ಮಕರ ರಾಶಿಯಲ್ಲಿ ಸೂರ್ಯ ಸಂಚಾರ (14th January 2021)
ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯ ಗ್ರಹವನ್ನು ಗ್ರಹಗಳ ರಾಜನೆಂದು ಪರಿಗಣಿಸಲಾಗಿದೆ. ಸೂರ್ಯನನ್ನು ವಿಶ್ವದ ಆತ್ಮ ಎಂದು ಸಹ ಕರೆಯಲಾಗುತ್ತದೆ. ಸೂರ್ಯ ತನ್ನ ಸ್ಥಾನವನ್ನು ಪರಿವರ್ತಿಸಿ ಮಕರ ರಾಶಿಯಲ್ಲಿ ಪ್ರವೇಶಿಸಿದರೆ, ಈ ಘಟನೆಯ ಪ್ರಭಾವವನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ. ಅನೇಕ ಸ್ಥಳಗಳಲ್ಲಿ ಈ ವಿಶೇಷ ದಿನವನ್ನು ಮಕರ ಸಂಕ್ರಾಂತಿ ಎಂದು ಸಹ ಆಚರಿಸಲಾಗುತ್ತದೆ. ಈ ಬಾರಿ ಮಕರ ರಾಶಿಯಲ್ಲಿ ಸೂರ್ಯನ ಪ್ರವೇಶವು 14 ಜನವರಿ 2021 ರಂದು ಬೆಳಿಗ್ಗೆ 8 ಗಂಟೆ 04 ನಿಮಿಷಕ್ಕೆ ಸಂಭವಿಸುತ್ತದೆ. ಆದ್ದರಿಂದ ವರ್ಷ 2021 ರಲ್ಲಿ ಮಕರ ಸಂಕ್ರಾಂತಿ, ಪೊಂಗಲ್ ಮತ್ತು ಉತ್ತರಾಯಣ ಹಬ್ಬಗಳನ್ನು 15 ಜನವರಿ ರಂದು ದೇಶಾದ್ಯಂತ ಆಚರಿಸಲಾಗುತ್ತದೆ.
ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯ ಆತ್ಮ, ತಂದೆ, ಪೂರ್ವಜರು, ಗೌರವ ಮತ್ತು ಉನ್ನತ ಸರ್ಕಾರಿ ಸೇವೆಯನ್ನು ಪ್ರತಿನಿಧಿಸುತ್ತದೆ. ಇದರ ಪರಿಣಾಮವಾಗಿ, ಒಬ್ಬ ವ್ಯಕ್ತಿಯ ಜಾತಕದಲ್ಲಿ ಸೂರ್ಯನ ಶುಭ ಸ್ಥಾನವನ್ನು ಹೊಂದಿದ್ದರೆ, ಆ ವ್ಯಕ್ತಿಯು ತನ್ನ ಜೀವನದಲ್ಲಿ ಉತ್ತಮ ಸ್ಥಾನಮಾನ, ಗೌರವ ಮತ್ತು ಸರ್ಕಾರಿ ಸೇವೆಯಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾನೆ. ಆದರೆ ಜಾತಕದಲ್ಲಿ ಅದಕ್ಕೆ ವಿರುದ್ಧವಾಗಿ ಸೂರ್ಯನ ದುರ್ಬಲ ಸ್ಥಾನದಿಂದಾಗಿ, ವ್ಯಕ್ತಿಯು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆ, ತಂದೆಗೆ ಕಷ್ಟ ಮತ್ತು ಪಿತೃದೋಷವನ್ನು ಎಂದುರಿಸಬೇಕಾಗಬಹುದು.
250+ ಪುಟಗಳ ವರ್ಣರಂಜಿತ ಜಾತಕವು ಭವಿಷ್ಯದ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ: ಬೃಹತ್ ಕುಂಡಲಿ
ನಡೆಯಿರಿ ಈಗ, ಮಕರ ರಾಶಿಯಲ್ಲಿ ಸೂರ್ಯನ ಸಂಚಾರವು ಎಲ್ಲ ರಾಶಿ ಚಿಹ್ನೆಗಾಲ ಏನು ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳೋಣ?
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ
ಮೇಷ ರಾಶಿ
ಸೂರ್ಯ ದೇವ ನಿಮ್ಮ ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಹತ್ತನೇ ಮನೆಯಲ್ಲಿರುತ್ತಾರೆ. ಸೂರ್ಯನ ಈ ಸಂಚಾರವು ನಿಮಗೆ ಸಾಕಷ್ಟು ಉತ್ತಮವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಸೂರ್ಯ ಸರಿಯಾದ ದಿಕ್ಕಿನಲ್ಲಿರುತ್ತಾರೆ. ಇದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
ಕೆಲಸದ ಸ್ಥಳದಲ್ಲೂ ಈ ಸಂಚಾರವು ನಿಮಗೆ ಸಂಪೂರ್ಣ ಅಭಿವೃದ್ಧಿ ಮತ್ತು ಯಶಸ್ಸನ್ನು ನೀಡುತ್ತದೆ. ಈ ಸಮಯದಲ್ಲಿ ಸೂರ್ಯ ಇತರ ಮೂರು ಗ್ರಹಗಳೊಂದಿಗೆ ಸಂಯೋಜಿಸುತ್ತಾರೆ, ಈ ಕಾರಣದಿಂದಾಗಿ ಕಲಿತುಕೊಳ್ಳುವ ನಿಮ್ಮ ಸಾಮರ್ಥ್ಯವು ಬೆಳೆಯುತ್ತದೆ. ಇದರ ಸಹಾಯದಿಂದ ನೀವು ನಿಮ್ಮ ಪ್ರತಿಯೊಂದು ಕೆಲವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತೀರಿ.
ಉದ್ಯೋಗದಲ್ಲಿರುವ ಜನರು ತಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಅವರಿಗೂ ಈ ಸಮಯ ಉತ್ತಮವಾಗಿರುತ್ತದೆ. ನೀವು ಸರ್ಕಾರದ ಮೂಲಕ ಯಾವುದೇ ಪ್ರಶಸ್ತಿ, ಬಹುಮಾನ ಅಥವಾ ಲಾಭವನ್ನು ಸಹ ಪಡೆಯಬಹುದು. ಶೇರ್ ಮಾರ್ಕೆಟ್ ಇತ್ಯಾದಿ ಕ್ಷೇತ್ರಗಳಿಗೆ ವ್ಯಾಪಾರಸ್ಥರು ಈ ಸಂಚಾರದ ಸಮಯದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಇದರಿಂದಾಗಿ ನಿಮ್ಮ ಆದಾಯವು ಹೆಚ್ಚಾಗುತ್ತದೆ.
ವಿವಾಹಿತ ಜನರು ತಮ್ಮ ದಾಂಪತ್ಯ ಜೀವನದಲ್ಲಿ ಮಕ್ಕಳ ಬೆಳವಣಿಗೆ ಮತ್ತು ಪ್ರಗತಿಯನ್ನು ನೋಡಿ ಸಂತೋಷವನ್ನು ಅನುಭವಿಸುತ್ತಾರೆ. ಆದಾಗ್ಯೂ, ಮಕ್ಕಳಿಗೆ ಕೆಲವು ಅರೋಗ್ಯ ಸಮಸ್ಯೆಗಳ ಸಾಧ್ಯತೆಯೂ ಇದೆ. ಇದರಿಂದಾಗಿ ನಿಮ್ಮ ಮಾನಸಿಕ ಒತ್ತಡವೂ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಸೂರ್ಯ ದೇವ ಶನಿಯೊಂದಿಗೆ ಸಂಯೋಜಿಸುತ್ತಾರೆ. ಆದ್ದರಿಂದ ನಿಮ್ಮ ತಂದೆ ತಂದೆಯಂತಹ ಯಾವುದೇ ವ್ಯಕ್ತಿಯೊಂದಿಗೆ ನೀವು ಭಿನ್ನಾಭಿಪ್ರಾಯಗಳನ್ನು ಹೊಂದುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಸಭ್ಯವಾಗಿ ವರ್ತಿಸಿ, ಪ್ರತಿಯೊಂದು ಸನ್ದರ್ಭದಲ್ಲಿ ನಿಮ್ಮ ಭಾಷೆಯ ಮೇಲೆ ಹಿಡಿತ ಸಾಧಿಸಬೇಕಾಗುತ್ತದೆ.
ಪರಿಹಾರ- ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಸೂರ್ಯ ದೇವರನ್ನು ನಮಸ್ಕರಿಸುವುದು ಉತ್ತಮ.
ವೃಷಭ ರಾಶಿ
ಸೂರ್ಯ ನಿಮ್ಮ ನಾಲ್ಕನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಒಂಬತ್ತನೇ ಮನೆಯಲ್ಲಿರುತ್ತಾರೆ. ಪರಿಣಾಮವಾಗಿ ನೀವು ನಿಮ್ಮ ಜೀವನದಲ್ಲಿ ಮಿಶ್ರ ಆದರೆ ಪ್ರಮುಖ ಫಲಿತಾಂಶಗಳನ್ನು ಪಡೆಯುತ್ತೀರಿ.
ಸೂರ್ಯನ ಈ ಸ್ಥಾನವು, ನಿಮ್ಮ ತಾಯಿಯ ಆರೋಗ್ಯವನ್ನು ಕ್ಷೇಣಿಸುತ್ತದೆ. ಇದರಿಂದಾಗಿ ಅವರು ತಮ್ಮ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಅವರನ್ನು ಬೆಂಬಲಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.
ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ನಿಮ್ಮ ಜೀವನ ಸಂಗಾತಿ ಅಥವಾ ಪ್ರೇಮಿಯೊಂದಿಗೆ ವಿವಾದದ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ಶಾಂತವಾಗಿರಿಸಿ, ಪ್ರತಿಯೊಂದು ಪರಿಸ್ಥಿತಿಯನ್ನು ನಿವಾರಿಸಲು ಪ್ರಯತ್ನಿಸಿ. ಇಲ್ಲದಿದ್ದರೆ ವಿಷಯವು ಹೆಚ್ಚಾಗಬಹುದು.
ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಯಾಣ ಮಾಡುವುದು ನಿಮಗೆ ಪ್ರಯೋಜನಕಾರಿಯಾಗಿರುತ್ತದೆ. ಇದರಿಂದಾಗಿ ನೀವು ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಆದರೆ ಈ ಸಮಯದಲ್ಲಿ ನಿಮ್ಮ ಸ್ವಭಾವದಲ್ಲಿ ಮೊಂಡುತನವನ್ನು ಕಾಣಲಾಗುತ್ತದೆ, ಇದರಿಂದಾಗಿ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮೇಲಧಿಕಾರಿಗಳು ಮತ್ತು ನಿಮ್ಮ ಅಧೀನ ಕೆಲಸ ಮಾಡುತ್ತಿರುವ ಜನರ ಬೆಂಬಲವನ್ನು ಪಡೆಯಲು ನಿಮ್ಮ ವಿಧಾನದಲ್ಲಿ ಸ್ವಲ್ಪ ಮೃದುತ್ವವನ್ನು ತರುವುದು ನಿಮಗೆ ಉತ್ತಮವಾಗಿರುತ್ತದೆ.
ಆರ್ಥಿಕ ಜೀವನಕ್ಕೆ ಈ ಸಮಯ ಸಾಮಾನ್ಯವಾಗಿರುತ್ತದೆ. ಈ ಸಮಯದಲ್ಲಿ ಹಣಕಾಸಿನ ವಿನಿಮಯ ಇರುತ್ತದೆ. ನೀವು ನಿಮ್ಮ ಹಣವನ್ನುಉಳಿಸಲು ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಲು ನಿರ್ಧರಿಸಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನೀವು ಆರಂಭದಿಂದಲೇ, ನಿಮ್ಮ ಹಣವನ್ನು ಸಂಗ್ರಹಿಸುವ ಅಗತ್ಯವಿದೆ. ಇದಕ್ಕಾಗಿ ನೀವು ಪಾಲಿಸಿಯಂತಹ ಇತರ ಸಕಾರಾತ್ಮಕ ಸ್ಥಳಗಳಲ್ಲಿ ಹಣವನ್ನು ದೀರ್ಘಕಾಲದವರೆಗೆ ಹೂಡಿಕೆ ಮಾಡಬಹುದು.
ಆಧ್ಯಾತ್ಮಿಕ ಪುಸ್ತಕಗಳನ್ನು ಓದಿ ಅಥವಾ ಯಾವುದೇ ಧಾರ್ಮಿಕ ಪ್ರವಾಸಕ್ಕೆ ಹೋಗಿ, ನಿಮ್ಮ ಆತ್ಮಾವಲೋಕನ ಮಾಡಿ, ನಿಮ್ಮೊಂದಿಗೆ ನೀವು ಸಂಬಂಧವನ್ನು ಸ್ಥಪಿಸಲು ಪ್ರಯತ್ನಿಸುವುದನ್ನು ಸಹ ಕಾಣಲಾಗುತ್ತದೆ.
ಪರಿಹಾರ- ಪ್ರತಿದಿನ ಬೆಳಿಗ್ಗೆ ಗಾಯತ್ರಿ ಮಂತ್ರವನ್ನು ಜಪಿಸುವುದು ನಿಮಗೆ ಉತ್ತಮ.
ಮಿಥುನ ರಾಶಿ
ಸೂರ್ಯ ನಿಮ್ಮ ಮೂರನೇ ಮನೆಯ ಮಾಲೀಕನಾಗಿದ್ದು , ನಿಮ್ಮ ಎಂಟನೇ ಮನೆಗೆ ಸಾಗುತ್ತಾರೆ. ಇದನ್ನು ಬದಲಾವಣೆ ಮತ್ತು ಪರಿವರ್ತನೆಯ ಮನೆಯೆಂದು ಕರೆಯಲಾಗುತ್ತದೆ, ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಯಶಸ್ಸು ಪಡೆಯಲು ನೀವು ಮೊದಲಿಗಿಂತ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಇದರೊಂದಿಗೆ ಈ ಸಮಯದಲ್ಲಿ ನೀವು ನಿಮ್ಮ ಎಲ್ಲವನ್ನೂ ಎಲ್ಲರೊಂದಿಗೆ ಹಂಚಿಕೊಳ್ಳುವುವದನ್ನು ತಪ್ಪಿಸಬೇಕು. ಇಲ್ಲದಿದ್ದರೆ, ಯಾರಾದರೂ ನಿಮ್ಮ ಮಾತುಗಳ ಲಾಭವನ್ನು ಪಡೆದುಕೊಂಡು ನಿಮಗೆ ಹಾನಿ ಮಾಡಬಹುದು.
ಈ ಸಮಯದಲ್ಲಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಕೆಲವು ಹೆಳೆಯ ವಿಷಯಗಳ ಬಗ್ಗೆ ನೀವು ಅಸಮಾಧಾನಗೊಳ್ಳಬಹುದು. ಇದರ ಪರಿಣಾಮದಿಂದಾಗಿ ನಿಮ್ಮ ಮೇಲಧಿಕಾರಿಗಳೊಂದಿಗೆ ನಿಮ್ಮ ವಿವಾದದ ಸಾಧ್ಯತೆ ಇದೆ. ಆದಾಗ್ಯೂ, ಈ ಸಮಯದಲ್ಲಿ ಯಾವುದೇ ವಿವಾದವನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನಿಮ್ಮ ಇಮೇಜ್ ಹಾನಿಗೆ ಒಳಗಾಗಬಹುದು. ಆದ್ದರಿಂದ ಸರಿಯಾದ ಸಮಯ ಮತ್ತು ಸರಿಯಾದ ಕ್ರಮಕ್ಕಾಗಿ ಕಾಯುವುದು ನಿಮಗೆ ಉತ್ತಮ.
ಮಿಥುನ ರಾಶಿಚಕ್ರದ ಕೆಲವು ಸ್ಥಳೀಯರು ತಮಗಾಗಿ ಹೊಸ ಉದ್ಯೋಗವನ್ನು ಹುಡುಕಬಹುದು.
ಆದಾಗ್ಯೂ, ಸಂಶೋಧನೆ, ಡೇಟಾ, ವಿಶ್ಲೇಷಣೆಗೆ ಸಂಬಂಧಿಸಿದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಈ ಸಂಚಾರವು ಅಂಕೋಲಕರ ಫಲಿತಾಂಶಗಳನ್ನು ನೀಡುತ್ತದೆ.
ಆರ್ಥಿಕ ಜೀವನದಲ್ಲಿ ನೀವು ಆರಂಭದಿಂದಲೇ, ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ವೆಚ್ಚಗಳನ್ನು ನಿಯಂತ್ರಿಸುವುದು, ಈ ತಿಂಗಳು ನಿಮಗಿರುವ ಏಕೈಕ ಆಯ್ಕೆಯಾಗಿದೆ.
ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಸೂರ್ಯ ದೇವ ನಿಮ್ಮ ಈರಡನೆ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಈ ಕಾರಣದಿಂದಾಗಿ ನಿಮ್ಮ ಸ್ವಭಾವದಲ್ಲಿ ನೀವು ಸ್ವಲ್ಪ ಕಿರಿಕಿರಿಯನ್ನು ಹೊಂದಿರುತ್ತೀರಿ ಮತ್ತು ಬಯಸದಿದ್ದರೂ ನೀವು ಇತರನ್ನು ನೋಯಿಸುತ್ತೀರಿ. ವಿವಾಹಿತ ಜನರ ತಮ್ಮ ಅತ್ತೆಮನೆಯ ಸದಸ್ಯರೊಂದಿಗೆ ವಿವಾದವು ಸಂಭವಿಸಬಹುದು. ಇದು ನಿಮ್ಮ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಏನನ್ನಾದರೂ ಹೇಳುವ ಮೊದಲು ನಿಮ್ಮ ಪದಗಳನ್ನು ಚಿಂತನಶೀಲವಾಗಿ ಆರಿಸಿ.
ಜಾತಕದ ಎರಡನೇ ಮನೆಸಹೋದರ ಸಹೋದರಿಯರನ್ನು ತಿರುಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸೂರ್ಯ ಸಂಚಾರವು ನಿಮ್ಮ ಸಹೋದರ ಸಹೋದರಿಯರಿಗೆ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ನೀಡಬಹುದು.
ಆರೋಗ್ಯದ ದೃಷ್ಟಿಯಿಂದಲೂ, ಸಮಯ ಸ್ವಲ್ಪ ವಿರುದ್ಧವಾಗಿರಲಿದೆ. ನೀವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಅಥವಾ ಮೊಣಕೈ ಗಾಯದಿಂದಾಗಿ ತೊಂದರೆಗೆ ಒಳಗಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಸರಿಯಾದ ಆಹಾರವನ್ನು ಸೇವಿಸಿ ಮತ್ತು ವಾಹನನ್ನು ಚಲಾಯಿಸುವ ಸಮಯದಲ್ಲಿ ಜಾಗರೂಕರಾಗಿರಿ ಎಂದು ಸಲಹೆ ನೀಡಲಾಗಿದೆ.
ಪರಿಹಾರ- ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ರಾಮ ರಕ್ಷಾ ಸ್ತೋತ್ರವನ್ನು ಪಠಿಸುವುದು ನಿಮಗೆ ಉತ್ತಮ.
ಕರ್ಕ ರಾಶಿ
ಸೂರ್ಯ ಕರ್ಕ ರಾಶಿಚಕ್ರದ ಎರಡನೇ ಮನೆಯ ಅಧಿಪತಿ. ಸಂಚಾರದ ಈ ಸಮಯದಲ್ಲಿ ನಿಮ್ಮ ಏಳನೇ ಮನೆಯಲ್ಲಿರುತ್ತಾರೆ. ಇದನ್ನು ಜೀವನ ಸಂಗಾತಿ, ಪಾಲುದಾರಿಕೆ ಮತ್ತು ವೈವಾಹಿಕ ಸಂಬಂಧವನ್ನು ತೋರಿಸುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ವೈಯಕ್ತಿಕ ಜೀವನದಲ್ಲಿ ಒತ್ತಡವನ್ನು ಪಡೆಯುತ್ತೀರಿ. ಏಕೆಂದರೆ ಈ ಸಮಯದಲ್ಲಿ ನೀವು ಹೆಚ್ಚು ಭಾವನಾತ್ಮಕರಾಗಿರುತ್ತೀರಿ, ಇದರಿಂದಾಗಿ ನೀವು ಸಣ್ಣ ಪುಟ್ಟ ವಿಷಯಗಳನ್ನು ಸಹ ಹೃದಯಕ್ಕೆ ತೆಗೆದುಕೊಳ್ಳುತ್ತೀರಿ. ಇದು ನಿಮ್ಮ ಮತ್ತು ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ದೂರವನ್ನುಂಟುಮಾಡುತ್ತದೆ.
ನಿರಾಕರಣೆಯ ಸಾಧ್ಯತೆಯು, ಒಬ್ಬಂಟಿಯಾಗಿರುವವರು ವಿಶೇಷ ವ್ಯಕ್ತಿಯೊಂದಿಗೆ ಸಂಭಾಷಣೆಯನ್ನು ಮುಂದುವರಿಸುವುದನ್ನು ತಡೆಯಬಹುದು. ಇದರಿಂದಾಗಿ ಅವರ ಮುಂದೆ ನಿಮ್ಮ ಭಾವನೆಯನ್ನು ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗುವುದಿಲ್ಲ.
ಕೆಲಸದ ಸ್ಥಳಕ್ಕೆ ಸಧ್ಯಕ್ಕೆ ಪರಿಸ್ಥಿತಿ ಉತ್ತಮವಾಗಿ ಕಂಡುಬರುತ್ತಿದೆ. ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಅವಕಾಶವನ್ನು ಪಡೆಯುತ್ತೀರಿ. ಆದರೆ ನಿಮ್ಮ ಪ್ರಶಸ್ತಿ ಮತ್ತು ಪ್ರಗತಿಯ ಮೆಚ್ಚುಗೆ ಪಡೆಯದಿರುವ ಕಾರಣದಿಂದಾಗಿ, ಅವಸರದಲ್ಲಿನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಒತ್ತಾಯಿಸಬೇಕಾಗಬಹುದು. ಇದರಿಂದಾಗಿ ಕೆಲಸದ ಸ್ಥಳದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಉಂಟಾಗುವ ಅಪಾಯವಿರುತ್ತದೆ.
ಈ ಸಮಯದಲ್ಲಿಆರ್ಥಿಕವಾಗಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದ ಯಾವುದೇ ಪ್ರಯಾಣಕ್ಕೂ ನೀವು ಹೋಗಬೇಕಾಗಬಹುದು. ಕುಟುಂಬ ಜೀವನದಲ್ಲೂ ಕುಟುಂಬದ ಸದಸ್ಯರೊಂದಿಗೆ ಕಾನೂನು ವಿವಾದದಲ್ಲಿ ಸಿಲುಕಿಕೊಂಡು ನಿಮ್ಮ ಹಣವನ್ನು ನೀವು ಖರ್ಚು ಮಾಡಬೇಕಾಗುತ್ತದೆ
ಆರೋಗ್ಯದ ದೃಷ್ಟಿಯಿಂದ, ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಇದರೊಂದಿಗೆ ಹೊಟ್ಟೆಯ ಸೋಂಕು ಮತ್ತು ಚರ್ಮದ ಶುಷ್ಕತೆಯ ದೂರು ಸಹ ಉಂಟಾಗಬಹುದು. ಆದ್ದರಿಂದ ಈ ಸಂಚಾರದ ಸಮಯದಲ್ಲಿ ಸಾಧ್ಯವಾದಷ್ಟು ದ್ರವ ಪದಾರ್ಥಗಳನ್ನು ಸೇವಿಸಿ.
ಪರಿಹಾರ- ಪ್ರತಿದಿನ ಬೆಳಿಗ್ಗೆ ಸೂರ್ಯ ಯಂತ್ರವನ್ನು ಪೂಜಿಸಿ.
ಸಿಂಹ ರಾಶಿ
ಸೂರ್ಯ ನಿಮ್ಮ ರಾಶಿಯ ಅಧಿಪತಿ, ಸಂಚಾರದ ಈ ಸಮಯದಲ್ಲಿ ನಿಮ್ಮ ಆರನೇ ಮನೆಯಲ್ಲಿರುತ್ತಾರೆ. ಇದು ಸವಾಲುಗಳು ಮತ್ತು ಸ್ಪರ್ಧೆಗಳ ಮನೆ. ಸೂರ್ಯ ಸಂಚಾರದ ಈ ಸಮಯವೂ, ವಿದ್ಯಾರ್ಥಿಗಳಿಗೆ ಉತ್ತಮವೆಂದು ಸಾಬೀತುಪಡಿಸುತ್ತದೆ. ವಿಶೇಷವಾಗಿ ಸರ್ಕಾರಿ ಅಥವಾ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಲ್ಲಿ ತೊಡಗಿರುವ ವಿದ್ಯಾರ್ಥಿಗಳು ಪರಿಶ್ರಮಕ್ಕಿಂತ ಹೆಚ್ಚು ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ತಮ್ಮ ಉದ್ಯೋಗವನ್ನು ಬದಲಾಯಿಸಲು ಬಯಸುತ್ತಿರುವ ಜನರಿಗೆ ಸಮಯ ಉತ್ತಮವಾಗಿರುತ್ತದೆ. ಮತ್ತೊಂದೆಡೆ, ಪ್ರಸ್ತುತ ಉದ್ಯೋಗದಲ್ಲಿ ಪರಿಶ್ರಮಿಸುತ್ತಿರುವ ಜನರು ಮೆಚ್ಚುಗೆ ಮತ್ತು ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ಗುರಿಯತ್ತ ಹೆಚ್ಚು ಶ್ರಮ ಮತ್ತು ಸಮರ್ಪಣೆಯೊಂದಿಗೆ ಪ್ರತಿಯೊಂದು ಕಾರ್ಯವನ್ನು ಪೂರ್ಣಗೊಳಿಸುವುದನ್ನು ಕಾಣಲಾಗುತ್ತದೆ. ಇದರಿಂದಾಗಿ ನೀವು ಎಲ್ಲಾ ಕೆಲಸವನ್ನು ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಇದರಿಂದಾಗಿ ನಿಮ್ಮ ಮೇಲಧಿಕಾರಿಗಳು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ.
ವ್ಯಾಪಾರಕ್ಕೆ ಸಂಬಂಧಿಸಿದ ಜನರು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಇದರಿಂದಾಗಿ ಅವರು ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ನಿಮ್ಮನ್ನು ಆರೋಗ್ಯಕರವಾಗಿಡಲು ಅನೇಕ ಪ್ರಯತ್ನಗಳನ್ನು ಮಾಡುವಿರಿ. ಈ ಸಮಯದಲ್ಲಿ ನೀವು ಉತ್ತಮ ಆಹಾರ ಪಾನೀಯ ಮತ್ತು ವ್ಯಾಯಾಮಕ್ಕೆ ಸಮಬಂಧಿಸಿದ ವಿವಿಧ ಯೋಜನೆಗಳನ್ನು ಸಹ ಬಳಸಬಹುದು
ಪರಿಹಾರ- ಪ್ರದಿನ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಪೂರ್ವದ ಕಡೆಗೆ ಮುಖವನ್ನು ಮಾಡಿ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.
ಕನ್ಯಾ ರಾಶಿ
ಸೂರ್ಯ ಸಂಚಾರ ನಿಮ್ಮ ಐದನೇ ಮನೆಯಲ್ಲಿರುತ್ತದೆ. ಈ ಸಮಯದಲ್ಲಿ ಕನ್ಯಾ ರಾಶಿಚಕ್ರದ ಸ್ಥಳೀಯರು ದುರುದ್ವೇಷಪೂರಿತ ಫಲಿತಾಂಶಗಳನ್ನು ಪಡೆಯುತ್ತಾರೆ.ಸೂರ್ಯ ದೇವ ನಿಮ್ಮ ಹನ್ನೆರಡನೇ ಮನೆಯ ಮಾಲೀಕ ಮತ್ತು ಸಂಚಾರದ ಈ ಸಮಯದಲ್ಲ್ ಅವರು ತಾನಾಗಿ ಆರನೇ ಮನೆಯಲ್ಲಿ ಕುಳಿತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಯಾವುದೇ ಪ್ರಯಾಣವನ್ನು ತಪ್ಪಿಸಬೇಕು. ಇಲ್ಲದಿದ್ದರೆ, ನಿಮಗೆ ಒತ್ತಡ ಮತ್ತು ಆಯಾಸದೊಂದಿಗೆ ಆರ್ಥಿಕ ನಷ್ಟವಾಗಬಹುದು.
ಸಂಚಾರದ ಸಮಯದಲ್ಲಿ ಸೂರ್ಯ ನಿಮ್ಮ ಹತ್ತನೇ ಮನೆಯಿಂದ ಆರನೇ ಮನೆಯಲ್ಲಿ ಕುಳಿತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದ ಸುರಕ್ಷತೆ ಮತ್ತು ಭವಿಷ್ಯದ ತೊಂದರೆಗಳಿಂದಾಗಿ ನೀವು ಒತ್ತಡ ಮತ್ತು ಚಡಪಡಿಕೆಗಳನ್ನು ಅನುಭವಿಸಬಹುದು. ಆದ್ದರಿಂದ ಯಾವುದೇ ರೀತಿಯ ನಕಾರಾತ್ಮಕ ಆಲೋಚನೆಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಸರಿಯಾದ ಕಾರ್ಯತಂತ್ರವನ್ನು ರೂಪಿಸಲು ನಿಮ್ಮ ಎಲ್ಲ ಶಕ್ತಿಯನ್ನು ವಿನಿಯೋಗಿಸಿ. ಆದಾಗ್ಯೂ, ವಿದೇಶಿ ಸಂಸ್ಥೆ ಮತ್ತು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯರಿಗೆ ಸಮಯ ಉತ್ತಮವಾಗಿರುತ್ತದೆ.
ಕುಟುಂಬ ಜೀವನದಲ್ಲಿ ದಾಂಪತ್ಯ ಜನರು ತಮ್ಮ ಮಕ್ಕಳ ಕಳಪೆ ಆರೋಗ್ಯದ ಕಾರಣದಿಂದಾಗಿ ಮಾನಸಿಕ ಒತ್ತಡವನ್ನು ಪಡೆಯುತ್ತಾರೆ. ಆದಾಗ್ಯೂ, ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ಇದ್ದಕ್ಕಿದ್ದಂತೆ ಯಾವುದೇ ಲಾಭ ಅಥವಾ ಪ್ರಶಸ್ತಿಯನ್ನು ಪಡೆಯುವ ಸಾಧ್ಯತೆ ಇದೆ.
ಪ್ರೇಮಿಗಳು ತಮ್ಮ ಸಂಗಾತಿಯೊಂದಿಗೆ ಮಾತನಾಡುವಾಗ, ತಮ್ಮ ಭಾಷೆಯ ಬಗ್ಗೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ಇಲ್ಲದಿದ್ದರೆ, ನಿಮ್ಮ ಸಂಬಂಧದಲ್ಲಿ ಕೆಲವು ರೀತಿಯ ವಿವಾದಗಳು ಉದ್ಭವಿಸಬಹುದು. ಅಂತಹ ಸಂದರ್ಭದಲ್ಲಿ ಅವರೊಂದಿಗೆ ಯಾವುದೇ ರೀತಿಯ ಭಾವನೆಗಳನ್ನು ಹಂಚಿಕೊಳ್ಳುವಲ್ಲಿ ಹಿಂಜರಿಯಬೇಡಿ ಮತ್ತು ನಿಮ್ಮ ಸಂಭಾಷಣೆಯಲ್ಲಿ ಪರದರ್ಶಕತೆಯನ್ನು ತನ್ನಿ. ನಿಮ್ಮ ಸಂಬಂಧವನ್ನು ಸುಧಾರಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
ಆರೋಗ್ಯದ ದೃಷ್ಟಿಯಿಂದ, ಅನಿಲ, ಆಮ್ಲೀಯತೆ ಇತ್ಯಾದಿಯಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಇದಕ್ಕಾಗಿ ಸುಲಭವಾಗಿ ಜೀರ್ವವಾಗುವ ಆಹಾರವನ್ನು ಮಾತ್ರ ಸೇವಿಸಿ ಮತ್ತು ನಿಮ್ಮ ದಿನಚರಿಯಲ್ಲಿ ವ್ಯಾಯಾಮ ಮತ್ತು ಯೋಗವನ್ನು ಪ್ರೋತ್ಸಾಹಿಸಿ.
ಪರಿಹಾರ- ತಾಮ್ರದ ಪಾತ್ರದಲ್ಲಿ ನೀರು ಕುಡಿಯಿರಿ.
ತುಲಾ ರಾಶಿ
ಸೂರ್ಯ ನಿಮ್ಮ ಹನ್ನೊಂದನೇ ಮನೆಯ ಮಾಲೀಕ, ಸಂಚಾರದ ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ಕುಳಿತಿರುತ್ತಾರೆ. ಇದು ಸಂತೋಷ, ಮನೆ, ತಾಯಿ, ವಿಶ್ರಾಂತಿ ಮತ್ತು ಐಷಾರಾಮಿಯನ್ನು ತೋರಿಸುತ್ತಾರೆ. ಈ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ.
ಈ ಸಮಯದಲ್ಲಿ ಸೂರ್ಯನು ತುಂಬಾ ಪೀಡಿತ ಸ್ಥಿತಿಯಲ್ಲಿರುತ್ತಾನೆ. ಈ ಕಾರಣದಿಂದಾಗಿ, ನಿಮ್ಮ ತಾಯಿಯ ಆರೋಗ್ಯವು ದುರ್ಬಲವಾಗಬಹುದು. ಕುಟುಂಬದ ಇತರ ಸದಸ್ಯರೊಂದಿಗೆ ನೀವು ಮುಖಾಮುಖಿಯಾಗಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಮಾತುಗಳನ್ನು ಅವರ ಮೇಲೆ ಒತ್ತಾಯಿಸಲು ಪ್ರ್ಯತ್ನಿಸುವುದನ್ನು ಕಾಣಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ವಿವಾದಗಳಲ್ಲಿ ಸಿಲುಕಿಕೊಂಡು ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ ಮತ್ತು ಅವರೊಂದಿಗಿನ ಸಂಬಂಧವನ್ನು ಉತ್ತಮಗೊಳಿಸಲು ಪ್ರಯತ್ನಿಸಿ. ಇದಕ್ಕಾಗಿ ಅವರೊಂದಿಗೆ ಸಮಯವನ್ನು ಕಳೆಯಲು ಪ್ರಯತ್ನಿಸಿ ಎಂದು ಸಲಹೆ ನೀಡಲಾಗಿದೆ.
ಆರ್ಥಿಕವಾಗಿ ಈ ಸಮಯ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಸೂರ್ಯ ನಿಮ್ಮ ವಿಶ್ರಾಂತಿಯ ಮನೆಯಲ್ಲಿ ಇರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ಮನೆಯಿಂದಲೇ ಕೆಲಸ ಮಾಡಲು ಆಸಕ್ತಿ ಹೊಂದಿರಬಹುದು. ಮನೆಯಲ್ಲಿ ಅತಿಥಿಗಳ ಆಗಮನದ ಸಾಧ್ಯತೆ ಇದೆ. ಕೆಲವು ಜನರು ಯಾವುದೇ ಜಮೀನು ಮಾರಾಟ ಅಥವಾ ಖರೀದಿಯಿಂದ ಉತ್ತಮ ಹಣವನ್ನು ಗಳಿಸಬಹುದು.
ಈ ಸಂಚಾರದ ಸಮಯದಲ್ಲಿ ಸೂರ್ಯ ಮಕರ ರಾಶಿಯಲ್ಲಿರುತ್ತಾರೆ. ಇದು ಶನಿ ದೇವರ ಮನೆ, ಅಂತಹ ಸಂದರ್ಭದಲ್ಲಿ ಆರೋಗ್ಯಕ್ಕೆ ಆರೋಗ್ಯದ ವಿಷಯದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ವಿಶೇಷವಾಗಿ ನೀವು ರಕ್ತದೊತ್ತಡ, ಹೃದಯ ರೋಗ ಇತ್ಯಾದಿಗಳಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಈ ಸಂಚಾರದ ಸಮಯದಲ್ಲಿ ವ್ಯಾಯಾಮ ಮತ್ತು ಪ್ರಾಣಾಯಾಮ ವನ್ನು ಮಾಡಲು ನಿಮಗೆ ಸಲಹೆ ನೀಡಲಾಗಿದೆ. ಆಗ ಮಾತ್ರ ನೀವು ನಿಮ್ಮನ್ನು ಸಕಾರಾತ್ಮಕವಾಗಿರಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ.
ಪರಿಹಾರ- ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಪೂರ್ವಕ್ಕೆ ಎದುರಾಗಿ ಸೂರ್ಯಾಷ್ಟಕಂ ಅನ್ನು ಪಠಿಸಿ.
ವೃಶ್ಚಿಕ ರಾಶಿ
ಸೂರ್ಯ ನಿಮ್ಮ ಹತ್ತನೇ ಮಾಯೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ಸೂರ್ಯ ನಿಮ್ಮ ಮೂರನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ ಮತ್ತು ನೀವು ನಿಮ್ಮ ಪ್ರಯತ್ನಗಳ ಮೂಲಕ ಯಶಸ್ಸು ಪಡೆಯುತ್ತೀರಿ.
ಕೆಲಸದ ಸ್ಥಳದಲ್ಲಿ ನೀವು ಹೆಚ್ಚು ಪ್ರೋತ್ಸಾಹದೊಂದಿಗೆ ಎಲ್ಲಾ ಕೆಲಸವನ್ನು ಅರ್ಥಮಾಡಿಕೊಂಡು ನಿಮ್ಮ ಕೆಲಸದ ದಕ್ಷತೆಯನ್ನು ಸುಧಾರಿಸಲು ನೀವು ಪ್ರಯತ್ನಿಸುತ್ತೀರಿ. ಹೊಸ ಸಂಪರ್ಕಗಳೊಂದಿಗೆ ನಿಮ್ಮ ಹಳೆಯ ಸಂಪರ್ಕಗಳನ್ನು ಬಲಪಡಿಸಲು ಸಹ ಇದು ವಿಶೇಷ ಸಮಯವಾಗಿರುತ್ತದೆ.
ಈ ಸಮಯದಲ್ಲಿ ನಿಮ್ಮ ಶತ್ರು ಸಕ್ರಿಯರಾಗಿರುತ್ತಾರೆ. ಆದರೆ ನೀವು ನಿಮ್ಮ ಜಾಗರೂಕತೆಯಿಂದ ಅವರನ್ನು ಸೋಲಿಸಲು ನಿಮಗೆ ಸಾಧಯವಾಗುತ್ತದೆ. ದೂರಸ್ಥ ಪ್ರಯಾಣಗಳ ಬದಲು ಕಡಿಮೆ ದೂರದ ಪ್ರಯಾಣ ಮಾಡುವುದು, ಈ ಸಮಯದಲ್ಲಿ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
ಸಂಚಾರದ ಸಮಯದಲ್ಲಿ ನೀವು ನಿಮ್ಮ ಆಪ್ತರು, ಸಂಬಂಧಿಕರು, ಸಹೋದರ ಸಹೋದರಿಯರು ಮತ್ತು ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.
ಈ ಸಮಯದಲ್ಲಿ ನೀವು ತಾಳ್ಮೆಯಿಂದಿರಿ ಮತ್ತು ಎಚ್ಚರಿಕೆಯಿಂದ ವಿಶ್ಲೇಷಿಸಿದ ನಂತರ ಮಾತ್ರ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನಿಮ್ಮ ಚಿತ್ರ ಹದಗೆಡುವ ಸಾಧ್ಯತೆ ಇದೆ.
ಪ್ರೀತಿಯ ಸಂಬಂಧದಲ್ಲಿ ಜೀವನ ಸಂಗಾತಿ ಅಥವಾ ಪ್ರೇಮಿಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ಸೂರ್ಯ ನಿಮ್ಮ ಮೂರನೇ ಮನೆಯಲ್ಲಿ ಕುಳಿತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಸಂಗಾತಿಯನ್ನು ಸಂತೋಷಪಡಿಸಲು ಮತ್ತು ಅವರನ್ನು ಆಕರ್ಷಿಸಲು ಹೆಚ್ಚು ಪ್ರಯತ್ನಿಸಬೇಕಾಗುತ್ತದೆ.
ಆರೋಗ್ಯದ ದೃಷ್ಟಿಯಿಂದ ಈ ಸಮಯ ಸಾಮಾನ್ಯವಾಗಿರುತ್ತದೆ. ಆದಾಗ್ಯೂ, ನಿಮ್ಮ ಕೆಲಸದ ಹೆಚ್ಚಿನ ಕಾರಣದಿಂದಾಗಿ ನಿಮ್ಮ ಆರೋಗ್ಯವನ್ನು ನೀವು ನಿರ್ಲಕ್ಷಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.
ಪರಿಹಾರ- ನಿಮ್ಮ ಬಲಗೈಯ ಉಂಗುರದ ಬೆರಳಿನಲ್ಲಿ ತಾಮ್ರ ಅಥವಾ ಚಿನ್ನದ ಉಂಗುರದಲ್ಲಿ ಉತ್ತಮ ಗುಣಮಟ್ಟದ ಮಾಣಿಕ್ಯ ರತ್ನವನ್ನು ಧರಿಸುವುದರಿಂದ ನೀವು ಪ್ರಯೋಜನಕಾರಿ ಫಲಿತಾಂಶವನ್ನು ಪಡೆಯುತ್ತೀರಿ.
ಧನು ರಾಶಿ
ಸೂರ್ಯ ನಿಮ್ಮ ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಎರಡನೇ ಮೆನೆಗೆ ಪ್ರವೇಶಿಸಲಿದೆ. ಇದು ಕುಟುಂಬ, ಹಣಕಾಸು ಮತ್ತು ಸಂಪನ್ಮೂಲಗಳ ಮನೆ. ಈ ಸಾಗಣೆಯ ಸಮಯದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಏಕೆಂದರೆ ನಿಮ್ಮ ರಾಶಿಯಲ್ಲಿ ಹಣದ ಯೋಗವು ರಚಿಸಲಾಗುತ್ತದೆ. ಇದರಿಂದಾಗಿ ನಿಮ್ಮ ಆರ್ಥಿಕ ಜೀವನದಲ್ಲಿ ನೀವು ಉತ್ತಮ ಪ್ರಯೋಜನವನ್ನು ಪಡೆಯುವ ಸಾಧ್ಯತೆ ಇದೆ.
ಆದಾಗ್ಯೂ, ಈ ಸಮಯದಲ್ಲಿ ಸೂರ್ಯ ಕರ್ಮದ ಫಲವನ್ನು ನೀಡುವ ಶನಿಯೊಂದಿಗೆ ಸಂಯೋಜಿಸುತ್ತಾರೆ. ಇದರಿಂದಾಗಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ಈ ಕಾರಣದಿಂದಾಗಿ ನೀವು ಕೆಲವು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಅಲ್ಪಾವಧಿಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ನಿಮಗೆ ಪ್ರಯೋಜನಕಾರಿಯಾಗಿರುತ್ತದೆ. ಇದರಿಂದಾಗಿ ನಿಮ್ಮ ಆದಾಯದಲ್ಲಿ ಸಕಾರಾತ್ಮಕತೆ ಮತ್ತು ಹೆಚ್ಚಳವಾಗುತ್ತದೆ. ಇದರ ಮೂಲಕ ನಿಮ್ಮ ಆರ್ಥಿಕ ಬಿಕ್ಕಟ್ಟುಗಳನ್ನು ಸಾಕಷ್ಟು ಮಟ್ಟಿಗೆ ನಿವಾರಿಸಲಾಗುತ್ತದೆ.
ಈ ಸಂಚಾರದ ಸಮಯದಲ್ಲಿ ಸೂರ್ಯ ದೇವರು ಶುಭ ಸ್ಥಿತಿಯಲ್ಲಿರುತ್ತಾರೆ. ಉದ್ಯೋಗದಲ್ಲಿರುವ ಜನರಿಗೆ ವಿಶೇಷವಾಗಿ ಉತ್ತಮವಾಗಿರಲಿದೆ. ನೀವು ನಿಮ್ಮ ಗುರಿಯನ್ನು ಸಾಧಿಸಲು ನಿರಂತರವಾಗಿ ಪ್ರಯತ್ನಿಸುತ್ತೀರಿ ಮತ್ತು ಇದರಿಂದ ನಿಮ್ಮ ವೃತ್ತಿ ಜೀವನದಲ್ಲಿ ನೀವು ಲಾಭವನ್ನು ಪಡೆಯುತ್ತೀರಿ. ಇದಲ್ಲದೆ ಈ ಸಮಯದಲ್ಲಿ ಮೇಲಧಿಕಾರಿಗಳೊಂದಿಗೆ ವಿವಾದವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮನ್ನು ಶಾಂತವಾಗಿರಿಸಿ, ಯಾವುದೇ ರೀತಿಯ ವಿವಾದದಲ್ಲಿ ಬೀಳದಿರುವುದು ನಿಮಗೆ ಉತ್ತಮವಾಗಿರುತ್ತದೆ. ವ್ಯಾಪಾರಸ್ಥರು ಲಾಭ ಮತ್ತು ಪಶಸ್ತಿಯನ್ನು ಪಡೆಯಬಹುದು.
ಸೂರ್ಯ ದೇವ ಎರಡನೇ ಮನೆಯಲ್ಲಿರುವುದು, ನಿಮ್ಮ ಧ್ವನಿಯ ಮೇಲೆ ಪರಿಣಾಮ ಬೀರುತ್ತದೆ. ನೀವು ನಿಮ್ಮ ವೈಯಕ್ತಿಕ ಜೀವನದಲ್ಲಿ ನಿಮ್ಮನ್ನು ಎಲ್ಲರಿಗಿಂತ ಪ್ರಮುಖವಾಗಿರಿಸಿಕೊಂಡು, ಇತರರ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಬಹುದು. ಇದರ ನಕಾರಾತ್ಮಕ ಪರಿಣಾಮವು ನಿಮ್ಮ ಕುಟುಂಬದ ಸದಸ್ಯರ ಮೇಲೆ ಬೀರುತ್ತದೆ ಮತ್ತು ಈ ಕಾರಣದಿಂದಾಗಿ ಮನೆಯ ಸದಸ್ಯರೊಂದಿಗೆ ನಿಮ್ಮ ವಿವಾದವಾಗಬಹುದು. ಆದ್ದರಿಂದ ಮನೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು. ಇತರರೊಂದಿಗೆ ಮಾತನಾಡುವ ಸಮಯದಲ್ಲಿ ನಿಮ್ಮ ಪದಗಳನ್ನು ಚಿಂತಶೀಲವಾಗಿ ಆರಿಸಿ.
ಈ ಸಮಯವು ವಿದ್ಯಾರ್ಥಿಗಳಿಗೆ ಶುಭವಾಗಿರುತ್ತದೆ. ನೀವು ನಿಮ್ಮ ಶಿಕ್ಷಣದ ಬಗ್ಗೆ ಹೆಚ್ಚು ಕೇಂದ್ರೀಕರಿಸುವುದನ್ನು ಕಾಣಲಾಗುತ್ತದೆ. ಅರೋಗ್ಯ ಜೀವನದಲ್ಲಿ ತಲೆ ನೋವು, ಕಣ್ಣು ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾಗಬಹುದು. ಅಂತಹ ಸಂದರ್ಭದಲ್ಲಿ ನೀವು ಆರೋಗ್ಯದ ಬಗ್ಗೆ ಆರಂಭದಿಂದಲೇ ಜಾಗರೂಕರಾಗಿರಿ ಎಂದು ನಿಮಗೆ ಸಲಹೆ ನೀಡಲಾಗಿದೆ.
ಪರಿಹಾರ- ಸೂರ್ಯ ಗ್ರಹವು ಭಗವಂತ ರಾಮರಿಗೆ ಸಂಬಂಧಿಸಿದೆ. ಆದ್ದರಿಂದ ಸೂರ್ಯನ ಶುಭ ಫಲಿತಾಂಶಗಳನ್ನು ಪಡೆಯಲು ಪ್ರತಿದಿನ ಬೆಳಿಗ್ಗೆ ಓಂ ರಾಮ್ ರಮಾಯ್ ನಮಃ ವನ್ನು ಜಪಿಸಿ.
ಮಕರ ರಾಶಿ
ಸೂರ್ಯ ನಿಮ್ಮ ಎಂಟನೇ ಮನೆಯ ಮಾಲೀಕ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮದೇ ರಾಶಿಗೆ ಪ್ರವೇಶಿಸುತ್ತಾರೆ. ಆದ್ದರಿಂದ ಈ ಸಂಚಾರವು ವಿಶೇಷವಾಗಿ ನಿಮ್ಮ ಮೇಲೆ ಬಿಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನೀವು ವಿರುದ್ಧ ಫಲಿತಾಂಶಗಳನ್ನು ಪಡೆಯುತ್ತೀರಿ. ಮಕರ ರಾಶಿಚಕ್ರದ ಸ್ಥಳೀಯರ ಆರೋಗ್ಯವು ಅವರನ್ನು ಕಾಡಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಗಮನಾರ್ಹ ಕಾಳಜಿ ವಹಿಸಬೇಕು.
ಕೆಲಸದ ಸ್ಥಳದಲ್ಲೂ, ನೀವು ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಅಂತಹ ಸಂದರ್ಭದಲ್ಲಿ ನೀವು ಧೈರ್ಯದಿಂದ ಮುಂದುವರಿಯಬೇಕು. ಕೆಲಸದ ಸ್ಥಳದಲ್ಲಿ ನಿಮ್ಮ ಅಭಿವೃದ್ಧಿ ವೇಗ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಕೆಲವು ಸ್ಥಳೀಯರು ತಮ್ಮ ಉದ್ಯೋಗವನ್ನು ಬದಲಾಯಿಸಲು ಸಹ ನಿರ್ಧರಿಸಬಹುದು. ಆದಾಗ್ಯೂ, ಈ ಸಮಯ ವ್ಯಾಪಾರಸ್ಥರಿಗೆ ಶುಭವಾಗಿರುತ್ತದೆ. ಅವರು ಇದ್ದಕ್ಕಿದ್ದಂತೆ ಲಾಭ ಮತ್ತು ಉತ್ತಮ ಪ್ರಯೋಜನವನ್ನು ಪಡೆಯುವ ಸಾಧ್ಯತೆ ಇದೆ.
ಕೆಲಸದ ಸ್ಥಳದಲ್ಲಿ ಬರುತ್ತಿರುವ ವಿರುದ್ಧ ಬದಲಾವಣೆ ಮತ್ತು ಪರಿವರ್ತನೆಗಳು ನಿಮ್ಮ ಸ್ವಭಾವದಲ್ಲಿ ಅಕ್ರಮಣಶೀಲತೆಯನ್ನು ತರಬಹುದು. ಇದು ನಿಮ್ಮ ವೈಯಕ್ತಿಕ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಕುಟುಂಬ ಮತ್ತು ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಒತ್ತಡದ ಪರಿಸ್ಥಿತಿಯೂ ಉಂಟಾಗಬಹುದು. ಆದ್ದರಿಂದ ಈ ಸಮಯದಲ್ಲಿ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಎರಡರ ನಡುವೆ ಸರಿಯಾದ ಸಮತೋಲನವನ್ನು ಇರಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.
ಈ ಸಮಯವೂ ವಿದ್ಯಾರ್ಥಿಗಳಿಗೂ ಉತ್ತಮವಾಗಿರುತ್ತದೆ. ವಿಶೇಷವಾಗಿ ಯಾವುದೇ ಹೊಸ ವಿಷಯ ಅಧವಾ ಅಧ್ಯಯನವನ್ನು ಆರಂಭಿಸಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿರಲಿದೆ.
ಪರಿಹಾರ- ಭಾನುವಾರ ಅಗತ್ಯವಿರುವ ಜನರಿಗೆ ಉಚಿತ ಔಷಧಿಗಳನ್ನು ದಾನ ಮಾಡಿ.
ಕುಂಭ ರಾಶಿ
ಸೂರ್ಯ ನಿಮ್ಮ ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಹನ್ನೆರಡನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ಕುಂಭ ರಾಶಿಚಕ್ರದ ಸ್ಥಳೀಯರ ಜೀವನ ಸಂಗಾತಿ ಅಥವಾ ಪ್ರೇಮಿಗೆ ಆರೋಗ್ಯದ ನಷ್ಟವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಸಂಗಾತಿಯು ತಮ್ಮ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಪ್ರತಿಯೊಂದು ಪರಿಸ್ಥಿತಿಯಲ್ಲಿ ಅವರನ್ನು ಬೆಂಬಲಿಸಿ.
ವಿದೇಶಿ ಪ್ರಯಾಣ, ವಿದೇಶದಿಂದ ಲಾಭ ಅಥವಾ ವಿದೇಶದಲ್ಲಿ ವಾಸಿಸಲು ಬಯಸುತ್ತಿರುವ ಸ್ಥಳೀಯರಿಗೆ ಸೂರ್ಯನ ಈ ಸಂಚಾರವು ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಅವರು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.
ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನೀವು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಯಾವುದೇ ರೀತಿಯ ಹೊಸ ಹೂಡಿಕೆಯ ಬಗ್ಗೆ ಯೋಚಿಸುತ್ತಿರುವ ವ್ಯಾಪಾರಸ್ಥರು, ಈ ಸಮಯದಲ್ಲಿ ಅದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಅವರಿಗೆ ಹಣಕಾಸಿನ ನಷ್ಟವಾಗಬಹುದು.
ಇದರೊಂದಿಗೆ ಈ ಸಂಚಾರದ ಸಮಯದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಅಥವಾ ಕಾನೂನನ್ನು ಉಲ್ಲಂಘನೆಯನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ನಿಮ್ಮನ್ನು ದೊಡ್ಡ ಸಮಸ್ಯೆಯಲ್ಲಿ ಸಿಲುಕಿಸಬಹುದು.
ಆರೋಗ್ಯದ ದೃಷ್ಟಿಯಿಂದ, ನಿದ್ರಾಹೀನತೆ, ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ರೋಗ ಇತ್ಯಾದಿಗಳಂತಹ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆರೋಗ್ಯದ ಸಣ್ಣ ಪುಟ್ಟ ಸಮಸ್ಯೆಯನ್ನು ಸಹ ನಿರ್ಲಕ್ಷಿಸಬೇಡಿ ಎಂದು ಸಲಹೆ ನೀಡಲಾಗಿದೆ ಅಮ್ತ್ತು ಕಾಲಕಾಲಕ್ಕೆ ವೈದ್ಯರನ್ನು ಸಂಪರ್ಕಿಸಿ ಮತ್ತು ನಿಮ್ಮ ಬಗ್ಗೆ ಸರಿಯಾದ ಕಾಳಜಿ ವಹಿಸಿ.
ಪರಿಹಾರ- ಭಾನುವಾರ ಬೆಲ್ಲದ ದಾನ ಮಾಡುವುದು ನಿಮಗೆ ಉತ್ತಮ.
ಮೀನಾ ರಾಶಿ
ಸೂರ್ಯ ನಿಮ್ಮ ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಹನ್ನೊಂದನೇ ಮನೆಗೆ ಪ್ರವೇಶಿಸುತ್ತಾರೆ. ಇದು ಯಶಸ್ಸು ಮತ್ತು ಪ್ರಯೋಜನದ ಮನೆ. ಸಂಚಾರದ ಈ ಸಮಯದಲ್ಲಿ ಮೀನಾ ರಾಶಿಚಕ್ರದ ಜನರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ.
ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಹಿಂದೆ ಅಪೂರ್ಣವಾದ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಇದರೊಂದಿಗೆ ನಿಮ್ಮ ಕೆಲಸದ ಸ್ಥಳದಲ್ಲಿ ಗುರಿಗಳನ್ನು ಸಾಧಿಸುವ ಕಾರಣದಿಂದಾಗಿ ಮೆಚ್ಚುಗೆ ಮತ್ತು ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಪರಿಶ್ರಮದಿಂದ ಸಂತೋಷಪಡುತ್ತಾರೆ ಮತ್ತು ಅವರು ನಿಮ್ಮನ್ನು ಪ್ರಶಂಸಿಸುವದನ್ನು ಸಹ ಕಾಣಲಾಗುತ್ತದೆ.
ಈ ಸಮಯದಲ್ಲಿ ನಿಮ್ಮ ರಾಶಿಯಿಂದ ಅನೇಕ ಗ್ರಹಗಳ ಉಪಸ್ಥಿತಿಯು, ನಿಮ್ಮ ಕೆಲಸದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಇದರಿಂದಾಗಿ ನೀವು ಒಂದು ಸಮಯದಲ್ಲಿ ಅನೇಕ ಕಾರ್ಯಗಳನ್ನು ಮಾಡುವುದನ್ನು ಕಾಣಲಾಗುತ್ತದೆ. ಇದರ ಪರಿಣಾಮದಿಂದಾಗಿ ನಿಮ್ಮ ಆದಾಯವೂ ಹೆಚ್ಚಾಗುತ್ತದೆ.
ಈ ಸಂಚಾರದ ಸಮಯದಲ್ಲಿ ವ್ಯಾಪಾರಸ್ಥರು ಸಹ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಅನೇಕ ಅವಕಾಶಗಳನ್ನು ಪಡೆಯುವ ಸಧ್ಯತೆ ಇದೆ. ವಿಶೇಷವಾಗಿ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಸ್ಥಳೀಯರಿಗೆ ಈ ಸಮಯ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ನೀವು ಕೆಲಸಕ್ಕೆ ಸಂಬಂಧಿಸಿದ ಪ್ರಯಾಣ ಮಾಡಲು ಅವಕಾಶವನ್ನು ಪಡೆಯುತ್ತೀರಿ ಮತ್ತು ಈಪ್ರಯಾಣ ನಿಮಗೆ ಅನುಕೂಲಕರವಾಗಿರುತ್ತದೆ. ಇದಲ್ಲದೆ ಈ ಸಮಯದಲ್ಲಿ ನೀವು ನಿಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ.
ಈ ಸಮಯದಲ್ಲಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯ ಹೆಚ್ಚಾಗುತ್ತದೆ ಮತ್ತು ಇದರೊಂದಿಗೆ ನೀವು ಶಕ್ತಿ ಮತ್ತು ಉತ್ಸಾಹದಿಂದ ತುಂಬಿರುತ್ತೀರಿ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಯಾವುದೇ ಪ್ರಯಾಣವನ್ನು ಯೋಜಿಸಬಹುದು. ಇದರಿಂದಾಗಿ ನಿಮ್ಮಿಬ್ಬರ ನಡುವಿನ ಸಂಬಂಧವು ಉತ್ತಮವಾಗುತ್ತದೆ. ಪ್ರೀತಿಯ ಜೀವನಕ್ಕೂ ಈ ಸಮಯ ತುಂಬಾ ಉತ್ತಮವಾಗಿರುತ್ತದೆ. ಈ ಸಂಚಾರದ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಹಿರಿಯರು, ಶಿಕ್ಷಕರು ಮತ್ತು ದೊಡ್ಡವರ ಸಂಪೂರ್ಣ ಬೆಮಬಲವನ್ನು ಪಡೆಯುತ್ತಾರೆ. ಇದರಿಂದಾಗಿ ಅವರು ತಮ್ಮ ಶಿಕ್ಷಣದಲ್ಲಿ ಉತ್ತಮ ಪ್ರದರ್ಶನ ಮಾಡಲು ಸಾಧ್ಯವಾಗುತ್ತದೆ.
ಪರಿಹಾರ- ಸೂರ್ಯೋದಯದ ಸಮಯದಲ್ಲಿ ಪ್ರತಿದಿನ ಸೂರ್ಯಾಷ್ಟಕಂ ಅನ್ನು ಪಠಿಸುವುದು ನಿಮಗೆ ಉತ್ತಮ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025