂಘಟಿತವಾಗಿರಿಸಿಕೊಳ್ಳಬೇಕು ಎಂಬುದರ ಹೊಸ ವಿಧಾನಗಳನ್ನು ನೀವು ಕಲಿಯಬೇಕು.
ಪರಿಹಾರ - ರುದ್ರ ಅಭಿಷೇಕಂ ಅನ್ನು ಪಠಿಸಿ.
ಮಕರ ರಾಶಿ
ಮಕರ ರಾಶಿ ಚಕ್ರದ ಸ್ಥಳೀಯರಿಗೆ ಗುರು ಗ್ರಹವು ಹನ್ನೆರಡನೇ ಮತ್ತು ಮೂರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಕುಟುಂಬ, ಧ್ವನಿ, ಸಂವಹನ ಇತ್ಯಾದಿಯ ಹನ್ನೆರಡನೇ ಮನೆಗೆ ವಕ್ರ ಸ್ಥಿತಿಯಲ್ಲಿ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ಕೆಲವು ಅನಗತ್ಯ ಖರ್ಚುಗಳನ್ನು ಮಾಡಬೇಕಾಗುತ್ತದೆ, ಹಣಕಾಸಿನ ಅಸಮತೋಲನದಿಂದಾಗಿ ಈ ಸಮಯದಲ್ಲಿ ನಿಮ್ಮ ಜೀವನ ಶೈಲಿಯೂ ಬದಲಾಗಬಹುದು. ಗುರುವಿನ ಈ ಸಂಚಾರದ ಸಮಯದಲ್ಲಿ ನೀವು ಪೂರ್ವಜರ ಆಸ್ತಿಯನ್ನು ಪಡೆಯುವ ಸಾಧ್ಯತೆ ಇದೆ. ಆದರೆ ಆ ಆಸ್ತಿಯನ್ನು ಸರಿಯಾಗಿ ಬಳಸುವುದು ನಿಮಗೆ ಸರಿಯಾಗಿ ತಿಳಿದಿಲ್ಲದಿರಬಹುದು. ಈ ಸಂಚಾರದ ಸಮಯದಲ್ಲಿ ನಿಮ್ಮ ಸುರಕ್ಷತೆಯ ಬಗ್ಗೆ ನೀವು ಸೂಕ್ಷ್ಮವಾಗಿರಬಹುದು. ಈ ಸಮಯದಲ್ಲಿ ನಿಮ್ಮ ಕುಟುಂಬ ಮೌಲ್ಯಗಳ ಬಗ್ಗೆ ಖಂಡಿತವಾಗಿ ನೀವು ಯೋಚಿಸುವಿರಿ, ಆದರೆ ಅವುಗಳನ್ನು ಅನುಸರಿಸಲು ನೀವು ಬಯಸುವುದಿಲ್ಲ.
ಪರಿಹಾರ - ಗುರುವಾರ ಹಳದಿ ಅನ್ನವನ್ನು ತಯಾರಿಸಿ ಅದನ್ನು ಜನರಲ್ಲಿ ವಿತರಿಸಿ.
ಕುಂಭ ರಾಶಿ
ಕುಂಭ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಹನ್ನೊಂದನೇ ಮತ್ತು ಎರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಗುರುವು ನಿಮ್ಮ ಆತ್ಮ, ಅರೋಗ್ಯ ಇತ್ಯಾದಿಯ ಮೊದಲನೇ ಮನೆಗೆ ವಕ್ರವಾಗಿ ಗೋಚರಿಸುತ್ತದೆ. ಗುರುವಿನ ಈ ಸಂಚಾರದ ಸಮಯದಲ್ಲಿ ನಿಮಗೆ ಅರೋಗ್ಯ ಸಂಬಂಧಿತ ಸಮಸ್ಯೆಗಳಿರಬಹುದು. ಜ್ಯೋತಿಷ್ಯದಲ್ಲಿ ಗುರುವನ್ನು ಹೊಟ್ಟೆಯ ಅಂಶದ ಗ್ರಹವೆಂದು ಪರಿಗಣಿಸಲಾಗುತ್ತದೆ ಆದ್ದರಿಂದ ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ತಮ್ಮನ್ನು ತಾವು ಅನುಮಾನಿಸಿಕೊಳ್ಳಬಹುದು. ಏಕೆಂದರೆ ನೀವು ನಿಮ್ಮ ಸುತ್ತಮುತ್ತಲಿನ ಜನರನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ ಮತ್ತು ಕೆಲವು ಜನರು ನಿಮಗೆ ಮೋಸ ಮಾಡಬಹುದು. ವಕ್ರೀ ಗುರುವು ನೀವು ಆಶಿಸುತ್ತಿದ್ದ ಎಲ್ಲಾ ಪ್ರಯೋಜನಗಳನ್ನು ಮತ್ತು ಸುರಕ್ಷತೆಯನ್ನು ನೀಡುವುದಿಲ್ಲ ಮತ್ತು ಇದು ನಿಮ್ಮ ಜೀವನದಲ್ಲಿ ಅವಕಾಶಗಳು ಮತ್ತು ಅದೃಷ್ಟದಲ್ಲೂ ಕೊರತೆಯನ್ನುಂಟು ಮಾಡಬಹುದು. ಆದಾಗ್ಯೂ, ನಿಮ್ಮ ಮೊದಲನೇ ಮನೆಯಲ್ಲಿ ಗುರುವಿನ ವಕ್ರತೆಯಿಂದಾಗಿ ಬೌದ್ಧಿಕವಾಗಿ ನೀವು ಬಲಶಾಲಿಯಾಗಬಹುದು. ಇದು ನಿಮಗೆ ಉತ್ತಮ ಗುಣಗಳನ್ನು ಸಹ ನೀಡುತ್ತದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ ಮತ್ತು ಈ ಬದಲಾವಣೆಯ ಸಮಯದಲ್ಲಿ ಸಾರ್ವಜನಿಕವಾಗಿ ಮತ್ತು ಸಾಮಾಜಿಕವಾಗಿ ನಿಮ್ಮ ಉಪಸ್ಥಿತಿಯನ್ನು ಸಹ ಬಲಗೊಳಿಸುತ್ತದೆ
ಪರಿಹಾರ - ವಿದ್ಯಾರ್ಥಿಗಳಿಗೆ ಗುರುವಾರದಂದು ಅಧ್ಯಯನದ ವಸ್ತುಗಳನ್ನು ಉಡುಗೊರೆಯಾಗಿ ನೀಡಿ.
ಮೀನಾ ರಾಶಿ
ಮೀನಾ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಮೊದಲನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ವಿದೇಶ ಪ್ರವಾಸಗಳು, ಹಾನಿ, ಪ್ರತ್ಯೇಕತೆ, ಆಸ್ಪತ್ರೆಯ ಹನ್ನೆರಡನೇ ಮನೆಗೆ ಗೋಚರಿಸುತ್ತದೆ. ಹನ್ನೆರಡನೇ ಮನೆಯಲ್ಲಿ ಗುರು ಗ್ರಹವು ವಕ್ರನಾಗುವುದು ಈ ರಾಶಿಚಕ್ರದ ಸ್ಥಳೀಯರಿಗೆ ಉನ್ನತ ಜ್ಞಾನವನ್ನು ಪಡೆಯಲು ಉತ್ತಮವಾಗಿರುತ್ತದೆ ಮತ್ತು ದೈವಿಕ ಸ್ವಭಾವ, ಧ್ಯಾನ ಮತ್ತು ಸಂಶೋಧನೆಯೊಂದಿಗೆ ಸಂಪರ್ಕ ಸಾಧಿಸುವುದು ಈ ರಾಶಿಚಕ್ರದ ಸ್ಥಳೀಯರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸತ್ತದೆ. ಈ ಸಂಚಾರದ ಸಮಯದಲ್ಲಿ ಮೀನಾ ರಾಶಿಚಕ್ರದ ಸ್ಥಳೀಯರು ನಿರ್ಭಯರಾಗುತ್ತಾರೆ ಮತ್ತು ಪ್ರತಿಯೊಂದು ಪರಿಸ್ಥಿತಿಯನ್ನು ಬಲದಿಂದ ಎದುರಿಸುತ್ತಾರೆ. ಈ ಸಮಯದಲ್ಲಿ ಈ ರಾಶಿಚಕದ ಸ್ಥಳೀಯರು ತಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ. ಕೆಲವು ಸ್ಥಳೀಯರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಕಾಣಲಾಗುತ್ತದೆ. ಜಾತಕದಲ್ಲಿ ಗುರು ಗ್ರಹದ ಸ್ಥಾನದ ಪ್ರಕಾರ, ಕೆಲವು ಜನರು ಕೆಲವು ಕೆಟ್ಟ ಫಲಿತಾಂಶಗಳನ್ನು ಪಡೆಯಬಹುದು. ಕೆಲವೊಮ್ಮೆ ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಬಯಸಬಹುದು. ಆದರೆ ನೀ ಫಲಿತಾಂಶಗಳನ್ನು ನೀವು ಬಯಸಿದಂತೆ ಪಡೆಯುವುದಿಲ್ಲ, ಇದರಿಂದಾಗಿ ನೀವು ತೊನ್ದರೆಕ್ಕೊಳಗಾಗಬಹುದು.
ಪರಿಹಾರ - ‘ಓಂ ಗ್ರಾಂ ಗ್ರೀಂ ಗ್ರೌಂ ಸಃ ಗುರುವೇ ನಮಃ’ ಗುರು ಬೀಜ ಮಂತ್ರವನ್ನು ಜಪಿಸಿ.