ತುಲಾ ರಾಶಿಯಲ್ಲಿ ವಕ್ರ ಬುಧ ( 27th September 2021 )
ಬುಧವು ಸೂರ್ಯನಿಗೆ ಅತ್ಯಂತ ಹತ್ತಿರವಾದ ಗ್ರಹವಾಗಿದೆ. ಈ ಗ್ರಹವನ್ನು ಭೂಮಿಯಿಂದ ನೋಡಿದರೆ, ಹಿಂದಕ್ಕೆ ಚಲಿಸುವಂತೆ ಕಂಡುಬರುತ್ತದೆ, ಇದನ್ನು ವಕ್ರ ಚಲನೆ ಎಂದು ಹೇಳಲಾಗುತ್ತದೆ. ಬುಧ ಗ್ರಹವು ವರ್ಷದಲ್ಲಿ ಮೂರು ಬಾರಿ ವಕ್ರ ಚಲನೆಯನ್ನು ಮಾಡುತ್ತದೆ. ಪ್ರತಿ ವಕ್ರ ಚಲನೆಯು ಸುಮಾರು ಮೂರು ವಾರಗಳ ವರೆಗೆ ಇರುತ್ತದೆ.
ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಗಳ ಪರಿಹಾರವನ್ನು ತಿಳಿಯಲು ಪರಿಣಿತ ಜ್ಯೋತಿಷಿಗಳೊಂದಿಗೆ ಚಾಟ್ ಮತ್ತು ಕರೆಯಲ್ಲಿ ಮಾತನಾಡಿ
ವೈದಿಕ ಜ್ಯೋತಿಷ್ಯದಲ್ಲಿ ಬುಧವು ಸಂವಹನದ ಗ್ರಹವೆಂದು ನಮ್ಮೆಲ್ಲರಿಗೂ ತಿಳಿದಿದೆ ಮತ್ತು ಇದು ವಕ್ರನಾದಾಗ, ಭೂಮಿಯ ಮೇಲೆ ಸಂವಹನದ ತಪ್ಪುಗ್ರಹಿಕೆಗಳ ಸಾಧ್ಯತೆ ಉಂಟಾಗುತ್ತದೆ, ಇದಲ್ಲದೆ ಈ ಸಮಯದಲ್ಲಿ ತಾಂತ್ರಿಕ ವಸ್ತುಗಳಲ್ಲಿ ಕೆಲವು ಸಮಸ್ಯೆಗಳಿರುವ ಸಾಧ್ಯತೆಯೂ ಇದೆ. ಇದು ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲು ಅಥವಾ ಯಾವುದೇ ವಿಸ್ತೃತ ಪ್ರಯಾಣವನ್ನು ಯೋಜಿಸಲು ಅನುಕೂಲಕರ ಸಮಯವಲ್ಲ. ಜನರೊಂದಿಗೆ ಮಾತನಾಡುವಾಗ ಇದು ಸವಾಲುಗಳಿಂದ ತುಂಬಿರುವ ಸಮಯವಾಗಬಹುದು. ಬುಧದ ವಕ್ರ ಸಂಚಾರವು ಮೋಟರ್ ವಾಹನ ಇತ್ಯಾದಿಗೂ ಕಷ್ಟಕರವಾಗಿರುತ್ತದೆ. ಯಾವುದೇ ವಸ್ತು ಮುರಿದುಹೋಗುವುದರಿಂದ ಅಪಘಾತಗಳ ವರೆಗೆ ಕಷ್ಟವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ವಾಹನ ಕೆಟ್ಟುಹೋಗಬಹುದು ಮತ್ತು ನೀವು ಯಾಂತ್ರಿಕ ವಿಷಯಗಳನ್ನು ನಿವಾರಿಸಬೇಕಾಗಬಹುದು. ತುಲಾ ರಾಶಿಯಲ್ಲಿ ವಕ್ರ ಬುಧ ಸಮಯದಲ್ಲಿ ನಿಮ್ಮ ಆಲೋಚನೆಯಲ್ಲಿ ತೀವ್ರತೆಯನ್ನು ಕಾಣಲಾಗುತ್ತದೆ. ನೀವು ಏನು ಮಾಡುತ್ತಿದ್ದೀರಿ, ನಿಮಗೆ ಏನು ಅವಶ್ಯಕ, ಇದರ ನಡುವೆ ಸಮತೋಲನವನ್ನು ಸಾಧಿಸಲು ನೀವು ಆರಂಭಿಸಬಹುದು. ನಿಮ್ಮ ಜೀವನದಲ್ಲಿ ನೀವು ಸಮತೋಲನನ್ನು ಹುಡುಕುವಿರಿ. ತುಲಾ ರಾಶಿಯಲ್ಲಿ ಬುಧನ ವಕ್ರತೆಯು ಆಂತರಿಕವಾಗಿ ಸಾಮರಸ್ಯವನ್ನು ಸ್ಥಾಪಿಸಲು ಉತ್ತಮ. ಬುಧ ಗ್ರಹವು ತುಲಾ ರಾಶಿಯಲ್ಲಿ ಗೋಚರಿಸಿದಾಗ, ಹೊರಗಿನ ಸಾಮರಸ್ಯವನ್ನು ಸೃಷ್ಟಿಸಲು ಒಬ್ಬ ವ್ಯಕ್ತಿಯು ಪದಗಳು ಮತ್ತು ಆಲೋಚನೆಗಳನ್ನು ಬಳಸುತ್ತಾನೆ. ಆದರೆ ಈಗ ಬುಧ ವಕ್ರನಾದ ಸಮಯದಲ್ಲಿ ಸ್ಥಳೀಯರು ತಮ್ಮ ಮನಸ್ಸಿನೊಳಗೆ ಶಾಂತಿಯ ಸಮತೋಲನವನ್ನು ಹುಡುಕುತ್ತಾನೆ ಮತ್ತು ನಂತರ ಪ್ರಪಂಚದ ಮೇಲೆ ಪರಿಣಾಮ ಬೀರಲು ಪ್ರಯತ್ನಿಸುತ್ತಾರೆ.
ಸಂವಹನ, ವ್ಯಾಪಾರ, ವಿಶ್ಲೇಷಣಾತ್ಮಕ ಮತ್ತು ವೀಕ್ಷಣಾ ಕೌಶಲ್ಯಗಳ ಅಂಶವಾದ ಬುಧ ಗ್ರಹವು ತುಲಾ ರಾಶಿಯಲ್ಲಿ ವಕ್ರನಾಗಿ ಗೋಚರಿಸುತ್ತಿದೆ. ಈ ಗ್ರಹವನ್ನು ಬುದ್ಧಿ, ಜ್ಞಾನ, ಮನೋವಿಜ್ಞಾನ, ಆಲೋಚನೆಗಳು ಮತ್ತು ಮಾಹಿತಿಗಳ ವಿನಿಮಯಗಳಿಗೆ ಜವಾಬ್ದಾರಿ ಎಂದು ಪರಿಗಣಿಸಲಾಗಿದೆ. ಬುಧ ಗ್ರಹವು 27 ಸೆಪ್ಟೆಂಬರ್ 2021 ರಂದು ಬೆಳಿಗ್ಗೆ 10:40 ವಕ್ರ ಚಲನೆಯನ್ನು ಪ್ರಾರಂಭಿಸುತ್ತದೆ. 18 ದಿನಾಂಕದ ವರೆಗೆ ಇದೆ ಸ್ಥಿತಿಯಲ್ಲಿರುತ್ತಾರೆ ಮತ್ತು ಅದರ ನಂತರ 18 ಅಕ್ಟೋಬರ್ 2021 ರಂದು ಕನ್ಯಾ ರಾಶಿಗೆ ಗೋಚರಿಸುತ್ತದೆ.
ವಕ್ರ ಬುಧ 2021: ದಿನಾಂಕ ಮತ್ತು ಸಮಯ
ಬುಧ ಗ್ರಹವು 27 ಸೆಪ್ಟೆಂಬರ್ 2021 ರಂದು ಬೆಳಿಗ್ಗೆ 10:40 ಗಂಟೆಗೆ ತುಲಾ ರಾಶಿಗೆ ವಕ್ರ ಸ್ಥಿತಿಯಲ್ಲಿ ಗೋಚರಿಸುತ್ತದೆ. 18 ಅಕ್ಟೋಬರ್ ವರೆಗೆ ಇದು ಇದೇ ಸ್ಥಿತಿಯಲ್ಲಿರುತ್ತದೆ. ಈ ಮಧ್ಯೆ 2 ಅಕ್ಟೋಬರ್ ರಂದು ವಕ್ರ ಬುಧವು ಕನ್ಯಾ ರಾಶಿಗೆ ಮರಳುತ್ತರೆ ಮತ್ತು ಅದರ ನಂತರ 18 ಅಕ್ಟೋಬರ್ 2021 ರಂದು ಕನ್ಯಾ ರಾಶಿಗೆ ತನ್ನ ಚಲನೆಯನ್ನು ಪ್ರಾರಂಭಿಸುತ್ತದೆ.
ನಡೆಯಿರಿ ಎಲ್ಲಾ ಹನ್ನೆರಡು ರಾಶಿಗಳ ಮೇಲೆ ವಕ್ರ ಬುಧ ಸಂಚಾರವು ಎಂದು ಪರಿಣಾಮ ಬೀರಲಿದೆ ಎಂದು ತಿಳಿಯೋಣ:
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ
मेष / ಮೇಷ ರಾಶಿ
ಮೇಷ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಮೂರನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಏಳನೇ ಮನೆಯಲ್ಲಿ ವಕ್ರ ಸ್ಥಿತಿಯಲ್ಲಿರುತ್ತದೆ. ಏಳನೇ ಮನೆ ಮದುವೆ ಮತ್ತು ತಿಳುವಳಿಕೆಯ ಮನೆಯಾಗಿದೆ, ಆದ್ದರಿಂದ ವೈವಾಹಿಕ ಜೀವನದಲ್ಲಿ ಇದು ಕೆಲವು ಏರಿಳಿತಗಳು ಮತ್ತು ಅಶಾಂತಿಯನ್ನು ಉದ್ಭವಿಸಬಹುದು. ನಿಮ್ಮ ಮತ್ತು ಸಂಗಾತಿಯ ನಡುವೆ ಕೆಲವು ತಪ್ಪುಗ್ರಹಿಕೆಗಳು ಸಹ ಉಂಟಾಗಬಹುದು. ಬುಧದ ಈ ವಕ್ರ ಸಮಯದಲ್ಲಿ, ನೀವು ಮದುವೆಯಾಗಲು ಬಯಸುತ್ತಿದ್ದರೆ, ಈ ಸಮಯದಲ್ಲಿ ಮದುವೆಯ ದಿನಾಂಕವನ್ನು ನಿರ್ಧರಿಸಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಬುಧ ದೇವ ವಕ್ರನಾಗಿರುವ ವರೆಗೆ ಅದನ್ನು ಮುಂದೂಡುವುದು ಉತ್ತಮ. ವ್ಯಾಪಾರ ಪಾಲುದಾರಿಕೆ ಮತ್ತು ವ್ಯಾಪಾರದಲ್ಲಿ ನಿಮ್ಮ ಪಾತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ ನೀವು ತುಂಬಾ ಸ್ಪಷ್ಟವಾಗಿರಬೇಕು. ಏಕೆಂದರೆ ಕೆಲಸದ ಸ್ಥಳದಲ್ಲಿ ಯಾವುದೇ ಜಗಳ ಅಥವಾ ವಿವಾದವನ್ನು ತಪ್ಪಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಈ ಸಮಯದಲ್ಲಿ ಯಾವುದೇ ರೀತಿಯ ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿಸಿ, ಏಕೆಂದರೆ ಇದು ನಿಮಗೆ ಯಾವುದೇ ಲಾಭವನ್ನು ನೀಡುವ ಬದಲು ನಷ್ಟವನ್ನು ನೀಡಬಹುದು.
ಪರಿಹಾರ - ಹಸಿರು ಬಣ್ಣದ ವಸ್ತುಗಳ ದಾನ ಮಾಡಿ, ಏಕೆಂದರೆ ಇದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
वृषभ / ವೃಷಭ ರಾಶಿ
ವೃಷಭ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಮೂರನೇ ಮತ್ತು ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಸಾಲ, ಶತ್ರು ಮತ್ತು ದೈನಂದಿನ ವೃತ್ತಿಯ ಆರನೇ ಮನೆಗೆ ವಕ್ರ ಸ್ಥಿತಿಯಲ್ಲಿ ಗೋಚರಿಸುತ್ತದೆ. ಈ ವಕ್ರ ಸಂಚಾರದ ಸಮಯದಲ್ಲಿ ನೀವು ಉಳಿಸಲು ಅಪಾಯಗಳನ್ನು ತಪ್ಪಿಸಬೇಕು. ಈ ಸಮಯದಲ್ಲಿ ಬೆಟ್ಟಿಂಗ್ ನಿಂದ ದೂರವಿರುವುದು ನಿಮಗೆ ಉತ್ತಮ. ಈ ವಕ್ರ ಸಂಚಾರದ ಸಮಯದಲ್ಲಿ ಹಣಕಾಸಿನ ನಷ್ಟದ ಸಾಧ್ಯತೆಯೂ ಇದೆ. ತಜ್ಞರಿಂದ ಸಲಹೆಯನ್ನು ಪಡೆದುಕೊಳ್ಳಲು ಇದು ನಿಮಗೆ ಉತ್ತಮ ಸಮಯ. ಹೂಡಿಕೆ ಮಾಡುವುದು ಅಗತ್ಯವಿದ್ದರೆ, ಖಂಡಿವಾಗಿಯೂ ಪರಿಸ್ಥಿತಿಯನ್ನು ಆಳವಾಗಿ ವಿಶ್ಲೇಷಿಸಿ. ಪೋಷಕರು ಮಕ್ಕಳ ಪೋಷಣೆ ಮತ್ತು ಶಿಕ್ಷಣದಲ್ಲಿ ಸಹಾಯ ಮಾಡಲು ಸಲಹೆ ನೀಡಲಾಗಿದೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ನಿಯಮಿತವಾಗಿ ಸರಿಯಾದ ಆಹಾರ ಮತ್ತು ವ್ಯಾಯಾಮವನ್ನು ಮಾಡಲು ನಿಮಗೆ ಸಲಹೆ ನೀಡಲಾಗಿದೆ.
ಪರಿಹಾರ - ಬುಧವಾರ ಉಪವಾಸ ಮಾಡಿ, ಏಕೆಂದರೆ ಇದರಿಂದ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ.
मिथुन / ಮಿಥುನ ರಾಶಿ
ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಮೊದಲನೇ ಮತ್ತು ನಾಲ್ಕನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಪ್ರೀತಿ, ಪ್ರಣಯ ಮತ್ತು ಮಕ್ಕಳ ಐದನೇ ಮನೆಗೆ ವಕ್ರನಾಗಿ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ಮಾತನಾಡುವಾಗ ತಪ್ಪುಗ್ರಹಿಕೆಗಳು ಉಂಟಾಗಬಹುದು. ಏಕೆಂದರೆ ಗಾಸಿಪ್ ಮಾಡುವಾಗ ನಿಮ್ಮ ವಿಷಯಗಳ ಬಗ್ಗೆ ನೀವು ಸ್ಪಷ್ಟರಾಗಿರುವುದಿಲ್ಲ. ಈ ಸಮಯದಲ್ಲಿ ನಿಮ್ಮ ಹಳೆಯ ಸ್ನೇಹಿತರು ನಿಮ್ಮನ್ನು ಸಂಪರ್ಕಿಸಬಹುದು. ಈ ಸಮಯದಲ್ಲಿ ತಾಯಿಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ ಮತ್ತು ಆಸ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ, ಈ ಸಮಯದಲ್ಲಿ ಅದು ಕೂಡ ದೂರವಾಗಬಹುದು. ಮನೆಯ ವಾತಾವರಣವು ಹೆಚ್ಚಿನ ಸಮಯ ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ದೃಷ್ಟಿ ಹಾಕಿದರೆ, ಈ ಸಮಯದಲ್ಲಿ ನಿಮ್ಮ ಅರೋಗ್ಯ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಯಾವುದೇ ದೊಡ್ಡ ಸಮಸ್ಯೆ ಉಂಟಾಗುವುದಿಲ್ಲ
ಪರಿಹಾರ - ಭಾನುವಾರ ಹೊರತುಪಡಿಸಿ ಪತಿದಿನ ತುಳಸಿ ಗಿಡಕ್ಕೆ ನೀರು ಹಾಕಿ.
कर्क / ಕರ್ಕ ರಾಶಿ
ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಚಲನೆಯ ಸಮಯದಲ್ಲಿ ನಿಮ್ಮ ತಾಯಿ, ಸಂತೋಷ ಇತ್ಯಾದಿಯ ನಾಲ್ಕನೇ ಮನೆಗೆ ಪ್ರವೇಶಿಸಲಿದೆ. ಈ ಸಂಚಾರದ ಸಮಯದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಆಸ್ತಿಗೆ ಸಂಬಂಧಿಸಿದ ವಿಷಯಗಳು ನಿಮ್ಮನ್ನು ತೊಂದರೆಗೊಳಿಸಬಹುದು ಮತ್ತು ಇವುಗಳನ್ನು ಸುಲಭವಾಗಿ ಪರಿಹರಿಸಲಾಗುವುದಿಲ್ಲ. ಈ ವಕ್ರ ಸಂಚಾರದ ಸಮಯದಲ್ಲಿ ನಿಮ್ಮ ತಾಯಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಆರ್ಥಿಕ ಭಾಗದ ಮೇಲೆ ದೃಷ್ಟಿ ಹಾಕಿದರೆ, ಈ ಸಮಯದಲ್ಲಿ ನಿಮ್ಮ ಅನಿರೀಕ್ಷಿತ ವೆಚ್ಚಗಳನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗುತ್ತದೆ. ಇದಲ್ಲದೆ ನಿಮಗೆ ಹಣಕಾಸಿನ ಲಾಭವಾಗುವ ಸಾಧ್ಯತೆಯೂ ಇದೆ.
ಪರಿಹಾರ - ಬಡ ಮಕ್ಕಳಿಗೆ ಅಥವಾ ಅನಾಥರಿಗೆ ಅವಶ್ಯಕ ವಸ್ತುಗಳ ದಾನ ಮಾಡಿ, ಇದು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ .
सिंह / ಸಿಂಹ ರಾಶಿ
ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಎರಡನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ವಕ್ರ ಚಲನೆಯಲ್ಲಿ ನಿಮ್ಮ ಮೂರನೇ ಮನೆಗೆ ಸಾಗುತ್ತದೆ. ಈ ವಕ್ರ ಸಂಚಾರದ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರೊಂದಿಗೆ ನೀವು ಯಾವುದೇ ಸಮಸ್ಯೆಯನ್ನು ಹೊಂದಿದ್ದರೆ, ಅದನ್ನು ತೊಡೆದುಹಾಕಬಹುದು. ಈ ಸಮಯದಲ್ಲಿ ನೀವು ಪ್ರಯಾಣಿಸುವ ಬಗ್ಗೆ ಮನಸ್ಸು ಮಾಡಬಹುದು ಮತ್ತು ಅದು ನಿಮ್ಮ ಪ್ರಗತಿಗೆ ಉತ್ತಮವಾಗಿರುತ್ತದೆ. ಬುಧದ ಈ ಸಂಚಾರವು, ಸಹೋದರ ಸಹೋದರಿಯರೊಂದಿಗೆ ಉತ್ತಮ ಸಮಯವನ್ನು ಕಳೆಯಲು ನಿಮಗೆ ಅವಕಾಶವನ್ನು ನೀಡುತ್ತದೆ. ಈ ವಕ್ರ ಸಂಚಾರದ ಸಮಯದಲ್ಲಿ ನೀವು ಹೂಡಿಕೆ ಮಾಡುವುದನ್ನು ತಪ್ಪಿಸಬೇಕು ಮತ್ತು ಹೂಡಿಕೆ ಮಾಡುವುದು ಅಗತ್ಯವಾಗಿದ್ದರೆ, ಪ್ರತಿಯೊಂದು ಅಂಶದ ಬಗ್ಗೆ ಮಾಹಿತಿಯನ್ನು ಪಡೆದ ನಂತರ ಬಹಳ ಎಚ್ಚರಿಕೆಯಿಂದ ಹೂಡಿಕೆ ಮಾಡಿ. ಉದ್ಯೋಗದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರು ಬಡ್ತಿ ಪಡೆಯುವ ಅಥವಾ ಸಂಬಳದಲ್ಲಿ ಹೆಚ್ಚಳವನ್ನು ಪಡೆಯಬಹುದು. ಕೆಲವು ಜನರು ಹೊಸ ಉದ್ಯೋಗವನ್ನು ಪಡೆಯುವ ಸಾಧ್ಯತೆಯೂ ಇದೆ. ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧವು ಈ ಸಮಯದಲ್ಲಿ ಸುಧಾರಿಸುತ್ತದೆ.
ಪರಿಹಾರ - ಬುಧವಾರ ಗಣೇಶ ದೇವಸ್ಥಾನಕ್ಕೆ ಹೋಗಿ ಮತ್ತು ಗಣಪತಿ ದೇವರಿಗೆ ಲಡ್ಡುಗಳನ್ನು ಅರ್ಪಿಸಿ
कन्या / ಕನ್ಯಾ ರಾಶಿ
ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಮೊದಲನೇ ಮತ್ತು ಹತ್ತನೇ ಮನೆಯ ಅಧಿಪತಿ. ಹತ್ತನೇ ಮನೆಯನ್ನು ವೃತ್ತಿ ಜೀವನದ ಮತ್ತು ಮೊದಲನೇ ಮನೆಯನ್ನು ನಿಮ್ಮ ಆತ್ಮದ ಅಂಶವೆಂದು ಪರಿಗಣಿಸಲಾಗಿದೆ. ವಕ್ರೀ ಸಮಯದಲ್ಲಿ ಬುಧ ಗ್ರಹವು ವಕ್ರತೆಯೊಂದಿಗೆ ನಿಮ್ಮ ಹಣ, ಸಂವಹನ ಮತ್ತು ಕುಟುಂಬದ ಎರಡನೇ ಮನೆಗೆ ಪ್ರವೇಶಿಸುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಕೆಲವು ವಿಷಯಗಳನ್ನು ಎದುರಿಸಬೇಕಾಗಬಹುದು. ಇದು ನಿಮ್ಮ ಮನೆಯ ವಾತಾವರಣವನ್ನು ಹದಗೆಡಿಸಬಹುದು. ಆದಾಗ್ಯೂ, ಸರಿಯಾದ ಸಂವಹನ ಮತ್ತು ಮಾತಿನ ಮೂಲಕ ನೀವು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಸಹ ಸಾಧ್ಯವಾಗುತ್ತದೆ. ಹೊಸ ಹೂಡಿಕೆಯನ್ನು ಮಾಡಲು ಇದು ಉತ್ತಮ ಸಮಯ, ಇದು ಸರಿಯಾದ ದಿಕ್ಕಿನಲ್ಲಿ ಉಳಿತಾಯ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಈ ರೀತಿಯಾಗಿ ಈ ವಕ್ರ ಶಕ್ತಿಯನ್ನು ನೀವು ಸರಿಯಾಗಿ ಬಳಸಿಕೊಳ್ಳಬಹುದು. ಈ ಅವಧಿಯಲ್ಲಿ ನೀವು ಹಠಾತ್ ಮತ್ತು ಅನಿರೀಕ್ಷಿತ ಲಾಭವನ್ನು ನಿರೀಕ್ಷಿಸಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ತೊಡಗಿರುವ ಜನರು, ಹಿಂದಿನ ಸಮಯಕ್ಕೆ ಹೋಲಿಸಿದರೆ ಈ ಸಮಯದಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ.
ಪರಿಹಾರ - ಮೊಟ್ಟೆ, ಮಾಂಸ ಅಥವಾ ಮದ್ಯಪಾನವನ್ನು ಸೇವಿಸುವುದನ್ನು ತಪ್ಪಿಸಿ, ಹಾಗೆ ಮಾಡುವುದರಿಂದ ನಿಮಗೆ ಪ್ರಯೋಜನವಾಗುತ್ತದೆ ಎಂದು ಸಾಬೀತಾಗುತ್ತದೆ
तुला / ತುಲಾ ರಾಶಿ
ತುಲಾ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಮೊದಲನೇ ಮನೆಗೆ ಸಾಗುತ್ತದೆ ಈ ಚಲನೆಯ ಸಮಯದಲ್ಲಿ ತುಲಾ ರಾಶಿಚಕ್ರದ ಜನರು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಬಹುದು, ಅಲ್ಲದೆ ಈ ರಾಶಿಚಕ್ರದ ಕೆಲವು ಧಾರ್ಮಿಕ ಯಾತ್ರೆಗಳಿಗೂ ಹೋಗಬಹುದು. ಆರ್ಥಿಕವಾಗಿ, ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಿರುತ್ತವೆ, ಆದ್ದರಿಂದ ಜಾಗರೂಕರಾಗಿರಿ ಮತ್ತು ಚೆನ್ನಾಗಿ ಪರಿಶೀಲಿಸಿದ ನಂತರ ಯಾವುದೇ ಹೂಡಿಕೆಯನ್ನು ಮಾಡಿ. ಆರೋಗ್ಯದ ಬಗ್ಗೆ ಮಾತನಾಡಿದರೆ, ಸ್ವಲ್ಪ ಆಯಾಸವನ್ನು ನೀವು ಅನುಭವಿಸಬಹುದು. ಆದ್ದರಿಂದ ನಿಯಮಿತವಾಗಿ ವ್ಯಾಯಾಮ, ಯೋಗ ಮತ್ತು ಧ್ಯಾನವನ್ನು ನಿಮ್ಮ ಜೀವನದಲ್ಲಿ ಸೇರಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.
ಪರಿಹಾರ - ರಾತ್ರಿ ಹಾಸಿಗೆಯ ಪಕ್ಕ ಒಂದು ಲೋಟ ನೀರು ಇಡಿ, ಬೆಳಿಗ್ಗೆ ಆ ನೀರನ್ನು ಆಲದ ಮರಕ್ಕೆ ಅರ್ಪಿಸಿ.
वृश्चिक / ವೃಶ್ಚಿಕ
ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಇದು ವೆಚ್ಚ, ನಷ್ಟ ಮತ್ತು ಮೋಕ್ಷದ ನಿಮ್ಮ ಹನ್ನೆರಡನೇ ಮನೆಗೆ ಸಾಗುತ್ತದೆ. ಆರ್ಥಿಕವಾಗಿ, ಈ ಸಮಯದಲ್ಲಿ ಹಣಕಾಸಿನ ಹೂಡಿಕೆ ಮಾಡುವುದು ಅಪಾಯದಿಂದ ತುಂಬಿರಬಹುದು. ಹೂಡಿಕೆ ಮಾಡುವ ಮೊದಲು ತಜ್ಞರ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ. ಸಂಬಂಧಗಳ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ತುಂಬಾ ಭಾವುಕರಾಗಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ಹೃದಯಕ್ಕಿಂತ ಹೆಚ್ಚಾಗಿ ನಿಮ್ಮ ಬುದ್ಧಿಯನ್ನು ಕೇಳಬೇಕು. ಈ ಸಮಯದಲ್ಲಿ ವಿಷಯಗಳನ್ನು ನೀವು ಮರೆಮಾಡಬಹುದು. ಉದ್ಯೋಗದಲ್ಲಿರುವ ಜನರು ತಮ್ಮ ಮೇಲಧಿಕಾರಿಗಳ ಸರಿಯಾದ ಬೆಂಬಲವನ್ನು ಕಡಿಮೆ ಪಡೆಯುವ ಸಾಧ್ಯತೆ ಇದೆ. ಆದ್ದರಿಂದ ಅವರೊಂದಿಗೆ ಮಾತನಾಡುವಾಗ ಜಾಗರೂಕರಾಗಿರಿ. ಅರೋಗ್ಯ ಜೀವನದ ಬಗ್ಗೆ ಮಾತನಾಡಿದ್ದಾರೆ, ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು, ಇಲ್ಲದಿದ್ದರೆ ಸಣ್ಣ ಪುಟ್ಟ ರೋಗಗಳು ಸಹ ದೊಡ್ಡ ಸಮಸ್ಯೆಗಳಾಗಬಹುದು.
ಪರಿಹಾರ - ಪ್ರತಿದಿನ ನಿಯಮಿತವಾಗಿ ಸೂರ್ಯ ದೇವರಿಗೆ ನೀರು ಅರ್ಪಿಸಿ ಮತ್ತು ನಿಯಮಿತವಾಗಿ ಯಾವುದೇ ದೇವಸ್ಥಾನದಲ್ಲಿ ಹಾಲು ಮತ್ತು ಅಕ್ಕಿ ದಾನ ಮಾಡಿ.
धनु / ಧನು ರಾಶಿ
ಧನು ರಾಶಿಚಕ್ರದ ಜನರಿಗೆ ಬುಧ ಗ್ರಹವು ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಯಶಸ್ಸು, ಲಾಭ ಇತ್ಯಾದಿಯ ಹನ್ನೊಂದನೇ ಮನೆಗೆ ವಕ್ರ ಸ್ಥಿತಿಯಲ್ಲಿ ಸಾಗುತ್ತದೆ. ಈ ವಕ್ರ ಚಲನೆಯು ನಿಮಗೆ ತುಂಬಾ ಪ್ರಯೋಜನಕಾರಿಯಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಸಾಮಾಜಿಸಿ ಪರಿಸ್ಥಿತಿ ಸುಧಾರಿಸುತ್ತದೆ. ವೃತ್ತಿ ಜೀವನದಲ್ಲಿ ನೀವು ಹೊಸ ಅವಕಾಶಗಳನ್ನು ಪಡೆಯುತ್ತೀರಿ ಮತ್ತು ನೀವು ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿದ್ದರೆ, ಈ ಅವಧಿಯಲ್ಲಿ ನಿಮಗೆ ತುಂಬಾ ಲಾಭವಾಗುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ತುಂಬಾ ಸಾಮಾಜಿಕರಾಗುತ್ತೀರಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಸಮಯವನ್ನು ಕಳೆಯುವಿರಿ. ಈ ರಾಶಿಚಕ್ರದ ಕೆಲವು ಸ್ಥಳೀಯರು ಈ ಸಮಯದಲ್ಲಿ ನಿಮ್ಮ ಸಂಗಾತಿ ಅಥವಾ ಜೀವನ ಸಂಗಾತಿಯಿಂದ ಉತ್ತಮ ಬೆಂಬಲವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ಆಸ್ತಿಯನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಯೋಜಿಸುತ್ತಿದ್ದರೆ, ನೀವು ಯಶಸ್ವಿಯಾಗುವ ಸಾಧ್ಯತೆ ಇದೆ.
ಪರಿಹಾರ - ಯಾವುದೇ ದೇವಸ್ಥಾನದಲ್ಲಿ ಬ್ರಾಹ್ಮಣರಿಗೆ ಕಡ್ಲೆ ಬೇಳೆ ಮತ್ತು ಹಳದಿ ಬಟ್ಟೆಗಳ ದಾನ ಮಾಡಿ.
मकर / ಮಕರ ರಾಶಿ
ಮಕರ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ವೃತ್ತಿ ಜೀವನ, ಹೆಸರು ಮತ್ತು ಖ್ಯಾತಿಯ ಹತ್ತನೇ ಮನೆಗೆ ಇದು ವಕ್ರ ಸ್ಥಿತಿಯಲ್ಲಿ ಪ್ರವೇಶಿಸುತ್ತದೆ. ಆದ್ದರಿಂದ ನಿಮ್ಮ ವೃತ್ತಿ ಜೀವನ ಮತ್ತು ಕೆಲಸಗಳಲ್ಲಿ ಗುರಿಗಳನ್ನು ಸಾಧಿಸಲು ನೀವು ಕಠಿಣ ಪರಿಶ್ರಮ ಮಾಡಬೇಕಾಗಬಹುದು. ನಿಮ್ಮೊಂದಿಗೆ ಕೆಲಸ ಮಾಡುವವರು ತುಂಬಾ ಸಹಾಯಕರಾಗಿರುತ್ತಾರೆ ಮತ್ತು ನಿಮ್ಮ ಕಠಿಣ ಪರಿಶ್ರಮದ ಫಲಿತಾಂಶವನ್ನು ಸಹ ನೀವು ಪಡೆಯುತ್ತೀರಿ. ಇದರ ಪರಿಣಾಮವಾಗಿ ಕೆಲಸದ ಸ್ಥಳದಲ್ಲಿ ನಿಮ್ಮ ಅರ್ಹತೆ ಹೆಚ್ಚಾಗುತ್ತದೆ. ಬುಧದ ಈ ವಕ್ರ ಚಲನೆಯು ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವನ್ನು ಉತ್ತಮಗೊಳಿಸುತ್ತದೆ ಮತ್ತು ಅವರ ಮೂಲಕ ನೀಡಲಾಗಿರುವ ಯಾವುದೇ ಸಲಹೆಯು ದೀರ್ಘಕಾಲದ ವರೆಗೆ ನಿಮಗೆ ಉಪಯುಕ್ತವಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ಧಾರ್ಮಿಕ ಕಾರ್ಯಗಳು, ದಾನ-ಪುಣ್ಯ ಅಥವಾ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಅಧಿಕೃತ ಕೆಲಸಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವ ಸಾಧ್ಯತೆಯೂ ಇದೆ.
ಪರಿಹಾರ - ಕುತ್ತಿಗೆಯಲ್ಲಿ ಬೆಳ್ಳಿಯನ್ನು ಧರಿಸಿ, ಏಕೆಂದ್ರೆ ಇದು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ.
कुंभ / ಕುಂಭ ರಾಶಿ
ಕುಂಭ ರಾಶಿಚಕ್ರದ ಜನರಿಗೆ ಬುಧ ಗ್ರಹವು ಐದನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಅದೃಷ್ಟ, ಧಾರ್ಮ ಇತ್ಯಾದಿಯಂ ಒಂಬತ್ತನೇ ಮನೆಗೆ ವಕ್ರ ಸ್ಥಿತಿಯಲ್ಲಿ ಸಾಗಲಿದೆ. ಈ ಸಮಯದಲ್ಲಿ ನಿಮ್ಮ ಮಕ್ಕಳು ಪ್ರಗತಿಯ ಹಾದಿಯಲ್ಲಿ ಮುಂದುವರಿಯುತ್ತಾರೆ ಆದ್ದರಿಂದ ನೀವು ಕೂಡ ನೆಮ್ಮದಿಯನ್ನು ಅನುಭವಿಸುತ್ತೀರಿ. ಈ ರಾಶಿಚಕ್ರದ ವಿದ್ಯಾರ್ಥಿಗಳು ಶಿಕ್ಷಣದ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ಮಾಡುತ್ತಾರೆ. ಕೆಲಸದ ಸ್ಥಳ ಅಥವಾ ಉದ್ಯೋಗದ ವಿಷಯದಲ್ಲಿ ನೀವು ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ಆರೋಗ್ಯದ ದೃಷ್ಟಿಕೋನದಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ನೀವು ದಣಿದ ಅನುಭವಿಸಬಹುದು. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ಯೋಗ ಮತ್ತು ಧ್ಯಾನದ ಅಭ್ಯಾಸ ಮಾಡಲು ನಿಮಗೆ ಸಲಹೆ ನೀಡಲಾಗಿದೆ. ಕುಂಭ ರಾಶಿಯಲ್ಲಿ ವಕ್ರ ಬುಧವು, ನಿಮ್ಮ ಸಂಬಂಧಗಳು ಮತ್ತು ಸ್ನೇಹದ ಮೇಲೆ ಪರಿಣಾಮ ಬೀರಬಹುದು. ಈ ಸಮಯದಲ್ಲಿ ತಪ್ಪುಗ್ರಹಿಕೆಗಳ ಕಾರಣದಿಂದಾಗಿ ಜಗಳವಾಗುವ ಸಾಧ್ಯತೆ ಇದೆ. ಆದ್ದರಿಂದ ಜಾಗರೂಕತೆಯೊಂದಿಗೆ ಮುಂದುವರೆಯಿರಿ.
ಪರಿಹಾರ - “ಓಂ ಬುಧಾಯ್ ನಮಃ “ ಬುಧ ಬೀಜ ಮಂತ್ರವನ್ನು 108 ಬಾರಿ ಜಪಿಸುವುದು ನಿಮಗೆ ಉತ್ತಮ
मीन / ಮೀನ ರಾಶಿ
ಮೀನ ರಾಶಿಚಕ್ರದ ಸ್ಥಳೀಯರಿಗೆ ಬುಧವು ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಪರಿವರ್ತನೆಯ ಸಮಯದಲ್ಲಿ ಇದು ನಿಮ್ಮ ಎಂಟನೇ ಮನೆಗೆ ವಕ್ರ ಸ್ಥಿತಿಯಲ್ಲಿ ಸಾಗುತ್ತದೆ. ಎಂಟನೇ ಮನೆಯನ್ನು ಬದಲಾವಣೆ ಮತ್ತು ಸಂಶೋಧನೆಯ ಅಂಶದ ಮನೆಯೆಂದು ಕರೆಯಲಾಗುತ್ತದೆ. ಎಂಟನೇ ಮನೆಯಲ್ಲಿ ಬುಧದ ವಕ್ರ ಸಂಚಾರದ ಸಮಯದಲ್ಲಿ ನೀವು ಕೆಲವು ದುರುದ್ವೇಷಪೂರಿತ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ತಾಯಿಗೆ ಕೆಲವು ಅರೋಗ್ಯ ಸಮಸ್ಯೆಗಳಾಗಬಹುದು. ಇದರಿಂದಾಗಿ ನೀವು ಚಿಂತೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ವೃತ್ತಿಪರವಾಗಿ ವ್ಯಾಪಾರ ಮತ್ತು ಪಾಲುದಾರಿಕೆಯಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಅಥವಾ ಜಗಳವಾಗುವ ಸಾಧ್ಯತೆ ಇದೆ, ಏಕೆಂದರೆ ಈ ಸಮಯದಲ್ಲಿ ನಿಮ್ಮ ಪಾಲುದಾರರ ಮೇಲೆ ನೀವು ತುಂಬಾ ಅನುಮಾನ ಮಾಡಬಹುದು. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ನೀವು ಹಣವನ್ನು ಖರ್ಚು ಮಾಡಬಹುದು. ಏಕೆಂದರೆ ಅವರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ನೀವು ಸಂಪತ್ತಿನ ನವೀಕರಣಕ್ಕಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬಹುದು. ಅತ್ತೆಮನೆ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ ಮತ್ತು ಅತ್ತೆಮನೆ ಭಾಗದ ಜನರಿಂದ ಕೆಲವು ಉಡುಗೊರೆಗಳನ್ನು ಸಹ ನೀವು ಪಡೆಯಬಹುದು. ಬರವಣಿಗೆ, ನೃತ್ಯ, ಛಾಯಾಗ್ರಹಣ ಅಥವಾ ಚಿತ್ರಕಲೆ ಮುಂತಾದ ಸೃಜನಶೀಲ ಚಟುವಟಿಕೆಗಳ ಅಭ್ಯಾಸ ಮಾಡಲು ಇದು ನಿಮಗೆ ಉತ್ತಮ ಸಮಯ.
ಪರಿಹಾರ - ಪ್ರತಿ ಬುಧವಾರದಂದು ದೇವಸ್ಥಾನದಲ್ಲಿ ಅಕ್ಕಿ, ಹಾಲು, ಕಡ್ಲೆ ಬೇಳೆ ಮತ್ತು ಹಳದಿ ಬಟ್ಟೆಗಳನ್ನು ಅರ್ಪಿಸಿ.
ನಮ್ಮ ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್‌ನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ತುಂಬಾ ಧನ್ಯವಾದಗಳು.